ಡೇರಿಂಗ್ ನೇಚರ್ ಆ್ಯಂಕರ್ ಶ್ರೀಧರ್…!

Date:

ಇವರು ಕ್ರಿಕೆಟ್‍ನಲ್ಲಿ ಆಕ್ರಮಣಕಾರಿ ಬ್ಯಾಟ್ಸ್ ಮನ್. ಅದೇರೀತಿ ಪ್ಯಾನಲ್ ಡಿಸ್ಕಷನ್‍ನಲ್ಲೂ ಅಟ್ಯಾಕಿಂಗ್ ನ್ಯಾಚರ್…! ವರದಿಗಾರಿಕೆಯಲ್ಲಿ ಧೈರ್ಯದಿಂದ ಮುನ್ನುಗ್ಗವ ಛಾತಿ. ಇದು ಡೇರಿಂಗ್ ನೇಚರ್ ಆ್ಯಂಕರ್ ಶ್ರೀಧರ್ ಆರ್ ಅವರ ಲೈಫ್ ಜರ್ನಿ.


ಶ್ರೀಧರ್ ಹುಟ್ಟಿದ್ದು, ಬೆಳೆದಿದ್ದೆಲ್ಲಾ ಬೆಂಗಳೂರಲ್ಲಿ. ತಂದೆ ರಾಮಲಿಂಗಯ್ಯ, ವೃತ್ತಿಯಲ್ಲಿ ವೈದ್ಯರು. ತಾಯಿ ರತ್ನಮ್ಮ. ಮುರುಳೀಧರ್ ಅವರು ಶ್ರೀಧರ್ ಅವರ ತಮ್ಮ, ಪದ್ಮ ಪತ್ನಿ, ಅಚ್ಚುತ್ ಮತ್ತು ವಿಷ್ಣು ಮುದ್ದಿನ ಮಕ್ಕಳು.


ಬಾಗನೂರು ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಬೆಂಗಳೂರು ಹೈಸ್ಕೂಲ್ ನಲ್ಲಿ ಪ್ರೌಢಶಿಕ್ಷಣ, ಎಪಿಎಂ ಕಾಲೇಜಿನಲ್ಲಿ ಪಿಯುಸಿ ಮತ್ತು ವಿಜಯ ಕಾಲೇಜಿನಲ್ಲಿ ಪದವಿ (ಬಿಎಸ್‍ಸಿ- ಅಗ್ರಿಕಲ್ಚರ್) ಪೂರೈಸಿದ್ದಾರೆ ಶ್ರೀಧರ್.


ಪಿಯುಸಿ, ಪದವಿ ದಿನಗಳಲ್ಲಿಯೇ ಮಾಧ್ಯಮ ಸೆಳೆತವಿತ್ತು. ಬಿಎಸ್‍ಸಿ ಮುಗಿದ ಮೇಲೆ ತನ್ನ ವಿದ್ಯಾಭ್ಯಾಸಕ್ಕೆ ತಕ್ಕ ಕೆಲಸ ಸಿಗಲಿಲ್ಲ. ಆಗ ಇಷ್ಟದ ಮಾಧ್ಯಮ ಕ್ಷೇತ್ರಕ್ಕೆ ಕಾಲಿಡುವ ಮನಸ್ಸು ಮಾಡಿದ್ರು. ಆಗ ಬಾಗಿಲು ತೆರೆದು ಬರಮಾಡಿಕೊಂಡಿದ್ದು ‘ಸಂಜೆವಾಣಿ’ ಪತ್ರಿಕೆ.


1997ರಲ್ಲಿ ಪ್ರೂಫ್ ರೀಡರ್ ಆಗಿ ಸಂಜೆವಾಣಿಗೆ ಸೇರಿದ ಶ್ರೀಧರ್ ನಂತರ ಒಂದಿಷ್ಟು ದಿನ ಜಾಹಿರಾತು ವಿಭಾಗದಲ್ಲಿ ಕೆಲಸ ಮಾಡಿದ್ರು. ಬಳಿಕ ಸಬ್ ಎಡಿಟರ್ ಆಗಿ ಮುಂದುವರೆದ್ರು. ಹೆಚ್ಚು ಕಡಿಮೆ ಒಂದುವರೆ ವರ್ಷ ಕೆಲಸ ಮಾಡಿರ್ಬಹುದು. ಅಷ್ಟೊತ್ತಿಗೆ ಅಲ್ಲಿ ಏನೋ ಕಿರಿಕ್ ಆಗಿ ಕೆಲಸಕ್ಕೆ ರಾಜೀನಾಮೆ ನೀಡಿ ಹೊರಬಂದ್ರು.


