‘ಪ್ರಕಾಶ ರಾಮಾಯಣ’ದ ಆ್ಯಂಕರ್ ನಾಳೆಯಿಂದ ‘ಫಸ್ಟ್ ನ್ಯೂಸ್’ ನಲ್ಲಿ…!

Date:

ದೊಡ್ಡ ನಟ ಪ್ರಕಾಶ್ ರೈ ವಿವಾದವನ್ನು ಮೈ ಮೇಲೆ ಎಳೆದುಕೊಂಡಾಗಲೆಲ್ಲಾ ಒಂದು ವೀಡಿಯೋ ಮತ್ತೆ ಮತ್ತೆ ಹರಿದಾಡುತ್ತಿರುತ್ತೆ…! ಜನಶ್ರೀ ನ್ಯೂಸ್ ಇಂಟರ್ ವ್ಯೂ ನಲ್ಲಿ ಕಾವೇರಿ ವಿಷಯದ ಬಗ್ಗೆ ಪ್ರಶ್ನೆ ಮಾಡಿದಾಗ ಪ್ರಕಾಶ್ ಕಿರುಚಾಡಿದ್ದ ವೀಡಿಯೋವದು…! ಅವತ್ತು ಕಾವೇರಿ ವಿವಾದದ ಬಗ್ಗೆ ಪ್ರಶ್ನಿಸಿದ್ದ ನಿರೂಪಕಿ ಐಶ್ವರ್ಯ ಎ.ಎನ್.


ಈ ವೀಡಿಯೋವನ್ನು ಇವತ್ತು ಕೆಲವರು ರಾಜಕೀಯಕ್ಕೆ ಬಳಸಿಕೊಳ್ತಿದ್ದಾರೆ. ಆದ್ರೆ, ಅಂದು ವೀಡಿಯೋ ವೈರಲ್ ಆಗುತ್ತಿದ್ದಂತೆ ಜನಶ್ರೀ ಅವರು ಟಿ.ಆರ್.ಪಿ ಗಾಗಿ ಮಾಡಿದ ಗಿಮಿಕ್ ಎಂಬ ಮಾತು ಕೂಡ ಇತ್ತು. ಅಂದು ಜನಶ್ರೀ ಚುಕ್ಕಾಣಿ ಇದ್ದುದು ಅನಂತಚಿನಿವಾರ ಅವರ ಕೈಯಲ್ಲಿ. ಅವರು ಯಾವತ್ತೂ ಅಂತ ಗಿಮಿಕ್ ಮಾಡಿದವರಲ್ಲ…!


ಪ್ರಕಾಶ್ ರೈ ‘ಇದೊಳ್ಳೆ ರಾಮಾಯಣ’ ಸಿನಿಮಾ ಬಗ್ಗೆ ಇಂಟರ್ ವ್ಯೂ ಕೊಡಲು ಎಲ್ಲಾ ಮಾಧ್ಯಮದವರನ್ನು ಕರೆದಿದ್ದರು. ಒಂದು ಚಾನಲ್ ಆದ್ಮೇಲೆ, ಇನ್ನೊಂದು ಚಾನಲ್ ನವರು ಇಂಟರ್ ವ್ಯೂ ಮಾಡ್ತಿದ್ರು. ಜನಶ್ರೀ ಪ್ರತಿನಿಧಿಯಾಗಿ ಐಶ್ವರ್ಯ ಹೋಗಿದ್ದರು.


ಆ ಟೈಮಲ್ಲಿ ಕಾವೇರಿ ಗಲಾಟೆ ಜೋರಾಗಿತ್ತು. ಸಿನಿಮಾ ನಟರು ಕೂಡ ಹೋರಾಟಕ್ಕೆ ಧುಮಿಕಿದ್ದರು. ಬಹುಭಾಷ ನಟ ಪ್ರಕಾಶ್ ರೈ ಮಾತ್ರ ಈ ಬಗ್ಗೆ ಮಾತಾಡಿರ್ಲಿಲ್ಲ. ಇವರ ಇಂಟರ್ ವ್ಯೂ ಗೆ ಹೋಗುವ ಮುನ್ನ ಆಫೀಸಲ್ಲಿ ನಡೆದ ಚರ್ಚೆ ವೇಳೆ ಐಶ್ವರ್ಯ ಈ ರೀತಿ ಕ್ವಶನ್ ಕೇಳ್ತೀನಿ ಅಂತ ಹೇಳಿದ್ರು…! ಅದು ಅವತ್ತಿಗೆ ಪ್ರಸ್ತುತವೂ ಆಗಿತ್ತು.


