ಚಿಕ್ಕಂದಿನಲ್ಲೇ ಆ್ಯಂಕರ್ ಆಗೋ ಕನಸು ಕಂಡಿದ್ರು ದಿವ್ಯಶ್ರೀ…!

Date:

ದಿವ್ಯಶ್ರೀ, ಕನ್ನಡದ ಜನಪ್ರಿಯ ನಿರೂಪಕರಲ್ಲೊಬ್ಬರು. ಯಾವ ಸ್ಟಾರ್ ನಟಿಯರಿಗೇನೂ ಕಡಿಮೆ ಇಲ್ಲ ಎಂಬಂತೆ ತನ್ನದೇ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿರೋ ಜನಮೆಚ್ಚಿದ ಆ್ಯಂಕರ್. ಇವರು ಚಿಕ್ಕಂದಿನಲ್ಲೇ ನ್ಯೂಸ್ ಆ್ಯಂಕರ್ ಆಗ್ಬೇಕು ಅಂತ ಕನಸುಕಂಡವರು. ತನ್ನ ಗುರಿಯನ್ನು ಬೆನ್ನತ್ತಿ ಕೊನೆಗೂ ಅಂದುಕೊಂಡಿದ್ದನ್ನು ಸಾಧಿಸಿದ ಹಳ್ಳಿ ಹುಡ್ಗಿ…!


ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕು ಕೇಂದ್ರದಿಂದ 17 ಕಿಮೀ ದೂರದಲ್ಲಿದಲ್ಲಿರುವ ಕುಗ್ರಾಮ ಮಂಚಳ್ಳಿ ದಿವ್ಯಶ್ರೀ ಅವರ ಹುಟ್ಟೂರು. ತಂದೆ ತ್ಯಾಗರಾಜ್, ತಾಯಿ ಹರಿಣಾಕ್ಷಿ, ತಮ್ಮ ದರ್ಶನ್,  ಮಗ ಸಮೃದ್ಧ ಸೂರ್ಯ.


ದಟ್ಟ ಕಾಡಿನ ನಡುವೆ ಇರೋ ಒಂದು ಪುಟ್ಟ ಊರು ಮಂಚಳ್ಳಿ. ಹಳ್ಳಿ ಅಂದ್ರೆ ಬಿಡಿಸಿ ಹೇಳಬೇಕೆ…? ಕೃಷಿ/ ಹೈನುಗಾರಿಕೆ ಕುಟುಂಬಕ್ಕೆ ಆಧಾರ. ಊರಲ್ಲಿ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ಕೊಡಿಸೋಕೆ ಆಗಲ್ಲ ಅಂತ ತಂದೆ ತಾಲೂಕು ಕೇಂದ್ರ ಹಾಗೂ ಹತ್ತಿರದ ಪಟ್ಟಣವಾದ (17 ಕಿಮೀ…! ಸಕಲೇಶಪುರದಲ್ಲಿ ವಿದ್ಯಾಭ್ಯಾಸ ಮಾಡಿಸಲು ಮುಂದಾದ್ರು.

ದಿವ್ಯಶ್ರೀ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸೆಂಟ್ ಜೋಸೆಫ್ ಶಾಲೆಯಲ್ಲಿ ಮಾಡಿದ್ರು. ಬಳಿಕ ತುಮಕೂರಿನ ಸಿದ್ಧಗಂಗಾ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ, ಉಜಿರೆಯ ಎಸ್‍ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಪದವಿ ಪೂರೈಸಿದ್ರು. ವೃತ್ತಿ ಜೀವನ ಆರಂಭಿಸಿದ ಬಳಿಕ ಮೈಸೂರು ಮುಕ್ತ ವಿವಿಯಿಂದ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯನ್ನು ಮಾಡಿದ್ರು.