ಈ ಮೀಡಿಯಾ ಸಹವಾಸವೇ ಬೇಡ ಅಂತ ಯೋಚಿಸಿ, ರೇಷ್ಮೆ ಕೃಷಿ ಬಗ್ಗೆ ಯೋಚಿಸಿದ್ರು. ಓದಿದ್ದು ‘ಕೃಷಿ ವಿಜ್ಞಾನ’ ಆಗಿದ್ದರಿಂದ ಖುಷಿಯಿಂದಲೇ ರಾಮನಗರದತ್ತ ಮುಖಮಾಡಿದ್ರು. ತಮ್ಮ ಜಮೀನಿನಲ್ಲಿ ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಂಡ್ರು. ಆಧುನಿಕ ಯಂತ್ರೋಪಕರಣಗಳನ್ನು ಬಳಸಿದ್ರು, ಊರಿನವರಿಗೆ ಅವುಗಳನ್ನು ಪರಿಚಯಿಸಿದ್ರು.


1 ವರ್ಷದ ನಂತರ ಮತ್ತೆ ಬೆಂಗಳೂರಲ್ಲಿ ಉದ್ಯೋಗ ಮಾಡೋ ಆಸೆ ಚಿಗುರಿತು. 2000ನೇ ಇಸವಿಯಲ್ಲಿ ಕೃಷ್ಣಮೂರ್ತಿ ಅವರ ‘ಒಎನ್‍ಎಸ್’ ನ್ಯೂಸ್ ಏಜೆನ್ಸಿಗೆ ಕಾಲಿಟ್ರು. ಅಲ್ಲಿ 8 ತಿಂಗಳು ಕೆಲಸ ಮಾಡಿದ್ದರಷ್ಟೇ…… ಉದಯದ ನ್ಯೂಸ್ ಚೀಫ್ ಆಗಿದ್ದ ತೇಜಸ್ವಿನಿಯವರು ಉದಯಕ್ಕೆ ಆಮಂತ್ರಿಸಿದ್ರು. 2005ರವರೆಗೆ ಉದಯದಲ್ಲಿ ಜನರಲ್ ಬೀಟ್ ರಿಪೋರ್ಟರ್ ಆಗಿ, ಅಪರಾಧ ವಿಭಾಗದ ವರದಿಗಾರರಾಗಿ, ರಾಜಕೀಯ ವರದಿಗಾರರಾಗಿ ಕೆಲಸ ಮಾಡಿದ್ರು.


2005ರ ಬಳಿಕ ನ್ಯೂಸ್ ರೀಡರ್ ಆಗಿ ಉದಯ ಪರದೆ ಪ್ರವೇಶ ಮಾಡಿದ್ರು. ಮುಂದೆ ಬೆಂಗಳೂರು ಬ್ಯೂರೋ ಮುಖ್ಯಸ್ಥರಾಗಿ, ನ್ಯೂಸ್ ಕೋ ಆರ್ಡಿನೇಟರ್ ಆಗಿ ಸೇವೆ ಸಲ್ಲಿಸಿದ್ರು.


‘ಧ್ವನಿ-ಪ್ರತಿ ಧ್ವನಿ’ ಮತ್ತು ನ್ಯೂಸ್ @ 8 ಶ್ರೀಧರ್ ಅವರು ನಡೆಸಿಕೊಡ್ತಿದ್ದ ಪ್ರಮುಖ ಕಾರ್ಯಕ್ರಮಗಳು. ಪೊಲಿಟಿಕಲ್ ಡಿಸ್ಕಷನ್ಸ್, ಸುದ್ದಿ ವಿಶ್ಲೇಷಣೆ ಎಲ್ಲದರಲ್ಲೂ ಶ್ರೀಧರ್ ಅವರು ಎತ್ತಿದ ಕೈ. ಮಾಜಿ ಮುಖ್ಯಮಂತ್ರಿಗಳಾದ ಧರ್ಮಸಿಂಗ್, ಎಚ್.ಡಿ ಕುಮಾರ ಸ್ವಾಮಿ, ಬಿ.ಎಸ್ ಯಡಿಯೂರಪ್ಪ, ಎಚ್.ಡಿ ಕುಮಾರ ಸ್ವಾಮಿ, ಜಗದೀಶ್ ಶೆಟ್ಟರ್, ಸದಾನಂದ ಗೌಡ ಸೇರಿದಂತೆ ರಾಜ್ಯದ ಪ್ರಮುಖ ಜನನಾಯಕರ ಸಂದರ್ಶನಗಳನ್ನು ಮಾಡಿದ್ದಾರೆ.


