ಫ್ರಾನ್ಸ್ ನ ರಾಜಧಾನಿ ಫ್ಯಾರಿಸ್ ಭಯೋತ್ಪಾದಕರ ಅಟ್ಟಹಾಸಕ್ಕೆ ತುತ್ತಾಗಿದೆ. ಭಯೋತ್ಪಾದಕರ ದಾಳಿಯಿಂದಾಗಿ ಸುಮಾರು 160 ಜನ ಸಾವನಪ್ಪಿಸದ್ದು,200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆಂದು ತಿಳಿದು ಬಂದಿದೆ. ಏಕಕಾಲಕ್ಕೆ ಏಳಕ್ಕೂ ಹೆಚ್ಚು ಕಡಗಳಲ್ಲಿ ಬಾಂಬ್ ದಾಳಿ ಸಂಭವಿಸಿದೆ. ಜನದಟ್ಟಣಿ ಹೆಚ್ಚಿರುವ ಬಾರ್ ಅಂಡ್ ರೆಸ್ಟೋರೆಂಟುಗಳು, ಕಾನ್ಸರ್ಟ್ ಹಾಲ್ ಆಟದ ಮೈದಾನಗಳೂ ಸೇರಿದಂತೆ ಅನೇಕ ಕಡೆಗಳಲ್ಲಿ ಉಗ್ರರು ವಿಧ್ವಂಸಕಾರಿ ಕೃತ್ಯವನ್ನು ಎಸಗಿದ್ದಾರೆ.
ಸ್ಟೇಡೆ ಡಿ ಫ್ರಾನ್ಸ್ ಕ್ರೀಡಾಂಗಣದಲ್ಲಿ ಜರ್ಮನಿ ಮತ್ತು ಫ್ರಾನ್ಸ್ ನಡುವೆ ಫುಟ್ಬಾಲ್ ಪಂದ್ಯ ನಡೆಯುತ್ತಿದ್ದ ವೇಳೆಯಲ್ಲಿ ಅಂದಾಜು 7 ಜನ ಬಂದೂಕುಧಾರಿ ಉಗ್ರರು ಮೈದಾನದ ಹೊರಗಡೆ ಬಾಂಬ್ ಸ್ಪೋಟಿಸಿದ್ದಾರೆ..! ಈ ಸಂದರ್ಭದಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಫ್ರಾನ್ಸ್ ಅಧ್ಯಕ್ಷರಾದ ಫ್ರಾಂಕೋಯಿನ್ ಹಾಲೆಂಡ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ.
ಅದಾದನಂತರ ಹತ್ತಿರದ ರೆಸ್ಟೋರೆಂಟ್ ಒಂದರ ಮೇಲೆ ದಾಳಿ ಮಾಡಿದ ಭಯೋತ್ಪಾದಕರು ಮನಬಂದಂತೆ ಗುಂಡು ಹಾರಿಸಿದ್ದಾರೆಂಬುದು ವರದಿಯಾಗಿದೆ.
ರಾಜಧಾನಿಯ ಬಾಟಕ್ಲ್ಯಾನ್ ಕಲಾಕ್ಷೇತ್ರದಲ್ಲಿ 100ಕ್ಕೂ ಹೆಚ್ಚು ಜನರನ್ನು ಉಗ್ರರು ಒತ್ತೆಯಾಗಿಟ್ಟು ಕೊಂಡಿದ್ದಾರೆ. ಉಗ್ರರ ಹುಟ್ಟಡಗಿಸಲು ಪ್ಯಾರೀಸ್ ಪೊಲೀಸರು ಕಾರ್ಯಚರಣೆಯಲ್ಲಿ ತೊಡಗಿದ್ದಾರೆ. ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಅಷ್ಟೇ ಅಲ್ಲದೆ ಎರಡನೇ ಮಹಾಯುದ್ದದ ನಂತರ ಮೊದಲ ಬಾರಿಗೆ ಕರ್ಫ್ಯೂ ಹೇರಲಾಗಿದೆ. ಫ್ರಾನ್ಸ್ ನ ಎಲ್ಲಾ ಗಡಿಗಳನ್ನು ಬಂದ್ ಮಾಡಿದ್ದಾರೆ. ಶಾಲಾ ಕಾಲೇಜುಗಳಿಗೆ ರಜೆಘೋಷಿಸಿಸಲಾಗಿದೆ.