ದಿವ್ಯಶ್ರೀ ಅವರಿಗೆ ಹತ್ತರಲ್ಲಿ ಒಬ್ಬರಾಗಿರೋದು ಇಷ್ಟವಿಲ್ಲ. ಚಿಕ್ಕಂದಿನಿಂದಲೂ ಎಲ್ಲರಿಗಿಂತ ಡಿಫ್ರೆಂಟ್ ಆಗಿ ಗುರುತಿಸಿಕೊಳ್ಳೋ ಆಸೆ. ಶಾಲಾ ದಿನಗಳಲ್ಲಿಯೇ ಪತ್ರಿಕೆ, ನಿಯತಕಾಲಿಕೆಗಳನ್ನು ಆಸಕ್ತಿಯಿಂದ ಓದ್ತಿದ್ರು. ಒಂದು ದಿನ ತರಂಗದಲ್ಲಿ ಎಸ್‍ಡಿಎಂ ಕಾಲೇಜು ಬಗ್ಗೆ ಬಂದಿದ್ದ ಲೇಖನವನ್ನು ಓದಿದ್ರು. ಅಲ್ಲಿ ಪತ್ರಿಕೋದ್ಯಮದ ಬಗ್ಗೆ ಇತ್ತು.


ಪತ್ರಿಕೋದ್ಯಮ ಅಂದ್ರೆ ಏನೋ ವಿಶೇಷ ಅನಿಸ್ತು. ಈ ಕೋರ್ಸ್ ಅನ್ನು ಓದಿದ್ರೆ ಆ್ಯಂಕರ್ ಆಗ್ಬಹುದು ಅಂತ ತಿಳಿದುಕೊಂಡ್ರು…! ಅವತ್ತೇ ತಾನೂ ಕೂಡ ನಿರೂಪಕಿ ಆಗ್ಬೇಕು, ಪತ್ರಕರ್ತೆ ಆಗ್ಬೇಕು ಅಂತ ಡಿಸೈಡ್ ಮಾಡಿದ್ರು…!


ಪದವಿ ದಿನಗಳಲ್ಲಿಯೇ ಪ್ರಚಲಿತ ವಿದ್ಯಮಾನಗಳ ಬಗ್ಗೆ, ಮಹಿಳೆಯರ ಬಗ್ಗೆ ಲೇಖನಗಳನ್ನು ಬರೆಯುತ್ತಿದ್ದರು. ‘ವಿಜಯ ಕರ್ನಾಟಕ’, ‘ಕನ್ನಡ ಪ್ರಭ’, ‘ಸಂಯುಕ್ತ ಕರ್ನಾಟಕ’, ‘ಹೊಸದಿಗಂತ’ ದಿನಪತ್ರಿಕೆಗಳಲ್ಲಿ ಹತ್ತಾರು ಲೇಖನಗಳು ಪ್ರಕಟವಾಗಿದ್ದವು. ಡಿಗ್ರಿ ಮುಗಿಯುತ್ತಿದ್ದಂತೆ ‘ಉದಯ ಟಿವಿ’, ‘ಸುವರ್ಣ’ ಮತ್ತು ‘ಟಿವಿ9’ನಲ್ಲಿ ಇಂಟರ್ ವ್ಯೂ ಅಟೆಂಡ್ ಮಾಡಿದ ದಿವ್ಯ ಅವರಿಗೆ ಮೂರೂ ಚಾನಲ್ ನಲ್ಲೂ ಕೆಲಸ ಸಿಕ್ತು…! ಆದ್ರೆ ಆಯ್ಕೆ ಮಾಡಿಕೊಂಡಿದ್ದು ‘ಉದಯ’ ಚಾನಲನ್ನು .


1 ವರ್ಷದ ನಂತರ, ಅಂದ್ರೆ 2010ರಲ್ಲಿ ಸುವರ್ಣ ಬಳಗ ಸೇರಿದ್ರು. ಇಲ್ಲಿ ಸಿನಿಮಾ ಹಂಗಾಮ, 9ಪಿಎಂ ಪ್ರೈಂ ನ್ಯೂಸ್, ‘ದುನಿಯಾ’ ಸೇರಿದಂತೆ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ನಡೆಸಿಕೊಟ್ರು. ಪ್ರಚಲಿತ ವಿದ್ಯಮಾನ, ಸಿನಿಮಾ ಡಿಸ್ಕಷನ್‍ಗಳಲ್ಲಿ ದಿವ್ಯ ಇರ್ತಿದ್ರು.