ವರನಟ ಡಾ. ರಾಜ್‍ಕುಮಾರ್ ಅವರು ಕಿಡ್ನಾಪ್ ಆಗಿದ್ದಾಗ ರಾಜ್ಯ ಹೊತ್ತಿ ಉರೀತಿತ್ತು. ಸನ್ ನೆಟ್ ವರ್ಕ್‍ನ ಉದಯ ಟಿ.ವಿ ತಮಿಳುನಾಡಿದ್ದು, ಅವರೇ ಅಣ್ಣವ್ರನ್ನ ಕಿಡ್ನಾಪ್ ಮಾಡಿಸಿದ್ದು ಅಂತ ಒಂದಿಷ್ಟು ಜನ ಭಾವಿಸಿದ್ದರು. ಈ ವೇಳೆ ಉದಯ ಪ್ರತಿನಿಧಿಯಾಗಿ ರಿಪೋರ್ಟಿಂಗ್ ಗೆ ಫೀಲ್ಡ್‍ಗೆ ಇಳಿಯೋದು ಅಷ್ಟು ಸುಲಭವಾಗಿರಲಿಲ್ಲ. ಆದರೆ, ಏನ್ ಆಗುತ್ತೋ ಆಗಲಿ, ವದರಿ ಮಾಡಿಯೇ ಸಿದ್ಧ ಎಂದು ಜನರ ರಿಯಾಕ್ಷನ್ ಪಡೆದು ಸುದ್ದಿ ಮಾಡಲು ಕ್ಯಾಮರಮನ್ ಮತ್ತು ಡ್ರೈವರನ್ನು ಕರ್ಕೊಂಡು ಫೀಲ್ಡ್ ಗೆ ಇಳಿದಿದ್ದರು ಶ್ರೀಧರ್…!


ಜನ ಪ್ರತಿಕ್ರಿಯೆ ನೀಡ್ತಾ ಇದ್ರು, ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು. ಆದ್ರೆ, ಕೊನೆಗಳಿಗೆಯಲ್ಲಿ ಒಬ್ಬ ಪುಣ್ಯಾತ್ಮ, ಇದು ತಮಿಳುನಾಡಿನ ಚಾನಲ್ ಅಂದ…! ಅಷ್ಟೇ, ಜನ ಇವರನ್ನು ಮುತ್ತಿಕ್ಕಿದರು. ಡ್ರೈವರ್ ಕಾರನ್ನು ಸ್ಟಾರ್ಟ್ ಮಾಡಿ ಮೂ… ಮಾಡಿದ್ದೇ ತಡ ಓರ್ವ ಸೈಜ್ ಕಲ್ ತಗೊಂಡು ಕಾರಿನ ಮೇಲೆ ಹಾಕಿದ…! ಅದು ಡ್ರೈವರ್ ಮತ್ತು ಶ್ರೀಧರ್ ನಡುವೆ ಬಿತ್ತು. ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾದ್ರು. ನಾವು ಕನ್ನಡಿಗರೇ ಎಂದು ಹೇಳಿ, ಆ ಗುಂಪಿಗೆ ಮನವರಿಕೆ ಮಾಡಿಕೊಟ್ಟು ಅಲ್ಲಿಂದ ವಾಪಾಸ್ಸಾಗಬೇಕಾದ್ರೆ ಶ್ರೀಧರ್ ಮತ್ತವರ ಜೊತೆಯಲ್ಲಿದ್ದವರ ಜೀವ ಬಾಯಿಗೆ ಬಂದಿತ್ತು…!