ನಾವು-ನೀವು ನೋಡಿರೋದು ಇಂಟರ್‍ವ್ಯೂ ನ ‘ಪ್ರಕಾಶ ರಾಮಾಯಣ’ದ ಒಂದು ತುಣಕನ್ನು ಮಾತ್ರ. ಸುಮಾರು 1 ಗಂಟೆ ಕಾಲ ನಡೆದ ಸಂದರ್ಶನ ಅದಾಗಿತ್ತು. ಇದೊಳ್ಳೆ ರಾಮಾಯಣ ಸಿನಿಮಾ ರಿಮೇಕ್ ಚಿತ್ರ ಆಗಿದ್ದರಿಂದ ನಿರೂಪಕಿ ಐಶ್ವರ್ಯ, ರಿಮೇಕ್ ಚಿತ್ರಗಳಿಗೇ ಏಕೆ ಇಷ್ಟೊಂದು ಆದ್ಯತೆ , ಕನ್ನಡದಲ್ಲಿ ಮಾಡಬಹುದಲ್ಲಾ..? ಅಂತ ಪ್ರಶ್ನಿಸಿದ್ದರು…! ಆಗಲೇ ಪ್ರಕಾಶ್ ಪಿತ್ತ ಅದ್ಯಾಕೋ ನೆತ್ತಿಗೇರಿತ್ತು. ಇದ್ದಿದ್ದನ್ನ ಇದ್ದಂತೆ ಹೇಳಿದ್ರೆ ಎದ್ ಬಂದ್ ಎದೆಗೆ ಒದ್ರಂತೆ ಹಂಗೆ…!


ಬಳಿಕ ಯಾವಾಗ ಐಶ್ವರ್ಯ ಕಾವೇರಿ ವಿವಾದ ಕುರಿತು ಪ್ರಶ್ನೆ ಕೇಳಿದ್ರೋ.. ಪ್ರಕಾಶ್ ಉತ್ತರಿಸಲಾಗದೆ ಕೆಂಡಮಂಡಲರಾದ್ರು…! ನಾನೊಬ್ಬ ನಟ…ಇಂತಹ ವಿವಾದಗಳಿಗೆ ಏಕೆ ಸಿಲುಕಿಸ್ತೀರಿ. ಟಿಆರ್‍ಪಿಗಾಗಿ ಅದು-ಇದು ಅಂತ ಕೂಗಾಡಿದ್ರು…! ತಾನೆಲ್ಲಿ ಕುಳಿತಿದ್ದೇನೆ, ತನ್ನ ಘನತೆ-ಜವಬ್ದಾರಿ ಏನು ಎನ್ನುವುದನ್ನು ಅರ್ಥಮಾಡಿಕೊಳ್ಳದೆ ಮೈಕ್ ಕಿತ್ತಾಕಿ ಅಶಿಸ್ತಿನ ಪರಮಾವಧಿಯನ್ನು ಪ್ರದರ್ಶಿಸಿದ್ರು.


ಬೇರೆ ಯಾರಾದ್ರು ಶಾರ್ಟ್‍ಟೆಂಪರ್ ಆ್ಯಂಕರ್ ಇದ್ದಿದ್ರೆ ಪ್ರಕಾಶ್ ಅವರನ್ನು ಅಲ್ಲಿಯೇ ತರಾಟೆಗೆ ತೆಗೆದುಕೊಳ್ತಿದ್ರು. ಐಶ್ವರ್ಯ ಭಯ ಪಡಲಿಲ್ಲ, ಬದಲಾಗಿ ಸಹನೆ ಪ್ರದರ್ಶಿಸಿದ್ರು. ಅವರಂತೆ ತಾನೂ ಕಿತ್ತಾಡಿದ್ರೆ ಅವರಿಗೆ ತನಗೆ ಏನ್ ವ್ಯತ್ಯಾಸ ಅಂತ ಸುಮ್ಮನಿದ್ರು.


ವರದಿಗಾರ ಅಥವಾ ನಿರೂಪಕ ಇದೇ ಪ್ರಶ್ನೆ ಕೇಳ್ಬೇಕು, ಇದನ್ನು ಕೇಳ್ಬಾರ್ದು ಅನ್ನೋದಕ್ಕೆ ಪ್ರಕಾಶ್ ಯಾರು…? ಆ ಪ್ರಶ್ನೆಗೆ ಉತ್ತರಿಸಲಾಗದೇ ಇದ್ದಿದ್ರೆ ಸುಮ್ಮನೇ ಬೇಡ ಅಂತ ತಾಳ್ಮೆಯಿಂದ ಪ್ರತಿಕ್ರಿಯಿಸಬಹುದಿತ್ತು…! ಆದ್ರೆ, ದೊಡ್ಡ ನಟ ಸಣ್ಣತನ ಪ್ರದರ್ಶಿಸಿದ್ರು…! ಅಷ್ಟಕ್ಕೂ ತಾನು ಯಾವ ಚಾನಲ್ ಗೆ ಇಂಟರ್ ವ್ಯೂ ಕೊಡ್ತಿದ್ದೀನಿ ಅನ್ನೋದೆ ಗೊತ್ತಿರಲಿಲ್ಲ…! ಐಶ್ವರ್ಯ ಬೆಂಬಲಕ್ಕೆ ಅನಂತ್ ಚಿನಿವಾರ ನಿಂತ್ರು. ‘ಸಂಪಾದಕೀಯ’ದಲ್ಲೂ ಆ ಸುದ್ದಿಯನ್ನು ಎತ್ಕೊಂಡ್ರು. ಕೊನೆಗೆ ಪ್ರಕಾಶ್ ರೈ ಕ್ಷಮೆ ಕೇಳಿದ್ದರು…!


ಆ ರಾಮಾಯಣದ ಬಗ್ಗೆ ಇಷ್ಟೆಲ್ಲಾ ಹೇಳಿದ್ದೇ ಜಾಸ್ತಿ ಆಯ್ತೇನೋ…? ಇರ್ಲಿ, ಅದನ್ನು ಬಿಟ್ಟು ಐಶ್ವರ್ಯ ಅವರ ಲೈಫ್ ಜರ್ನಿ ಬಗ್ಗೆ ಮಾತಾಡಣ.


ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ ತಾಲೂಕಿನ ಆಯನೂರು ಐಶ್ವರ್ಯ ಅವರೂರು. ಹುಟ್ಟಿದ್ದು ಅಜ್ಜಿಮನೆ ಅರಸಿಕೆರೆಯಲ್ಲಿ. ಬೆಳೆದಿದ್ದಲ್ಲಾ ತವರು ಆಯನೂರಲ್ಲಿ. ತಂದೆ, ನಂಜಪ್ಪ, ಮಂಡಲ್ ಪಂಚಾಯತಿ ನಿವೃತ್ತ ಕಾರ್ಯದರ್ಶಿ. ತಾಯಿ ಭಾಗ್ಯ, ತಮ್ಮ ಪ್ರಜ್ವಲ್, ಪತಿ ಭಾಸ್ಕರ್ ಭಟ್.
ಐಶ್ವರ್ಯ-ಭಾಸ್ಕರ್ ಅವರದ್ದು ಅಂತರ್ಜಾತಿ ವಿವಾಹ. ಭಾಸ್ಕರ್ ಅವರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಯು.ಆರ್ ಅನಂತಮೂರ್ತಿ ಅವರ ಜೊತೆ ರಿಸರ್ಚ್ ಅಸೋಸಿಯೇಟ್ ಆಗಿ ಕೆಲಸ ಮಾಡಿದ್ದವರು. ಫ್ರೆಂಚ್ ಕ್ಲಾಸ್ ನಲ್ಲಿ ಭಾಸ್ಕರ್ ಮತ್ತು ಐಶ್ವರ್ಯ ಭೇಟಿ. ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಗೆ ತಿರುಗಿ 4 ವರ್ಷದ ನಂತರ 7 ತಿಂಗಳ ಹಿಂದೆ ಏಪ್ರಿಲ್ ನಲ್ಲಿ ಮದ್ವೆ ಆಗಿದ್ದಾರೆ.


‘ನನ್ನ ಯಶಸ್ಸಿನಲ್ಲಿ ಅಪ್ಪ-ಅಮ್ಮನ ಸಪೋರ್ಟ್ ತುಂಬಾ ಮುಖ್ಯವಾದುದು. ನಂತರದಲ್ಲಿ ಫ್ರೆಂಡ್ ಆಗಿ ಸಿಕ್ಕ ಭಾಸ್ಕರ್ ಸಾಹಿತ್ಯ ರುಚಿ ಹತ್ತಿಸಿ, ನನ್ನ ಆತ್ಮಸ್ಥೈರ್ಯ ಕುಸಿಯದಂತೆ ಮೆಂಟರ್ ಆಗಿ, ಬಾಯ್ ಫ್ರೆಂಡ್ ಆಗಿ, ಪತಿಯಾಗಿ ನನ್ನ ವೃತ್ತಿಗೂ, ಪ್ರವೃತ್ತಿಗೂ ಬೆನ್ನೆಲುಬಾಗಿದ್ದಾರೆ’ ಎನ್ನುವುದು ಐಶ್ವರ್ಯ ನುಡಿಮುತ್ತುಗಳು.


ಐಶ್ವರ್ಯ ಪ್ರಾಥಮಿಕ ಶಿಕ್ಷಣವನ್ನು ಆಯನೂರಿನ ಜ್ಞಾನೋದಯ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಶಿವಮೊಗ್ಗದ ರಬೀಂದ್ರನಾಥ ಟ್ಯಾಗೂರು ಶಾಲೆಯಲ್ಲಿ, ಪಿಯುಸಿ (ವಿಜ್ಞಾನ) ಶಿವಮೊಗ್ಗದ ಡಿವಿಎಸ್ ಕಾಲೇಜಿನಲ್ಲಿ ಹಾಗೂ ಪದವಿ (ಬಿಬಿಎಂ) ಎಟಿಎನ್‍ಸಿಸಿ ಕಾಲೇಜಿನಲ್ಲಿ ಪೂರೈಸಿದ್ರು.


ವಿಜ್ಞಾನ, ವಾಣಿಜ್ಯಶಾಸ್ತ್ರ ವಿದ್ಯಾರ್ಥಿನಿ ಐಶ್ವರ್ಯಗೆ ಜರ್ನಲಿಸಂ ಪ್ಯಾಷನ್. ಪದವಿ ವೇಳೆಯಲ್ಲಿ ನಾಲ್ಕು ತಿಂಗಳ ಕಾಲ ‘ಅಜಯ್’ ಮತ್ತು ಸುಮಾರು 2.5 ವರ್ಷಗಳ ಕಾಲ ‘ಸ್ಕೈಲೈನ್ ನೆಟ್‍ವರ್ಕ್’ ಎಂಬ ಸ್ಥಳಿಯ ಚಾನಲ್‍ಗಳಲ್ಲಿ ನಿರೂಪಕರಾಗಿ ಕೆಲಸ ಮಾಡಿದ್ರು.
ಡಿಗ್ರಿಯ ಅಂತಿಮ ಸೆಮಿಸ್ಟರ್ ಬಾಕಿ ಇರುವಾಗಲೇ ಟಿವಿ9ನಲ್ಲಿ ಜಾಬ್ ಕಾಲ್‍ಫರ್ ಮಾಡಿದ್ದರು. ಸ್ಕೈಲೈನ್ ನೆಟ್ ವರ್ಕ್‍ನ ಮೋಹನ್ ಅವರು ಐಶ್ವರ್ಯ ಅವರಿಗೆ ಟಿವಿ9ಗೆ ಪ್ರಯತ್ನಿಸುವಂತೆ ಸಲಹೆ ನೀಡಿದ್ರು. ಮೋಹನ್ ಅವರು ನೀಡಿದ ಮಾಧ್ಯಮ ತರಬೇತಿ ಮತ್ತು ಪ್ರೋತ್ಸಾಹಕ್ಕೆ ಐಶ್ವರ್ಯ ಕೃತಜ್ಞತೆ ಸಲ್ಲಿಸ ಬಯಸ್ತಾರೆ.


