ಕ್ರಿಸ್ಮಸ್ ಆಚರಣೆಯ ಸಂಭ್ರಮದಲ್ಲಿದ್ದ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರೋ ಘಟನೆ ಮಂಗಳೂರಲ್ಲಿ ನಡೆದಿದೆ.
ರೌಡಿಶೀಟರ್ ಮೆಲ್ರಿಕ್ ಡಿಸೋಜ (25) ಮೃತ ಯುವಕ. ಈತ ಎರಡು ಕೊಲೆ ಯತ್ನಿಸಿದ್ದ. ಈ ಬಗ್ಗೆ ಪಾಂಡೇಶ್ವರ ಮತ್ತು ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವೆಲಿನ್ಸಿಯಾದ ಗೋರಿಗುಡ್ಡದ ಮನೆಯಲ್ಲಿ ತಡರಾತ್ರಿ ಕ್ರಿಸ್ಮಸ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ಮೆಲ್ರಿಕ್ ಡಿಸೋಜನ ಮೇಲೆ ಐವರು ದುಷ್ಕರ್ಮಿಗಳ ತಂಡ ಅಟ್ಯಾಕ್ ಮಾಡಿ ಮನೆಯ ಆವರಣದಲ್ಲಿ ಅಟ್ಟಾಡಿಸಿ ಕೊಲೆ ಮಾಡಿ ಪರಾರಿಯಾಗಿದೆ. ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.