ಮೊಬೈಲ್ ಇದ್ರೆ ಅಪ್ಪ,ಅಮ್ಮ,ಗಂಡ,ಹೆಂಡತಿ,ಮಕ್ಕಳು,ಫ್ರೆಂಡ್ಸ್ ಯಾವನಿಗ್ ಬೇಕ್ರಿ..?

1
96
ಮೊಬೈಲ್, ಮೊಬೈಲ್,ಮೊಬೈಲ್… ಇದರಿಂದ ಅದೆಷ್ಟು ಲಾಭವಿದೆಯೋ ಅಷ್ಟೇ ಯಡವಟ್ಟುಗಳಳು ಆಗ್ತಿವೆ..! ದೂರದಲ್ಲಿ ಇರೋರ ಜೊತೆ ಯಾವಾಗ ಬೇಕಾದ್ರೂ ಮಾತಾಡಬಹುದು ಅಂತ ಬಂದ ಮೊಬೈಲ್ ಇವತ್ತು ಹತ್ತಿರದಲ್ಲೇ ಇದ್ದವರನ್ನು ದೂರ ಮಾಡಿಬಿಟ್ಟಿದೆ..! ಮೊಬೈಲ್ ಕೈಯಲ್ಲಿದ್ರೆ ಜಗತ್ತೇ ನಮ್ಮ ಕೈಯಲ್ಲಿ ಅಂತ ಅಂದುಕೊಂಡವರ ಫ್ಯಾಮಿಲೆ ಎಂಬ ಪುಟ್ಟ ಜಗತ್ತು ಸೊರಗಿಹೋಗಿದೆ..! ಅದೆಷ್ಟೋ ಸಂಸಾರಗಳಿಗೆ ಶತ್ರುವಾಗಿ ಪರಿಣಮಿಸಿದೆ..! ನೋಕಿಯ ಕಂಪನಿ ಆರಂಭವಾದಾಗ `ವಿ ಕನೆಕ್ಟ್ ಪೀಪಲ್’ ಅಂತ ಹೇಳಿತ್ತು. ಈಗ ಮೊಬೈಲ್ ಇದ್ರೆ ಜೊತೆಗಿರೋ ಸ್ನೇಹಿತರೂ ಡಿಸ್ಕನೆಕ್ಟ್ ಆಗೋದು ಗ್ಯಾರಂಟಿ..!
This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.
ಈ ಮೊಬೈಲ್ ಅನ್ನೋದನ್ನು ಕಂಡುಹಿಡಿದಾಗ ಜಗತ್ತು ಬೆರಗಾಗಿ ಹೋಗಿತ್ತು..! ಏನ್ ಗುರೂ ಇದು, ವೈರ್ ಇಲ್ಲ, ಕೇಬಲ್ ಇಲ್ಲ, ಅಲ್ಲೆಲ್ಲೋ ಇದ್ದೋರ್ ಜೊತೆ ಮಾತಾಡ್ಬೋದು ಅಂದ್ರೆ ರಿಯಲಿ ಗ್ರೇಟ್ ಗುರೂ’ ಅಂತೆಲ್ಲಾ ಹಾಡಿ ಹೊಗಳಿದ್ದೇ ಹೊಗಳಿದ್ದು..! ಆದ್ರೆ ಯಾವಾಗ ಅದೇ ಮೊಬೈಲ್ ಪ್ರತಿಯೊಬ್ಬನ ಕೈಸೇರ್ತೋ, ಅಲ್ಲಿಂದ ಶುರುವಾಯ್ತು ಸಮಸ್ಯೆ. ದೂರದಲ್ಲಿರೋರಿಗೆ ಹಾಯ್, ಹಲೋ ಅಂತ ಹೇಳೋರು, ಪಕ್ಕದಲ್ಲೇ ಕೂತಿದ್ದ ಸ್ನೇಹಿತರು, ಕುಟುಂಬದವರನ್ನು ಮಾತಾಡಿಸೋದೇ ಬಿಟ್ಟುಬಿಟ್ವಿ..! ಕೈಯಲ್ಲಿ ಮೊಬೈಲ್ ಇದ್ರೆ ಬೇರೆ ಪ್ರಪಂಚಾನೇ ಬೇಡ ಅಂತ ಅನ್ಕೊಂಡು ತಮ್ಮ ಭಾವನೆಗಳನ್ನು, ಸಂಬಂಧದ ಅರ್ಥವನ್ನು ಕಳೆದುಕೊಂಡುಬಿಟ್ವಿ..! ಅದಕ್ಕೆ ಸಾಕ್ಷಿಗಳು ನೂರಾರು..!