2013ರಲ್ಲಿ ಟಿವಿ9 ಪ್ರವೇಶ. ಇಲ್ಲಿ ಹೆಚ್ಚಾಗಿ ಸಿನಿಮಾ ಪ್ರೋಗ್ರಾಂ ಹಾಗೂ ನ್ಯೂಸ್ ಆ್ಯಂಕರಿಂಗ್ ನಡೆಸಿಕೊಡ್ತಿದ್ರು. ಒಂದು ವರ್ಷದ ಬಳಿಕ 2014ರಲ್ಲಿ ಕಸ್ತೂರಿಯತ್ತ ಜಾರಿದ್ರು. ಇಲ್ಲಿ ರಾಜಕೀಯ, ಸಿನಿಮಾ, ಪ್ರಚಲಿತ ವಿದ್ಯಮಾನಗಳು ಸೇರಿದಂತೆ ಎಲ್ಲಾ ರೀತಿಯ ಡಿಸ್ಕಷನ್, ಪ್ರೋಗ್ರಾಂ ಗಳನ್ನು ನಡೆಸಿಕೊಟ್ರು.


2015ರಲ್ಲಿ ಮಗ ಹುಟ್ಟಿದ್ದರಿಂದ 1 ವರ್ಷ ಬ್ರೇಕ್ ತಗೊಂಡು 2016ರಲ್ಲಿ ‘ಸರಳ ಜೀವನ’ಕ್ಕೆ ಆ್ಯಂಕರ್ ಚೀಫ್ ಆಗಿ ಕಾಲಿಟ್ಟರು. ‘ಅಂತಿಮ ದಿನಗಳು’, ‘ವೈಡ್ ಆ್ಯಂಗಲ್’ ಎಂಬ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ‘ಪುಣ್ಯ ಕ್ಷೇತ್ರ’ ಕಾರ್ಯಕ್ರಮ ನಡೆಸಿಕೊಡ್ತಿರೋದು ದಿವ್ಯಶ್ರೀ ಅವರೇ. ಇದು ಇವರ ಸಿಗ್ನೇಚರ್ ಪ್ರೋಗ್ರಾಂ.


ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಎಲ್ಲಾ ವಯೋಮಾನದವ್ರು ಇಷ್ಟಪಡೋ ಕಾರ್ಯಕ್ರಮ ‘ಅಜ್ಜಿ ಹೇಳಿದ ಕಥೆ’… ಈ ಕಥೆಯಲ್ಲಿ ಅಜ್ಜಿ ದನಿಯಲ್ಲಿ ತೆರೆಮರೆಯಲ್ಲಿ ಮಾತಾಡೋದು ಇದೇ ದಿವ್ಯಶ್ರೀ.


ಇವರಿಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫಾಲೋವರ್ಸ್ ಇದ್ದಾರೆ. ಅದರಿಂದಾಚೆಗೂ ಅಪಾರ ಅಭಿಮಾನಿಗಳಿದ್ದಾರೆ… ಜೈಲಿನಲ್ಲೂ ಸಹ…!


ಖೈದಿಯೊಬ್ಬ ಜೈಲಿನಲ್ಲಿರುವಾಗ ದಿನಾ ಸುವರ್ಣ ಚಾನಲ್ ನೋಡ್ತಾ ಇದ್ದನಂತೆ. ದಿವ್ಯಶ್ರೀ ಅವರ ನಿರೂಪಣಾ ಶೈಲಿ, ಕನ್ನಡ ಮಾತು ಇಷ್ಟವಾಗಿ ಫ್ಯಾನ್ ಆಗಿಬಿಟ್ಟಿದ್ದ…! ಜೈಲಿನಲ್ಲಿ ಬಳಕೆಗೆ ಕೊಡುತ್ತಿದ್ದ ಸೋಪಿನಲ್ಲಿ ದಿವ್ಯ ಹೆಸರಿನ ಕಲಾಕೃತಿ ಮಾಡಿಟ್ಟುಕೊಂಡಿದ್ದ, ಬಂಧಿಯಿಂದ ಬಿಡುಗಡೆಯಾದವನೇ ಇವರನ್ನು ಭೇಟಿಯಾಗಿ ಆ ಕಲಾಕೃತಿ ನೀಡಿ ಅಭಿಮಾನ ಮೆರೆದಿದ್ದ…!

