ಇಪ್ಪತ್ತು-ಇಪ್ಪತೈದು ವರ್ಷದ ಬಹುತೇಕ ಯುವಕ ಯುವತಿಯರ ದೊಡ್ಡ ಕನಸು “ತಾವು ಪ್ರತಿಷ್ಠಿತ ಎಂಎನ್ಸಿ ಕಂಪನಿಯಲ್ಲಿ ದೊಡ್ಡ ಹುದ್ದೆಯನ್ನು ಅಲಂಕರಿಸಿ ಕೈ ತುಂಬಾ ಸಂಬಳ ತಗೋಬೇಕು ಅನ್ನೋದಾಗಿರುತ್ತೆ..! ಈ ವಯಸ್ಸಲ್ಲಿ ಸ್ವಂತ ಉದ್ಯಮ ಮಾಡೋ ಕನಸಿದ್ದರೂ ಈಗಲೇ ಸಕಾರಗೊಳಿಸಲು ಯಾರೂ ಮುಂದಾಗಿರಲ್ಲ..! ಮನೆಯವರು ಸಿಕ್ಕಾಪಟ್ಟೆ ಶ್ರೀಮಂತರಾಗಿದ್ದರೂ ಕೂಡ ತನ್ನ ಮಗ ಅಥವಾ ಮಗಳು ಉದ್ಯಮಿಯಾಗಲೀ ಅಂತ ಯಾರೂ ಬಂಡವಾಳ ಹಾಕೋಕೆ ತಯಾರಿರಲ್ಲ..! ಸ್ವಲ್ಪ ಸಮಯ ಬೇರೆಡೆ ಕೆಲಸ ಮಾಡಿ ಅನುಭವ ಪಡೆದ ಮೇಲೆ ಸ್ವಂತ ಉದ್ಯೋಗ ಮಾಡಲಿ ಅಂತ ಅಂದುಕೊಳ್ಳುವವರೇ ಹೆಚ್ಚು..! ಹೀಗಿರುವಾಗ ಈ ಇಪ್ಪತ್ತು-ಇಪ್ಪತೈದರ ಆಸುಪಾಸಿನಲ್ಲಿ ಕಾಲೇಜು ವಿದ್ಯಾಭ್ಯಾಸ ಮಾಡ್ತಾ ಮಾಡ್ತಾನೇ ಕೋಟ್ಯಾಧಿಪತಿ ಆಗಲು ಸಾಧ್ಯ ಇದೆಯೇ..?! ನಾವು ನೀವು, ಏನ್ ಗುರೂ ಕಾಲೇಜು ಓದುವಾಗ ಸ್ವಂತ ಉದ್ಯೋಗ ಮಾಡಿ ಕೋಟಿಗಟ್ಟಲೆ ಸಂಪಾದಿಸಲು ಚಾನ್ಸೇ ಇಲ್ಲ ಅನ್ನುತ್ತೇವೆ..! ಆದರೆ ಮುಂಬೈಯ 25ರ ಬೆಡಗಿ ಪ್ರಿಯಾಂಕ ಅಗರ್ವಾಲ್ ಓದುವಾಗಲೇ ಕೋಟಿ ಕೋಟಿ ದುಡ್ಡು ಮಾಡಬಹುದು ಅಂತ ತೋರಿಸಿಕೊಟ್ಟಿದ್ದಾರೆ..! ಆ ಪ್ರೀಯಾಂಕ ಅಗರ್ವಾಲ್ ಕೋಟಿ ಕೋಟಿ ದುಡ್ಡು ಮಾಡಿದ್ದು ಹೇಗೆ ಅನ್ನೋ ಇಂಟ್ರೆಸ್ಟಿಂಗ್ ಅಂಡ್ ಇನ್ಸ್ಪಿರೇಷನಲ್ ಸ್ಟೋರಿ ಇಲ್ಲಿದೆ..! ಮಿಸ್ ಮಾಡ್ದೇ ಓದಿದ್ರೇ ನೀವೂ ಉದ್ಯಮಿಯಾಗೋ ಮನಸ್ಸು ಮಾಡಿ ದುಡ್ಡು ಮಾಡೋ ಕಡೆ ಗಮನ ಹರಿಸಿಯೇ ಹರಿಸುತ್ತೀರಿ..!
