No menu items!
8 C
Munich
Saturday, May 2, 2026

ಇಂದು ಕ್ರಿಸ್ತ ಹುಟ್ಟಿದ ಸುದಿನ

Must read

ಇಂದು ಕ್ರಿಸ್ತಜಯಂತಿ. ವಿಶ್ವದಾದ್ಯಂತ ಕ್ರಿಸ್ಮಸ್ ಎಂದು ಸಂಭ್ರಮದಿಂದ ಆಚರಿಸೋ ಸುದಿನವಿದು. ಮೇರಿ ಮತ್ತು ಜೋಸೆಫ್ ರ ಮಗನಾಗಿ ಯೇಸುಕ್ರಿಸ್ತ ಈ ದಿನಂದು ಜನಿಸಿದ ಎಂದು ಕ್ರೈಸ್ತ ಸುವಾರ್ತೆ ಹೇಳುತ್ತದೆ.


ಮೇರಿ, ಜೋಸೆಫ್ ದಂಪತಿ ರೋಮನ್ ಜನಗಣತಿಯಲ್ಲಿ ನೋಂದಾಯಿಸಲು ಇಸ್ರೆಲ್ ನ ಬೆತ್ಲಹೆಮ್ ಗೆ ಹೋಗಿದ್ರು. ಆಗ ಕ್ರಿಸ್ತನ ಜನನವಾಯಿತು.


ಜುಡಾಯಿಸಮ್ ಪ್ರಕಾರ ಪ್ರವಾದನೆಗಳನ್ನು ನೆರವೇರಿಸಲು ಡೇವಿಡ್‍ನ ವಂಶದಲ್ಲಿ ದೇವದೂತ ಬರುವನೆಂಬ ನಂಬಿಕೆ ಇದೆ. ಈ ದೇವದೂತನೇ ಕ್ರಿಸ್ತ. ಇವರ ಜಯಂತಿಯೇ ಕ್ರಿಸ್ಮಸ್.


ಮನೆಯಲ್ಲಿ ಪುಟ್ಟದಾದ ಕೊಟ್ಟಿಗೆ ಕಟ್ಟಿ ಕ್ರಿಸ್ತನ ಗೊಂಬೆಗಳನ್ನಿಡುವುದು, ಕ್ರಿಸ್ಮಸ್ ವೃಕ್ಷ ಇಟ್ಟು ಅಲಂಕರಿಸೋದು, ಮಿಸಲ್ಟೋ ಮೊದಲಾದ ಮರಗಳ ಎಲೆಗಳ ತೋರಣ ಕಟ್ಟೋದು, ಕ್ರಿಸ್ಮಸ್ಸಿಗೆಂದೇ ತಯಾರಿಸಿದ ವಿಶಿಷ್ಟ ತಿಂಡಿಗಳನ್ನು ಹಾಗೂ ಉಡುಗೊರೆಗಳನ್ನು ಹಂಚುವುದು ಈ ಹಬ್ಬದ ಕೆಲವು ಆಚರಣೆಗಳು.


ಮಕ್ಕಳಿಗೆ ಉಡುಗೊರೆಗಳನ್ನು ಕೊಡಲು ಸಾಂಟಾ ಕ್ಲಾಸ್ (ಸಂತ ನಿಕೋಲಾಸ್) ಬರುತ್ತಾನೆ ಎಂಬುದು ನಂಬಿಕೆ. ಸಂತ ನಿಕೋಲಾಸ್ 4ನೇ ಶತಮಾನದಲ್ಲಿ ಜೀವಿಸಿದ್ದ ಕ್ರೈಸ್ತ ಪ್ರವಾದಿ.

ಎಲ್ಲರಿಗೂ ಕ್ರಿಸ್ಮಸ್ ಶುಭಾಶಯಗಳು

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article