ಸನ್ನಿ ಬರ್ತಿದ್ದಾಳೆ…..

Date:

ಸನ್ನಿ ಲಿಯೋನ್, ಈ ಹೆಸರು ಕೇಳಿದ್ರೆ ಸಾಕು ಯುವಕರ ಎದೆಯಲ್ಲಿ ಹೈ ವೊಲ್ಟೇಜ್ ಕರೆಂಟ್ ಪಾಸ್ ಆಗಿ ಬಿಡುತ್ತೆ. ಅದೇನೋ ಗೊತ್ತಿಲ್ಲ ಸನ್ನಿ ಮಾದಕತೆಯೆ ಹಾಗೆ..! ಸನ್ನಿ ಕೂತ್ರು ಸುದ್ದಿ, ನಿಂತ್ರು ಸುದ್ದಿ.ಈಗಾಗಲೆ ತನ್ನ ಮಾದಕ ಮೈ ಮಾಟದಿಂದ ಬಾಲಿವುಡ್‌ನಲ್ಲಿ ಗುರುತಿಸಿಕೊಂಡಿರೋ ಸನ್ನಿ, ಹಿಂದಿ ಹಾಡುಗಳಿಗೆ ಸ್ಟೆಪ್ ಹಾಕಿರೋದನ್ನು ನೀವು ನೋಡಿರ್ತೀರಾ. ಅದೆ ಸನ್ನಿ ಕನ್ನಡದ ಹಾಡುಗಳಿಗೆ ಲೈವ್ ಆಗಿ ಹೆಜ್ಜೆ ಹಾಕೋದನ್ನ ನೋಡಿದ್ದೀರಾ ?

ಹೌದು, ಸನ್ನಿ ಕನ್ನಡದ ರ‌್ಯಾಪ್ ಹಾಡುಗಳಿಗೆ ಅಭಿಮಾನಿಗಳ ಮುಂದೆಯೇ ಹೆಜ್ಜೆ‌ ಹಾಕಲು ಬೆಂಗಳೂರಿಗೆ ಬರ್ತಿದ್ದಾಳೆ. ಅದೇನೋ ಗೊತ್ತಿಲ್ಲ ಸನ್ನಿಗೆ ಬೆಂಗಳೂರು ಫೇವರಿಟ್ ಸಿಟಿಯಂತೆ. ಈಗಾಗಲೆ ಕನ್ನಡದ ‘ಡಿಕೆ’ ಮತ್ತು ‘ ಲವ್ ಯೂ ಅಲಿಯಾ’ ಚಿತ್ರದಲ್ಲಿ ನಟಿಸಿರೋ ಸನ್ನಿಗೆ ಬೆಂಗಳೂರಿನ ನಂಟಿದ್ರು ಅದು ಶೂಟಿಂಗ್‌ಗೆ ಮಾತ್ರ ಸೀಮಿತವಾಗಿತ್ತು.


ಆದ್ರೆ ಈ ಬಾರಿ ಸನ್ನಿ ಅಭಿಮಾನಿಗಳ ಮುಂದೆಯೆ ಲೈವ್ ಪರ್‌ಫಾರ್ಮ್ ನೀಡ್ತಾ ಇದ್ದಾಳೆ. ಹೊಸ ವರ್ಷದ ಸಂಭ್ರಮಾಚರಣೆಗೆ ಇದೆ ಡಿಸೆಂಬರ್ 31ರಂದು ಬೆಂಗಳೂರಿಗೆ ಬರುವ ಸನ್ನಿ ಲಿಯೋನ್ ಅವತ್ತು ಮಾನ್ಯತಾ ಟೆಕ್ ಪಾರ್ಕ್‌ನ ‘ವೈಟ್ ಆರ್ಕೀಡ್’ ಮೈದಾನದಲ್ಲಿ ‘ಸನ್ನಿ ನೈಟ್’ ಹೆಸರಿನ ಶೋ ನೀಡಲಿದ್ದಾಳೆ. ಕನ್ನಡದ ಖ್ಯಾತ ರ‌್ಯಾಪ್ ಗಾಯಕ‌ ಅಲೋಕ್ ನೇತೃತ್ವದ ‘ ಆಲ್ ಓಕೆ ‘ ತಂಡ ಹಾಡಲಿರುವ ಕನ್ನಡದ ರ‌್ಯಾಪ್ ಸಾಂಗ್‌ಗಳಿಗೆ ಸನ್ನಿ ಸ್ಟೆಪ್ ಹಾಕಲಿದ್ದಾಳೆ. ಅಂದಹಾಗೆ ಬೆಂಗಳೂರಿಗೆ ಸನ್ನಿಯನ್ನು ಕರೆಸಿ ಕನ್ನಡದ ಹಾಡುಗಳಿಗೆ ಹೆಜ್ಜೆ ಹಾಕಿಸೋ ವಿಭಿನ್ನ ಯೋಜನೆ ರೂಪಿಸಿದ್ದು ‘ದಿ ಟೈಮ್ ಕ್ರಿಯೇಶನ್ಸ್’ ಎಂಬ ಮುಂಚೂಣಿ ಜಾಹಿರಾತು ಸಂಸ್ಥೆ.