ಈ ಸ್ಟೂಡೆಂಟ್ ಮಿಲೇನಿಯರ್ ಪ್ರಿಯಾಂಕ ಮುಂಬೈನವರು…! ಇನ್ನೂ ಓದುತ್ತಿರೋ ಇವರು ಕೋಟ್ಯಾಧಿಪತಿ…! ಹಂಗಂತ ಅಪ್ಪನ ದುಡ್ಡಲ್ಲಿ ರಾಣಿಯಂತೆ ಮೆರೆಯುತ್ತಿರೋ ಕೋಟಿಯ ಅಧಿಪತಿ ಈ ಪ್ರಿಯಾಂಕ ಅಲ್ವೇ ಅಲ್ಲ..! ಇವರು ತನ್ನ ಶ್ರಮದಿಂದಲೇ ಕೋಟ್ಯಾಧಿಪತಿಯಾದ ವಿದ್ಯಾರ್ಥಿನಿ..! ಇದ್ದಕ್ಕಿದ್ದಂತೆ ದುಡ್ಡು ಇವರ ಅಕೌಂಟಿಗೆ ಬಂದು ಬಿದ್ದಿದ್ದಲ್ಲ..! 25 ವರ್ಷದ ಈ ವಿದ್ಯಾರ್ಥಿನಿ ತನ್ನ 20ನೇ ವಯಸ್ಸಲ್ಲೇ ಸ್ವಂತ ಉದ್ಯಮ ಮಾಡ್ಬೇಕು ಅಂತ ಪಕ್ಕಾ ಪ್ಲಾನ್ ಮಾಡಿಕೊಂಡಿದ್ರು..! ಆದರೂ ತಾನೊಬ್ಬ ದೊಡ್ಡ ಉದ್ಯಮಿಯಾಗಿ ಬೆಳೆಯುತ್ತೇನೆಂಬ ಕನಸು ಕೂಡ ಇವರು ಕಂಡಿರಲಿಕ್ಕಿಲ್ಲ ಅನಿಸುತ್ತೆ..! ಅವರೇ ಹೇಳುವಂತೆ, ತುಂಬಾ ರಿಸ್ಕ್ ತಗೊಂಡು ಸಂಪಾದನೆ ಮಾಡೋ ಅಗತ್ಯವೂ ಇವರಿಗೆ ಇರ್ಲಿಲ್ಲ…! ಜೊತೆಗೆ ಅಷ್ಟೆಲ್ಲಾ ತಲೆ ಕೆಡಿಸಿಕೊಳ್ಳೋ ಜಾಯಮಾನ ಕೂಡ ಇವರದ್ದಾಗಿರಲಿಲ್ಲ..! ಆರಂಭದ ಕಾಲೇಜು ದಿನಗಳಲ್ಲಿ ಇತಿಹಾಸ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ ಇವರ ಓದಿನ ಆಯ್ಕೆಯ ವಿಷಯಗಳಾಗಿದ್ದವು..! ಜೊತೆಗೆ ನಾಟ್ಯ ಮತ್ತು ಆಟ ಇವರ ಹವ್ಯಾಸಗಳಾಗಿದ್ದವು..! ಇಂಥಾ ಹಿನ್ನೆಲೆ ಇರೋ ಇವರಿಗೆ ಉದ್ಯಮ ಪ್ರಪಂಚದ ಬಗ್ಗೆ ಕಲ್ಪನೆ, ಮುಂದಾಲೋಚನೆ ಆದರೂ ಹೇಗೆ ಬರಲು ಸಾಧ್ಯ..! ಇವರಲ್ಲಿ ಉದ್ಯಮಶೀಲ ಗುಣ ಬೆಳೆಯಲು ಕಾರಣ ಅವರ ತಂದೆ..! ಕಾಲೇಜಿಗೆ ಹೋಗುವಾಗ ದಿನಾಲೂ ಅಪ್ಪನ ಜೊತೆ ಹೋಗ್ತಾ ಇದ್ದ ಪ್ರಿಯಾಂಕ.. ಅಪ್ಪನ ಆಫೀಸಿಗೂ ಹೋಗಿ ಬರ್ತಾ ಇದ್ರು..! ಈ ದಿನಚರಿಯೇ ಈಕೆಯನ್ನು ಉದ್ಯಮ ಪ್ರಪಂಚದತ್ತ ತಿರುಗಿ ನೋಡುವಂತೆ ಮಾಡಿ ಬಿಡ್ತು..! ನಾನೂ ಏನಾದರೊಂದು ಉದ್ಯಮ ಶುರು ಮಾಡಬೇಕೆಂದು