“ನಾನು ದೀಪಕ್ ಹತ್ಯೆಯನ್ನೂ ಖಂಡಿಸ್ತೀನಿ. ಆದ್ರೆ, ಯಾರು ಇದನ್ನು ಕೇಳಿಸಿಕೊಳ್ತಿಲ್ಲ…’’!
ಹೀಗಂತ ಹೇಳಿದ್ದು ಬಹುಭಾಷ ನಟ ಪ್ರಕಾಶ್ ರೈ, ನಾನು ಯಾವುದಕ್ಕೂ ಸೀಮಿತನಲ್ಲ. ನಾನು ಮೊದಲು ಮನುಷ್ಯ. ದೀಪಕ್ ಹತ್ಯೆ ಸಹ ಖಂಡಿನೀಯ. ನಾನು ಇದನ್ನು ಖಂಡಿಸ್ತೀನಿ. ಧರ್ಮ, ಪಂಥದ ಹಿನ್ನೆಲೆಯಿಂದ ನೋಡುವ ಬದಲು ಆ ಒಬ್ಬ ಮನುಷ್ಯ ಎಂಬ ದೃಷ್ಟಿಯಲ್ಲಿ ನೋಡಬೇಕು ಎಂದು ಹೇಳಿದ್ದಾರೆ.
ಒಳ್ಳೆಯ ಕೆಲಸ ಯಾರೇ ಮಾಡಲಿ ಅವರ ಜೊತೆ ನಾನಿರುತ್ತೇನೆ. ಮನಷ್ಯರು ಮನಷ್ಯರ ಜೊತೆ ಇರಬೇಕಲ್ಲವೇ? ಎಂದು ಹೇಳಿದ್ರು. ಬಜರಂಗದಳದವರು ರಕ್ತದಾನ ಶಿಬಿರ ನಡೆಸಿದರೆ ಹೋಗುತ್ತೀರ ಎಂದು ಕೇಳಿದಾಗ, ಖಂಡಿತಾ ಹೋಗುತ್ತೇನೆ. ಅವರಿಗೆ ಕರೆಯಲು ಹೇಳಿ ಎಂದರು.
ಸೈದ್ಧಾಂತಿಕ ವಿಚಾರಗಳು ಏನೇ ಇರಲಿ, ಒಳ್ಳೆಯ ಕೆಲಸ ಯಾರು ಮಾಡಿದ್ರು ಜೊತೆಗಿರಿತ್ತೇನೆ. ಬಿಜೆಪಿ, ಆರ್‍ಎಸ್‍ಎಸ್, ಬಜರಂಗದಳದ ಕಾರ್ಯಕ್ರಮಗಳಿಗೂ ಹೋಗುತ್ತೇನೆ ಎಂದರು.
(ಸುವರ್ಣ ನ್ಯೂಸ್- ಜಯಪ್ರಕಾಶ್ ಶೆಟ್ಟಿಯವರು ದೂರವಾಣಿ ಮೂಲಕ ನಡೆಸಿದ ಸಂದರ್ಶನದಲ್ಲಿ ಪ್ರಕಾಶ್ ರೈ ಹೇಳಿದ್ದು)