ಆತ ರಾಮ್, ಮಂಡ್ಯ ಕಡೆಯ ಗೌಡರ ಹುಡುಗ. ಮನೆಯಲ್ಲಿ ಬೇಕಾದಷ್ಟು ಜಮೀನು ಇದೆ..! ಚಿಕ್ಕಂದಿನಿಂದಲೂ ಓದೋದ್ರಲ್ಲಿ ಕಳ್ಳ, ಶುದ್ಧ ಸೋಮಾರಿ..! ಅಪ್ಪ ಅಮ್ಮನ ಕಾಟಕ್ಕೆ ಶಾಲೆಗೆ ಹೋಗ್ತಾ ಇದ್ದ ಇವನು ಸೆಕೆಂಡ್ ಪಿಯುಸಿ ಮುಗಿಯುವಷ್ಟರಲ್ಲಿ ಸುಸ್ತಾಗಿ ಹೋಗಿದ್ದ..! ಅಯ್ಯೋ..ಯಾರು ಓದ್ತಾರೆ ಆರಾಮಾಗಿ ಹೊಲದ ಕಡೆ ನೋಡ್ಕೊಂಡು ಇದ್ರೆ ಆಗುತ್ತೆ ಅಂತ ಓದುವುದನ್ನೂ ಬಿಟ್ಟೇ ಬಿಟ್ಟ..! ತಂದೆ ಡಿಗ್ರಿ ಮಾಡೋ ಮಗನೇ ಅಂದ್ರೂ ಈತ ಮಾಡಲ್ಲ..! ಮನೆಯಲ್ಲೇ ಇರ್ತೀನಿ ಅಂದ..! ರಾಮು.. ಜಮೀನು ಎಲ್ಲೂ ಹೋಗಲ್ಲ ಕಣೋ.. ನಾನು ಮತ್ತು ನಿನ್ನ ಅಣ್ಣ ಇಬ್ಬರೂ ಇದನ್ನು ನೋಡಿಕೊಳ್ತೀವಿ..! ಪಿಯು ತನಕ ಓದಿದ್ದೀ ಡಿಗ್ರಿ ಮಾಡಿ ನಗರದ ಕಡೆ ಕೆಲಸಕ್ಕೆ ಹೋಗಿ ಒಳ್ಳೇ ಹೆಸರು ಮಾಡೋ ಅಂತ ಎಷ್ಟೇ ಬುದ್ಧಿ ಹೇಳಿದ್ರೂ ಇವನು ಕೇಳಲೇ ಇಲ್ಲ..! ಹೊಲದ ಕೆಲಸಕ್ಕಾದರೂ ಅಪ್ಪ, ಅಣ್ಣನಿಗೆ ಹೆಗಲಾದನೋ..? ಅದೂ ಇಲ್ಲ..! ಪಡ್ಡೆ ಹುಡುಗರನ್ನು ಸೇರಿಸಿಕೊಂಡು ಊರು ಸುತ್ತೋದು, ದಿನಕ್ಕೊಂದು ತರಲೆ ಮಾಡ್ಕೊಳ್ಳೋದನ್ನ ಮಾಡ್ತಾ ಇದ್ದ..! ಇವನನ್ನು ಸುಧಾರಿಸೋಕೆ ಮನೆಯಲ್ಲಿ ಯಾರಿಗೂ ಸಾಧ್ಯವೇ ಆಗಲ್ಲ..! ನೋಡಿ, ನೋಡಿ ಸಾಕಾಗಿ ಒಂದು ದಿನ ಅಪ್ಪ ಕರೆದು “ನೋಡು ರಾಮ, ಒಂದು ಹೊಲದ ಕಡೆ ಕೆಲಸಕ್ಕೆ ಬಾ.. ಇಲ್ಲ, ಓದೋಕೆ ಹೋಗು.” ಅಂತಾರೆ..! ನಾನು ಹೊಲದ ಕಡೆಯೂ ಕೆಲಸಕ್ಕೆ ಬರಲ್ಲ, ಓದಲಿಕ್ಕೂ ಹೋಗಲ್ಲ ಅಂತ ಅಪ್ಪನಿಗೆ ಎದುರು ಮಾತಾಡ್ತಾನೆ..! ಆಗ ಆ ತಂದೆ ಹಾಗೂ ಅಣ್ಣಾ ಇಬ್ಬರೂ ಇವನಿಗೆ ಬೈತಾರೆ..! ಈಗೇನು ನಾನು ದುಡಿಯ ಬೇಕಾ..?! ಹೊಲದಲ್ಲಿ ಕೆಲಸ ಮಾಡೋಕೆ ಆಗಲ್ಲ..! ಮಾಡಲ್ಲ.. ನಾನು ಬೆಂಗಳೂರಿಗೆ ಹೋಗಿ ದುಡೀತೀನಿ ಅಂತ ಬೆಂಗಳೂರು ಬಸ್ ಹತ್ತಿ ಬರ್ತಾನೆ ರಾಮ..!