ನನ್ನ ಸ್ನೇಹಿತ ಅರುಣ್ ಐಟಿ ಕಂಪನಿಯಲ್ಲಿ ಕೆಲಸ ಮಾಡ್ತಾನೆ. ಅವನಿಗೆ ಬೆಳಗ್ಗೆಯಿಂದ ಸಂಜೆ ತನಕ ಸಿಕ್ಕಾಪಟ್ಟೆ ಕೆಲಸ. ಸಂಜೆ ಮನೆಗೆ ಬಂದ್ರೆ ಸಾಕಪ್ಪ ಅಂತ ಅನ್ನಿಸ್ತಾ ಇರುತ್ತೆ ಅವನಿಗೆ..! ಮನೆಗೆ ಬಂದು ಮನೆಯವರ ಜೊತೆ ಕೂತು ಟಿವಿ ನೋಡ್ತಾ ಹರಟೆ ಹೊಡೆಯೋಕೆ ಆಗಲ್ಲ..! ಆಫೀಸಲ್ಲಿ ಫೇಸ್ ಬುಕ್ಕಿಲ್ಲ, ವಾಟ್ಸಾಪ್ ನೋಡೋಕಾಗಲ್ಲ. ಸೋ ಸಂಜೆ ಮನೆಗೆ ಬಂದು ಅವನ ರೂಮ್ ಸೇರಿಕೊಂಡು ಬಿಟ್ರೆ ಮೊಬೈಲೇ ಪ್ರಪಂಚ. ಅವರ್ಯಾರಿಗೋ ವಾಟ್ಸಾಪಲ್ಲಿ ಹಾಯ್ ಹಲೋ, ಫೇಸ್ ಬುಕ್ಕಿಗೆ ಬಂದಿರೋ ಫ್ರೆಂಡ್ ರಿಕ್ವೆಸ್ಟ್ ಗಳ ಅಕ್ಸೆಪ್ಟ್ ಮಾಡಿ ಅವರ ಜೊತೆಗೆ ಚ್ಯಾಟಿಂಗು, ಮೀಟಿಂಗು..! ಬಂದಿರೋ ಮಿಸ್ ಕಾಲ್ ಗಳಿಗೆಲ್ಲಾ ಕಾಲ್ ಮಾಡಿ ಹಾಡು ಹರಟೆ. ಅಷ್ಟರಲ್ಲಿ ಟೈಂ 10 ಗಂಟೆ. ಅವನಿಗೆ ಊಟಕ್ಕೆ ಕಾಯ್ತಿದ್ದ ಅಪ್ಪಅಮ್ಮನಿಗೆ `ನೀವ್ ಊಟ ಮಾಡಿ ಮಲ್ಕೊಳಿ, ನಂಗೆ ಇಲ್ಲೇ ಊಟ ಕೊಡಿ’ ಅಂತ ಹೇಳಿ ಮೊಬೈಲ್ ನೋಡ್ತಾ ನೋಡ್ತಾ ಊಟ, ಹಾಗೇ ನಿದ್ರೆ..! ಬೆಳಗ್ಗೆ ಎದ್ರೆ ಆಫಿಸಿಗೆ ಹೋಗೋ ಅರ್ಜೆಂಟ್, ಆ ಗ್ಯಾಪಲ್ಲಿ ವಾಟ್ಸಾಪ್ ಗ್ರೂಪಲ್ಲಿ, ಫೇಸ್ ಬುಕ್ ಸ್ಟೇಟಸ್ಸಲ್ಲಿ ಗುಡ್ ಮಾರ್ನಿಂಗ್ ಹೇಳೋನಿಗೆ, ಮನೇಲಿರೋ ಅವರಪ್ಪ ಅಮ್ಮನಿಗೆ ಗುಡ್ ಮಾರ್ನಿಂಗ್ ಹೇಳೋ ಬುದ್ಧಿ ಬರಲೇ ಇಲ್ಲ..! ಅವರಪ್ಪ ಅಮ್ಮನ ಪಾಲಿನ ಶತ್ರು ಅವನ ಮೊಬೈಲ್..! ಇವತ್ತಿಗೂ ಸಹ…