ವೀರಪ್ಪನ್ ರಾಜ್‍ಕುಮಾರ್ ಅವರನ್ನಿನ್ನೂ ಬಿಟ್ಟಿರಲಿಲ್ಲ. ಶ್ರೀಧರ್ ಮತ್ತು ಕ್ಯಾಮರಮನ್ ನವೀನ್ ಸುವರ್ಣ ಮೈಸೂರು ದಸರಾ ಕವರೇಜ್ ನಲ್ಲಿ ಬ್ಯುಸಿ ಇದ್ರು. ಅಷ್ಟೊತ್ತಿಗೆ ನಾಗಪ್ಪ ಮಾರಡಗಿ ವೀರಪ್ಪನ್ ಕಪಿಮುಷ್ಠಿಯಿಂದ ತಪ್ಪಿಸಿಕೊಂಡು ಬಂದ್ರಿದ್ರು. ಆದ್ರೆ, ರಾಜ್‍ಕುಮಾರ್ ತಪ್ಪಿಸಿಕೊಂಡು ಬಂದಿದ್ದಾರೆ ಎಂದು ಸುದ್ದಿ ಹರಡಿತ್ತು…! ಕೂಡಲೇ ನವೀನ್ ಮತ್ತು ಶ್ರೀಧರ್ ಗಾಜನೂರಿನ ರಾಜ್ ಮನೆಗೆ ಬಂದ್ರು.

ಗನ್‍ಲೈಟ್ ಬಳಸಿ, ಶೂಟಿಂಗ್ ಮಾಡಿದ ಬಳಿಕ ಅದರ ಫ್ಲಗ್ ತೆಗೆಯುವಾಗ ಆಕಸ್ಮಿಕವಾಗಿ ಇಡೀ ಮನೆಯ ಲೈಟ್ ಆಫ್ ಆಯ್ತು…! ಮನೆಮಂದಿಯೆಲ್ಲಾ ವೀರಪ್ಪನ್ ಕಡೆಯವರೇ ಬಂದಿದ್ದಾರೆ… ಮತ್ತೆ ಯಾರನ್ನು ಎತ್ಕೊಂಡು ಹೋಗ್ತಾರೋ ಎಂಬ ಭಯದಿಂದ ಕೂಗಾಡಿದ್ರು. ಅಕ್ಕಪಕ್ಕದವರೆಲ್ಲಾ ಬಂದು ನವೀನ್, ಶ್ರೀಧರ್ ಅವರನ್ನು ಸುತ್ತುವರೆದ್ರು..! ಉದಯ ಟಿವಿ ಅವರು ಎಂದು ತಿಳಿದ ಬಳಿಕ ಅವರೆಲ್ಲಾ ನಿರಾಳರಾದ್ರು.


ಹೀಗೆ ರಾಜಕುಮಾರ್ ಕಿಡ್ನಾಪ್ ಆದ ದಿನಗಳಲ್ಲಿ ಎಷ್ಟೋ ದಿನ ಬರೀ ಬನ್ ಹಾಗೂ ಟೀಯಲ್ಲಿ ಕಾಲಕಳೆದು ಕೆಲಸ ಮಾಡಿದ್ದು, ಆ ದಿನಗಳಲ್ಲಿ ನಡೆದ ಘಟನೆಗಳು ಶ್ರೀಧರ್ ಎಂದೆಂದಿಗೂ ಮರೆಯಲಾಗಲ್ಲ.


ಹಾಗೆಯೇ ವೀರಪ್ಪನ್ ಸಾವಿನ ಸುದ್ದಿ ಬಂದಾಗ ಶ್ರೀಧರ್ ಮನೆಯಲ್ಲಿದ್ರು. ಸುದ್ದಿ ತಿಳಿಯುತ್ತಿದ್ದಂತೆ ಆಫೀಸ್‍ಗೆ ಹೋಗಿ ಒಬಿ ವ್ಯಾನ್ ತಗೊಂಡು ಧರ್ಮಪುರಿಗೆ ಹೊರಟ್ರು. ಅಂದು ಎಲ್ಲಾ ಮೀಡಿಯಾದವರಿಗಿಂತ ಮೊದಲು ಧರ್ಮಪುರಿ ತಲುಪಿದ್ದು ಉದಯ ಶ್ರೀಧರ್…! ಹೀಗೆ ವೃತ್ತಿನಿಷ್ಠತೆ, ವೃತ್ತಿಪ್ರೇಮವನ್ನು ನಾವು ಇವರಲ್ಲಿ ಕಾಣಬಹುದು.


