ನಮ್ಮ ದೇಶದ ನಂಬರ್ ವನ್ ಶ್ರೀಮಂತ ಅವರಲ್ವಾ..? ಇವರಲ್ವಾ..? ಅಂತ ಜಾಸ್ತಿ ಹುಳ ಬಿಟ್ಕೋಬೇಡಿ. ಇದು ನಮ್ಮ ಪಕ್ಕದ ರಾಷ್ಟ್ರ ಚೀನಾದ ಕಥೆ..! ಚೀನಾದ ಅತ್ಯಂತ ಶ್ರೀಮಂತನ ಕಥೆ..! ಏನೂ ಇಲ್ಲದವನು ಏನೋ ಆದ ಕಥೆ..! ರಿಯಲ್ ಸ್ಟೋರಿ ಆಫ್ ಜಾಕ್ ಮಾ… ಆಲಿಬಾಬಾ.ಕಾಮ್ ಮಾಲೀಕ ಜಾಕ್ ಮಾ..!
This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.
ಯಾರಿವನು ಜಾಕ್ ಮಾ..? ಯಾವುದಿದು ಆಲಿಬಾಬ ಅಂತ ಯೋಚನೆ ಮಾಡ್ತಿದೀರಾ..? ನಮ್ಮ ದೇಶದಲ್ಲಿ ಫ್ಲಿಪ್ ಕಾರ್ಟ್, ಸ್ನ್ಯಾಪ್ ಡೀಲ್ ಹೇಗೋ, ಹಾಗೇ ಚೀನಾದಲ್ಲಿ ಆಲಿಬಾಬಾ.ಕಾಮ್..! ಚೀನಾದ ಜನ ಶಾಪಿಂಗ್ ಗೆ ಪರ್ಯಾಯ ಹೆಸರಿಟ್ಟಿರೋದು ಆಲಿಬಾಬ ಅಂತ..! ಇತ್ತೀಚೆಗೆ ಭಾರತದಲ್ಲೂ ತನ್ನ ಸ್ಥಾನ ಭದ್ರಪಡಿಸಿಕೊಳ್ಳೋಕೆ ಟ್ರೈ ಮಾಡ್ತಿದೆ ಇದೇ ಆಲಿಬಾಬ..! ಈ ಆಲಿಬಾಬ ಶುರು ಆಗಿದ್ದು ಹೇಗೆ..? ಅದರ ಮಾಲೀಕನ ಜಾಕ್ ಮಾ ಸ್ಟೋರಿ ಏನು ಅಂತ ನೀವೇ ಓದಿ..
ಜಾಕ್ ಮಾ ಒಂದು ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದವರು. ಒಬ್ಬ ಅಣ್ಣ ಹಾಗೂ ಒಬ್ಬಳು ತಂಗಿ. ದುಡ್ಡಿನ ವಿಚಾರಕ್ಕೆ ಬಂದ್ರೆ ಅವರೇನು ಅಂತಹ ಸ್ಥಿತಿವಂತರಂತೂ ಆಗಿರಲಿಲ್ಲ. ಆದ್ರೆ, ಓದುವ ವಿಚಾರದಲ್ಲಿ ಜಾಕ್ ಮಾ ತುಂಬಾ ಚಾಲಾಕಿ. ಜೊತೆಗೆ ತುಂಬಾ ಹಠಮಾರಿ ಸಹ. ಶಾಲಾ ದಿನಗಳಲ್ಲೇ ತನ್ನೂರಿಗೆ ಬರುತ್ತಿದ್ದ ವಿದೇಶೀ ಪ್ರವಾಸಿಗರಿಗೆ ಇಂಗ್ಲೀಷ್ ಟೂರ್ ಹೆಸರಲ್ಲಿ ಅವರನ್ನು