ಟಿವಿ9 ಇಂಟರ್ ವ್ಯೂ ಗೆ ಅಂದು ಸುಮಾರು 200 ಮಂದಿ ಬಂದಿದ್ದರು. ಕೊನೆಯ ಸುತ್ತಿಗೆ ಆಯ್ಕೆಯಾದ 7 ಮಂದಿಯಲ್ಲಿ, ಅಂತಿಮವಾಗಿ ಬಳಗ ಸೇರಿದ ಇಬ್ಬರಲ್ಲಿ ಐಶ್ವರ್ಯ ಕೂಡ ಒಬ್ಬರು. ಇನ್ನೊಬ್ಬರು ಶ್ರುತಿ. (ಈಗ ಶಿವಮೊಗ್ಗದಲ್ಲಿದ್ದಾರೆ)


ಆಯ್ಕೆ ಏನೋ ಆದ್ರು, ಆದ್ರೆ ಕೊನೆಯ ಸೆಮಿಸ್ಟರ್ ಇನ್ನೂ ಮುಗಿದಿರಲಿಲ್ಲ. ಪದವಿ ವ್ಯಾಸಂಗ 6 ತಿಂಗಳು ಬಾಕಿ ಇತ್ತು…! ಡಿಗ್ರಿ ಮುಗಿಸಿ ಬರುವಂತೆ ಟಿ9ನಲ್ಲಿ ಹೇಳಿದ್ರು. ಅವಕಾಶವೊಂದು ಸಿಕ್ಕಿದೆ, ಮತ್ತೆ ಸಿಗದೇ ಇದ್ದರೆ? ಎಂದು ಕೆಲಸಕ್ಕೆ ಜಾಯಿನ್ ಆದ್ರು. ಕಾಲೇಜಿನಲ್ಲೂ ಸಪೋರ್ಟ್ ಮಾಡಿದ್ರು. ಆಗಾಗ ಕಾಲೇಜಿಗೆ ಹೋಗಿ ಬರ್ತಿದ್ರು. ಬೆಂಗಳೂರಲ್ಲಿಯೇ ಪ್ರಾಜೆಕ್ಟ್ ವರ್ಕ್ ಮಾಡಿ ಕಳಿಹಿಸುತ್ತಿದ್ರು. 6 ತಿಂಗಳು ಕಷ್ಟಪಟ್ರು, ಪರೀಕ್ಷೆ ಬಂತು, ಬರೆದ್ರು… ಉತ್ತಮ ಅಂಕಗಳೊಂದಿಗೆ ಪಾಸ್ ಕೂಡ ಆದ್ರು.


2011ರಿಂದ 2014ರವರೆಗೆ ಮೂರು ವರ್ಷಗಳ ಕಾಲ ಟಿವಿ9ನಲ್ಲಿ ಕೆಲಸ. ಆರಂಭದಲ್ಲಿ ಡೆಸ್ಕ್ ನಲ್ಲಿ ಅನುಭವ. ಸ್ವಲ್ಪ ದಿನದ ನಂತ್ರ ರಾತ್ರಿ 11 ಗಂಟೆ ನ್ಯೂಸ್ ಓದೋ ಅವಕಾಶ, ಅದಾದ ಬಳಿಕ `ಸುಪ್ರಭಾತ’ ನಡೆಸಿಕೊಡುವ ಸದಾವಕಾಶವೂ ಲಭಿಸಿತು. ಆಗಾಗ ‘ಬೌಂಡರಿ ಲೈನ್’ ನಿರೂಪಣೆ ಮಾಡ್ತಿದ್ರು. ಇವರೇ ಹೇಳುವಂತೆ ರವಿಕುಮಾರ್ ಮತ್ತು ಮಾರುತಿ ಅವರು ತುಂಬಾ ಪ್ರೋತ್ಸಾಹ ನೀಡಿದ್ರು.