ಇಂದು ಬ್ರೇಕಿಂಗ್ ನ್ಯೂಸ್ ಬರದಲ್ಲಿ ಸುಳ್ಳು ಸುದ್ದಿಯನ್ನು ನೀಡುವ ಕೆಲ ಯುವಪತ್ರಕರ್ತರು ಶ್ರೀಧರ್ ಹಾಗೂ ಇವರಂತಹ ಅನುಭವಿ ಪತ್ರಕರ್ತರನ್ನು ನೋಡಿ ಕಲಿಯುವುದು ಸಾಕಷ್ಟಿದೆ. ಇಂದು ಸುದ್ದಿಮೂಲ ಅಂತ ಯಾರನ್ನೋ ನಂಬ್ಕೊಂಡು ಅವರು ಹೇಳಿದ್ದಕ್ಕೆ ಉಪ್ಪು-ಹುಳಿ-ಖಾರ ಸೇರಿಸಿ ಸುದ್ದಿ ನೀಡುತ್ತಿರುವವರು ಶ್ರೀಧರ್ ಅವರಂತವರು ಪಾಲಿಸಿಕೊಂಡು ಬಂದ ವೃತ್ತಿ ಪ್ರಾಮಾಣಿಕತೆ, ಧರ್ಮವನ್ನು ಅನುಸರಿಸಬೇಕು. ಉತ್ತಮ ಸಮಾಜಕ್ಕಾಗಿ, ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವುದಕ್ಕಾಗಿ ಕೆಲಸ ಮಾಡಬೇಕು. ಟಿಆರ್‍ಪಿ ಬರದಲ್ಲಿ ಎಕ್ಸ್‍ಕ್ಲ್ಯೂಸಿವ್, ಬ್ರೇಕಿಂಗ್ ನ್ಯೂಸ್ ಅಂತ ಸುಳ್ ಸುಳ್ಳು ಸುದ್ದಿ ಕ್ರಿಯೇಟ್ ಮಾಡೋದಲ್ಲ…! ಇದು ಶ್ರೀಧರ್ ಅವರ ಕಿವಿಮಾತು ಕೂಡ ಹೌದು.


ಆಂಜನೇಯ ಅವರು ಸಚಿವರಾದಾಗ ಅವರ ಇಂಟರ್ ವ್ಯೂ ಮಾಡಿದ್ರು ಶ್ರೀಧರ್. ಆಂಜನೇಯ ತುಂಬಾ ಬಡತನದಲ್ಲಿ ಬೆಳೆದವರು. ಕೆಲಸ ಸಿಗದೇ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಕೆಲಸಕ್ಕೆ ಸೇರಿ, ಅಲ್ಲಿಯೇ ಉಳಿದುಕೊಳ್ಳುತ್ತಿದ್ದರು. ಅವರ ಶ್ರದ್ಧೆಯನ್ನು ನೋಡಿ ಜಿಲ್ಲಾಧ್ಯಕ್ಷರು ಒಂದು ಚುನಾವಣೆಯಲ್ಲಿ ಆಟೋ ಹಿಡಿದು ಅಭ್ಯರ್ಥಿ ಪರ ಪ್ರಚಾರ ಮಾಡೋಕೆ ಹೇಳಿದ್ರು. ನಂತರದ ದಿನಗಳಲ್ಲಿ ಪ್ರಮುಖ ಜವಬ್ದಾರಿಯನ್ನು ನೀಡಿದ್ರು. ಆರಂಭದ ದಿನಗಳಲ್ಲಿ ಕಚೇರಿಯ ಶೌಚಾಲಯ ಸ್ವಚ್ಛ ಮಾಡುತ್ತಿದ್ದ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು, ಗೆದ್ದು ಸಚಿವರೂ ಆಗಿದ್ದಾರೆ.

ಈ ವಿಷಯವನ್ನು ಕಲೆಕ್ಟ್ ಮಾಡಿಕೊಂಡಿದ್ದ ಶ್ರೀಧರ್ ಇಂಟರ್ ವ್ಯೂ ಗೂ ಮುನ್ನ ಆಂಜನೇಯ ಅವರ ಹೆಸರು ಹೇಳದೆ ಇಷ್ಟೆಲ್ಲಾ ವಿವರ ನೀಡಿದ್ದರು…! ಆಂಜನೇಯ ಅವರಿಗೆ ಆಶ್ಚರ್ಯವಾಗಿತ್ತು…! ಅವರು ಅತ್ತಿದ್ದರು. ಇಂಟರ್ ವ್ಯೂ ಪ್ರಸಾರವಾದ್ಮೇಲೆ, ಶ್ರೀಧರ್ ಅವರಿಗೊಂದು ಕರೆ ಬರುತ್ತೆ…! ಅದು, ಆಂಜನೇಯ ಅವರ ಮಗಳದ್ದು…! ಅಪ್ಪನ ಬಗ್ಗೆ ನನಗೇ ಇವೆಲ್ಲಾ ಗೊತ್ತಿರ್ಲಿಲ್ಲ. ಇಷ್ಟು ಕಷ್ಟಪಟ್ಟಿದ್ದಾರೆ ಅಂತ ತಿಳಿದಿರಲಿಲ್ಲ. ತಿಳಿಸಿದ್ದಕ್ಕೆ ಧನ್ಯವಾದಗಳು ಅಂತ ಆಕೆ ಶ್ರೀಧರ್ ಅವರಿಗೆ ಥ್ಯಾಂಕ್ಸ್ ಹೇಳಿದ್ದರು.