ಒಂದು ದಿನ ದಿವ್ಯಶ್ರೀ ಕಾಂಪಿಟೇಟಿವ್ ಎಕ್ಸಾಮ್ ಕಟ್ಟುವ ಸಲುವಾಗಿ ಕಾಲೇಜೊಂದಕ್ಕೆ ಹೋಗಿದ್ರು. ಅಲ್ಲಿನ ಸಿಬ್ಬಂದಿಯೊಬ್ಬನಿಗೆ ಮಾತು ಬರ್ತಿರ್ಲಿಲ್ಲ. ಅವರು ಹೆಸರು ಹೇಳುವ ಮುನ್ನವೇ ಅರ್ಜಿ/ದಾಖಲೆ ಪುಸ್ತಕದಲ್ಲಿ ದಿವ್ಯಶ್ರೀ ಎಂದು ಅವರ ಹೆಸರು, ವಿವರವನ್ನು ಬರೆದಿದ್ದ…! ಅದನ್ನು ನೋಡಿದ ದಿವ್ಯಶ್ರೀ, ನಾನು ಹೆಸರೇ ಹೇಳಿಲ್ಲ, ಹೇಗೆ ಗೊತ್ತಾಯ್ತು ಎಂದು ಪ್ರಶ್ನಿಸಿದಾಗ, ಆತ ಸನ್ನೆ ಹಾಗೂ ಬರವಣಿಗೆ ಮುಖೇನ ಸುವರ್ಣ ಚಾನಲ್‍ನಲ್ಲಿ ನಿಮ್ಮನ್ನು ನೋಡ್ತಿರ್ತೀನಿ ಅಂದಿದ್ದ…!


ಒಮ್ಮೆ ನ್ಯೂಸ್ ಓದುವಾಗ ಗಂಟಲು ಕಿರಿಕಿರಿ, ಕೆಮ್ಮಿನ ಸಮಸ್ಯೆ ಇತ್ತು. ಅದನ್ನು ಗಮನಿಸಿದ ಅಭಿಮಾನಿಯೊಬ್ಬರು ಇವರ ಹೆಸರಿಗೆ, ಸುವರ್ಣ ಆಫೀಸಿಗೆ ಸಿರಪ್ ಕಳುಹಿಸಿಕೊಟ್ಟಿದ್ದರು…! ಹೀಗೆ ದಿವ್ಯಶ್ರೀ ಅಭಿಮಾನಿಗಳು ಎಲ್ಲೆಡೆ ಇದ್ದಾರೆ. ಕನ್ನಡಿಗರ ಮನಗೆದಿದ್ದಾರೆ.

ಸಿನಿಮಾ, ಧಾರವಾಹಿ ಹಾಗೂ ಜಾಹಿರಾತುಗಳಲ್ಲಿ ಸಾಕಷ್ಟು ಅವಕಾಶ ಸಿಕ್ಕಿದ್ದರೂ ಪತ್ರಿಕೋದ್ಯಮದ ಮೇಲಿನ ವಿಶ್ವಾಸದಿಂದ ಪತ್ರಕರ್ತೆಯಾಗಿಯೇ ಮುಂದುವರೆದಿದ್ದಾರೆ. ಬಿಡುವು ಮಾಡಿಕೊಂಡು ‘ಆಟ’ ಸಿನಿಮಾ ಸೇರಿದಂತೆ ಕೆಲವೊಂದು ಸಿನಿಮಾ ಮತ್ತು ಧಾರವಾಹಿಗಳಲ್ಲಿ ಅಭಿನಯಿಸಿದ್ದಾರೆ.


