ಜಗದೊಡಲ ಜಯ

0
209

ಜಗದೊಡಲ ಜಯ

ಹುಟ್ಟು ಸಾವಿನ ನಟ್ಟನಡುವೆ
ಬಿಟ್ಟು ಹೋದ ಮೂಟೆ ಎರಡೇ
ಏಳು ಗೋಳು..
ಎದೆಗೆ ನಾಟಿದ ಮಾತಿನ
ಈಟಿ ಏಟಿಗೆ ಪಾಠ ಕಲಿಸಿದ
ನೋಟವೊಂದೆಯೇ ನಗುವು.
ಜಗವು ಜೇನಾಗಿ ಅದರೊಳಗಿನ
ಹುಳುವು ನೋವಾಗಿ
ಹಗೆಯ ಸಾಧಿಸುತಿಹುದು
ಹೂವ ಮನಸಿನ ಶಿವನ ನೆನೆದು
ಕಲ್ಲನೆಸೆದವರ ಮನೆಗೆ ಹೂವ ತಂದಿಟ್ಟು
ಮುಗುಳ್ನಗುವ ಕಾವ್ಯದತ್ತನ
ಎದೆಯೊಳು ಹಾಲಿಹುದು
ವಿಷವ ನುಂಗಿದ ನೋವಿಹುದು
ಆದರೇನು ಗುರಿಯ ಗರಿಯಲಿ
ಬರೆಯು ಮೈಮನಸಲಿ ಸೆರೆಯಾಗಿ
ಸುಲಿದ ಚರ್ಮವು ಬದುಕಿನ
ಕಾಲುದಾರಿಯ ಚಪ್ಪಲಿಗಳಾದವು
ನೋವನೆದುರಿಸುವ ಬತ್ತಳಿಕೆಗಳಾದವು.

?ದತ್ತರಾಜ್ ಪಡುಕೋಣೆ?

LEAVE A REPLY

Please enter your comment!
Please enter your name here