ವಾಯ್ಸ್ ವೋವರ್, ಸ್ಕ್ರಿಪ್ಟ್, ಪ್ಯಾಕೇಜ್, ಸೆಗ್ಮೆಂಟ್ ರೆಡಿ ಮಾಡೋದು ಎಲ್ಲವನ್ನು ಕಲಿತರು. ರಾತ್ರಿಪಾಳಿ ಕೆಲಸದಿಂದ ಆರೋಗ್ಯ ಸಮಸ್ಯೆ ಎದುರಾಯ್ತು. ನೈಟ್ ಶಿಫ್ಟ್ ಕಷ್ಟ ಆಗುತ್ತೆ ಅಂತ ರಿಪೋರ್ಟಿಂಗ್ ಕೇಳಿಕೊಂಡ್ರು. ಮೆಟ್ರೋ ಚೀಫ್ ಆಗಿದ್ದ ಪ್ರಮೋದ್ ಮತ್ತು ರಿಪೊರ್ಟರ್ ಅಮೃತಾ ಪ್ರೋತ್ಸಾಹ ನೀಡಿ, ವರದಿಗಾರಿಕೆ ಬಗ್ಗೆ ಒಂದಿಷ್ಟು ತಿಳಿಸಿಕೊಟ್ರು.


‘ಟಿವಿ9ನಲ್ಲಿ ಕೆಲಸ ಕಲಿತ್ರೆ ಎಲ್ಲಿ ಬೇಕಾದ್ರು ಕೆಲಸ ಮಾಡೋ ಕಾನ್ಫಿಡೆನ್ಸ್ ಹುಟ್ಟುತ್ತೆ. ಅದ್ರಲ್ಲೂ ನ್ಯೂಸ್ ಡೆಸ್ಕ್ ಹೆಡ್ ಆಗಿದ್ದ ಮಾರುತಿ ಅವರ ಕೈ ಕೆಳಗೆ ಕೆಲಸ ಮಾಡಿದ್ದು, ಅವರಿಂದ ಕಲಿತ ಅನುಭವ ದೊಡ್ಡದು’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಐಶ್ವರ್ಯ.


2014ರಲ್ಲಿ ‘ಸಮಯ’ಕ್ಕೆ ಜಾಯಿನ್ ಆದ್ರು. ಅಲ್ಲಿ ಅಂದು ಮುಖ್ಯಸ್ಥರಾಗಿ ರಂಗನಾಥ ಭಾರಧ್ವಜ್ ಅವರಿದ್ರು. ಇಲ್ಲಿ ಪೊಲಿಟಿಕಲ್ ಡಿಸ್ಕಶನ್ ಗಳನ್ನು ಸಹ ಮಾಡಿದ್ದರು. ಕಾರಣಾಂತರಿಂದ ನಾಲ್ಕೇ ನಾಲ್ಕು ತಿಂಗಳಲ್ಲಿ ಸಮಯ ಬಿಡಬೇಕಾಯಿತು.

ರಾಜೇಶ್ ರಾಜಘಟ್ಟ ಅವರಿಂದ ಕಸ್ತೂರಿ ಚಾನಲ್ ನಲ್ಲಿ ಉದ್ಯೋಗ ಪಡೆದರು. ಮುಖ್ಯಸ್ಥರಾಗಿದ್ದ ಶಶಿಧರ್ ಭಟ್, ಅನುಭವಿ ಪತ್ರಕರ್ತರಾದ ಗಜಾನನ ಹೆಗ್ಡೆ ಅವರ ಮಾರ್ಗದರ್ಶನ ಮತ್ತು ಪ್ರೋತ್ಸಾಹ ಸಿಕ್ತು. ಇಲ್ಲಿಯೂ ಸಿನಿಮಾ, ರಾಜಕೀಯ ಡಿಸ್ಕಷನ್ಸ್ ಗಳನ್ನು ಮಾಡಿದ್ದಾರೆ. ಮೇಕಪ್ ಮಾಡ್ತಿದ್ದ ಮಂಜುಳಾ ಮತ್ತು ತಾರ ಅವರೂ ಸಹ ತುಂಬಾ ಸಪೋರ್ಟ್ ಮಾಡ್ತಿದ್ರು ಎಂದು ಹೇಳೋದನ್ನು ಐಶ್ವರ್ಯ ಮರೆತಿಲ್ಲ.
ಕಸ್ತೂರಿ ಬಳಿಕ 2015ರಲ್ಲಿ ‘ಜನಶ್ರೀ ಚಾನಲ್’ ಗೆ ಹೋದ್ರು. ಹಬೀಬ್, ಈಗ ದಿಗ್ವಿಜಯದಲ್ಲಿರೋ ಶ್ರುತಿ ಮತ್ತಿತರರು ಆಗ ಜನಶ್ರಿಯಲ್ಲಿದ್ದರು. ಇವರುಗಳ ಜೊತೆ ಕೆಲಸ ಮಾಡಿದ ಸ್ನೇಹಮಯ ವಾತಾವರಣವನ್ನು ಮಿಸ್ ಮಾಡ್ಕೊತ್ತೀನಿ ಅಂತಾರೆ ಐಶ್ವರ್ಯ.
‘ಅನಂತ ಚಿನಿವಾರ ಅವರಿಂದ ಕಲಿತಿದ್ದು ಅಪಾರ. ಅವರು ಕೆಲಸ ಕಲಿಸೋ ಪರಿ, ಅವರ ಸರಳತೆ, ಸಜ್ಜನಿಕೆಯನ್ನು ಹತ್ತಿರದಿಂದ ಕಂಡು ತುಂಬಾ ಇಂಪ್ರೆಸ್ ಆಗಿದ್ದೀನಿ’ ಎನ್ನುವುದು ಐಶ್ವರ್ಯ ಹೃದಯಾಂತರಾಳದ ಮಾತು.


