ಸ್ಕಾಲರ್ ಶಿಪ್ ಆಸೆಗಾಗಿ ಲೈಫು ಹಾಳುಮಾಡಿಕೊಂಡವನ ಕತೆ..! ಮಹಾ ಜಿಪುಣನ ಕಥೆ..!

Date:

ಕೆಲವರಿಗೆ ಸಿಕ್ಕಾಪಟ್ಟೆ ಆಸೆ ಇರುತ್ತೆ..! ಅವರ ಅತಿ ಆಸೆ ಅವರನ್ನ ಎಂಥಾ ಮಟ್ಟಕ್ಕಾದರೂ ಇಳಿಯುವಂತೆ ಮಾಡುತ್ತೆ..! ಮನೆಯಲ್ಲಿ ಸಿಕ್ಕಾಪಟ್ಟೆ ದುಡ್ಡಿದ್ದರೂ ಆ ದುಡ್ಡಿನಲ್ಲಿ ನಯಾಪೈಸೆ ಖರ್ಚು ಮಾಡದೇ ದುಡ್ಡು ಮಾಡೋ ಮಂದಿ ಇದ್ದಾರೆ..! ದುಡ್ಡು ದುಡ್ಡು ದುಡ್ಡು ಅಂತ ದುಡ್ಡನ್ನು ಉಳಿಸಲು ಹೋಗಿ, ಮಾಡಬಾರ್ದನ್ನು ಮಾಡಿದ ವ್ಯಕ್ತಿ ಇವತ್ತು ಏನಾದ ಗೊತ್ತಾ..?! ಅವತ್ತು ಸುಖಾಸುಮ್ಮನೆ ದುಡ್ಡು ಉಳಿಸೋಕೆ ಹೋದವನು ಏನಾಗಿಬಿಟ್ಟ ಗೊತ್ತಾ..?! ಅವತ್ತು ದುಡ್ಡು ದುಡ್ಡು ಅಂತ ಅತಿ ಆಸೆ ಪಡದೇ ಇದ್ದಿದ್ರೆ ಇವತ್ತು ಆತ ಎಷ್ಟೊಂದು ದುಡ್ಡು ಮಾಡಿರ್ತಾ ಇದ್ದ ಗೊತ್ತಾ..?! ದುಡ್ಡಿನ ಹಿಂದೆ ಹೋಗಿ ಲೈಫ್ ಹಾಳು ಮಾಡಿಕೊಂಡವನ ರಿಯಲ್ ಸ್ಟೋರಿ ಇಲ್ಲಿದೆ..! ಓದಿ, ದುಡ್ಡು ದುಡ್ಡು ದುಡ್ಡು ಅಂತ ಹೆಂಗೆಗೋ ದುಡ್ಡು ಉಳಿಸುವವರಿಗೆ ಈ ಸ್ಟೋರಿ ಹೇಳಿ..!
ಆತ ಸುರೇಶ್ ಚಿಕ್ಕಮಗಳೂರು ಜಿಲ್ಲೆಯ ಒಂದು ಪುಟ್ಟಹಳ್ಳಿಯವನು..! ಚಿಕ್ಕಂದಿನಿಂದಲೂ ಸಿಕ್ಕಾಪಟ್ಟೆ ಜುಗ್ಗ..! ಮನೆಯಲ್ಲಿ ಅಪ್ಪ ಮಾಡಿಟ್ಟ ಆಸ್ತಿ ಬೇಕಾದಷ್ಟು ಇದ್ದರೂ ಒಂದು ಪೈಸೆ ಚಾಕಲೇಟ್ ತಗೋಳೋಕು ಹಿಂದೆ ಮುಂದೆ ನೋಡ್ತಾ ಇದ್ದ ಪುಣ್ಯಾತ್ಮನಾತ..! ತನ್ನ ಹಳ್ಳಿಯಲ್ಲೇ ಹತ್ತನೇ ತರಗತಿವರೆಗೆ ಓದಿದ..! ಓದಿನಲ್ಲಿ ತುಂಬಾ ಚುರುಕಾಗಿದ್ದರೂ ನೋಟ್ ಪುಸ್ತಕದ ಹಾಳೆ ಖಾಲಿ ಆಗುತ್ತೆ ಅಂತ ಪುಸ್ತಕದ ಮೇಲ್ತುದಿ ಇಂದ ಕೆಳಗಿನ ತನಕವೂ ಅಕ್ಷರ ಉಸಿರಾಡಲು ಜಾಗವಿಲ್ಲದಂತೆ ಬರೆಯುತ್ತಿದ್ದನಂತೆ..! ಅವರ ಅಪ್ಪನೇ ಬೈದರೂ.. ಕೇಳ್ತಾ ಇರ್ಲಿಲ್ವಂತೆ..! ಹೊಸ ನೋಟ್ ಬುಕ್ ತಗೋ ಮಾರಾಯ ಅಂತ ಅಪ್ಪ ದುಡ್ಡು ಕೊಟ್ಟರೂ ಈತ ಇದ್ದ ನೋಟ್ ಬುಕ್ಕಲ್ಲಿ ಆದಷ್ಟೂ ಬರೆಯುತ್ತಿದ್ದನೇ ಹೊರತು ಹೊಸ ಬುಕ್ ತಗೋಳ್ತಾ ಇರ್ಲಿಲ್ವಂತೆ..! ಆ ದುಡ್ಡನ್ನೆಲ್ಲಾ ಹಾಗೇ ಇಟ್ಕೊಳ್ತಾ ಇದ್ದ ಈತ ಆ ದುಡ್ಡನ್ನ ಏನ್ ಮಾಡ್ತಾ ಇದ್ದ ಅಂತ ಮಾತ್ರ ಯಾರಿಗೂ ಗೊತ್ತಿಲ್ಲ..! ಇಂಥಾ ಜುಗ್ಗ ಅಂತೂ ಇಂತೂ ಪಿಯುಸಿಯನ್ನೂ ಮುಗಿಸಿದ..! ನಂತರ ಅಪ್ಪ ದೂರದ ಬೆಂಗಳೂರಿಗೆ ಇಂಜಿನಿಯರಿಂಗ್ ಓದು ಅಂತ ಕಳಿಸುತ್ತಾರೆ..!
ಆ ಕಾಲದಲ್ಲಿ ಇಂಜಿನಿಯರಿಂಗ್ ಓದೋದು ಅಂದ್ರೆ ತುಂಬಾನೇ ದೊಡ್ಡ ಸಾಧನೆ ಅನ್ನುವಂತಿತ್ತು..! ಆ ಕಾಲಘಟ್ಟದಲ್ಲಿ ಈತನೂ ಚಿಕ್ಕಮಗಳೂರಿನ ಒಂದು ಕೊಂಪೆಯನ್ನು ಬಿಟ್ಟು ರಾಜ್ಯ ರಾಜಧಾನಿ ಅತ್ತ ಮುಖ ಮಾಡಿದ..!
ಇಂಜಿನಿಯರಿಂಗ್ ಮಾಡೋಕೆ ಅಂತ ಬೆಂಗಳೂರಿಗೆ ಬಂದ ಸುರೇಶ.. ಪರಿಷಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಸಿಗುತ್ತೆ ಅಂತ ಗೊತ್ತಾಗಿದ್ದೇ ತಡ..! ಆ ದಿನ ರಾತ್ರಿ ಇಡೀ ನಿದ್ರೆ ಬಿಟ್ಟು ಯೋಚನೆ ಮಾಡೋಕೆ ಶುರುಮಾಡಿದ..! ಅಂತೂ ಕೊನೆಗೊಂದು ಉಪಾಯವನ್ನು ಮಾಡಿದ ತಂದೆ-ತಾಯಿಯ ಹೆಸರನ್ನೇ ಬದಲಾಯಿಸಿ ಬಿಟ್ಟ..! ಜೆರಾಕ್ಸ್ ಅಂಕಪಟ್ಟಿಯಲ್ಲೂ ಹೆಸರನ್ನು ತಿದ್ದಿದ..! ಇಂಥಾ ಜುಗ್ಗ, ಅವಿವೇಕಿ ಮಗನನ್ನು ಹೆತ್ತ ತಪ್ಪಿಗೆ ಅವರ ಅಪ್ಪ ನಾಗೇಶ್ ರಾವ್ `ನಾಗ’ ಆಗಿಬಿಟ್ರು..! ಅಮ್ಮ ವೆಂಕಟಲಕ್ಷ್ಮವ್ವ `ವೆಂಕಿ’ ಆಗಿಬಿಟ್ರು..! ಹೀಗೆ ಸ್ಕಾಲರ್ ಶಿಪ್ ಆಸೆಗೆ ಬಿದ್ದು ತಂದೆ ತಾಯಿ ಹೆಸರನ್ನೇ ತಿದ್ದಿದ ಈ ಪುಣ್ಯಾತ್ಮ ಬ್ರಾಹ್ಮಣ ಜಾತಿಯವನಾಗಿ ದಾಖಲೆಗಳಲ್ಲಿ ಎಸ್ಸಿ ಅಂತ ಮಾಡಿಸಿಕೊಂಡ..!
ಕಾಲೇಜು ಸಿಬ್ಬಂದಿಗಳ ಕಿವಿ ಮೇಲೆ ಅದೇಗೆ ದಾಸವಾಳ ಮೂಡಿಸಿದನೋ ಗೊತ್ತಿಲ್ಲ..! ಇವನ ಪ್ಲಾನ್ ಸಕ್ಸೆಸ್ ಆಗಿಯೇ ಬಿಡ್ತು..! ಮೊದಲನೇ ವರ್ಷದ ಇಂಜಿನಿಯರಿಂಗ್ ಪದವಿ ಮುಗಿಸಿದ..! ಆದರೆ ಎರಡನೇ ವರ್ಷದ ಹೊತ್ತಿಗೆ ಇವನ ಬಂಡವಾಳ ಬಯಲಾಗಿತ್ತು..! ಇಂಥಾ ದೊಡ್ಡ ತಪ್ಪನ್ನು ಮಾಡಿ.. ಮೋಸದಿಂದ ಯಾರಿಗೋ ಸಿಗಬೇಕಾಗಿದ್ದ ಸವಲತ್ತುಗಳನ್ನು ಪಡೆದ ಈತನ ಮೇಲೆ ಕೇಸ್ ಕೂಡ ಹಾಕಲಾಯಿತು..! ಹೇಳದೇ ಕೇಳದೆ ಪೊಲೀಸರ ಕಣ್ಣುತಪ್ಪಿಸಿ ಊರಕಡೆ ಓಡಿಬಂದ..! ಮತ್ತೆ ಆ ಕಡೆ ಹೋಗಲಿಲ್ಲ..! ಮಗ ಮಾಡಿದ ತಪ್ಪಿಗೆ ಅಪ್ಪ ಕ್ಷಮೆ ಕೇಳಿ ದಂಡ ಕಟ್ಟಿದರು..! ಹೀಗೆ ಮನೆಗೆ ಬಂದ ಮಗ.. ಅಪ್ಪನ ಜೊತೆ ತೋಟದಲ್ಲಿ ಕೆಲಸ ಮಾಡೋಕೆ ಶುರು ಮಾಡಿದ..!
ಅಪ್ಪ ತಿನ್ನೋಕೆ ಅಂತ ಎಲೆ ಅಡಿಕೆ ಇಟ್ಕೊಂಡಿದ್ರೂ ಈ ಪುಣ್ಯಾತ್ಮ ” ಅಪ್ಪಾ ಸುಮ್ಮನೇ ಮನೆಗೆ ಅಷ್ಟೊಂದು ಅಡಿಕೆ ಏಕೆ ಬೇಕು.. ಸ್ವಲ್ಪ ಸಾಕು ಅಂತ ತಿನ್ನೋ ಬೆಟ್ಟೆ (ಅಡಿಕೆ) ಅನ್ನೂ ಮಾರಿ ಬಿಡ್ತಾ ಇದ್ದ..! ಮಗನ ಜುಗ್ಗತನಕ್ಕೆ ಅಪ್ಪ ರೋಸಿ ಹೋಗಿ ಬಿಟ್ಟಿದ್ರು..! ದುಡ್ಡು ದುಡ್ಡು ಅಂತ ಸಾಯ್ತಾ ಇದ್ದವ ದುಡ್ಡು ಮಾಡಿಲ್ಲ..! ಅಪ್ಪನ ಆಸ್ತಿಯನ್ನೇ ನೋಡಿಕೊಂಡು ಮಾಡಬೇಕಾದ ಖರ್ಚನ್ನೂ ಮಾಡದೆ ದುಡ್ಡಿನ ಜಪ ಮಾಡ್ತಾ ಇದ್ದಾನೆ..!
ಇವನಿಗೂ ಒಂದು ಮದುವೆ ಆಯ್ತು..! ಜೋಡಿ ಮಾತ್ರ ಹೇಳಿ ಮಾಡಿಸಿದ ಹಂಗಿದೆ..! ಇವನ ಹೆಂಡಿತಿಯೂ ಗಂಡನಿಗೆ ತಕ್ಕವಳೇ.. ಹೆಂಗಿರಬಹದು ಅನ್ನೋದನ್ನು ನೀವೇ ಯೋಚಿಸಿ..?! ಕೆಲವೇ ವರ್ಷಗಳ ಹಿಂದೆ ಈ ಸುರೇಶನ ಅಪ್ಪ ಇವನ ಕಾಟದಿಂದಲೇ ಆತ್ಮಹತ್ಯೆ ಮಾಡಿಕೊಂಡ್ರು..! ಈಗ ಇವನ ಮಗನೂ ಇಂಜಿನಿಯರಿಂಗ್ ಮಾಡ್ತಾ ಇದ್ದಾನೆ..! ಸುರೇಶನಿಗೆ ತದ್ವಿರುದ್ದವಾಗಿ ಆತನ ಮಗನಿದ್ದಾನೆ..! ಅಪ್ಪನ ದುಡ್ಡನ್ನು ಬೇಕಾಬಿಟ್ಟಿ ಖರ್ಚು ಮಾಡ್ತಾನೆ..! ಬಿಂದಾಸ್ ಆಗಿ ಸುತ್ತುತ್ತಾ..ಜಾಲಿಯಾಗಿದ್ದಾನೆ..! ಸುರೇಶ ಉಳಿಸಿದ ದುಡ್ಡು ಏನಾಯಿತು..?!
ಅವತ್ತು ಇಂಜಿನಿಯರಿಂಗ್ ಓದುವಾಗ ಸ್ಕಾಲರ್ಶಿಪ್ ಆಸೆಗೆ ಹೋಗಿ ಓದು ಬಿಡದೇ ಇದ್ದಿದ್ದರೇ ಇವತ್ತು ಸುರೇಶನ ಬಳಿ ಅಪ್ಪ ಮಾಡಿಟ್ಟ ಆಸ್ತಿ+ ಕೈತುಂಬಾ ಸಂಬಳ ಸಿಗೋ ಕೆಲಸವೂ ಇರ್ತಾ ಇತ್ತು..! ಅಲ್ವಾ..?! ದುಡ್ಡು ಬೇಕು,..! ದುಡ್ಡು ಬೇಕೇ ಬೇಕು…! ಹಂಗಂತ ಹಿಂಗೆ ಮಾತ್ರ ಮಾಡೋಕೆ ಹೋಗ್ಬಾರ್ದು..! ಕಷ್ಟಪಟ್ಟು ದುಡೀಬೇಕು ಅಲ್ವಾ…?

