ಕೊಟ್ಟೂರು ಸ್ವಾಮಿ ಕಾಮಪುರಾಣ…!?

Date:

ಕಾಮಿ ಸ್ವಾಮಿಗಳು ಹೆಚ್ಚಾಕ್ತಾ ಇದ್ದಾರೆ…! ಕೊಪ್ಪಳ ಜಿಲ್ಲೆಯ ಗಂಗಾವತಿ ಕಲ್ಮಠದ ಕೊಟ್ಟೂರು ಸ್ವಾಮಿಯ ಕಾಮದಾಟ ಬೆಳಕಿಗೆ ಬಂದಿದೆ. ಈತ ಬಳಸಿಕೊಂಡ ಮಹಿಳೆಯರಿಗೆ ಲೆಕ್ಕವಿಲ್ಲವಂತೆ…!
ಮಠದಿಂದ ಶಿಕ್ಷಣ ಸಂಸ್ಥೆ ನಡೀತಾ ಇದೆ. ಇಲ್ಲಿ ಪಾಠ ಮಾಡೋ ಟೀಚರ್, ಲೈಬ್ರೇರಿಯನ್, ಅಡುಗೆ ಮಾಡೋ ಮಹಿಳೆ ಸೇರಿದಂತೆ ಈ ಕಾಮಿ ಸ್ವಾಮಿ ಯಾರನ್ನೂ ಬಿಟ್ಟಿಲ್ಲವಂತೆ. ಇಲ್ಲಿ ಕೆಲಸಕ್ಕೆ ಸೇರಿದವ್ರಿಗೆ ಈ ಆಸಾಮಿ ಮಂಚಕ್ಕೆ ಆಹ್ವಾನ ನೀಡ್ತಿದ್ದ ಅನ್ನೋದು ತಿಳಿದುಬಂದಿದೆ.


ಹಿಂದೆ ಈ ಮಠದ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡ್ತಿದ್ದ ಶಿಕ್ಷಕಿಯನ್ನು ಬಳಸಿಕೊಂಡಿದ್ದನಂತೆ. ಆಕೆಗೂ ಮದುವೆ ಆಗಲೂ ಬಿಟ್ಟಿರಲಿಲ್ಲವಂತೆ. ಈಗ ಆ ಶಿಕ್ಷಕಿ ನಿವೃತ್ತರಾಗಿದ್ದು ಗಂಗಾವತಿಯಲ್ಲಿ ವಾಸವಿದ್ದಾರೆ ಎಂದು ಹೇಳಲಾಗಿದೆ.  ಇದೀಗ ಹುಲಿಹೈದರ್ ಗ್ರಾಮಪಂಚಾಯತಿ ವ್ಯಾಪ್ತಿ ಮಹಿಳೆಯನ್ನು ಮಠದಲ್ಲಿ ಇಟ್ಕೊಂಡಿದ್ದಾನಂತೆ…! ಈಕೆಯನ್ನು ಹುಲಿಹೈದರ್ ಗ್ರಾಪಂನ ಸದಸ್ಯೆಯನ್ನಾಗಿ ಮಾಡಿದ್ದಲ್ಲದೆ 35 ಲಕ್ಷ ಮೌಲ್ಯದ ಮನೆಯನ್ನೂ ಕಟ್ಟಿಸಿಕೊಟ್ಟಿದ್ದಾನಂತೆ ಕಾಮಿ ಸ್ವಾಮಿ.
ಅಷ್ಟೇಅಲ್ಲ ಲೈಬ್ರೇರಿಯನ್ ಆಗಿದ್ದ ಮಹಿಳೆ ಜೊತೆ ರಾಸಲೀಲೆ ಆಡಿ ಎರಡು ಮಕ್ಕಳನ್ನು ದಯಪಾಲಿಸಿದ್ದನಂತೆ. ಇದನ್ನು ತಿಳಿದ ಆಕೆಯ ಗಂಡ ಗಲಾಟೆಗೆ ಮುಂದಾದಾಗ 15 ಲಕ್ಷ ರೂ ನೀಡಿ ಬಾಯಿಮುಚ್ಚಿಸಿದ್ದನಂತೆ. ಅವನು ಕರುಣಿಸಿದ ಮಕ್ಕಳಿಗೆ ಪ್ರತಿತಿಂಗಳು ಹಣ ಕೊಡ್ತಿದ್ದಾನಂತೆ. ಅಡುಗೆ ಮಹಿಳೆಯನ್ನು ಬಿಟ್ಟಿಲ್ಲ ಕಾಮಿ. ಈತನಿಗೆ ಆಕೆಯ ಸ್ನಾನ ಮಾಡಿಸಿ ಬಟ್ಟೆ ಹಾಕ್ಬೇಕಂತೆ. ಡ್ರೈವರ್‍ಗೆ ಕೊಲೆಬೆದರಿಕೆಯೊಡ್ಡಿ ಸಹಕಾರ ನೀಡುವಂತೆ ಮಾಡಿಕೊಂಡಿದ್ದನಂತೆ. ಇತ್ತೀಚೆಗೆ ಆತ ಸಹಕರಿಸಲು ಹಿಂದೇಟು ಹಾಕಿದಾಗ ಕೆಲಸದಿಂದ ತೆಗೆದು ಹಾಕಿದ್ದಾನಂತೆ ಸ್ವಾಮಿ.


ಈತನಿಂದ ನೊಂದ ಮಹಿಳೆಯರು ಅನಾಮದೇಯ ಪತ್ರ ಬರೆದು ನೋವು ತೋಡಿಕೊಂಡಿದ್ದಾರೆ. ಈ ಸ್ವಾಮಿ ಅಲ್ಲ ಸಂಸಾರಿಯಂತೆ…! ಮಹಿಳೆಯರು ಮಾಡೋ ಅಡುಗೆ ಊಟ ಮಾಡ್ತಾನಂತೆ. ಮಾಂಸಹಾರ, ಮದ್ಯ ಸೇವನೆ ಅಂದ್ರೆ ಬಲುಪ್ರಿಯವಂತೆ…! ತನ್ನ ಮಠ, ಶಿಕ್ಷಣ ಸಂಸ್ಥೆಯಲ್ಲಿನ ಕೆಲ ಮಹಿಳೆಯರ ಜೊತೆ ಮಂಚ ಏರಿದ್ದಲ್ಲದೆ, ಬ್ಯಾಂಕಾಕ್, ಥೈವಾನ್ ನಿಂದ ಬಂದ ಮಹಿಳೆಯರ ಜೊತೆಯೂ ಕಾಮದಾಟ ಆಡಿದ್ದ ಎನ್ನಲಾಗಿದೆ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...