ಅನಂತಚಿನಿವಾರ ಅವರು ಜನಶ್ರೀ ಗೆ ಬಂದ ಮೇಲೆ ತಳಮಟ್ಟದಿಂದ ಸಂಸ್ಥೆಯನ್ನು ಕಟ್ಟುವ ಪ್ರಯತ್ನ ಮಾಡಿದ್ರು. ಮೌಢ್ಯಗಳನ್ನು ಕಡೆಗಾಣಿಸುತ್ತಿದ್ದ ಅವರು ಜ್ಯೋತಿಷ್ಯ ಕಾರ್ಯಕ್ರಮವನ್ನೇ ನಿಲ್ಲಿಸಿದ್ದರು.
ಜನಶ್ರೀಯಲ್ಲಿ ಐಶ್ವರ್ಯ ಪ್ರಕಾಶ್ ರೈ ಅವರ ಇಂಟರ್ ವ್ಯೂ ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಇದನ್ನು ಆರಂಭದಲ್ಲೇ ಹೇಳಿರೋದ್ರಿಂದ ಮತ್ತೊಮ್ಮೆ ಬೇಡ.


ಇನ್ನು ಜ್ಯೋತಿಷಿ ಆರ್ಯವರ್ಧನ ಕಾಮಪುರಾಣ…! ಆರ್ಯವರ್ಧನ ತನಗೆ ಲೈಂಗಿಕ ಕಿರುಕುಳ ಕೊಟ್ಟಿದ್ದಾನೆ ಎಂದು ಮಹಿಳೆಯೊಬ್ಬರು ಬಂದು ಅಳಲು ತೋಡಿಕೊಂಡಾಗ ಸುದ್ದಿಯನ್ನು ಎತ್ತಿಕೊಂಡಿದ್ದು ಜನಶ್ರೀ ಚಾನಲ್. ಹಿಂದೆ ಕಸ್ತೂರಿ ಮತ್ತು ಜನಶ್ರಿಯಲ್ಲೇ ಈತ ಜ್ಯೋತಿಷ್ಯ ಕಾರ್ಯಕ್ರಮ ನಡೆಸಿಕೊಡ್ತಿದ್ದಾಗ ನಿರೂಪಣೆ ಐಶ್ವರ್ಯ ಅವರದ್ದೇ. ಆದ್ರೆ, ಈತನ ನಿಜವಾದ ಗುಣ ಬಯಲು ಮಾಡಲು ಸಿಕ್ಕ ಅವಕಾಶವನ್ನು ಖುಷಿಯಿಂದ ಒಪ್ಪಿಕೊಂಡ ಐಶ್ವರ್ಯ ಆತನನ್ನು ಫೋನಿನನಲ್ಲಿ ತರಾಟೆಗೆ ತೆಗೆದುಕೊಂಡಿದ್ದರು. ಇವನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆಯರು ದನಿ ಎತ್ತಿದ್ರು…! ಪ್ರಕರಣ ದಾಖಲಾಯಿತು… ಜೈಲಿಗೂ ಹೋಗಿಬಂದ… ಇವತ್ತಿಗೂ ಡ್ಯಾಮೇಜ್ ಪ್ಯಾಚಪ್ ಮಾಡ್ಕೊಳ್ಳಕ್ಕೆ ಆಗ್ಲಿಲ್ಲ…!


ಮುಂದೆ ಲಕ್ಷ್ಮಿ ಪ್ರಸಾದ್ ಯಾದವ್ ಜನಶ್ರಿಯನ್ನು ತೆಗೆದುಕೊಂಡಾಗ ಅನಂತಚಿನಿವಾರ ಅವರು ಸಂಸ್ಥೆಯಿಂದ ಹೊರಬಂದ್ರು. ಆರ್ಯವರ್ಧನ್ ಕಮರ್ಷಿಯಲ್ ಜ್ಯೋತಿಷ್ಯ ಪ್ರೋಗ್ರಾಂ ನಡೆಸಿಕೊಡೋಕೆ ಮುಂದಾದ…! ಎಷ್ಟು ಬೇಕಾದ್ರು ದುಡ್ಡು ಕೊಡ್ತೀನಿ, ಐಶ್ವರ್ಯನೇ ನಿರೂಪಣೆ ಮಾಡ್ಬೇಕು ಅಂತ ಬೇಡಿಕೆ ಇಟ್ಟ…! ಕಾರಣ, ಐಶ್ವರ್ಯ ಈ ಹಿಂದೆ ಜನ್ಮ ಜಾಲಾಡಿದ್ದರಲ್ಲಾ…?!

ಆದ್ರೆ, ಇದಕ್ಕೆ ಒಪ್ಪದ ಐಶ್ವರ್ಯ ಸಂಸ್ಥೆಗೆ ರಾಜೀನಾಮೆ ನೀಡಿ ಪತ್ರಿಕಾ ಧರ್ಮ ಮೆರೆದರು. ಬಳಿಕ ಆಯುಷ್ ಟಿವಿ ಸೇರಿದಂತೆ ನಾನಾ ಚಾನಲ್ ಗಳಿಗೆ ಫ್ರೀಲ್ಯಾನ್ಸರ್ ಆಗಿ ಕೆಲಸ ಮಾಡಿದ್ರು. ವೇದಿಕೆ ಕಾರ್ಯಕ್ರಮಗಳ ನಿರೂಪಣೆ ಮಾಡ್ತಿದ್ರು.


