ಆರ್‍ಬಿಐ ಶೀಘ್ರದಲ್ಲೇ 10 ರೂ ಮುಖಬೆಲೆಯ ನೋಟನ್ನು ಬಿಡುಗಡೆಗೊಳಿಸಲಿದೆ ಎಂದು ತಿಳಿದು ಬಂದಿದೆ.
ಕೇಂದ್ರ ಸರ್ಕಾರದಿಂದ ಕಳೆದವಾರ 10 ರೂ ನೋಟು ಮುದ್ರಣಕ್ಕೆ ಅನುಮತಿ ಪಡೆದಿದ್ದು, ಈಗಾಗಲೇ ಸುಮಾರು 100 ಕೋಟಿ ರೂ ನೋಟುಗಳನ್ನು ಮುದ್ರಿಸಿದೆ ಎಂದು ಹೇಳಲಾಗ್ತಿದೆ.
ಹೊಸ ನೋಟು ಚಾಕಲೇಟ್ ಬಣ್ಣದಲ್ಲಿದ್ದು, ಗಾಂಧೀಜಿ ಭಾವಚಿತ್ರ ಹಾಗೂ ಒಡಿಶಾದ ಕೊನಾರ್ಕ್ ಸೂರ್ಯ ದೇವಾಲಯದ ಚಿತ್ರ ಇರಲಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
200 ರೂ ನೋಟಿನಲ್ಲಿ ಸಾಚಿ ಸ್ತೂಪವನ್ನು, 50 ರೂ ಮುಖಬೆಲೆಯ ನೋಟಿನಲ್ಲಿ ಹಂಪಿಯ ಕಲ್ಲಿನ ರಥದ ಚಿತ್ರವನ್ನು ಮುದ್ರಸಲಾಗಿದೆ. ಈ ನೋಟುಗಳು ಈಗಾಗಲೇ ನಿಮ್ಮ ಕೈ ಸೇರಿವೆ.