ಅನಿಸಿದಾಗ ಸಲೂನ್ ಸೆಂಟರ್ ತೆರೆಯುವ ಯೋಚನೆ ಮಾಡಿದ ಪ್ರಿಯಾಂಕ ಅಲ್ಪಾವಧಿಯ ಹೇರ್ ಅಂಡ್ ಬ್ಯುಟಿ ಕೋರ್ಸ್ ಗೆ ಸೇರಿದ್ರು..! ಈ ಕೋರ್ಸ್ ಅನ್ನು ಮುಗಿಸಿದರೂ ಇವರಿಗೆ ತಾನು ಈ ಕೆಲಸ ಮಾಡಲು ಆಗಲ್ಲ..! ಬೇರೆ ಏನಾದ್ರೂ ಮಾಡ್ಬೇಕು ಅಂತ ಅನಿಸುತ್ತೆ..! ಯಾವ ಉದ್ಯಮ ಆರಂಭಿಸೋದು ಅಂತ ಚಡಪಡಿಸಿ ಸಂಶೋಧನೆಯನ್ನೇ ಮಾಡಿ ಬಿಡ್ತಾರೆ..! ಏನೆಲ್ಲಾ ಉದ್ಯಮ ಮಾಡ್ಬಹುದು ಹುಡುಕಾಡಿ, ಸುಸ್ತಾದರೂ ಇವರಿಗೆ ಇಷ್ಟವಾದ, ತಾನು ಮಾಡಬಹುದೆನಿಸುವ ಉದ್ಯಮ ಹೊಳೆಯಲೇ ಇಲ್ಲ..!
ಆಗ ತಂದೆಯ ಬಳಿ “ಅಪ್ಪಾ.. ನಾನು ಬ್ಯುಸ್ನೆಸ್ ಮಾಡುವುದಾದರೆ ಏನನ್ನು ಮಾಡ್ಬಹುದು” ಅಂತ ಕೇಳ್ತಾರೆ..! ಅಪ್ಪನ ಜೊತೆ ಚರ್ಚಿಸಿದ ಮಗಳು ಪ್ರಿಯಾಂಕಗೆ ತಂದೆ “ನೀನು ಪರ್ಸನಲ್ ಕೇರ್ ಲೈನ್ ಅಂದ್ರೆ ವೈಯಕ್ತಿಕ ಕಾಳಜಿಗೆ ಬಳಸುವ ಉತ್ಪನ್ನಗಳನ್ನು (ಕಾಸ್ಮೆಟಿಕ್ ವಸ್ತುಗಳು ಇತ್ಯಾದಿ)ಮಾರಾಟ ಮಾಡುವ ಜಾಲವನ್ನೇ ಆರಂಭಿಸಿ ಉದ್ಯಮಿ ಆಗಬಹುದಮ್ಮಾ..! ಅಂತಾರೆ. ಅದಕ್ಕೆ ಪ್ರಿಯಾಂಕ ಆರಂಭದಲ್ಲಿ “ಪಪ್ಪಾ, ಇವೆಲ್ಲಾ ನನ್ನಿಂದ ಆಗುತ್ತಾ..? ಸುಮ್ಮನಿರಿ ಪಪ್ಪಾ.. ಅಂತ ಹೇಳಿ ನಕ್ಕಿರುತ್ತಾರೆ”..! ಕೆಲವು ದಿನಗಳ ನಂತರ ಅಪ್ಪನ ಸಲಹೆ ಒಳ್ಳೆಯದೇ ಇದೆ..! ನಾನು ಕಾಸ್ಮೆಟಿಕ್ ವಸ್ತುಗಳ ಮಾರಾಟವನ್ನು ಆರಂಭಿಸಿದರೆ ಹೇಗೆಂದು ಯೋಚಿಸಿ ಅದನ್ನು ಆ ಉದ್ಯಮವನ್ನು ಶುರು ಮಾಡಿಯೇ ಬಿಡ್ತಾರೆ..! ಆಗ ಪ್ರಿಯಾಂಕರಿಗೆ ತಂದೆ 10ಲಕ್ಷ ರೂಪಾಯಿಗಳನ್ನು ಬಂಡವಾಳ ಹಾಕ್ತಾರೆ..! ಪ್ರಿಯಾಂಕ ಅಪ್ಪ ಹಾಕಿದ ಬಂಡವಾಳವನ್ನು ವ್ಯರ್ಥ ಮಾಡುವುದಿಲ್ಲ..! ಆ ಬಂಡವಾಳದಿಂದಲೇ ಇವತ್ತು ಕೋಟಿ ಕೋಟಿ ರೂಪಾಯಿಗಳಿಸ್ತಾ ಇದ್ದಾರೆ..! ಕಾಸ್ಮೆಟಿಕ್ ವಸ್ತುವಿನ ಮಾರಾಟಜಾಲ ಬಹುದೊಡ್ಡ ಉದ್ಯಮವಾಗಿ ಬೆಳೆಯುತ್ತಿದೆ..! ಒಟ್ಟಾರೆ ಆರು ರಾಜ್ಯಗಳಲ್ಲಿ ಇವರ ಅಂಗಡಿಗಳನ್ನು ತೆರೆದಿದ್ದಾರೆ..! ಒಂದೊಂದು ರಾಜ್ಯದಲ್ಲೂ 100 ಅಂಗಡಿಗಳಂತೆ 600 ಅಂಗಡಿಗಳನ್ನು ತೆರೆದು ದೊಡ್ಡ ಮಟ್ಟದ ವ್ಯವಹಾರ ನಡೆಸುತ್ತಾ ಕೋಟಿ ಕೋಟಿ ಹಣವನ್ನುಗಳಿಸುತ್ತಿದ್ದಾರೆ..!
ಅಪ್ಪ ಹತ್ತು ಲಕ್ಷ ಕೊಟ್ಟಿದ್ದರಿಂದ ಇವರು ಕೋಟಿ ಕೋಟಿ ದುಡೀತ ಕೋಟ್ಯಾಧಿಪತಿ ಆದರೆಂದು ವ್ಯಂಗ್ಯ ಮಾಡಬೇಡಿ…! ಈ ವಯಸ್ಸಲ್ಲಿ ಇಷ್ಟೆಲ್ಲಾ ದುಡ್ಡು ಸಿಕ್ಕರೇ..! ಅದರಲ್ಲೂ ಶ್ರೀಮಂತ ಮನೆತನದಲ್ಲಿ ಹುಟ್ಟಿದವರು ದುಡ್ಡನ್ನು ಖರ್ಚು ಮಾಡಲು ನೋಡ್ತಾರೆಯೇ ವಿನಃ ಅದನ್ನು ಎರಡು ಪಟ್ಟು ಮೂರು ಪಟ್ಟು ನಾಲ್ಕುಪಟ್ಟು ಅಂತ ಹೆಚ್ಚಿಸೋ ಬಗ್ಗೆ ಗಮನ ಹರಿಸೋದು ತೀರಾ ಅಪರೂಪವಾಗಿಬಿಟ್ಟಿದೆ..! ಶ್ರೀಮಂತಳಾಗಿದ್ದರೂ ಅಪ್ಪನ ದುಡ್ಡನ್ನು ಬಂಡವಾಳವನ್ನಾಗಿಸಿ ಕೋಟಿ ಕೋಟಿ ಹಣಗಳಿಸುತ್ತಿರೋ ನಮ್ಮ ಭಾರತೀಯ ಹುಡುಗಿ ಪ್ರಿಯಾಂಕ ನಿಜಕ್ಕೂ ಗ್ರೇಟ್ ಕಣ್ರೀ..! ಇವರ ವಯಸ್ಸಲ್ಲಿ ಮೋಜು ಮಸ್ತಿ ಅಂತ ಸುತ್ತಿ ಕಾಲಹರಣ ಮಾಡೋ ಮಂದಿಯೇ ಜಾಸ್ತಿ ಇರುವಾಗ ಪ್ರಿಯಾಂಕ ನಮಗೆಲ್ಲಾ ಮಾದರಿಯಾಗಿ ನಿಂತಿದ್ದಾರೆ..! ಈಗಿನ್ನೂ ಎಸ್ಪಿ ಜೈನ್ ಕಾಲೇಜಿನಲ್ಲಿ ಎಂಬಿಎ ಓದ್ತಾ ಇರೋ ಪ್ರಿಯಾಂಕ ಕೋಟಿ ಕೋಟಿ ಹಣ ಮಾಡ್ತಾ ಇರೋ ಕೋಟ್ಯಾಧಿಪತಿ ವಿದ್ಯಾರ್ಥಿನಿ..! ಇವರ ಸ್ಟೋರಿಯನ್ನು ಓದಿದ ಮೇಲೆ ನಮ್ಮ ಸಾಮಥ್ರ್ಯಕ್ಕೆ ತಕ್ಕಂತಾದರೂ ಸಣ್ಣಪುಟ್ಟ ಉದ್ಯಮವನ್ನೇ ಮಾಡ್ತಾ ಮಾಡ್ತಾ ಬೆಳೆಯ ಬಹುದು ಅನಿಸುತ್ತೆ..! ನಮ್ಮ ಭಾರತೀಯ ಹೆಣ್ಣು ಮಗಳ ಸಾಧನೆ ಮೆಚ್ಚಲೇ ಬೇಕು..! ಇವರ ಹಾದಿಯಲ್ಲಿ ನಾವೂ ಹೆಜ್ಜೆ ಇಡಲು ಯತ್ನಿಸೋಣ..!