ಇನ್ನು ರಾಜು ಬಗ್ಗೆ ಹೇಳಲೇ ಬೇಕು, ಅವನು ಲವ್ವಲ್ಲಿ ಬಿದ್ದು ವರ್ಷಗಳೇ ಕಳೀತು. ಅವನಿಗೂ ಈ ಮೊಬೈಲ್ ಚಟದ ಅಮಲೇರಿದೆ..! ಸದಾ ಅವನ ಗರ್ಲ್ ಫ್ರೆಂಡ್ ಜೊತೆ ಹಗಲೂ ರಾತ್ರಿ ಅಂತ ನೋಡದೇ ಮೊಬೈಲಲ್ಲಿ ಬಿಜಿಯಾಗಿದ್ದವನಿಗೆ ಅವನ ತಮ್ಮ, ತಂಗಿ ಅಪ್ಪ ಅಮ್ಮನ ನೆನಪೂ ಅಗಲಿಲ್ಲ..! ಅವನ ತಂಗಿ ಅವನ ಜೊತೆ ಮಾತಾಡೋಕೆ ಬಂದಾಗಲೆಲ್ಲಾ `ಸುಮ್ನೆ ಹೋಗೆ ತಲೆ ತಿನ್ಬೇಡ’ ಅಂತ ಕಳಿಸ್ತಿದ್ದ. ಕೈಲಿದ್ದ ದುಡ್ಡೆಲ್ಲಾ ಇವನ ಮತ್ತು ಅವಳ ಕರೆನ್ಸಿ, ನೆಟ್ ಪ್ಯಾಕಿಗೆ ಖಾಲಿಯಾಗಿದ್ದೇ ಬಂತು. ಅವಳು ಒಂದು ದಿನ ಕೈಕೊಟ್ಟು ಹೋದ್ಲು. ಅಷ್ಟರಲ್ಲಿ ಸಂಬಂಧಗಳು ಸತ್ತುಹೋಗಿತ್ತು..! ಅಪ್ಪಅಮ್ಮನಿಗೆ ಅವನನ್ನು ನೋಡಿದ್ರೆ ಕೋಪ ನೆತ್ತಿಗೇರೋದು, ಮೊಬೈಲ್ ಸಿಕ್ಕಿದ್ರೆ ಕಣ್ಣಿಗೆ ಕಾಣಿಸದ ಹಾಗೆ ಬಿಸಾಕಿಬಿಡ್ತೀನಿ ಅಂತ ಅವರಪ್ಪ ಸಾವಿರ ಸಲ ಹೇಳಿದ್ರು..! ಆದ್ರೆ ಅವನು ಮೊಬೈಲ್ ಎಸೆಯೋಕೆ ಮುಂಚೆ ಅದೇ ಮೊಬೈಲಿನಿಂದಾಗಿ ಸಂಬಂಧಗಳನ್ನೇ ಎಸೆದು ಹೋಗಿದ್ದ.. ಆಲ್ ಬಿಕಾಸ್ ಆಫ್ ಬ್ಲಡಿ ಮೊಬೈಲ್..!