  • ಶಶಿಧರ ಡಿ ಎಸ್ ದೋಣಿಹಕ್ಲು

 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಈಗ ರೈಲು ಹೊರಡುವ 30 ನಿಮಿಷ ಮೊದಲು ಟಿಕೆಟ್ ಕಾಯ್ದಿರಿಸಬಹುದು..! ರೈಲ್ವೇ ಪರಿಷ್ಕೃತ ನಿಯಮಕ್ಕೆ ಸಂಬಂಧಿಸಿದ ಮಾಹಿತಿ ಇಲ್ಲಿದೆ

ಕರ್ನಾಟಕ ಸರ್ಕಾರಕ್ಕೆ ಜನಸಾಮಾನ್ಯನ ಪ್ರಶ್ನೆಗಳು..! ಕನಿಷ್ಟ ಕಾಕತಾಳೀಯ ಅಂತಾದ್ರೂ ಹೇಳಿ..! ಸಮಾಧಾನ ಮಾಡ್ಕೋತೀವಿ..!

ಅಪ್ಪ ಕೊಟ್ಟಿದ್ದು ಹತ್ತು ಲಕ್ಷ, ಇವಳು ಮಾಡಿದ್ದು ಕೋಟಿ ಕೋಟಿ..! ಎಂ.ಬಿ.ಎ ವಿದ್ಯಾರ್ಥಿನಿ ಪ್ರಿಯಾಂಕ ಕೋಟ್ಯಾಧಿಪತಿ ಹೇಗಾದ್ರು ಗೊತ್ತಾ..?!