ವರ್ಷದ ಮಹಿಳೆ-2013, ಕದಂಬ, ಮಾಧ್ಯಮ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಮೀಕ್ಷೆಯೊಂದರಲ್ಲಿ ಟಾಪ್ 25 ಜರ್ನಲಿಸ್ಟ್ ಆಫ್ ಕರ್ನಾಟಕದಲ್ಲಿ 10ನೇ ಸ್ಥಾನ ಪಡೆದಿದ್ದಾರೆ.


ಗೋಲ್ಡನ್ ಸ್ಟಾರ್ ಗಣೇಶ್ ನಡೆಸಿಕೊಡೋ ‘ಸೂಪರ್ ಮಿನಿಟ್’ ನಲ್ಲಿ 10 ಸೆಕೆಂಡ್ ನಲ್ಲಿ ಟಾಸ್ಕ್ ಮುಗಿಸಿ ‘ಮಿಂಚಿನ ಆಟಗಾರ್ತಿ’ ಪ್ರಶಸ್ತಿಗೆ ಪಾತ್ರರಾಗಿದ್ರು. ‘ಚಿನ್ನದ ಬೇಟೆ’ ರಿಯಾಲಿಟಿ ಶೋಗೆ ಗೆಸ್ಟ್ ಆಗಿ ಹೋಗಿದ್ರು.


ಹಾಡು ಅಂದ್ರೆ ಇಷ್ಟ… ಆಗಾಗಾ ಇಷ್ಟದ ಹಾಡುಗಳನ್ನು ಗುನುಗುತ್ತಿರುತ್ತಾರೆ. ಶಾಲಾ-ಕಾಲೇಜು ದಿನಗಳಲ್ಲಿ ಸಾಕಷ್ಟು ಬಹುಮಾನಗಳನ್ನು ಪಡೆದಿದ್ದಾರೆ. ‘ಗೂಗಲ್’ ಇವರ ಬೆಸ್ಟ್ ಫ್ರೆಂಡ್. ಹೊಸತನ್ನು ಹುಡುಕುತ್ತಿರುತ್ತಾರೆ. ಹೊಸ ತಿನಿಸುಗಳ ಪ್ರಯೋಗ ಮಾಡ್ತಾರೆ. ಕಷ್ಟದಲ್ಲಿರೋರಿಗೆ ಕೈಲಾದ ಸಹಾಯ ಮಾಡೋದ್ರಲ್ಲಿ ತೃಪ್ತಿ, ನೆಮ್ಮದಿ ಕಾಣ್ತಾರೆ.

ಚಿಕ್ಕವಯಸ್ಸಿನಿಂದಲೂ ಧ್ವಜಾರೋಹಣ ಮಾಡಬೇಕು ಅನ್ನೋ ಕನಸಿತ್ತು. ಸರ್ಕಾರಿ ಶಾಲೆಯೊಂದರಲ್ಲಿ ಧ್ವಜಾರೋಹಣ ಮಾಡಿದ್ದು ತನ್ನಪಾಲಿಗೆ ಒಲಿದ ಸುವರ್ಣಾವಕಾಶ ಎಂಬ ಖುಷಿ ದಿವ್ಯಶ್ರೀ ಅವರದ್ದು.ವೃತ್ತಿ ವಿಚಾರದಲ್ಲಿ ತಾನು ಸಂತೃಪ್ತಳು, ವೃತ್ತಿ ಬಗ್ಗೆ ನಾ ಕಂಡ ಕನಸುಗಳೆಲ್ಲವೂ ಸಾಕಾರಗೊಂಡಿವೆ ಎಂದು ಹೇಳುವ ದಿವ್ಯ, ‘ಜಯ ಪ್ರಕಾಶ್ ಶೆಟ್ಟಿ, ಜಯಶ್ರೀ ಶೇಖರ್, ಎಚ್.ಆರ್ ರಂಗನಾಥ್, ರಂಗನಾಥ್ ಭಾರಧ್ವಜ್, ಹಮೀದ್ ಪಾಳ್ಯ, ಡಾ. ಚಂದ್ರಶೇಖರ ಗುರೂಜಿ, ಶಶಿಧರ್ ಭಟ್, ವಿಶ್ವೇಶ್ವರ ಭಟ್ ನನ್ನ ವೃತ್ತಿ ಮಾರ್ಗದರ್ಶಕರು. ಇವರುಗಳ ಪ್ರೋತ್ಸಾಹವನ್ನು ಯಾವತ್ತಿಗೂ ಮರೆಯಲ್ಲ’ ಎಂದು ಹೇಳುತ್ತಾರೆ.