ಶ್ರೀಧರ್ ಎಲ್ಲರ ಜೊತೆ ಬೆರೆಯುವ ಸ್ನೇಹಜೀವಿ. ಇದೇ ಕಾರಣಕ್ಕೆ ಅತ್ಯಂತ ಕಿರಿಯ ವಯಸ್ಸಲ್ಲಿ ಬೆಂಗಳೂರು ಪ್ರೆಸ್‍ಕ್ಲಬ್ ನ ಅಧ್ಯಕ್ಷರಾಗಿದ್ದು…! 2014, 2015, 2016ರ ಮೂರು ಅವಧಿಯಲ್ಲಿ ಪ್ರೆಸ್ ಕ್ಲಬ್ ನ ಅಧ್ಯಕ್ಷರಾಗಿದ್ದ ಇವರು, ಪ್ರೆಸ್‍ಕ್ಲಬ್ ನಲ್ಲಿ ವೈ-ಫೈ ವ್ಯವಸ್ಥೆ, ಉಚಿತ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿದ್ರು. ಮೆಟಲ್ ಪೆನ್ಸಿಂಗ್ ವ್ಯವಸ್ಥೆ ಸೇರಿದಂತೆ ನಾನಾ ಕೆಲಸಗಳನ್ನು ಮಾಡಿಸಿದ್ದಾರೆ.


ಬೆಂಗಳೂರು ಪ್ರೆಸ್‍ಕ್ಲಬ್ ಕಾರ್ಯದರ್ಶಿ ಆಗಿದ್ದ ಶ್ರೀಧರ್ ಅವರು 2006ರಲ್ಲಿ ಮೊಟ್ಟಮೊದಲ ಬಾರಿಗೆ ಶಾಸಕರು ಮತ್ತು ಮಾಧ್ಯಮದವರ ನಡುವೆ ಕ್ರಿಕೆಟ್ ಪಂದ್ಯಾವಳಿಯನ್ನು ಆರಂಭಿಸಿದ್ರು. ವೃತ್ತಿ ಬದುಕಿನಾಚೆಗೊಂದು ಒಳ್ಳೆಯ ಸಂಬಂಧ ಇರಲಿ, ದ್ವೇಷ, ಪರಸ್ಪರ ಮನಸ್ತಾಪ ಬೇಡ ಎನ್ನುವ ಉದ್ದೇಶದಿಂದ ಆರಂಭಿಸಿದ ಟೂರ್ನಮೆಂಟಿದು. ಆಗ ದಿ. ಧರ್ಮಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದರು.


ನಂತರ ಎಚ್.ಡಿ ಕುಮಾರ ಸ್ವಾಮಿ, ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗಲೂ ಈ ಪಂದ್ಯಾವಳಿಗಳು ನಡೆದಿದ್ದವು. ಆದ್ರೆ, ಜಗದೀಶ್ ಶೆಟ್ಟರ್, ಡಿ.ವಿ ಸದಾನಂದ ಗೌಡ ಅವರ ಅವಧಿಯಲ್ಲಿ ನಿಂತಿತು. ಪತ್ರಕರ್ತರು ಹಾಗೂ ಜನಪ್ರತಿನಿಧಿಗಳ ನಡುವಿನ ಪಂದ್ಯಾವಳಿಗಳು ಸ್ಥಗಿತಗೊಂಡಿದೆಯಾದರೂ, ಪತ್ರಕರ್ತರು ಮತ್ತು ಪೊಲೀಸರ ನಡುವೆ ಹಾಗೂ ಪ್ರತಿಸ್ಪರ್ಧಿ ಮಾಧ್ಯಮ ಮಿತ್ರರ ನಡುವೆ ಸೌಹಾರ್ಧಯುತ ಪಂದ್ಯಾವಳಿಗಳು ಆಗಾಗ ನಡೆಯುತ್ತಲೇ ಇರುತ್ತವೆ.


