ವಿಜಯ ಲಕ್ಷ್ಮಿ ಶಿಬರೂರು ಅಂದ್ರೆ ತಟ್ಟನೆ ನೆನಪಾಗೋದು ಸುವರ್ಣ ನ್ಯೂಸ್ ನ ಕವರ್ ಸ್ಟೋರಿ…! ತನಿಖಾ ವರದಿ ಮೂಲಕ ಅಕ್ರಮಗಳನ್ನು, ಹಗರಣಗಳನ್ನು ಬಯಲಿಗೆಳೆದಿದ್ದ ಶಿಬರೂರು ಅವರು ಇನ್ಮುಂದೆ ಸುವರ್ಣದಲ್ಲಿ ಕವರ್ ಸ್ಟೋರಿ ಮಾಡಲ್ಲ…! ಅಷ್ಟೇ ಅಲ್ಲ, ಸುವರ್ಣ ನ್ಯೂಸ್ ನಲ್ಲಿ ಇವರಿನ್ನು ಕಾಣಸಿಗಲ್ಲ…!
ಹೌದು, ಕೆಚ್ಚೆದೆಯ ಪತ್ರಕರ್ತೆ, ಅತ್ಯಾದ್ಭುತ ತನಿಖಾ ವರದಿಗಳನ್ನು ಮಾಡಿ ಜನಮನ್ನಣೆ ಪಡೆದ ಹೆಮ್ಮೆಯ ಕನ್ನಡತಿ ವಿಜಯಲಕ್ಷ್ಮಿ ಅವರು ಸುವರ್ಣ ಬಿಟ್ಟು ನ್ಯೂಸ್ 18 ಕಡೆಗೆ ಹೋಗ್ತಿದ್ದಾರೆ.
ಲಾಟರಿ, ಲೋಕಾಯುಕ್ತ ಹಗರಣ, ಆಹಾರ ಕಲಬೆರಕೆ, ಅಕ್ರಮ ದನಸಾಗಣೆ ಸೇರಿದಂತೆ ನೂರಾರು ತನಿಖಾ ವರದಿಗಳನ್ನು ಮಾಡಿರುವ ಹೆಗ್ಗಳಿಕೆ ಇವರದ್ದು. ಅಕ್ರಮಗಳನ್ನು ಬಯಲಿಗೆಳೆದ ಇವರು ವೃತ್ತಿ ಜೀವನದುದ್ದಕ್ಕೂ ಸವಾಲುಗಳನ್ನು ಎದುರಿಸುತ್ತಲೇ ಬಂದಿದ್ದಾರೆ. ಜೀವ ಬೆದರಿಕೆಗೂ ಜಗ್ಗದೆ ತನಿಖಾ ವರದಿಗಳನ್ನು ಮಾಡಿದ ಇವರ ‘ಕವರ್ ಸ್ಟೋರಿ’ ತನಿಖಾ ವರದಿಗಾರಿಕೆಯ ಬಗೆಗಿನ ಸಂಶೋಧನ ಗ್ರಂಥ ಎಂದ್ರೆ ಅತಿಶಯೋಕ್ತಿಯಲ್ಲ.
ಜನವಾಹಿನಿ ಮೂಲಕ 2001ರಲ್ಲಿ ವೃತ್ತಿ ಜೀವನ ಆರಂಭಿಸಿದ ಇವರು, ಸಂಯುಕ್ತ ಕರ್ನಾಟಕ, ಈ-ಟಿವಿ, ಟಿವಿ9ನಲ್ಲಿ ಕೆಲಸ ಮಾಡಿ 2009ಕ್ಕೆ ಸುವರ್ಣ ಕುಟುಂಬ ಸೇರಿದ್ದರು.
ಸುವರ್ಣ ನ್ಯೂಸ್ ನಲ್ಲಿ ಇವರ ಕವರ್ ಸ್ಟೋರಿಯ 345 ಎಪಿಸೋಡ್‍ಗಳು ಪ್ರಸಾರವಾಗಿವೆ. ನ್ಯೂಸ್ 18 ಕನ್ನಡದತ್ತ ಪಯಣ ಬೆಳೆಸಿದ್ದಾರೆ. ಇವರಿಂದ ಇನ್ನೂ ಹೆಚ್ಚಿನ ಹಗರಣಗಳು ಬಯಲಾಗಲಿ..
ಶುಭವಾಗಲಿ ಮೇಡಂ