ಊಟಕ್ಕೆ ಆರ್ಡರ್ ಮಾಡಿದವಳು ಬೆಂಗಳೂರನ್ನೇ ಬಿಟ್ಟು ಹೋಗಿದ್ದೇಕೆ..?

ಕನ್ನಡ ನಾಡು, ನುಡಿಯ ಬಗ್ಗೆ ಗೊತ್ತೇ ಇಲ್ಲದವರು ಬೆಂಗಳೂರಲ್ಲೇ ಇದ್ದಾರೆ..! ವರನಟ ಡಾ.ರಾಜಕುಮಾರ್ ಅವರನ್ನೇ ಗುರುತಿಸದವರು ಕನ್ನಡನಾಡಲ್ಲಿದ್ದಾರೆ..!

ಇವರು ಬೆಂಗಳೂರಿನ ಉಕ್ಕಿನ ಮನುಷ್ಯ..! ಇಂಥಾ ಕೆಲಸ ಮಾಡೋರು ತುಂಬಾ ಅಪರೂಪ..!

ಈತನೇ ನೋಡಿ ವಿಶ್ವದ ಅತಿ ಶ್ರೀಮಂತ ಕ್ಷೌರಿಕ..! ಈತನ ಬಳಿ ಇವೆ 250ಕ್ಕೂ ಹೆಚ್ಚು ಐಶಾರಾಮಿ ಕಾರುಗಳು..!

ಅಹಂಕರಾರ, ಹಠಮಾರಿತನ ಕೊಂದ ಪ್ರೀತಿ ಇದು..! ಈ ಸ್ಟೋರಿ ಓದಿದ್ರೆ, ಖಂಡಿತಾ ನೀವು ನಿಮ್ಮ ಪ್ರೀತಿಯನ್ನು, ಸ್ನೇಹವನ್ನೂ ಉಳಿಸಿಕೊಳ್ತೀರ..!

ವಿದೇಶಿಯರ ಬಾಯಲ್ಲೂ ಕನ್ನಡ ಕನ್ನಡ ಕನ್ನಡ..! ವಿದೇಶಿ ಮಹಿಳೆಯೊಬ್ಬರು ಹಚ್ಚೇವು ಕನ್ನಡದ ದೀಪ.. ಅಂತ ಹಾಡ್ತಾ ಇದ್ದಾರೆ..!

ಲಾಭದಾಯಕ ಕೆಲಸವನ್ನು ಬಿಟ್ಟು ಬಂದವರು..! ಅಷ್ಟಕ್ಕೂ ಇವರೆಲ್ಲಾ ಕೆಲಸ ಬಿಟ್ಟಿದ್ದೇಕೆ ಗೊತ್ತಾ..?!

ಅಲ್ಲಿ ಏನೆಲ್ಲಾ ಬಾಡಿಗೆ ಸಿಗುತ್ತೆ ಗೊತ್ತಾ..? ಜಪಾನಿಗರ ಬಾಡಿಗೆ ಪ್ರೀತಿ..!

ನಮ್ಮ ಶಂಕ್ರಣ್ಣ ಇನ್ನೂ ಇರಬೇಕಾಗಿತ್ತು..! ಹುಟ್ಟು ಹಬ್ಬದ ಶುಭಾಶಯಗಳು ಶಂಕ್ರಣ್ಣ..! ಶಂಕರ್ ನಾಗ್ ಮತ್ತೆ ಹುಟ್ಟಿಬನ್ನಿ…

ಆಕೆಗೂ ತಾನು ಗರ್ಭಿಣಿ ಅಂತ ಗೊತ್ತೇ ಇರ್ಲಿಲ್ಲ..! ಇದ್ದಕ್ಕಿದ್ದಂತೆ ಮಗು ಹುಟ್ಟಿ ಬಿಡುತ್ತೆ..!

ಒಂಬತ್ತು ವರ್ಷದ ಪೋರ ಕಂಪನಿಯೊಂದರ ಸಿಇಒ..! ಈ ಪೋರ ಆ್ಯಪ್ ಡೆವಲಪರ್, ಸೈಬರ್ ಸೆಕ್ಯುರಿಟಿ ಎಕ್ಸ್ ಪರ್ಟ್..!

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...