ಬೆಂಗಳೂರಿಗೆ ಬಂದವ ಅಲ್ಲಿ ಇಲ್ಲಿ ಕೆಲಸಕ್ಕೆ ಅಲೆದು.. ಯಾವುದ್ಯಾವುದೋ ಹೋಟೆಲಿನಲ್ಲಿ ಲೋಟವನ್ನೂ ತೊಳೆಯುತ್ತಾನೆ..! ನಂತರ ಸ್ನೇಹಿತನೊಬ್ಬನ ಸಹಾಯದಿಂದ ಮಲ್ಲೇಶ್ವರಂ ಬಳಿಯ ಶೋ-ರೂಂ ಒಂದರಲ್ಲಿ ಕೆಲಸಕ್ಕೆ ಸೇರ್ತಾನೆ..! ಇಲ್ಲಿಂದು ಶುರುವಾಗುತ್ತೆ ನೋಡಿ ಇವನ ಸ್ಟೋರಿ..! ಮಂಡ್ಯದ ಹುಡುಗ ಬೆಂಗಳೂರಿಗನಾದ..! ಅದಕ್ಕೆ ಕಾರಣ ಕಾವ್ಯ..! ಆ ಕಾವ್ಯ ಮತ್ಯಾರೂ ಅಲ್ಲ ಅವನಿದ್ದ ಶೋ-ರೂಂ ಓನರ್ ಮಗಳು..! ಶೋ-ರೂಂ ಒಂದೇ ಅಲ್ಲದೆ.. ಆರೇಳು ಮನೆಬಾಡಿಗೆ ಕೊಟ್ಟಿದ್ದಾರೆ..! ಅಲ್ಲಿಂದಲೂ ಇನ್ಕಮ್ ಬರುತ್ತೆ..! ಅಷ್ಟೇ ಅಲ್ಲದೇ ಅದೂ ಇದೂ ಅಂತ ಏನೇನೋ ಬ್ಯುಸ್ನೆಸ್ ಬೇರೇ ಇದೆಯಂತೆ..! ಒಟ್ಟಿನಲ್ಲಿ ಕಾವ್ಯಾಳ ಅಪ್ಪ ಸಿಕ್ಕಾಪಟ್ಟೆ ಹಣವಂತರು..! ಅವಳ ಅಪ್ಪಗೇ ಗೊತ್ತಾಗದೇ ಅವಳನ್ನು ಪಟಾಯಿಸಿಕೊಂಡು ಬಿಟ್ಟ ರಾಮ್…! ಕಾವ್ಯಾಳೂ ಅಷ್ಟೆ, ಇವನನ್ನು ತುಂಬಾ ಪ್ರೀತಿಸೋಕೆ ಶುರುಮಾಡಿದ್ಲು..! ನಾನೂ ಇಲ್ಲೇ ಕೆಲಸ ಮಾಡ್ತಾ ಇದ್ರೆ ಸರಿ ಅಲ್ಲ ಅಂತ ಅನಿಸಿದ ಕೂಡಲೇ ಆ ಕೆಲಸವನ್ನು ಬಿಟ್ಟು ಆಟೋ ಓಡಿಸೋಕೆ ಶುರುಮಾಡಿದ..!
