ನಮ್ಮ ಹುಡುಗುರು ಭಲೇ ಟ್ಯಾಲೆಂಟೆಡ್..! ಅದ್ರಲ್ಲೂ ಇಲ್ಲೊಬ್ಬ ಇದ್ದಾನೆ ನೋಡಿ, ಇವನು ಹೆವಿ ಟ್ಯಾಲೆಂಟೆಡ್..! ಇವನಿಗೆ ಡ್ರಮ್ಸ್ ಬಾರಿಸೋದು ಸಖತ್ ಇಷ್ಟ ಅನ್ಸುತ್ತೆ, ಆದ್ರೆ ಅದಕ್ಕೆ ಯಾರು ಸಾವಿರಾರು ರೂಪಾಯಿ ಕೊಟ್ಟು ತಗೋತಾರೆ..? ನಮಗೆ ಅದೆಲ್ಲಾ ಇಂಪಾಸಿಬಲ್ ಅನಿಸಿ ಇವನೇನು ಮಾಡ್ದ ಗೊತ್ತಾ..? ಮನೆಯ ಹತ್ತಿರ ಇದ್ದ ಡಬ್ಬ, ತಟ್ಟೆ, ಕ್ಯಾನ್, ಅದು ಇದು ಎಲ್ಲ ಸೇರಿಸಿ ಒಂದು ಡ್ರಮ್ಸ್ ಸೆಟ್ ರೆಡಿ ಮಾಡ್ಕೊಂಡ..! ಇದು ಯಾವ ಒರಿಜಿನಲ್ ಡ್ರಮ್ಸ್ ಸೆಟ್ಟಿಗಿಂತ ಕಮ್ಮಿ ಇಲ್ಲಾರೀ..! ಇವನು ಅದ್ರಲ್ಲಿ ಬಾರಿಸೋಕೆ ಶುರು ಮಾಡಿದ್ರೆ ಡ್ರಮ್ಮರ್ ದೇವಾನೂ ಒಂದು ಸಲ ಸುಸ್ತೋ ಸುಸ್ತು..! ಅವನು ಆ ಸ್ಟಿಕ್ ಆಡಿಸೋ ಸ್ಪೀಡ್ ನೋಡಿದ್ರೆ ಯಾವುದೋ ರಾಕ್ ಬ್ಯಾಂಡಿನ ಡ್ರಮ್ಮರ್ ತರಹ ಕಾಣಿಸ್ತಾನೆ..! ಇವನ ಟ್ಯಾಲೆಂಟಿಗೆ ಬಹುಪರಾಕ್ ಹೇಳಬೇಕೋ, ಅಥವಾ ಹೀಗೆ ಅದೆಷ್ಟು ಟ್ಯಾಲೆಂಟ್ ಗಳು ಸುದ್ದಿಯಾಗದೇ ಕಳೆದು ಹೋಗಿಬಿಡ್ತಾವೋ ಅಂತ ಬೇಸರಿಸಿಕೊಳ್ಳಬೇಕೋ ಗೊತ್ತಾಗೋದೇ ಇಲ್ಲ..! ಹೀಗೆ ಹುಡುಕ್ತಾ ಇದ್ದಾಗ ಈ ವೀಡಿಯೋ ಸಿಕ್ತು, ನಿಮಗೂ ತೋರಿಸಬೇಕು ಅನ್ನಿಸ್ತು..! ನೋಡಿ ಅವನಿಗೊಂದು ಭೇಷ್ ಹೇಳಿ..!
Video :
https://www.youtube.com/watch?v=96yqQuC0xi8