ಆಕಾಶವಾಣಿ 101.3ಎಂಎಚ್‍ಜೆಡ್ ನಲ್ಲಿ ವಾಣಿ ಸರ್ಟಿಫಿಕೇಟ್ ಕೋರ್ಸ್ ಮಾಡಿ 3 ತಿಂಗಳು ರೇಡಿಯೋ ಜಾಕಿಯಾಗಿ ಕೆಲಸ ಮಾಡಿದ ಅನುಭವ ಕೂಡ ಇವರ ಜೊತೆಗಿದೆ. ಅನೇಕ ಸರ್ಕಾರಿ ಡಾಕ್ಯುಮೆಂಟರಿಗಳಿಗೆ, ಮೀಡಿಯಾ ಹೌಸ್ ಗಳಿಗೆ ಹಿನ್ನೆಲೆ ಧ್ವನಿ ಕೊಟ್ಟಿದ್ದಾರೆ. ಪೇಯಿಂಟಿಂಗ್, ಕ್ರ್ಯಾಫ್ಟ್ ವಕ್ರ್ಸ್, ಭರತ ನಾಟ್ಯ (ಜೂನಿಯರ್ ಆಗಿದೆ), ಡ್ಯಾನ್ಸಿಂಗ್ ಇವರ ಆಸಕ್ತಿದಾಯಕ ಕ್ಷೇತ್ರಗಳು.
ಈಗ ಅಂದು ಟಿವಿ9ನಲ್ಲಿದ್ದ ರವಿಕುಮಾರ್ ಮತ್ತು ಮಾರುತಿ ಅವರ ಸಾರಥ್ಯದ ‘ಫಸ್ಟ್ ನ್ಯೂಸ್’ ಬಳಗ ಸೇರಿದ್ದಾರೆ…!


ಇದು ಇವರಿಗೆ ತುಂಬಾ ಖುಷಿ ಕೊಟ್ಟಿದೆಯಂತೆ. ‘ಮತ್ತೆ ಟಿವಿ9 ಟೀಂ ನ ಫಸ್ಟ್ ನ್ಯೂಸ್ ನ ಭಾಗ ಆಗ್ತಿರೋದಕ್ಕೆ ಹೆಮ್ಮೆಯಿದೆ. ವೃತ್ತಿಭ್ರಮೆಗಳು ಕಳಚಿದೆ. ನಿಜವಾದ ಜರ್ನಲಿಸ್ಟ್ ಆಗ್ಬೇಕು ಎನ್ನೋದೇ ನನ್ನಾಸೆ. ದೇಶ ಸುತ್ತು ಕೋಶ ಓದು ಅನ್ನೋದೆ ನನ್ನ ಲೈಫ್ ಅಜೆಂಡ’ ಎಂದು ಹೇಳಿಕೊಳ್ಳುವ ಐಶ್ವರ್ಯ, ನಾಳೆಯಿಂದಲೇ ‘ಫಸ್ಟ್ ನ್ಯೂಸ್’ನಲ್ಲಿ ಕೆಲಸ ಶುರು ಮಾಡ್ತಿದ್ದಾರೆ. ಆಲ್ ದಿ ಬೆಸ್ಟ್ ಐಶ್ವರ್ಯ ಅವರೇ…!

-ಶಶಿಧರ್ ಎಸ್ ದೋಣಿಹಕ್ಲು

ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.

