ವಿಶ್ವಕ್ರಿಕೆಟ್ ಕಂಡ ದಿಗ್ಗಜ ಕ್ರಿಕೆಟಿಗ, ಶ್ರೀಲಂಕಾ ತಂಡದ ಮಾಜಿ ಆಟಗಾರ ಸನತ್ ಜಯಸೂರ್ಯ ಇಂದು ನಡೆಯಲಾಗದ ಪರಿಸ್ಥಿತಿಯಲ್ಲಿದ್ದಾರೆ. ಆಧಾರವಿಲ್ಲದೆ (ಊರುಗೋಲುಗಳಿಲ್ಲದೆ) ಇವರಿಗೆ ನಡೆಯಲು ಅಸಾಧ್ಯ.
ಮೊಣಕಾಲು ನೋವಿನಿಂದ ಬಳಲುತ್ತಿರುವ ಇವರು ಇದೇ ತಿಂಗಳು ಶಸ್ತ್ರಚಿಕಿತ್ಸೆಯ ಸಲುವಾಗಿ ಆಸ್ಟ್ರೇಲಿಯಾದ ಮೆಲ್ಬೋರ್ನ್‍ಗೆ ಹೋಗಲಿದ್ದಾರೆ ಎಂದು ತಿಳಿದು ಬಂದಿದೆ.
ಎಡಗೈ ಬ್ಯಾಟ್ಸ್‍ಮನ್ ಜಯಸೂರ್ಯ 2011ರಲ್ಲಿ ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ್ದರು. 110 ಅಂತರಾಷ್ಟ್ರೀಯ ಟೆಸ್ಟ್ ಪಂದ್ಯಗಳಿಂದ 6973ರನ್, 445 ಏಕದಿನ ಪಂದ್ಯಗಳಿಂದ 13,430 ರನ್ ಗಳನ್ನು ದಾಖಲಿಸಿದ್ದಾರೆ. ಶ್ರೀಲಂಕಾ ಕ್ರಿಕೆಟ್ (ಎಸ್‍ಎಲ್ಸಿ) ಆಯ್ಕೆ ಸಮಿತಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.