ಈಗಾಗಲೆ ಸಿಲಿಕಾನ್ ಸಿಟಿಯಲ್ಲಿ ಸನ್ನಿ ಜಪ ಶುರುವಾಗಿದೆ. ಸೇಸಮ್ಮ ಸೇಸಮ್ಮ ಬಾಗಿಲು ತೆಗೆಯಮ್ಮ…! ಅಂತಾ ಹಾಡು ಗುನುಗಲು ಶುರು ಮಾಡಿಕೊಂಡಿದ್ದಾರೆ. ಹೊಸ ವರ್ಷವನ್ನು ಡಿಫರೆಂಟಾಗಿ ಸೆಲಬ್ರೇಟ್‌ ಮಾಡೋರಿಗೆ ಸನ್ನಿ ನೈಟ್ ಕ್ರೇಜ಼್ ಹುಟ್ಟಿಸಿ ಬಿಟ್ಟಿದೆ. ಡಿಸೆಂಬರ್ 31 ರ ಸಂಜೆಯಿಂದಲೆ ಪರ್‌ಫಾರ್ಮ್ ನೀಡಲಿರುವ ಸನ್ನಿ, ಅಭಿಮಾನಿಗಳ ಮುಂದೆಯೆ ಕೇಕ್ ಕಟ್ ಮಾಡಿ ಹೊಸ ವರ್ಷವನ್ನು ಸ್ವಾಗತಿಸಲಿದ್ದಾಳೆ. ಸನ್ನಿ ನೈಟ್ ಕಾರ್ಯಕ್ರಮದ ಟಿಕೆಟ್‌ಗಾಗಿ ‘ಬುಕ್ ಮೈ ಶೋ’ ಗೆ ಅಭಿಮಾನಿಗಳು ಮುಗಿ ಬೀಳ್ತಿದ್ದಾರೆ.

ಸದ್ಯಕ್ಕೆ ಸನ್ನಿ ಸಿಲಿಕಾನ್ ಸಿಟಿಯಲ್ಲಿ ‘ಸಮೂಹ ಸನ್ನಿ’ ಸೃಷ್ಟಿಸಿಬಿಟ್ಟಿದ್ದಾಳೆ. ಡಿಸೆಂಬರ್ 31 ರ ಇಯರ್ ಎಂಡ್ ಸೆಲಬ್ರೇಷನ್‌ಗೆ ಸನ್ನಿಯಿಂ ಭರಪೂರ ಮನರಂಜನೆ ಗ್ಯಾರಂಟಿ.

Share post:

Subscribe

spot_imgspot_img

Popular

More like this
Related

ಚಳಿಗಾಲದಲ್ಲಿ ತಪ್ಪದೆ ಈ 3 ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ! ಯಾವುವು ಗೊತ್ತಾ..?

ಚಳಿಗಾಲದಲ್ಲಿ ತಪ್ಪದೆ ಈ 3 ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ! ಯಾವುವು ಗೊತ್ತಾ..? ಚಳಿಗಾಲದಲ್ಲಿ ಹೃದಯ...

ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ: ಬಿ.ವೈ. ವಿಜಯೇಂದ್ರ

ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ: ಬಿ.ವೈ. ವಿಜಯೇಂದ್ರ ಬೆಂಗಳೂರು: ಮುಖ್ಯಮಂತ್ರಿ...

ಕೋಗಿಲು ಅಕ್ರಮ ಒತ್ತುವರಿ ಪ್ರಕರಣ: ಸತ್ಯಾಸತ್ಯತೆ ಅರಿಯದೇ ಪಿಣರಾಯಿ ವಿಜಯನ್ ಹಸ್ತಕ್ಷೇಪ ಬೇಡ – ಡಿ.ಕೆ. ಶಿವಕುಮಾರ್

ಕೋಗಿಲು ಅಕ್ರಮ ಒತ್ತುವರಿ ಪ್ರಕರಣ: ಸತ್ಯಾಸತ್ಯತೆ ಅರಿಯದೇ ಪಿಣರಾಯಿ ವಿಜಯನ್ ಹಸ್ತಕ್ಷೇಪ...

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ ಗಂಭೀರ

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ...