48 ವರ್ಷದ ಕಾನೂನು ಪದವಿ ವಿದ್ಯಾರ್ಥಿ – ಮಧ್ಯಾಹ್ನ 3 ಗಂಟೆಯವರೆಗೆ ಭಿಕ್ಷುಕ..!

0
68

ಸಾರ್, ಈ ಲೈಫು ಅನ್ನೋದು ತುಂಬಾ ಕರಾಬು! ಕೆಲವೊಂದು ಸಲ ಎಷ್ಟೇ ಓದಿದ್ರೂ ಕೆಲಸ ಸಿಗಲ್ಲ! ಯೋಗ್ಯತೆ ಇಲ್ದೆ ಇರೋರಿಗೆ ಕೆಲಸ ಸಿಕ್ಕಿರುತ್ತೆ! ಯೋಗ್ಯತೆ ಇದ್ದೋರಿಗೆ ಕೆಲಸ ಇರಲ್ಲ! ಎಂಥಾ ವಿಚಿತ್ರ ದುನಿಯಾ ರಿ…,! ಹಂಗಂತ ಕೆಲಸ ಕಾರ್ಯ ಇಲ್ದೆ ಮನೆಲೇ ಬಿದ್ದಿರೋಕೆ ಆಗತ್ತ? ಇಲ್ಲ, ಹೆಂಡ್ತಿ ಮಕ್ಳನ್ನ ಸಾಕಲಿಕ್ಕಾದ್ರೂ ದುಡಿಬೇಕು ಅನ್ನೋದೆ ಗಂಡು ಜನ್ಮ ಅಲ್ವೇನ್ರೀ? ಹೌದು ಸಾರ್, ಸಿಕ್ಕಾಪಟ್ಟೆ ಓದಿನೂ ಕೆಲಸ ಸಿಗ್ದೆ ಇದ್ರೆ ಭಿಕ್ಷೆನಾದ್ರು ಬೇಡಿ ಬದಕ್ಬೇಕು! ಇದು ತುಂಬಾ ಅನಿವಾರ್ಯ!
ರಾಜಸ್ಥಾನದಲ್ಲಿ ವಿದ್ಯಾವಂತನ ಲೈಫು ಹೀಗೆ! ಭಿಕ್ಷೆ ಬೇಡ್ತಾ ಓದ್ತಾ ಇದ್ದಾರೆ! ಅವ್ರ ಸ್ಟೋರಿ ಹೇಳ್ತೀನಿ ಕೇಳಿ!

This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.