ಉದಯದಲ್ಲಿರುವಾಗ ಟಿವಿ9, ಜಿ ನ್ಯೂಸ್ ಸೇರಿದಂತೆ ನಾನಾ ಕಡೆಗಳಿಂದ ಆಫರ್ ಬಂದಿತ್ತು, ಆದ್ರೆ, ತನ್ನ ಎರಡನೇ ಮನೆಯೆಂದೇ ತಿಳಿದಿರುವ ಉದಯವನ್ನು ಬಿಟ್ಟು ಬರಲು ಮನಸ್ಸು ಮಾಡಿರಲಿಲ್ಲ. ಇತ್ತೀಚೆಗೆ ಉದಯ ನ್ಯೂಸ್ ಮುಚ್ಚಿದೆ. ಇದು ಶ್ರೀಧರ್ ಅವರಿಗೆ ತುಂಬಾ ನೋವಿನ ಸಂಗತಿ. ಈಗಲೂ ಅನೇಕ ಚಾನಲ್ ಗಳಿಂದ ಆಫರ್ ಬಂದಿದ್ದು, ಬ್ರೇಕ್ ತಗೊಂಡಿರುವ ಶ್ರೀಧರ್ ಸಂಕ್ರಾಂತಿ ಬಳಿಕ ಬೇರೊಂದು ಚಾನಲ್ ನಲ್ಲಿ ಮಾಧ್ಯಮ ವೃತ್ತಿಬದುಕಿನ ಮತ್ತೊಂದು ಇನ್ನಿಂಗ್ಸ್ ಶುರುಮಾಡಲಿದ್ದಾರೆ.

-ಶಶಿಧರ್ ಎಸ್ ದೋಣಿಹಕ್ಲು

ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.

1) 10 ನವೆಂಬರ್ 2017 : ಈಶ್ವರ್ ದೈತೋಟ

2)11 ನವೆಂಬರ್ 2017 : ಭಾವನ

3)12  ನವೆಂಬರ್ 2017 : ಜಯಶ್ರೀ ಶೇಖರ್

4)13 ನವೆಂಬರ್ 2017 : ಶೇಷಕೃಷ್ಣ

5)14 ನವೆಂಬರ್ 2017 : ಶ್ರೀಧರ್ ಶರ್ಮಾ

6)15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ

7)16 ನವೆಂಬರ್ 2017 : ಅರವಿಂದ ಸೇತುರಾವ್

8)17 ನವೆಂಬರ್ 2017 : ಲಿಖಿತಶ್ರೀ

9)18 ನವೆಂಬರ್ 2017 : ರಾಘವೇಂದ್ರ ಗಂಗಾವತಿ

10)19 ನವೆಂಬರ್ 2017 : ಅಪರ್ಣಾ

11)20 ನವೆಂಬರ್ 2017 :  ಅಮರ್ ಪ್ರಸಾದ್

12)21 ನವೆಂಬರ್ 2017 :   ಸೌಮ್ಯ ಮಳಲಿ

13)22 ನವೆಂಬರ್ 2017 :  ಅರುಣ್ ಬಡಿಗೇರ್

14)23ನವೆಂಬರ್ 2017 :  ರಾಘವ ಸೂರ್ಯ

15)24ನವೆಂಬರ್ 2017 :  ಶ್ರೀಲಕ್ಷ್ಮಿ

16)25ನವೆಂಬರ್ 2017 :  ಶಿಲ್ಪ ಕಿರಣ್

17)26ನವೆಂಬರ್ 2017 :  ಸಮೀವುಲ್ಲಾ

18)27ನವೆಂಬರ್ 2017 :  ರಮಾಕಾಂತ್ ಆರ್ಯನ್

19)28ನವೆಂಬರ್ 2017 :  ಮಾಲ್ತೇಶ್

20)29/30ನವೆಂಬರ್ 2017 :  ಶ್ವೇತಾ ಆಚಾರ್ಯ  [ನಿನ್ನೆ (29ರಂದು ) ತಾಂತ್ರಿಕ ಸಮಸ್ಯೆಯಿಂದ ‘ಈ ದಿನದ ನಿರೂಪಕರು’- ನಿರೂಪಕರ ಪರಿಚಯ ಲೇಖನ ಪ್ರಕಟಿಸಿರಲಿಲ್ಲ. ಆದ್ದರಿಂದ ಇಂದು ಪ್ರಕಟಿಸಿದ್ದೀವಿ.  ಈ ದಿನದ (30 ನವೆಂಬರ್) ಲೇಖನ ಸಂಜೆ ಪ್ರಕಟಿಸಲಾಗುವುದು.) ]