-ಶಶಿಧರ್ ಎಸ್ ದೋಣಿಹಕ್ಲು

ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.

1) 10 ನವೆಂಬರ್ 2017 : ಈಶ್ವರ್ ದೈತೋಟ

2)11 ನವೆಂಬರ್ 2017 : ಭಾವನ

3)12  ನವೆಂಬರ್ 2017 : ಜಯಶ್ರೀ ಶೇಖರ್

4)13 ನವೆಂಬರ್ 2017 : ಶೇಷಕೃಷ್ಣ

5)14 ನವೆಂಬರ್ 2017 : ಶ್ರೀಧರ್ ಶರ್ಮಾ

6)15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ

7)16 ನವೆಂಬರ್ 2017 : ಅರವಿಂದ ಸೇತುರಾವ್

8)17 ನವೆಂಬರ್ 2017 : ಲಿಖಿತಶ್ರೀ

9)18 ನವೆಂಬರ್ 2017 : ರಾಘವೇಂದ್ರ ಗಂಗಾವತಿ

10)19 ನವೆಂಬರ್ 2017 : ಅಪರ್ಣಾ

11)20 ನವೆಂಬರ್ 2017 :  ಅಮರ್ ಪ್ರಸಾದ್

12)21 ನವೆಂಬರ್ 2017 :   ಸೌಮ್ಯ ಮಳಲಿ

13)22 ನವೆಂಬರ್ 2017 :  ಅರುಣ್ ಬಡಿಗೇರ್

14)23ನವೆಂಬರ್ 2017 :  ರಾಘವ ಸೂರ್ಯ

15)24ನವೆಂಬರ್ 2017 :  ಶ್ರೀಲಕ್ಷ್ಮಿ

16)25ನವೆಂಬರ್ 2017 :  ಶಿಲ್ಪ ಕಿರಣ್

17)26ನವೆಂಬರ್ 2017 :  ಸಮೀವುಲ್ಲಾ

18)27ನವೆಂಬರ್ 2017 :  ರಮಾಕಾಂತ್ ಆರ್ಯನ್

19)28ನವೆಂಬರ್ 2017 :  ಮಾಲ್ತೇಶ್

20)29/30ನವೆಂಬರ್ 2017 :  ಶ್ವೇತಾ ಆಚಾರ್ಯ  [ನಿನ್ನೆ (29ರಂದು ) ತಾಂತ್ರಿಕ ಸಮಸ್ಯೆಯಿಂದ ‘ಈ ದಿನದ ನಿರೂಪಕರು’- ನಿರೂಪಕರ ಪರಿಚಯ ಲೇಖನ ಪ್ರಕಟಿಸಿರಲಿಲ್ಲ. ಆದ್ದರಿಂದ ಇಂದು ಪ್ರಕಟಿಸಿದ್ದೀವಿ.  ಈ ದಿನದ (30 ನವೆಂಬರ್) ಲೇಖನ ಸಂಜೆ ಪ್ರಕಟಿಸಲಾಗುವುದು.) ]

21)30ನವೆಂಬರ್ 2017 :  ಸುರೇಶ್ ಬಾಬು 

22)01 ಡಿಸೆಂಬರ್ 2017 :  ಮಧು ಕೃಷ್ಣ (ಡಿಸೆಂಬರ್ ೨ ರಂದು ಬೆಳಗ್ಗೆ ಪ್ರಕಟ)