ಅವರ ಹೆಸರು ಶಿವಸಿಂಗ್! ಅವರಿಗೆ ಈಗ 48 ವರ್ಷ! ರಾಜಸ್ಥಾನ್ ಯೂನಿವರ್ಸಿಟಿಯೊಂದ್ರಲ್ಲಿ ಕಾನೂನು ವಿದ್ಯಾಭ್ಯಾಸ ಮಾಡ್ತಾ ಇದ್ದಾರೆ! ಹ್ಞೂಂ, ಸಾರ್ ನಲವತ್ತೆಂಟರ ಹರೆಯದ ಲಾ ಸ್ಟೂಡೆಂಟ್ ಈ ಶಿವಸಿಂಗ್!
ಪದವಿದರರಾಗಿದ್ರೂ ಕೆಲಸ ಸಿಗಲಿಲ್ಲ! ಇವರ ಪೋಷಕರು ಕೂಲಿನಾಲಿ ಮಾಡಿ ಓದ್ಸಿದ್ರು! ಗಂಗಾಪುರ್ ಸಿಟಿಯ ಕಾಲೇಜ್ ಒಂದ್ರಲ್ಲಿ ಡಿಗ್ರಿ ಮುಗೀತು! ಡಿಗ್ರಿ ಮುಗಿದ ಮೇಲೆ ಮದ್ವೇನು ಆಗುತ್ತೆ! ಪದವಿಯೂ ಪಡೆದಾಯ್ತು, ಮದುವೆಯೂ ಆಯ್ತು! ಎರಡು ಮಕ್ಕಳ ತಂದೆಯೂ ಆದ್ರು! ಆದ್ರೆ ಕೆಲಸ ಮಾತ್ರ ಸಿಗಲೇ ಇಲ್ಲ! ನಿರುದ್ಯೋಗಿ ಗಂಡನ ಜೊತೆ ಬಾಳಲು ಆಗದ ಹೆಂಡ್ತಿ, ತನ್ನ ಮಕ್ಕಳನ್ನೂ ಕಟ್ಟಕೊಂಡು ಮನೆ ಬಿಟ್ಟು ಹೋಗ್ತಾಳೆ! ಏಕಾಂಗಿಯಾದ ಶಿವಸಿಂಗ್ ಭಿಕ್ಷೆ ಬೇಡಿ ಬದುಕ ಬೇಕಾಗುತ್ತೆ! ಆದ್ದರಿಂದ ಪ್ರತಿದಿನ ಬೆಳಿಗ್ಗೆಯಿಂದ ಮಧ್ಯಾಹ್ನ ಮೂರು ಗಂಟೆ ತನಕ ತಾನಿರುವ ಊರಿನ ಅಕ್ಕಪಕ್ಕದ ಅಂಗಡಿಗಳಲ್ಲಿ, ಮನೆಮನೆಗಳಲ್ಲಿ ಭಿಕ್ಷೆ ಬೇಡ್ತಾರೆ! ಮಧ್ಯಾಹ್ನ ಮೂರುಗಂಟೆ ಆಗುವುದೇ ತಡ! ಯೂನಿವರ್ಸಿಟಿಗೆ ಗೆ ಹೋಗ್ತಾರೆ! ಹಳೇ ಬ್ಯಾಗ್ ನಲ್ಲಿ ಒಂದಷ್ಟು ಬುಕ್ ಇಟ್ಕೊಂಡು ಕ್ಯಾಂಪಸ್ ಗೆ ಹೋಗ್ತಾರೆ! ಹೀಗೆ ಭಿಕ್ಷೆ ಬೇಡ್ತಾ ಬೇಡ್ತಾನೇ “ಲಾ” ಓದ್ತಾ ಇದ್ದಾರೆ! “ಶಿವಸಿಂಗ್ ರಂತಹ ವಿದ್ಯಾರ್ಥಿಗಳಿಲ್ಲ! ಯಾವತ್ತೂ ಕೂಡ ರಜೆ ಹಾಕುವುದಿಲ್ಲ! ಪ್ರತಿದಿನ ಮೂರುಗಂಟೆ ತನಕ ಭಿಕ್ಷೆ ಬೇಡಿ ಕ್ಲಾಸ್ ಗೆ ಬರ್ತಾರೆ! ಯೂನಿವರ್ಸಿಟಿಗೆ ರಜೆ ಇದ್ದ ದಿನ ಕೂಡ ನಿತ್ಯದಂತೆ ಲೈಬ್ರರಿಗೆ ಬಂದು ಓದ್ತಾರೆ! ಅಂತ ಯೂನಿವರ್ಸಿಟಿ ಆಡಳಿತ ಮಂಡಳಿ ಶಿವಸಿಂಗ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ! ಇವರ ಬಗ್ಗೆ ಸ್ನೇಹಿತರಿಗೂ ಹೆಮ್ಮೆ ಇದೆ!
ದುಡಿಮೆ ಎಷ್ಟು ಮುಖ್ಯ ಅಲ್ವಾ ಗುರು, ದುಡ್ಡಿದ್ರೆ ಮಾತ್ರ ಹೆಂಡ್ತಿ ಮಕ್ಕಳು! ಇಲ್ದೆ ಇದ್ರೆ ವಿ ಆರ್ ಅಲೋನ್! ಹೆಂಡ್ತಿ ಮಕ್ಕಳು ದೂರದ್ರೂ, ನಲವತ್ತೆಂಟು ವರ್ಷ ಏಜ್ ಆದ್ರೂ ಭಿಕ್ಷೆ ಬೇಡಿ ಓದ್ತಾ ಇರೋ ಶಿವ ಸಿಂಗ್ ಒಂದ್ ಅರ್ಥದಲ್ಲಿ ನಿಜಕ್ಕೂ ಗ್ರೇಟ್! ಭಿಕ್ಷೆ ಬೇಡಿ ಓದ್ತಾನೂ ಇದ್ದಾರಲ್ಲಾ….! ಇವ್ರ ಬಗ್ಗೆ ನೀವ್ ಏನ್ ಅಂತಿರಾ?

  • ಶಶಿಧರ ಡಿ ಎಸ್ ದೋಣಿಹಕ್ಲು

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

 

 

Picture credits: Yogendra Gupta & Bhaskar News

LEAVE A REPLY

Please enter your comment!
Please enter your name here