No menu items!
12.4 C
Munich
Wednesday, April 29, 2026

ಅಂದು ಮನೆ-ಮನೆಗೆ ಹೋಗಿ ಚಿನ್ನಾಭರಣ ವ್ಯಾಪಾರ ಮಾಡ್ತಿದ್ರು …! ಇಂದು?

Must read

“ಮುಳಿಯ ” ಚಿನ್ನಾಭರಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಸಂಸ್ಥೆ.. 1944 ರಲ್ಲಿ ಮುಳಿಯ ಕೇಶವ ಭಟ್ ಇವರಿಂದ ದಕ್ಷಿಣ ಕನ್ನಡ ಜಿಲ್ಲೆಯ ಪುಟ್ಟ ನಗರವಾಗಿದ್ದ ಪುತ್ತೂರಿನಲ್ಲಿ ಆರಂಭಗೊಂಡ ಸಣ್ಣ ಸಂಸ್ಥೆ ಇಂದು ನಾಲ್ಕು ಶಾಖೆಗಳಿಗೆ ವಿಸ್ತರಿಸಿ ಗ್ರಾಹಕರ ಸೇವೆಗೆ ಮನೆಮಾತಾಗಿದೆ..ಆರಂಭದ ದಿನಗಳಲ್ಲಿ ಸಂಸ್ಥಾಪಕರಾದ ಕೇಶವ ಭಟ್ ಇವರು ಮನೆ ಮನೆಗೆ ಹೋಗಿ ಚಿನ್ನಾಭರಣಗಳನ್ನು ವ್ಯಾಪಾರ ಮಾಡುತ್ತಿದ್ದರು. ನಂತರದ ದಿನಗಳಲ್ಲಿ ಗ್ರಾಹಕರೇ “ಮುಳಿಯ” ವನ್ನು ಹುಡುಕಿಕೊಂಡು ಬರುವಷ್ಟು ಸಂಚಲನವನ್ನು ಸೃಷ್ಟಿಸಿತು..!


ಕೇಶವ ಭಟ್ಟರ ನಂತರ ಅವರ ಮಗ ಶ್ರೀ ಶ್ಯಾಮ ಭಟ್ ಇವರು ಸಂಸ್ಥೆಯನ್ನು ಕಟ್ಟಿ ಬೆಳೆಸಿದರು. ಕೇವಲ ವ್ಯಾಪಾರ ಮಾತ್ರ ಅಲ್ಲದೆ ಸಾಮಾಜಿಕವಾಗಿಯೂ ತನ್ನನ್ನು ತಾನು ತೊಡಗಿಸಿಕೊಂಡರು.. ಈಗ ಮೂರನೇ ತಲೆಮಾರಿನ ಅಂದರೆ ಕೇಶವ ಭಟ್ ಇವರ ಮೊಮ್ಮಕ್ಕಳಾದ ಶ್ರೀ ಕೇಶವ ಪ್ರಸಾದ್ ಮುಳಿಯ ಮತ್ತು ಕೃಷ್ಣ ನಾರಾಯಣ ಮುಳಿಯ ಇವರ ಮೂಲಕ ಸಂಸ್ಥೆಯು ಮುಂದುವರಿಯುತ್ತಿದೆ..2000 ನೇ ಇಸವಿಯಲ್ಲಿ ಇವರಿಬ್ಬರು ಅಧಿಕೃತವಾಗಿ ಅಧಿಕಾರವಹಿಸಿಕೊಂಡರು. ಕೇವಲ ಒಂದು ಶಾಖೆ ಹೊಂದಿದ್ದ ಮುಳಿಯ ತನ್ನ ಮೂರು ಶಾಖೆಗಳಾದ ಮಡಿಕೇರಿ, ಗೋಣಿಕೊಪ್ಪಲ್ ಮತ್ತು ಬೆಂಗಳೂರನ್ನು ಕೇವಲ 5 ವರ್ಷಗಳ ಅಂತರದಲ್ಲಿ ವಿಸ್ತರಿಸುವ ಮೂಲಕ ಗ್ರಾಹಕರ ಸೇವೆಗೆ ತನ್ನನ್ನು ತೊಡಗಿಸಿಕೊಂಡಿತು..ರಾಜ್ಯದಲ್ಲಿ ಇನ್ನೂ ಶಾಖೆಗಳನ್ನು ಹೆಚ್ಚಿಸುವ ಹಂಬಲದಲ್ಲಿರುವ ಇವರುಗಳು JCI, ರೋಟರಿ, ಮುಂತಾದ ಸಂಸ್ಥೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ…


ಮಂಗಳೂರು ,ಕೊಡಗು ಶೈಲಿಯ ಆಭರಣಗಳು, ವೈವಿಧ್ಯಮಯ ಆ್ಯಂಟಿಕ್ ಆಭರಣಗಳು, ಮದುವೆ ಆಭರಣ,ಲೈಟ್ ವೈಟ್ ಆಭರಣಗಳ ವಿಶಿಷ್ಟ ಸಂಗ್ರಹವೇ ಮುಳಿಯದ ವೈಶಿಷ್ಟ್ಯ… ಅಲ್ಲದೆ “ಮುಳಿಯ ಪ್ರಾಪರ್ಟಿ”ಎಂಬ ಅಂಗ ಸಂಸ್ಥೆಯ ಮೂಲಕ ನಿವೇಶನಕ್ಕೆ ಯೋಗ್ಯವಾದ ಸೈಟುಗಳನ್ನು ಒದಗಿಸಿಕೊಡುತ್ತಿದೆ. ಇಂದು “ಮುಳಿಯ” ಸಂಸ್ಥಾಪಕರ ದಿನ.. ಅಂದರೆ ಶ್ರೀ ಮುಳಿಯ ಕೇಶವ ಭಟ್ಟ ಇವರ ಜನ್ಮ ದಿನ..ಪ್ರತೀ ವರ್ಷದಂತೆ ಈ ವರ್ಷವೂ ಕೂಡ ಇಂದಿನಿಂದ 3 ದಿನಗಳ ಕಾಲ ಗ್ರಾಹಕರು ಖರೀದಿಸಿದ ಪ್ರತೀ ಗ್ರಾಮ್ ಚಿನ್ನದಲ್ಲಿ ರೂ.25 ನ್ನು ಸಮಾಜಮುಖಿ ಕಾರ್ಯಗಳಿಗೆ ಉಪಯೋಗಿಸುವ ಮೂಲಕ ತನ್ನ ಸಾಮಾಜಿಕ ಕಳಕಳಿಯನ್ನು ತೋರಿಸಿಕೊಟ್ಟಿದೆ.

ಮುಳಿಯ- “ಶುದ್ಧತೆಯನ್ನು ಮೀರಿದ ಪರಿಪೂರ್ಣತೆಯೆಡೆಗೆ”

ಸತ್ಯ ಎಂ ಭಟ್

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article