1) 10 ನವೆಂಬರ್ 2017 : ಈಶ್ವರ್ ದೈತೋಟ

2)11 ನವೆಂಬರ್ 2017 : ಭಾವನ

3)12  ನವೆಂಬರ್ 2017 : ಜಯಶ್ರೀ ಶೇಖರ್

4)13 ನವೆಂಬರ್ 2017 : ಶೇಷಕೃಷ್ಣ

5)14 ನವೆಂಬರ್ 2017 : ಶ್ರೀಧರ್ ಶರ್ಮಾ

6)15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ

7)16 ನವೆಂಬರ್ 2017 : ಅರವಿಂದ ಸೇತುರಾವ್

8)17 ನವೆಂಬರ್ 2017 : ಲಿಖಿತಶ್ರೀ

9)18 ನವೆಂಬರ್ 2017 : ರಾಘವೇಂದ್ರ ಗಂಗಾವತಿ

10)19 ನವೆಂಬರ್ 2017 : ಅಪರ್ಣಾ

11)20 ನವೆಂಬರ್ 2017 :  ಅಮರ್ ಪ್ರಸಾದ್

12)21 ನವೆಂಬರ್ 2017 :   ಸೌಮ್ಯ ಮಳಲಿ

13)22 ನವೆಂಬರ್ 2017 :  ಅರುಣ್ ಬಡಿಗೇರ್

14)23ನವೆಂಬರ್ 2017 :  ರಾಘವ ಸೂರ್ಯ

15)24ನವೆಂಬರ್ 2017 :  ಶ್ರೀಲಕ್ಷ್ಮಿ

16)25ನವೆಂಬರ್ 2017 :  ಶಿಲ್ಪ ಕಿರಣ್

17)26ನವೆಂಬರ್ 2017 :  ಸಮೀವುಲ್ಲಾ

18)27ನವೆಂಬರ್ 2017 :  ರಮಾಕಾಂತ್ ಆರ್ಯನ್

19)28ನವೆಂಬರ್ 2017 :  ಮಾಲ್ತೇಶ್

20)29/30ನವೆಂಬರ್ 2017 :  ಶ್ವೇತಾ ಆಚಾರ್ಯ  [ನಿನ್ನೆ (29ರಂದು ) ತಾಂತ್ರಿಕ ಸಮಸ್ಯೆಯಿಂದ ‘ಈ ದಿನದ ನಿರೂಪಕರು’- ನಿರೂಪಕರ ಪರಿಚಯ ಲೇಖನ ಪ್ರಕಟಿಸಿರಲಿಲ್ಲ. ಆದ್ದರಿಂದ ಇಂದು ಪ್ರಕಟಿಸಿದ್ದೀವಿ.  ಈ ದಿನದ (30 ನವೆಂಬರ್) ಲೇಖನ ಸಂಜೆ ಪ್ರಕಟಿಸಲಾಗುವುದು.) ]

21)30ನವೆಂಬರ್ 2017 :  ಸುರೇಶ್ ಬಾಬು 

22)01 ಡಿಸೆಂಬರ್ 2017 :  ಮಧು ಕೃಷ್ಣ (ಡಿಸೆಂಬರ್ ೨ ರಂದು ಬೆಳಗ್ಗೆ ಪ್ರಕಟ)

23)02 ಡಿಸೆಂಬರ್ 2017 : ಶಶಿಧರ್ ಭಟ್

24)03 ಡಿಸೆಂಬರ್ 2017 : ಚನ್ನವೀರ ಸಗರನಾಳ್

25)04 ಡಿಸೆಂಬರ್ 2017 : ಗೌರೀಶ್ ಅಕ್ಕಿ

26)05 ಡಿಸೆಂಬರ್ 2017 : ಶ್ರುತಿ ಜೈನ್

27)06ಡಿಸೆಂಬರ್ 2017 : ಅವಿನಾಶ್ ಯುವನ್  

28)07ಡಿಸೆಂಬರ್ 2017 : ಶಿಲ್ಪ ಕೆ.ಎನ್

29)08ಡಿಸೆಂಬರ್ 2017 : ಶಮೀರಾ ಬೆಳುವಾಯಿ

30)09ಡಿಸೆಂಬರ್ 2017 : ಸಂದೀಪ್ ಕುಮಾರ್

31)10ಡಿಸೆಂಬರ್ 2017 : ಪ್ರತಿಮಾ ಭಟ್

32)11ಡಿಸೆಂಬರ್ 2017 :  ಹರೀಶ್ ಪುತ್ರನ್

33)12ಡಿಸೆಂಬರ್ 2017 : ನಿಶಾ ಶೆಟ್ಟಿ

34)13ಡಿಸೆಂಬರ್ 2017 : ಪೂರ್ಣಿಮ ಎನ್.ಡಿ

35)14ಡಿಸೆಂಬರ್ 2017 :  ಹಬೀಬ್ ದಂಡಿ

36)15ಡಿಸೆಂಬರ್ 2017 : ಪ್ರಕಾಶ್ ಕುಮಾರ್ ಸಿ.ಎನ್

37)16ಡಿಸೆಂಬರ್ 2017 :  ಜ್ಯೋತಿ ಇರ್ವತ್ತೂರು

38)17ಡಿಸೆಂಬರ್ 2017 :  ಶಿಲ್ಪ ಐಯ್ಯರ್ 

39)18ಡಿಸೆಂಬರ್ 2017 :  ನಾಝಿಯಾ ಕೌಸರ್

40) 19ಡಿಸೆಂಬರ್ 2017 :  ಶ್ರುತಿಗೌಡ

41) 20ಡಿಸೆಂಬರ್ 2017 :  ಎಂ.ಆರ್ ಶಿವಪ್ರಸಾದ್

42) 21ಡಿಸೆಂಬರ್ 2017 :  ವೆಂಕಟೇಶ್ ಉಳ್ತೂರು (ವೆಂಕಟೇಶ್ ಅಡಿಗ)

43) 22ಡಿಸೆಂಬರ್ 2017 :  ಶರ್ಮಿತಾ ಶೆಟ್ಟಿ

44) 23ಡಿಸೆಂಬರ್ 2017 :  ಕಾವ್ಯ

45) 24ಡಿಸೆಂಬರ್ 2017 :  ಹರ್ಷವರ್ಧನ್ ಬ್ಯಾಡನೂರು

46) 25ಡಿಸೆಂಬರ್ 2017 : ಸುಧನ್ವ ಖರೆ

47) 26ಡಿಸೆಂಬರ್ 2017 : ಸೌಜನ್ಯ ಕೀರ್ತಿ

48) 27ಡಿಸೆಂಬರ್ 2017 :ವಾಣಿ ಕೌಶಿಕ್

49) 28ಡಿಸೆಂಬರ್ 2017 : ಸುಗುಣ

50) 29ಡಿಸೆಂಬರ್ 2017 : ಜಯಪ್ರಕಾಶ್ ಶೆಟ್ಟಿ

ಡಿಸೆಂಬರ್ ೩೦ ಮತ್ತು ೩೧ ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ.

51) 01ಜನವರಿ 2018 :ಐಶ್ವರ್ಯ ಎ.ಎನ್.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...