23)02 ಡಿಸೆಂಬರ್ 2017 : ಶಶಿಧರ್ ಭಟ್

24)03 ಡಿಸೆಂಬರ್ 2017 : ಚನ್ನವೀರ ಸಗರನಾಳ್

25)04 ಡಿಸೆಂಬರ್ 2017 : ಗೌರೀಶ್ ಅಕ್ಕಿ

26)05 ಡಿಸೆಂಬರ್ 2017 : ಶ್ರುತಿ ಜೈನ್

27)06ಡಿಸೆಂಬರ್ 2017 : ಅವಿನಾಶ್ ಯುವನ್  

28)07ಡಿಸೆಂಬರ್ 2017 : ಶಿಲ್ಪ ಕೆ.ಎನ್

29)08ಡಿಸೆಂಬರ್ 2017 : ಶಮೀರಾ ಬೆಳುವಾಯಿ

30)09ಡಿಸೆಂಬರ್ 2017 : ಸಂದೀಪ್ ಕುಮಾರ್

31)10ಡಿಸೆಂಬರ್ 2017 : ಪ್ರತಿಮಾ ಭಟ್

32)11ಡಿಸೆಂಬರ್ 2017 :  ಹರೀಶ್ ಪುತ್ರನ್

33)12ಡಿಸೆಂಬರ್ 2017 : ನಿಶಾ ಶೆಟ್ಟಿ

34)13ಡಿಸೆಂಬರ್ 2017 : ಪೂರ್ಣಿಮ ಎನ್.ಡಿ

35)14ಡಿಸೆಂಬರ್ 2017 :  ಹಬೀಬ್ ದಂಡಿ

36)15ಡಿಸೆಂಬರ್ 2017 : ಪ್ರಕಾಶ್ ಕುಮಾರ್ ಸಿ.ಎನ್

37)16ಡಿಸೆಂಬರ್ 2017 :  ಜ್ಯೋತಿ ಇರ್ವತ್ತೂರು

38)17ಡಿಸೆಂಬರ್ 2017 :  ಶಿಲ್ಪ ಐಯ್ಯರ್ 

39)18ಡಿಸೆಂಬರ್ 2017 :  ನಾಝಿಯಾ ಕೌಸರ್

40) 19ಡಿಸೆಂಬರ್ 2017 :  ಶ್ರುತಿಗೌಡ

41) 20ಡಿಸೆಂಬರ್ 2017 :  ಎಂ.ಆರ್ ಶಿವಪ್ರಸಾದ್

42) 21ಡಿಸೆಂಬರ್ 2017 :  ವೆಂಕಟೇಶ್ ಉಳ್ತೂರು (ವೆಂಕಟೇಶ್ ಅಡಿಗ)

43) 22ಡಿಸೆಂಬರ್ 2017 :  ಶರ್ಮಿತಾ ಶೆಟ್ಟಿ

44) 23ಡಿಸೆಂಬರ್ 2017 :  ಕಾವ್ಯ

45) 24ಡಿಸೆಂಬರ್ 2017 :  ಹರ್ಷವರ್ಧನ್ ಬ್ಯಾಡನೂರು

46) 25ಡಿಸೆಂಬರ್ 2017 : ಸುಧನ್ವ ಖರೆ

47) 26ಡಿಸೆಂಬರ್ 2017 : ಸೌಜನ್ಯ ಕೀರ್ತಿ

48) 27ಡಿಸೆಂಬರ್ 2017 :ವಾಣಿ ಕೌಶಿಕ್

49) 28ಡಿಸೆಂಬರ್ 2017 : ಸುಗುಣ

50) 29ಡಿಸೆಂಬರ್ 2017 : ಜಯಪ್ರಕಾಶ್ ಶೆಟ್ಟಿ

ಡಿಸೆಂಬರ್ ೩೦ ಮತ್ತು ೩೧ ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ.

51) 01ಜನವರಿ 2018 :ಐಶ್ವರ್ಯ ಎ.ಎನ್

52) 02ಜನವರಿ 2018 :ಶ್ರೀಧರ್ ಆರ್

53) 03ಜನವರಿ 2018 : ದಿವ್ಯಶ್ರೀ

 

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...