ಇದಿಷ್ಟೇ ಅಲ್ಲ, ಮಕ್ಕಳು ಅಪ್ಪಅಮ್ಮನಿಂದ ದೂರ ಆಗೋದು, ಬಾಂಧವ್ಯಗಳಿಂದ ದೂರಾಗೋದು ಈ ಮೊಬೈಲಿನಿಂದಾನೇ..! ಮಕ್ಕಳ ಜೊತೆ ಆಡೋಕೆ ಟೈಮಿಲ್ಲ, ಮಕ್ಕಳನ್ನು ಪ್ರೀತಿಯೊಂದ ಮಾತಾಡಿಸೋಕೆ ಟೈಮಿಲ್ಲ..! ಮೊಬೈಲ್ ಹಿಡಿದು ಕೂತ್ರೆ ಸಂಬಂಧಗಳು ನೆಗೆದುಬಿದ್ದು ಹೋಯ್ತು ಅಂತಲೇ ಅರ್ಥ..! ಇನ್ನೂ ಕೆಲವು ಮಹಾನ್ ಅಪ್ಪಅಮ್ಮಂದಿರು ಮಕ್ಕಳ ಕೈಗೂ ಒಂದದು ಮೊಬೈಲ್ ಅಥವಾ ಟ್ಯಾಬ್ಲೆಟ್ ಕೊಟ್ಟು ಸುಮ್ಮನಾಗಿಸಿಬಿಡ್ತಾರೆ..! ಅಷ್ಟೆ, ಆ ಮಕ್ಕಳಿಗೂ ಅಪ್ಪ, ಅಮ್ಮ, ಅಜ್ಜ ಅಜ್ಜಿ ಯಾರೂ ಬೇಡ…! ಅಂತಹ ಬಾಂಧವ್ಯ ಶತ್ರು ಈ ಮೊಬೈಲ್..!
ಈಗೀಗಂತೂ ಅನುಮಾನಗಳಿಗೆ ಪ್ರಮುಖ ಕಾರಣ ಈ ಮೊಬೈಲ್, ಗಂಡಹೆಂಡತಿ ಸಂಬಂಧಗಳಲ್ಲಿ ಬಿರುಕು ಮೂಡೋಕೆ ಪ್ರಮುಖ ಕಾರಣ ಇದೆ..! ಎಲ್ಲೋ ಇರುವ ಫೇಸ್ ಬುಕ್ ಫ್ರೆಂಡಿಗೆ ಹಾಯ್ ಹಲೋ ಹೌ ಆರ್ ಯೂ ಅಂತ ಕೇಳೋ ಗಂಡ, ಪಕ್ಕದಲ್ಲಿರೋ ಹೆಂಡತಿಗೆ ಹೇಗಿದಿಯ ಅಂತ ಕೇಳಲಿಲ್ಲ ಅಂದ್ರೆ ಹೇಗೆ ಉರೀಬೇಡ..! ನನಗಿಂತ ಅವಳೇ ಇಂಪಾರ್ಟೆಂಟ್ ಅಂತ ಆರಂಭವಾಗೋ ಜಗಳ, ಅನೈತಿಕ ಫೋನ್ ಸಂಪರ್ಕದಾಚೆ, ಅನೈತಿಕ ಸಂಬಂಧಗಳವರೆಗೂ ತಲುಪಿ, ಜೀವನ ಕೊನೆಯಾಗೋದು ಕೋರ್ಟ್ ಕಟಕಟೆಯಲ್ಲಿ..! ಆಲ್ ಬಿಕಾಸ್ ಆಫ್ ಬ್ಲಡಿ ಮೊಬೈಲ್..!
ಇವತ್ತು ಮೊಬ್ಇದ್ರೆ ಅದ್ರಲ್ಲಿ ಮಾತಾಡ್ಬೋದು, ಚ್ಯಾಟ್ ಮಾಡ್ಬೋದು, ವೀಡಿಯೋ ನೋಡಬಹುದು, ಕಾರ್ ಬುಕ್ ಮಾಡ್ಬೋದು, ಶಾಪಿಂಗ್ ಮಾಡ್ಬೋದು,  ಪ್ರೆಸೆಂಟೇಶನ್ ಸಹ ಅದರಲ್ಲೇ ಪ್ರಿಪೇರ್ ಮಾಡಬಹುದು, ನೋಡಬಹುದು..! ಇನ್ಯಾಕೆ ಬೇಕು ಬೇರೆಯವರೆಲ್ಲಾ..? ಮನೆಗೆ ಬಂದ ಗಂಡ, ಮಗ, ಮೊಬೈಲ್ ನೋಡ್ತಾ ಕೂತುಬಿಟ್ರೆ ಅವನಿಗೋಸ್ಕರವೇ ಅಲ್ಲೀ ತನಕ ಕಾಯ್ತಾ ಕೂತಿದ್ದ ಹೆಂಡತೀಗೋ, ಅಪ್ಪ ಅಮ್ಮನಿಗೋ ಏನನ್ನಿಸಬೇಡ..! ಮಗ ಮೊಬೈಲ್ ತಗೊಂಡಾಗ ಹೆಮ್ಮೆಯಿಂದ ಪಕ್ಕದ ಮನೆಯವರ ಹತ್ರ ಹೇಳ್ಕೊಂಡಿದ್ದ ಅಪ್ಪ ಅಮ್ಮ ಇವತ್ತು ಅದೇ ಮೊಬೈಲಿಗೆ ಎಷ್ಟು ಶಾಪ ಹಾಕಿದ್ರೂ ಕಮ್ಮೀನೇ..!
ಮಕ್ಕಳ ಕೈಗೆ ಮೊಬೈಲ್ ಕೊಟ್ಟು, ಗೂಗಲ್ ನೋಡು, ಯೂಟ್ಯೂಬ್ ನೋಡು, ಟೆಂಪಲ್ ರನ್ ಆಡು, ಕ್ಯಾಂಡಿಕ್ರಷ್ ಮಾಡು ಅನ್ನೋ ಅಪ್ಪಅಮ್ಮ, ನೀವಿಲ್ಲದಿದ್ದಾಗ ನಿಮ್ಮ ಮಗ ಏನು ನೋಡ್ತಾನೆ ಅಂತಾನೂ ಗಮನಹರಿಸಿ..! ಮದ್ಯಮದ್ಯ ಬರೋ ಪಾಪ್ ಅಪ್ ಆಡ್ ಗಳು ನಿಮ್ಮ ಮಕ್ಕಳನ್ನು ಅಶ್ಲೀಲ ಪ್ರಪಂಚಕ್ಕೆ ಕರ್ಕೊಂಡು ಹೋಗೋ ಚಾನ್ಸ್ ಇದೆ..! ಅಲ್ಲಿಗೆ ನಿಮ್ಮ ಮಕ್ಕಳು ಬಿದ್ರೂ ಅಂತ ಇಟ್ಕೊಳಿ, ಅಲ್ಲಿಗೆ ಕಥೆ ಮುಗೀತು..! ನೀವೂ ಮೊಬೈಲಲ್ಲಿ ಬಿಜಿ, ಅವರೂ ಬಿಜಿ..! ಮಾರ್ಕ್ಸ್ ಕಾರ್ಡ್ ತುಂಬಾ ಬರೀ ಸಿ,ಡಿ ಗ್ರೇಡುಗಳೇ ತುಂಬಿಹೋಗುತ್ತೆ.. ಯಡವಟ್ಟಾಗೋ ಮುಂಚೆ ಮೊಬೈಲ್ ಕಿತ್ತು ಇಟ್ಕೊಳಿ, ಅದಕ್ಕೆ ಮುಂಚೆ ಮನೆಯಲ್ಲಿ ನಿಮ್ಮ ಮೊಬೈಲ್ ಸೈಡಿಗಿಡಿ..! ಯಾಕಂದ್ರೆ ನಿಮ್ಮ ಮಗ ನಿಮಗೆ ಕೇಳಬಾದರ್ು ` ನೀನ್ ಇಟ್ಕೊಂಡಿದಿಯಾ, ನಾನ್ಯಾಕ್ ಇಟ್ಕೋಬಾದರ್ು’ ಅಂತ..!