- ಶಶಿಧರ ಡಿ ಎಸ್ ದೋಣಿಹಕ್ಲು
If you Like this Story , Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
ಊಟಕ್ಕೆ ಆರ್ಡರ್ ಮಾಡಿದವಳು ಬೆಂಗಳೂರನ್ನೇ ಬಿಟ್ಟು ಹೋಗಿದ್ದೇಕೆ..?
ಇವರು ಬೆಂಗಳೂರಿನ ಉಕ್ಕಿನ ಮನುಷ್ಯ..! ಇಂಥಾ ಕೆಲಸ ಮಾಡೋರು ತುಂಬಾ ಅಪರೂಪ..!
ಈತನೇ ನೋಡಿ ವಿಶ್ವದ ಅತಿ ಶ್ರೀಮಂತ ಕ್ಷೌರಿಕ..! ಈತನ ಬಳಿ ಇವೆ 250ಕ್ಕೂ ಹೆಚ್ಚು ಐಶಾರಾಮಿ ಕಾರುಗಳು..!
ವಿದೇಶಿಯರ ಬಾಯಲ್ಲೂ ಕನ್ನಡ ಕನ್ನಡ ಕನ್ನಡ..! ವಿದೇಶಿ ಮಹಿಳೆಯೊಬ್ಬರು ಹಚ್ಚೇವು ಕನ್ನಡದ ದೀಪ.. ಅಂತ ಹಾಡ್ತಾ ಇದ್ದಾರೆ..!
ಲಾಭದಾಯಕ ಕೆಲಸವನ್ನು ಬಿಟ್ಟು ಬಂದವರು..! ಅಷ್ಟಕ್ಕೂ ಇವರೆಲ್ಲಾ ಕೆಲಸ ಬಿಟ್ಟಿದ್ದೇಕೆ ಗೊತ್ತಾ..?!
ಅಲ್ಲಿ ಏನೆಲ್ಲಾ ಬಾಡಿಗೆ ಸಿಗುತ್ತೆ ಗೊತ್ತಾ..? ಜಪಾನಿಗರ ಬಾಡಿಗೆ ಪ್ರೀತಿ..!
ನಮ್ಮ ಶಂಕ್ರಣ್ಣ ಇನ್ನೂ ಇರಬೇಕಾಗಿತ್ತು..! ಹುಟ್ಟು ಹಬ್ಬದ ಶುಭಾಶಯಗಳು ಶಂಕ್ರಣ್ಣ..! ಶಂಕರ್ ನಾಗ್ ಮತ್ತೆ ಹುಟ್ಟಿಬನ್ನಿ…
ಆಕೆಗೂ ತಾನು ಗರ್ಭಿಣಿ ಅಂತ ಗೊತ್ತೇ ಇರ್ಲಿಲ್ಲ..! ಇದ್ದಕ್ಕಿದ್ದಂತೆ ಮಗು ಹುಟ್ಟಿ ಬಿಡುತ್ತೆ..!
ಒಂಬತ್ತು ವರ್ಷದ ಪೋರ ಕಂಪನಿಯೊಂದರ ಸಿಇಒ..! ಈ ಪೋರ ಆ್ಯಪ್ ಡೆವಲಪರ್, ಸೈಬರ್ ಸೆಕ್ಯುರಿಟಿ ಎಕ್ಸ್ ಪರ್ಟ್..!