ರಾಮ್ ಕಾವ್ಯಾಳ ಅಪ್ಪನಿಗೂ ಒಬ್ಬ ಕೆಲಸಗಾರನಾಗಿ ತುಂಬಾ ಇಷ್ಟವಾಗಿದ್ದ..! ರಾಮ್ ಶೋ-ರೂಂ ಬಿಟ್ಟು ಹೋಗ್ತೀನಿ ಅಂದಾಗ.. ಅವರೂ ತುಂಬಾ ಬೇಜಾರಿಂದಲೇ ಕಳಿಸಿಕೊಟ್ಟಿದ್ರು..! ನಿನಗೆ ಎಂಥಾ ಸಹಾಯ ಬೇಕಾದ್ರೂ.. ನಾನಿದ್ದೇನೆ..! ಯಾವತ್ತು, ಯಾವಾಗ ಬೇಕಾದ್ರೂ.. ಏನನ್ನ ಬೇಕಾದ್ರೂ ಕೇಳು ಅಂತ ಹೇಳಿ ಕಳುಹಿಸಿ ಕೊಟ್ಟಿದ್ರು..! ಆದರೆ ಈತ ಮಗಳನ್ನೇ ಪ್ರೀತಿಸುತ್ತಿದ್ದಾನೆ.. ಅಂತ ಯಾವತ್ತೂ ಕನಸು ಮನಸ್ಸಿನಲ್ಲೂ ಅಂದು ಕೊಂಡಿರ್ಲಿಲ್ಲ..!
ಕಾವ್ಯ ಬ್ರಾಹ್ಮಣಳು, ರಾಮ್ ಗೌಡ. ಜಾತಿ ಇವರ ಪ್ರೀತಿಗೆ ಅಡ್ಡಿ ಬರುತ್ತೆ ಅಂತ ಇಬ್ಬರಿಗೂ ಗೊತ್ತಿತ್ತು..! ಆದ್ರೂ ಪ್ರೀತಿಗೆ ಜಾತಿಗೀತಿ ಇಲ್ಲ.. ಏನ್ ಆಗುತ್ತಾ ಆಗ್ಲೀ ಅಂತ ಪ್ರೀತಿ ಮಾಡ್ತಾ ಇದ್ರು..! ಕಾವ್ಯ ಯಾವತ್ತೂ ನನ್ನ ಬಿಟ್ಟು ಹೋಗಲ್ಲ ಅನ್ನೋ ನಂಬಿಕೆ ರಾಮ್ ಗೆ…! ಅವಳಿಗೂ ಅಷ್ಟೇ ರಾಮ್ ಮೇಲೆ ನಂಬಿಕೆ. ಎರಡು ವರ್ಷದ ಹಿಂದೆ ಬಿಎಸ್ಸಿ ಮುಗಿಸಿ ಕಾವ್ಯ ಮನೆಯಲ್ಲೇ ಇದ್ದಳು..! ಮದುವೆ ಮಾಡೋಣ ಅಂತ ಈ ಎರಡು ವರ್ಷದಲ್ಲಿ ಎಷ್ಟೋ ಜನ ಹುಡುಗರನ್ನು ಇವಳಿಗೆ ತೋರಿಸಿದ್ರೂ ಇವಳು ಒಪ್ಪಿಕೊಂಡಿಲ್ಲ..! ನಾಲ್ಕೈದು ತಿಂಗಳ ಹಿಂದಷ್ಟೇ, ನಾನು ಮದುವೆ ಆಗುವುದಾದರೆ ರಾಮ್ ನನ್ನು ಮಾತ್ರ ಅಂತ ಕಾವ್ಯ ಹೇಳಿಬಿಟ್ಟಿದ್ದಾಳೆ..! ರಾಮ್ ನನ್ನು ಕರೆಸಿ ಮಾತನಾಡಿದಾಗ “ಸಾರ್, ನಮ್ಮಿಬ್ಬರ ಪ್ರೀತಿ ನಾನು ಇಲ್ಲಿ ಕೆಲಸ ಮಾಡುವಾಗಲೇ ಶುರುವಾಗಿದ್ದು, ನಿಮ್ಮ ಮಗಳನ್ನು ಪ್ರೀತಿಸ್ತಾ ಇದ್ದಿದ್ರಿಂದ ಇಲ್ಲಿ ಕೆಲಸ ಮಾಡೋದು ಚೆನ್ನಾಗಿರಲ್ಲ ಅಂತ ನಾನು ಬಿಟ್ಟು ಹೋದೆ..! ನಿಮ್ಮ ಮಗಳಷ್ಟು ನಾನು ಓದಿಲ್ಲ ನಿಜ, ನಿಮ್ಮಷ್ಟು ಆಸ್ತಿ ಇಲ್ಲದೇ ಇರಬಹುದು..! ಆದ್ರೆ ನಮ್ಮ ಊರಲ್ಲಿ ನಮಗೆ ಬೇಕಾದಷ್ಟು ಜಮೀನು ಇದೆ..! ಗೌರವವೂ ಇದೆ..! ನಾನು ಅಪ್ಪ ಮಾಡಿಟ್ಟ ಆಸ್ತಿಯನ್ನೇ ನಂಬಿ ಕೂತಿಲ್ಲ..! ಸ್ವಂತ ದುಡಿಮೆ ಮಾಡಬೇಕು ಅಂತ ಇಲ್ಲಿಗೆ ಬಂದೆ…! ನಾನು ದುಡಿಯುತ್ತಿದ್ದೇನೆ. ನಿಮ್ಮ ಮಗಳನ್ನು ಚೆನ್ನಾಗಿ ನೋಡಿಕೊಳ್ತೀನಿ ಅಂತ ನೇರವಾಗಿಯೇ ಹೇಳಿದ..!
ಆಗ ಕಾವ್ಯಾಳ ಅಪ್ಪ ಸೀದಾ ಮಂಡ್ಯಕ್ಕೆ ಹೋಗಿ ಇವನ ಮನೆ ವಿಳಾಸ ತಿಳಿದು, ರಾಮ್ ನ ತಂದೆ ತಾಯಿ ಹತ್ತಿರ ವಿಷಯವನ್ನೆಲ್ಲಾ ವಿವರಿಸಿ..! ನನ್ನ ಮಗಳನ್ನು ದಯವಿಟ್ಟೂ ನಮ್ಮಿಂದ ದೂರ ಮಾಡಬೇಡಿ ಅಂತ ಕೇಳಿಕೊಂಡ..! ಪಾಪ, ರಾಮ್ ನ ತಂದೆ-ತಾಯಿ ಕಾವ್ಯಾಳ ಅಪ್ಪನ ಕ್ಷಮೆ ಕೇಳಿ..! ಇಲ್ಲ ನನ್ನ ಮಗನ ವಿಚಾರದಲ್ಲಿ ನೀವು ತಲೆಕೆಡಿಸಿಕೊಳ್ಳಬೇಡಿ ಅಂತ ಹೇಳಿ ಕಳುಹಿಸಿದ್ರು..! ನಂತರ ಮಗನನ್ನು ಕರೆದು ಬುದ್ಧಿ ಹೇಳಿದ್ರು..!
ಆದರೆ ಪ್ರೀತಿಸಿದವರು ಕೇಳ ಬೇಕಲ್ಲಾ..?! ಕಾವ್ಯಾಳ ಹಠಕ್ಕೆ ಅವರ ಅಪ್ಪ ಅಮ್ಮ ತಲೆ ಬಾಗಿದ್ರು..! ರಾಮ್ ಜೊತೆ ಮದುವೆ ಮಾಡ್ದೇ ಇದ್ರೆ ಸತ್ತೇ ಹೋಗ್ತೀನಿ ಅಂತ ಹೆದರಿಸಿದ್ಲು..! ಕೊನೆಗೂ ಕಾವ್ಯಾಳ ಮನೆಯಲ್ಲಿ ಮದುವೆಗೆ ಒಪ್ಪಿದ್ರು..! ರಾಮ್ ಗೆ ಹಣ ಮತ್ತು ಸ್ವಲ್ಪ ಆಸ್ತಿಯನ್ನು ಕೊಡಲಿಕ್ಕೂ ಮುಂದಾದ್ರು..! ಆದ್ರೆ ರಾಮ್, ಬೇಡ ನೀವು ನಿಮ್ಮ ಮಗಳನ್ನೇ ನನಗೆ ಕೊಡುತ್ತಿದ್ದೀರಲ್ಲಾ… ಅಷ್ಟು ಸಾಕು…! ನಮ್ಮ ಜೊತೆ ನಿಮ್ಮ ಸಂಬಂಧ ಚೆನ್ನಾಗಿರಲಿ..! ನಿಮ್ಮ ಮಗಳ ಜವಬ್ದಾರಿ ನನ್ನದು ಎಂದು ನಯವಾಗಿ ಆಸ್ತಿ ಮತ್ತು ಹಣವನ್ನು ತಿರಸ್ಕರಿಸಿದ..! ಹಣ-ಆಸ್ತಿಗಾಗಿ ಪ್ರೀತಿ ಮಾಡಿಲ್ಲವೆಂದು ತೋರಿಸಿ ಕೊಟ್ಟ..! ಹುಡುಗರು ಹುಡುಗಿಯರ ಅಪ್ಪನ ಆಸ್ತಿ ನೋಡಿ ಪ್ರೀತಿ ಮಾಡಲ್ಲ ಅಂತ ಸಾರಿದ..! ಕಾವ್ಯಾಳೂ ಅಷ್ಟೆ.. ನಿಜವಾಗಿ ಪ್ರೀತಿ ಮಾಡೋ ಹುಡುಗಿ ಯಾವತ್ತೂ ಮನಸ್ಸನ್ನು ಬದಲಾಯಿಸಲ್ಲ..! ಅಪ್ಪ ಅಮ್ಮನನ್ನು ಒಪ್ಪಿಸಿಯೇ ಒಪ್ಪಿಸುತ್ತಾಳೆ ಎಂಬುದನ್ನು ತೋರಿಸಿ ಬಿಟ್ಟಳು..! ಎರಡೂ ಕುಟುಂಬದವರು ಚೆನ್ನಾಗಿದ್ದಾರೆ..! ಈ ಕುಟುಂಬ ಜಾತಿಗಿಂದ ಪ್ರೀತಿ ಸಂಬಂಧವೇ ದೊಡ್ಡದೆಂದು ತೋರಿಸಿಕೊಟ್ಟು ಎಲ್ಲರಿಗೂ ಮಾದರಿಯಾಗಿದ್ದಾರೆ..! ಪ್ರೀತಿ ಅಂದ್ರೆ ಇದೇ ಅಲ್ವಾ…?!
- ಶಶಿಧರ ಡಿ ಎಸ್ ದೋಣಿಹಕ್ಲು
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
ಈ ಗ್ರಾಮ ಇಡೀ ಜಗತ್ತಿಗೇ ಮಾದರಿ..! ಹೆಣ್ಣನ್ನು ದ್ವೇಷಿಸುವವರು ಇದನ್ನು ಓದಲೇಬೇಕು..!
ವರುಣರಾಯ ನಿಲ್ಲಿಸು ನಿನ್ನ ಆರ್ಭಟವ..! ತಮಿಳುನಾಡಿನ ಪರಿಸ್ಥಿತಿ ಹೇಗಿದೆ ಅಂತ ನೀವೆ ನೋಡಿ..!
ಅವನಿಗೆ ಉಗ್ರನೆಂಬ ಹಣೆಪಟ್ಟಿ ಕಟ್ಟುತ್ತಿದ್ದರು..! ಟೈಮ್ ಸರಿ ಇಲ್ಲ ಅಂದ್ರೆ ಅಷ್ಟೇ….
ಬಿಗ್ ಬಾಸ್ ಮನೆಯಿಂದ ಹೊರಬಂದ ವೆಂಕಟ್ ಏನಂದ್ರು ಗೊತ್ತಾ..?!
ಇಂಗ್ಲೆಂಡಿನಲ್ಲಿ `ಇಮ್ರಾನ್ ಖಾನ್’ರನ್ನು ಹೊಗಳಿದ ನರೇಂದ್ರ ಮೋದಿ..! ಆ ಇಮ್ರಾನ್ ಖಾನ್ ಯಾರುಗೊತ್ತೇ..?!
ಕರ್ನಾಟಕ ಸರ್ಕಾರಕ್ಕೆ ಜನಸಾಮಾನ್ಯನ ಪ್ರಶ್ನೆಗಳು..! ಕನಿಷ್ಟ ಕಾಕತಾಳೀಯ ಅಂತಾದ್ರೂ ಹೇಳಿ..! ಸಮಾಧಾನ ಮಾಡ್ಕೋತೀವಿ..!