ಊರು ಸುತ್ತಿಸೋ ಕೆಲಸ ಮಾಡ್ತಿದ್ರು ಜಾಕ್ ಮಾ..! ಯಾರಿಗೂ ಯಾವುದ್ರಲ್ಲೂ ಬಿಟ್ಟುಕೊಡೋ ಮನುಷ್ಯನೇ ಅಲ್ಲ ಅವರು..! ದೊಡ್ಡವರಾಗ್ಲಿ ಸಣ್ಣವರಾಗ್ಲಿ ತಾನು ಸರಿ ಇದ್ರೆ ಯಾವ ಮುಲಾಜೂ ನೋಡದೇ ಅವರ ವಿರುದ್ಧ ಧ್ವನಿ ಎತ್ತುತ್ತಿದ್ರು..! ಹೀಗೇ ದಿನಗಳು ಕಳೀತು. ಅವರ ವಿದ್ಯಾಭ್ಯಾಸ ಎಲ್ಲಾ ಕಂಪ್ಲೀಟ್ ಆಯ್ತು..! ಕೆಲಸ ಅಂತ ಏನಾದ್ರೂ ಮಾಡಬೇಕಲ್ವಾ..? ಹಾಗಾಗಿ ಅವರು ಆರಿಸಿಕೊಂಡ ವೃತ್ತಿ ಶಿಕ್ಷಕನಾಗೋದು. ಅವರು ಶಾಲಾ ದಿನಗಳಿಂದಲೂ ತುಂಬಾ ಹಾಸ್ಯಪ್ರಿಯ. ಅವರ ಹಾವಭಾವಗಳೆಲ್ಲಾ ತುಂಬಾ ಕಾಮಿಡಿಯಾಗಿರ್ತಿತ್ತು..! ಪಾಠ ಮಾಡುವಾಗ್ಲೂ ಅದೇ ಹಾಸ್ಯ ಶೈಲಿ ಮುಂದುವರೆಸಿ ವಿದ್ಯಾರ್ಥಿಗಳ ಫೇವರೇಟ್ ಟೀಚರ್ ಆಗಿದ್ರು ಜಾಕ್ ಮಾ..! ಆ ಕಾಲಕ್ಕೆ ಅವರಿಗೆ ಬರ್ತಿದ್ದ ಸಂಬಳ 12 ಡಾಲರ್..! ಆದ್ರೆ ಎಷ್ಟು ದಿನ ಇದನ್ನೇ ಮಾಡೋದು ಅನ್ನೋದು ಅವರ ತಲೆಯಲ್ಲಿ ಆಗಾಗ ಕೊರೀತಾ ಇತ್ತು..! ಆಗಿದ್ದಾಗ್ಲಿ ಅಂತ ಸಿಕ್ಕಸಿಕ್ಕ ಕಡೆಯೆಲ್ಲಾ ಕೆಲಸಕ್ಕೆ ಅಪ್ಲೈ ಮಾಡಿದ್ರೂ ಸಹ ಎಲ್ಲೂ ಅವರಿಗೆ ಕೆಲಸ ಸಿಗಲೇ ಇಲ್ಲ.. ಕೆ.ಎಫ್.ಸಿ ಚೀನಾದಲ್ಲಿ ತನ್ನ ಬ್ರ್ಯಾಂಚ್ ಆರಂಭಿಸುವಾಗ 24 ಜನ ಕೆಲಸಕ್ಕೆ ಅರ್ಜಿ ಹಾಕಿದ್ರು. ಅದರಲ್ಲಿ 23 ಜನ ಸೆಲೆಕ್ಟ್ ಆಗಿದ್ರು..! ಸೆಲೆಕ್ಟ್ ಆಗದ ಒಬ್ಬರೇ ಒಬ್ಬ ಈ ಜಾಕ್ ಮಾ..! ಹೀಗೆ ಬೇರೆಬೇರೆ ಕಡೆ 30 ಆಫೀಸ್ ಗಳಲ್ಲಿ ರಿಜೆಕ್ಟ್ ಆಗ್ತಾರೆ ಜಾಕ್ ಮಾ..! ಆದ್ರೂ ಅವರು ಬೇಜಾರಾಗಲ್ಲ..! ಜೊತೆಜೊತೆಗೆ ಇಂಗ್ಲೀಷ್ ಭಾಷೆಯನ್ನು ಅರೆದು ಕುಡಿಯೋ ಕೆಲಸದಲ್ಲಿ ಅವರು ನಿರತರಾಗ್ತಾರೆ..! ಅವರ ಇಂಗ್ಲೀಷ್ ಅದೆಷ್ಟು ಅದ್ಭುತವಾಗಿತ್ತು ಅಂದ್ರೆ 1995ರಲ್ಲಿ ಚೀನಾ ಸರ್ಕಾರದ ಒಂದು ಪ್ರಾಜೆಕ್ಟ್ ಗೆ ಜಾಕ್ ಮಾ ಸೆಲೆಕ್ಟ್ ಆಗಿ ಅಮೆರಿಕಕ್ಕೆ ಭೇಟಿ ಕೊಡ್ತಾರೆ..! ಅಲ್ಲಿಂದ ಅವರ ಜೀವನ ಹೊಸ ತಿರುವು ಪಡೆಯುತ್ತೆ..! www.tnit.in
ಅಮೆರಿಕ ಹೋಗೋಕೂ ಮುಂಚೆ ಬೇರೆಬೇರೆ ಬಿಸ್ನೆಸ್ ಮಾಡೋಕೆ ಕೈ ಹಾಕಿ ಜಾಕ್ ಮಾ ಕೈ ಸುಟ್ಟುಕೊಂಡಿರ್ತಾರೆ..! ಆದ್ರು ಏನಾದ್ರೂ ಮಾಡೇ ಮಾಡ್ತೀನಿ ಅನ್ನೋ ಹಠ ಮಾತ್ರ ಕಮ್ಮಿಯಾಗಿರಲ್ಲ..! ಅಮೆರಿಕಕ್ಕೆ ಹೋದವರು ಫಸ್ಟ್ ಟೈಂ ಇಂಟರ್ನೆಟ್ ಮುಂದೆ ಕೂರ್ತಾರೆ ಜಾಕ್ ಮಾ..! ಇಂಟರ್ನೆಟ್ ನಲ್ಲಿ ಅವರು ಮೊದಲು ಹುಡುಕೋ ಪದ `ಬಿಯರ್’ ಅಂತ. ಅದು ವಿಶ್ವದ ಬೇರೆಬೇರೆ ಬಿಯರ್ ಕಂಪನಿಗಳನ್ನು ತೋರಿಸುತ್ತೆ. ಆದ್ರೆ ಚೀನಾದ ಬಿಯರ್ ಕಂಪನಿಗಳನ್ನು ತೋರಿಸೋದಿಲ್ಲ..! ಮತ್ತೆ `ಚೀನಾ’ ಅಂತ ಹುಡುಕಿದಾಗಲೂ ಚೀನಾಗೆ ಸಂಬಂಧಪಟ್ಟ ಯಾವುದೇ ಮಾಹಿತಿ ಸಿಗೋದಿಲ್ಲ..! ಆಗಲೇ ಅವರು ಡಿಸೈಡ್ ಮಾಡ್ತಾರೆ, ಚೀನಾದಲ್ಲಿ ಇಂಟರ್ನೆಟ್ ಕ್ರಾಂತಿ ಮಾಡೋಕೆ ಇದೇ ಸರಿಯಾದ ಟೈಂ..! www.tnit.in
ಅಮೆರಿಕದಿಂದ ಬಂದವರೇ ತನ್ನ 17 ಜನ ಸ್ನೇಹಿತರನ್ನು ತಮ್ಮ ಅಪಾರ್ಟ್ ಮೆಂಟಿಗೆ ಕರೀತಾರೆ. ಅವರ ಬಳಿ ಚೀನಾದಲ್ಲಿ ಇ-ಕಾಮರ್ಸ್ ಕಂಪನಿ ಶುರು ಮಾಡಿದ್ರೆ ಹೆಂಗೆ ಅಂತ ಒಂದು ಐಡಿಯಾ ಕೊಡ್ತಾರೆ..! ನೀವೆಲ್ಲಾ ಸ್ವಲ್ಪ ಇನ್ವೆಸ್ಟ್ ಮಾಡಿದ್ರೆ ಕಂಪನಿ ಶುರು ಮಾಡ್ತೀನಿ ಅಂತ ಹೇಳ್ತಾರೆ. ಕೆಲವು ಸ್ನೇಹಿತರು `ಇವನಿಗೆಲ್ಲೋ ಹುಚ್ಚು ಹಿಡಿದಿದೆ’ ಅನ್ಕೊಂಡು ಸುಮ್ಮನಾಗ್ತಾರೆ. ಮತ್ತೆ ಕೆಲವರು ` ಶುರು ಮಾಡು, ಏನಾಗುತ್ತೋ ನೋಡೋಣ’ ಅಂತಾರೆ..! ಇಡೀ ಚೀನಾದಲ್ಲಿ 5% ಜನರೂ ಕಂಪ್ಯೂಟರ್ ಉಪಯೋಗಿಸದ ಟೈಮಲ್ಲಿ ಜಾಕ್ ಮಾ `ಆಲಿಬಾಬ’ ಕಂಪನಿ ಶುರು ಮಾಡ್ತಾರೆ..! ಆರಂಭದಲ್ಲಿ ಕಷ್ಟ ಅನಿಸಿದ್ರೂ ಜಾಕ್ ಮಾ ಚಿಂತೆಮಾಡ್ಲಿಲ್ಲ.. ಗೆಲ್ಲೋ ಗ್ಯಾರಂಟಿ ಇತ್ತು ಅವರಿಗೆ..! ಹಂತಹಂತವಾಗಿ ಚೀನಾದಲ್ಲಿ ಕಂಪ್ಯೂಟರ್ ಕ್ರಾಂತಿ ಆಯ್ತು. ಕಂಪ್ಯೂಟರ್ ಬೆಳೀತಾ ಬೆಳೀತಾ ಆಲಿಬಾಬ ಅದರ ಜೊತೆಗೇ ಬೆಳೆಯೋಕೆ ಶುರುವಾಯ್ತು..! ಜನ ಶಾಪಿಂಗ್ ಮಾಡೋಕೆ ಆಲಿಬಾಬಾನೇ ಬೆಸ್ಟ್ ಅಂತ ಡಿಸೈಡ್ ಮಾಡಿದ್ರು..! ಯಾವಾಗ ಕಂಪನಿ ಬೆಳೆಯುತ್ತೆ ಅಂತ ಗೊತ್ತಾಯ್ತೋ, 1999ರಲ್ಲಿ ಗೋಲ್ಡ್ ಮ್ಯಾನ್ ಸ್ಯಾಚ್ಸ್ ಕಂಪನಿ, ಆಲಿಬಾಬಾದಲ್ಲಿ 5 ಮಿಲಿಯನ್ ಡಾಲರ್ ಹಣ ತೊಡಗಿಸ್ತು..! 31ನೇ ವಯಸ್ಸಿನಲ್ಲಿ ಒಂದು ಯಶಸ್ವಿ ಕಂಪನಿಯ ಒಡೆಯರಾಗಿದ್ರು ಜಾಕ್ ಮಾ..! 2005ರ ಹೊತ್ತಿಗೆ ಆಲಿಬಾಬಾ ಸಿಕ್ಕಾಪಟ್ಟೆ ಹೆಸರು ಮಾಡಿತ್ತು. ಪರಿಣಾಮವಾಗಿ ಯಾಹೂ ಕಂಪನಿ ಆಲಿಬಾಬಾದಲ್ಲಿ ಒಂದು ಬಿಲಿಯನ್ ಡಾಲರ್ ಹೂಡಿಕೆ ಮಾಡ್ತು..! ಇವತ್ತು ಅದರ ಮೌಲ್ಯ 10 ಬಿಲಿಯನ್ ಡಾಲರ್..! ಇವತ್ತು ಆಲಿಬಾಬಾ ಕಂಪನಿಯ ಮೌಲ್ಯ 150 ಬಿಲಿಯನ್ ಡಾಲರ್ ಗೂ ಹೆಚ್ಚು..! ಹಾಗೇ ಜಾಕ್ ಮಾ ಅವರ ಆಸ್ತಿ 25 ಬಿಲಿಯನ್ ಡಾಲರ್, ಅಂದ್ರೆ ಬರೋಬ್ಬರಿ 1653686250000 ರೂಪಾಯಿ..೨೦೧೪ರ ಚೀನಾದ ಶ್ರೀಮಂತರ ಪಟ್ಟಿಯಲ್ಲಿ ಜಾಕ್ ಮಾ ನಂಬರ್ 1.! www.tnit.in
