ವಿಜಯಪುರದಲ್ಲಿ ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಹಾಕಿದ ಸುದೀಪ್…!

Date:

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ್ದಾರೆ…! ಅದೂ ವಿಜಯಪುರದಲ್ಲಿ…!


ಸುದೀಪ್‍ಗೇಕೆ ಈಗ ಕ್ಯಾಸ್ಟ್ ಸರ್ಟಿಫಿಕೇಟ್ ಬೇಕು…? ಅಷ್ಟಕ್ಕೂ ವಿಜಯಪುರದಲ್ಲಿ ಸುದೀಪ್ ಅರ್ಜಿ ಹಾಕಲು ಕಾರಣವೇನು ಅಂತ ಯೋಚಿಸ್ತಿದ್ದೀರ..? ಇದು ಸುದೀಪ್ ಗೂ ಗೊತ್ತಿಲ್ಲ. ಹಾಗಾದ್ರೆ…?


ನಾಲತವಾಡ ಹೋಬಳಿಯ ವೀರೇಶ ನಗರದ ಸಿದ್ದಲಿಂಗಪ್ಪ ಕೋಳೂರ ಹೆಸರಲ್ಲಿ ಅರ್ಜಿ ಸಲ್ಲಿಕೆ ಆಗಿದ್ದು, ಸುದೀಪ್ ಫೋಟೋ ಬಳಸಲಾಗಿದೆ…!


ಸಿದ್ದಲಿಂಗಪ್ಪ ಕೋಳೂರ ನಾಗಬೇನಾಳದಲ್ಲಿ ಹೊಸದಾಗಿ ಸಾಮಾನ್ಯ ಸೇವಾಕೇಂದ್ರ ಆರಂಭಿಸಿದ್ದಾರೆ. ತಮ್ಮ ಜಾತಿ ಪ್ರಮಾಣ ಪತ್ರಕ್ಕಾಗಿ ತಾವೇ ಅರ್ಜಿ ಸಿದ್ಧಪಡಿಸಿ, ಬೇಕಾದ ನಮೂನೆಯಲ್ಲಿ ಜಾತಿ ಪ್ರಮಾಣ ಪತ್ರ ರೆಡಿ ಮಾಡಿದ್ದಾರೆ. ಪ್ರಾಯೋಗಿಕವಾಗಿ ಅರ್ಜಿ ರೆಡಿಮಾಡುವಾಗ ಕಿಚ್ಚ ಸುದೀಪ್ ಅವರ ಫೋಟೋವನ್ನು ಬಳಸಿಕೊಂಡಿದ್ದರು. ನಂತರ ತಮ್ಮ ಅರ್ಜಿಯನ್ನು ಆನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡುವಾಗ ಫೋಟೋ ಬದಲಿಸುವುದನ್ನು ಮರೆತಿದ್ದಾರೆ…! ಸುದೀಪ್ ಫೋಟೋ ಇರೋ ಅರ್ಜಿ ಆನ್‍ಲೈನ್‍ನಲ್ಲಿ ನಾಡಕಚೇರಿಗೆ ರವಾನೆಯಾಗಿದೆ..!

ನಿನ್ನೆ ಉಪತಹಸೀಲ್ದಾರ್ ಅರ್ಜಿಯನ್ನು ನೋಡಿದಾಗ ದಂಗಾಗಿದ್ದಾರೆ…! ಅರ್ಜಿಯನ್ನು ತಿರಸ್ಕರಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ಇಂದಿನಿಂದ ಮಲ್ಲೇಶ್ವರಂನಲ್ಲಿ ಕಡಲೆಕಾಯಿ ಪರಿಷೆ

ಇಂದಿನಿಂದ ಮಲ್ಲೇಶ್ವರಂನಲ್ಲಿ ಕಡಲೆಕಾಯಿ ಪರಿಷೆ ಬೆಂಗಳೂರು: ಐತಿಹಾಸಿಕ ಮಲ್ಲೇಶ್ವರಂ ಕಡಲೆಕಾಯಿ ಪರಿಷೆ ಇಂದು...

ಸಿಮೆಂಟ್ ಮಿಕ್ಸರ್ ಲಾರಿ ಅವಾಂತರಕ್ಕೆ ಪುಟ್ಟ ಬಾಲಕ ಬಲಿ!

ಸಿಮೆಂಟ್ ಮಿಕ್ಸರ್ ಲಾರಿ ಅವಾಂತರಕ್ಕೆ ಪುಟ್ಟ ಬಾಲಕ ಬಲಿ! ಬೆಂಗಳೂರು: ಸಿಮೆಂಟ್ ಮಿಕ್ಸರ್...

ಕಿವಿ ಹಣ್ಣಿನ ಪ್ರಯೋಜನಗಳ ಜೊತೆಗೆ ಎಚ್ಚರಿಕೆ: ಅತಿಯಾಗಿ ತಿಂದರೆ ಹಾನಿಯೇ ಹೆಚ್ಚು!

ಕಿವಿ ಹಣ್ಣಿನ ಪ್ರಯೋಜನಗಳ ಜೊತೆಗೆ ಎಚ್ಚರಿಕೆ: ಅತಿಯಾಗಿ ತಿಂದರೆ ಹಾನಿಯೇ ಹೆಚ್ಚು! ಕಿವಿ...

ರೈತರ ಬೇಡಿಕೆಗೆ ಮಣಿದ ಸರ್ಕಾರ: ಕಬ್ಬು ಟನ್‌ʼಗೆ 3300 ರೂ. ಬೆಲೆ ನಿಗದಿ

ರೈತರ ಬೇಡಿಕೆಗೆ ಮಣಿದ ಸರ್ಕಾರ: ಕಬ್ಬು ಟನ್‌ʼಗೆ 3300 ರೂ. ಬೆಲೆ...