21)30ನವೆಂಬರ್ 2017 :  ಸುರೇಶ್ ಬಾಬು 

22)01 ಡಿಸೆಂಬರ್ 2017 :  ಮಧು ಕೃಷ್ಣ (ಡಿಸೆಂಬರ್ ೨ ರಂದು ಬೆಳಗ್ಗೆ ಪ್ರಕಟ)

23)02 ಡಿಸೆಂಬರ್ 2017 : ಶಶಿಧರ್ ಭಟ್

24)03 ಡಿಸೆಂಬರ್ 2017 : ಚನ್ನವೀರ ಸಗರನಾಳ್

25)04 ಡಿಸೆಂಬರ್ 2017 : ಗೌರೀಶ್ ಅಕ್ಕಿ

26)05 ಡಿಸೆಂಬರ್ 2017 : ಶ್ರುತಿ ಜೈನ್

27)06ಡಿಸೆಂಬರ್ 2017 : ಅವಿನಾಶ್ ಯುವನ್  

28)07ಡಿಸೆಂಬರ್ 2017 : ಶಿಲ್ಪ ಕೆ.ಎನ್

29)08ಡಿಸೆಂಬರ್ 2017 : ಶಮೀರಾ ಬೆಳುವಾಯಿ

30)09ಡಿಸೆಂಬರ್ 2017 : ಸಂದೀಪ್ ಕುಮಾರ್

31)10ಡಿಸೆಂಬರ್ 2017 : ಪ್ರತಿಮಾ ಭಟ್

32)11ಡಿಸೆಂಬರ್ 2017 :  ಹರೀಶ್ ಪುತ್ರನ್

33)12ಡಿಸೆಂಬರ್ 2017 : ನಿಶಾ ಶೆಟ್ಟಿ

34)13ಡಿಸೆಂಬರ್ 2017 : ಪೂರ್ಣಿಮ ಎನ್.ಡಿ

35)14ಡಿಸೆಂಬರ್ 2017 :  ಹಬೀಬ್ ದಂಡಿ

36)15ಡಿಸೆಂಬರ್ 2017 : ಪ್ರಕಾಶ್ ಕುಮಾರ್ ಸಿ.ಎನ್

37)16ಡಿಸೆಂಬರ್ 2017 :  ಜ್ಯೋತಿ ಇರ್ವತ್ತೂರು

38)17ಡಿಸೆಂಬರ್ 2017 :  ಶಿಲ್ಪ ಐಯ್ಯರ್ 

39)18ಡಿಸೆಂಬರ್ 2017 :  ನಾಝಿಯಾ ಕೌಸರ್

40) 19ಡಿಸೆಂಬರ್ 2017 :  ಶ್ರುತಿಗೌಡ

41) 20ಡಿಸೆಂಬರ್ 2017 :  ಎಂ.ಆರ್ ಶಿವಪ್ರಸಾದ್

42) 21ಡಿಸೆಂಬರ್ 2017 :  ವೆಂಕಟೇಶ್ ಉಳ್ತೂರು (ವೆಂಕಟೇಶ್ ಅಡಿಗ)

43) 22ಡಿಸೆಂಬರ್ 2017 :  ಶರ್ಮಿತಾ ಶೆಟ್ಟಿ

44) 23ಡಿಸೆಂಬರ್ 2017 :  ಕಾವ್ಯ

45) 24ಡಿಸೆಂಬರ್ 2017 :  ಹರ್ಷವರ್ಧನ್ ಬ್ಯಾಡನೂರು

46) 25ಡಿಸೆಂಬರ್ 2017 : ಸುಧನ್ವ ಖರೆ

47) 26ಡಿಸೆಂಬರ್ 2017 : ಸೌಜನ್ಯ ಕೀರ್ತಿ

48) 27ಡಿಸೆಂಬರ್ 2017 :ವಾಣಿ ಕೌಶಿಕ್

49) 28ಡಿಸೆಂಬರ್ 2017 : ಸುಗುಣ

50) 29ಡಿಸೆಂಬರ್ 2017 : ಜಯಪ್ರಕಾಶ್ ಶೆಟ್ಟಿ

ಡಿಸೆಂಬರ್ ೩೦ ಮತ್ತು ೩೧ ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ.

51) 01ಜನವರಿ 2018 :ಐಶ್ವರ್ಯ ಎ.ಎನ್

52) 02ಜನವರಿ 2018 :ಶ್ರೀಧರ್ ಆರ್

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...