ಎಷ್ಟೋ ಜನ ಮೊಬೈಲಲ್ಲಿ ಚ್ಯಾಟ್ ಮಡಿದಷ್ಟೂ ಕಮ್ಮಿ ಅನ್ನೋ ಹಾಗೆ ಮೊಬೈಲ್ ಒತ್ತುತಾನೇ ಇರ್ತಾರೆ ..! ಆದ್ರೆ ಯಾರ ಜೊತೆಗೆ ಚ್ಯಾಟ್ ಮಾಡ್ತಿರ್ತಾರೋ ಅವರೇ ಎದುರಿಗೆ ಬಂದ್ರೆ ತುಟಿಕ್ ಪಿಟಿಕ್ ಅನ್ನಲ್ಲ..! ಬಾಯಿಗಿಂತ ಸ್ಟ್ರಾಂಗ್ ಆಗಿದೆ ಈ ವಾಟ್ಸಾಪ್ ಅಂಡ್ ಫೇಸ್ ಬುಕ್ ಮೆಸೆಂಜರ್..!
ಸ್ಕೈಪ್, ವೀಡಿಯೋ ಕಾಲಿಂಗ್ ಬಂದಮೇಲಂತೂ ಕಾಲೇಜು ಹುಡುಗ ಹುಡುಗೀರನ್ನ ಮಾತಾಡ್ಸಂಗೇ ಇಲ್ಲ.. ಇವೆಲ್ಲಾ ಅಪ್ಲಿಕೇಶನ್ ಇದ್ರೆ ಫ್ಯಾಮಿಲಿ ಬಿಟ್ಟು ದೂರದಲ್ಲಿರೋರನ್ನು ಮುಖ ನೋಡ್ಕೊಂಡು ಮಾತಾಡಿಸ್ಬೋದು ಅಂತ ನೀವು ಹೇಳಬಹುದು..! ಆದ್ರೆ ಅದೇ ಸ್ಕೈಪ್, ವೀಡಿಯೋ ಕಾಲಿಂಗ್, ಬಾತ್ ರೂಂ ತನಕ ಹೋದಾಗಲೇ ಏನೋ ಯಡವಟ್ಟಾಗ್ತಿದೆ ಅಂತ ಅನ್ನಿಸೋದು..! ದೇವರೇ ಕಾಪಾಡಬೇಕು ನಮ್ಮ ಯುವಕ ಯುವತಿಯರನ್ನು..!
ಹೌದು, ಮೊಬೈಲ್ ನಮಗೆ ಎಷ್ಟು ಆತ್ಮೀಯವಾಗಿದೆ ಅಂದ್ರೆ ನಮ್ಮ ನಿಜ ಸಂಬಂಧಗಳೆ ಹಾಳಾಗುವಷ್ಟು..! ಮುಂಚೆ ಪೊಸೆಸಿವ್ ನೆಸ್ ಅನ್ನೋದು ಯಾರ್ಯಾರದೋ ಮೇಲಿರ್ತಿತ್ತು. ಆದ್ರೆ ಇವತ್ತು ಅಪ್ಪ ಅಮ್ಮ, ಗಂಡ ಹೆಂಡತಿ, ಮಕ್ಕಳು ಹೀಗೆ ಎಲ್ಲರಿಗೂ ಪೊಸೆಸಿವ್ ನೆಸ್ ಮೊಬೈಲ್ ಮೇಲೆ..! ಇದೊಂದು ಇಲ್ಲದಿದ್ರೆ ನನ್ನ ಮಗ ನನ್ನ ಜೊತೆ ತುಂಬಾ ಮಾತಾಡ್ತಿದ್ದ, ನನ್ನ ಗಂಡ ನನ್ನನ್ನ ಕೇರ್ ಮಾಡ್ತಿದ್ದ, ನಮ್ಮಪ್ಪ ಅಮ್ಮ ನನ್ನ ಜೊತೆ ಆಟ ಆಡ್ತಿದ್ದ ಅಂತ ಫೀಲ್ ಮಾಡ್ಕೊಳೋ ಕಾಲ ಬಂದಿದೆ..! ಸೆಲ್ಫಿ, ಸೆಲ್ಫಿ ಅಂತ ಸೆಲ್ಫಿಶ್ ಗಳಾಗಿ ಫ್ಯಾಮಿಲಿಯಲ್ಲಿ ಸೆಲ್ಫ್ ರೆಸ್ಪೆಕ್ಟ್ ಕಳ್ಕೊಂಡುಬಿಟ್ಟಿದೀವಿ..!