ಈ ಘಟನೆಯನ್ನು ಇಂಗ್ಲೆಂಡಿನ ಪ್ರಧಾನಿ ಕೆಮರೂನ್ ಮತ್ತು ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಖಂಡಿಸಿದ್ದಾರೆ.
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
ಕರ್ನಾಟಕ ಸರ್ಕಾರಕ್ಕೆ ಜನಸಾಮಾನ್ಯನ ಪ್ರಶ್ನೆಗಳು..! ಕನಿಷ್ಟ ಕಾಕತಾಳೀಯ ಅಂತಾದ್ರೂ ಹೇಳಿ..! ಸಮಾಧಾನ ಮಾಡ್ಕೋತೀವಿ..!
ಊಟಕ್ಕೆ ಆರ್ಡರ್ ಮಾಡಿದವಳು ಬೆಂಗಳೂರನ್ನೇ ಬಿಟ್ಟು ಹೋಗಿದ್ದೇಕೆ..?
ಇವರು ಬೆಂಗಳೂರಿನ ಉಕ್ಕಿನ ಮನುಷ್ಯ..! ಇಂಥಾ ಕೆಲಸ ಮಾಡೋರು ತುಂಬಾ ಅಪರೂಪ..!
ಈತನೇ ನೋಡಿ ವಿಶ್ವದ ಅತಿ ಶ್ರೀಮಂತ ಕ್ಷೌರಿಕ..! ಈತನ ಬಳಿ ಇವೆ 250ಕ್ಕೂ ಹೆಚ್ಚು ಐಶಾರಾಮಿ ಕಾರುಗಳು..!
ವಿದೇಶಿಯರ ಬಾಯಲ್ಲೂ ಕನ್ನಡ ಕನ್ನಡ ಕನ್ನಡ..! ವಿದೇಶಿ ಮಹಿಳೆಯೊಬ್ಬರು ಹಚ್ಚೇವು ಕನ್ನಡದ ದೀಪ.. ಅಂತ ಹಾಡ್ತಾ ಇದ್ದಾರೆ..!
ಲಾಭದಾಯಕ ಕೆಲಸವನ್ನು ಬಿಟ್ಟು ಬಂದವರು..! ಅಷ್ಟಕ್ಕೂ ಇವರೆಲ್ಲಾ ಕೆಲಸ ಬಿಟ್ಟಿದ್ದೇಕೆ ಗೊತ್ತಾ..?!
ಅಲ್ಲಿ ಏನೆಲ್ಲಾ ಬಾಡಿಗೆ ಸಿಗುತ್ತೆ ಗೊತ್ತಾ..? ಜಪಾನಿಗರ ಬಾಡಿಗೆ ಪ್ರೀತಿ..!
ನಮ್ಮ ಶಂಕ್ರಣ್ಣ ಇನ್ನೂ ಇರಬೇಕಾಗಿತ್ತು..! ಹುಟ್ಟು ಹಬ್ಬದ ಶುಭಾಶಯಗಳು ಶಂಕ್ರಣ್ಣ..! ಶಂಕರ್ ನಾಗ್ ಮತ್ತೆ ಹುಟ್ಟಿಬನ್ನಿ…
ಆಕೆಗೂ ತಾನು ಗರ್ಭಿಣಿ ಅಂತ ಗೊತ್ತೇ ಇರ್ಲಿಲ್ಲ..! ಇದ್ದಕ್ಕಿದ್ದಂತೆ ಮಗು ಹುಟ್ಟಿ ಬಿಡುತ್ತೆ..!
ಒಂಬತ್ತು ವರ್ಷದ ಪೋರ ಕಂಪನಿಯೊಂದರ ಸಿಇಒ..! ಈ ಪೋರ ಆ್ಯಪ್ ಡೆವಲಪರ್, ಸೈಬರ್ ಸೆಕ್ಯುರಿಟಿ ಎಕ್ಸ್ ಪರ್ಟ್..!
.