ಇವತ್ತಿಗೂ ತನಗೋಸ್ಕರ ಅನ್ನೋ ಹಾಗೆ ದೊಡ್ಡದೊಡ್ಡ ಆಸ್ತಿ ಅಂತ ಏನೂ ಮಾಡಿಲ್ವಂತೆ ಜಾಕ್ ಮಾ.. ಅವರ ಸ್ನೇಹಿತರು ಹೇಳೋ ಪ್ರಕಾರ ಇವತ್ತಿಗೂ ಅವರು ಅವತ್ತಿನ ಹಾಗೆಯೇ ಇದ್ದಾರಂತೆ..! ಹಳೆಯ ಸ್ನೇಹಿತರನ್ನು ಭೇಟಿ ಮಾಡೋದು. ಪುಸ್ತಕಗಳನ್ನು ಓದೋದು, ನೌಕರರ ಜೊತೆ ಸಿಕ್ಕಾಪಟ್ಟೆ ಕಾಮಿಡಿ ಮಾಡೋದು, ಕಂಪನಿ ಕಾರ್ಯಕ್ರಮಗಳಲ್ಲಿ ವಿಚಿತ್ರ ಡ್ರೆಸ್ ಹಾಕ್ಕೊಂಡು ಡ್ಯಾನ್ಸ್ ಮಾಡೋದು..! ಹೀಗೆ ಅವತ್ತಿದ್ದ ಎಲ್ಲಾ ತರ್ಲೆ ಗುಣಗಳು ಈಗಲೂ ಇದಿಯಂತೆ..! 20000 ನೌಕರರನ್ನು ಫ್ಯಾಮಿಲಿ ತರ ನೋಡ್ಕೋತಾರಂತೆ..! ಆಲಿಬಾಬಾ ಕಂಪನಿ ಸೇರಿದವರು ಕೆಲಸ ಬಿಡೋ ಯೋಚನೇನೇ ಮಾಡಲ್ವಂತೆ..! ಅದಕ್ಕೆಲ್ಲಾ ಕಾರಣ ಆ ಮಹಾನ್ ವ್ಯಕ್ತಿ..! ಇವತ್ತು ಜಗತ್ತಿನ ದಿಗ್ಗಜರಲ್ಲೊಬ್ಬರು ಜಾಕ್ ಮಾ..! ಅವರದೊಂದು ತುಂಬಾ ಫೇಮಸ್ ಮಾತಿದೆ.. ` ಕಷ್ಟಪಡು.. ಇವತ್ತು ತುಂಬಾ ಕಷ್ಟ ಅನಿಸುತ್ತೆ, ನಾಳೆ ಇನ್ನೂ ಕಷ್ಟ ಅನಿಸುತ್ತೆ. ಆದ್ರೆ ನಾಡಿದ್ದು ನಿನ್ನ ಲೈಫ್ ಸೂಪರ್ರಾಗಿರುತ್ತೆ..!’ ಅಂತ.. ಆ ಮಾತನ್ನು ಪಾಲಿಸಿದ್ರೆ ನಮ್ಮ ದಿನಗಳೂ ಅದ್ಭುತವಾಗಿರೋದ್ರಲ್ಲಿ ಅನುಮಾನವಿಲ್ಲ..! ಜಾಕ್ `ಮಾ’ ತುಜೇ ಸಲಾಂ..!
If you Like this Story , Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com