ಡಿಯರ್ ಫ್ರೆಂಡ್ಸ್, ಮೊಬೈಲ್ ನಿಮಗೆ ಖುಷಿ ಕೊಡಬಹುದು. ಆದ್ರೆ ಅದ್ಯಾವತ್ತೂ ನಿಮ್ಮ ಕಷ್ಟ ಅರ್ಥ ಮಾಡಿಕೊಳ್ಳಲ್ಲ..! ಚಾರ್ಜ್ ಮಾಡಿದ್ರೇನೇ ಅದು ಆನ್ ಆಗೋದು, ರೀಚಾರ್ಜ್ ಮಾಡಿದೇನೇ ಪ್ರಪಂಚದ ಜೊತೆ ಕನೆಕ್ಟ್ ಮಾಡಿಸೋದು..! ಆದ್ರೆ ಸಂಬಂಧಗಳು ಹಾಗಲ್ಲ, ಏನೂ ಇಲ್ಲದಿದ್ರೂ ಇದ್ದರೂ ನಿಮ್ಮ ಜೊತೆಗೇ ಇರುತ್ತೆ..! ನಿಮ್ಮ ಸಂತೋಷವನ್ನು ಎದುರು ನೋಡುತ್ತೆ.. ಅಪ್ಪ ಅಮ್ಮ, ಗಂಡ ಹೆಂಡತಿ, ಮಕ್ಕಳು, ಸ್ನೇಹಿತರು… ಇವರೆಲ್ಲರಿಗಿಂತಾ ನಿಮ್ಮ ಮೊಬೈಲ್ ಯಾವತ್ತೂ ಗ್ರೇಟ್ ಅಲ್ಲ..! ಪಕ್ಕದಲ್ಲಿರೋ ಫ್ರೆಂಡಿಗೆ ಕಷ್ಟ ಅಂತ ಹೇಳಿ, ಹೆಲ್ಪ್ ಮಡ್ತಾನೆ.. ಫೇಸ್ ಬುಕ್ಕಲ್ಲಿ ಸಿಗೋ ಫ್ರೆಂಡಿಗೆ ಕಷ್ಟ ಅಂತ ಹೇಳಿ ಬ್ಲಾಕ್ ಮಾಡ್ತಾನೆ..! ಉಪಯೋಗಿಸಲೇಬೇಕಾದ ಟೈಮಲ್ಲಿ ಮೊಬೈಲ್ ಉಪಯೋಗಿಸಿ, ಅನವಶ್ಯಕ ಅನಿಸೋ ಟೈಮಲ್ಲಿ ಮೊಬೈಲ್ ಸೈಡಿಗಿಡಿ.. ಹೃದಯಕ್ಕೆ ಹತ್ತಿರ ಇರೋರ ಜೊತೆ ಮಾತಾಡಿ..! ತಂತ್ರಜ್ಞಾನ ನಮ್ಮ ಶತ್ರುವಾಗೋದು ಬೇಡ.. ಪ್ಲೀಸ್…!
– ಕೀರ್ತಿ ಶಂಕರಘಟ್ಟ

1 COMMENT

LEAVE A REPLY

Please enter your comment!
Please enter your name here