ಕೇರಳದಿಂದ ಬೆಂಗಳೂರಿಗೆ ಕೆಲಸದ ಮೇಲೆ ಬಂದಿದ್ದ ವ್ಯಾಪಾರಿಯೊಬ್ಬರ ಕಣ್ಣಿಗೆ ಖಾರದ ಪುಡಿ ಎರಚಿ ಬರೊಬ್ಬರಿ 23 ಲಕ್ಷ ರೂಪಾಯಿಗಳನ್ನು ದರೋಡೆ ಮಾಡಿದ್ದ ಖದೀಮರನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ಪೂರ್ವವಲಯದ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ..! ಕಳ್ಳರನ್ನು ಪೊಲೀಸರು ಹಿಡಿದಿರುವುದರಲ್ಲಿ ಅಂತಹದ್ದೇನೂ ವಿಶೇಷವಿಲ್ಲ..! ನಮ್ಮ ಪೊಲೀಸರು ಎಂಥೆಂಥಾ ದೊಡ್ಡ ಕಳ್ಳರನ್ನೂ ಹಿಡಿದಿದ್ದಾರೆ..! ಆದರೆ ಈ ದರೋಡೆಕೋರರು ಸಿಕ್ಕಿಬಿದ್ದಿದ್ದು ‘ಚಪಾತಿ’ಯಿಂದ..! ಚಪಾತಿಯನ್ನು ಅರ್ಧಂಬರ್ದ ತಿಂದು ಬಿಟ್ಟಿದ್ದೇ ದರೋಡೆಕೋರರಿಗೆ ಪಜೀತಿ ಆಯ್ತು..!
ಅವರು ಕೇರಳದ ವ್ಯಾಪಾರಿ ಹನೀಫ್. ಬೆಂಗಳೂರಿನ ಹೊರಮಾವು ಸಮೀಪದ ಐಟಿಸಿ ಸಿಗರೇಟ್ ಕಂಪನಿಯಲ್ಲಿ ಸಿಗರೇಟ್ ಖರೀದಿಸಿ ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿರೋ ಅಂಗಡಿಗಳಿಗೆ ಸರಬರಾಜು ಮಾಡ್ತಾ ಇದ್ರು..! ಇವರು ಈ ಸಂಬಂಧ ವಿಜಯ್ ಏಜೆನ್ಸಿಯೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದರು. ಈ ಸಿಗರೇಟ್ ವ್ಯಾಪಾರದಲ್ಲಿ ಅನಿಲ್ ಎಂಬಾತ ಏಜೆಂಟ್ ಆಗಿದ್ದ..! ಸಿಗರೇಟ್ ಖರೀದಿ ನಂತರ ಲಾರಿಗೆ ತುಂಬಿಸಿ ಕೇರಳಕ್ಕೆ ಸಾಗಿಸುತ್ತಿದ್ದ ಅನಿಲ್ ಒಂದು ಲೋಡಿಗೆ 1,500 ರೂಗಳನ್ನು ಕಮಿಷನ್ ಪಡೆಯುತ್ತಿದ್ದ..! ಅಂತೆಯೇ ಇದೇ ನವೆಂಬರ್ 1 ರಂದು ಕೂಡ ವ್ಯಾಪಾರಿ ಹನೀಫ್ ಅವರ ಮಿತ್ರರಾದ ಶೇಕ್ ಅವರೊಡನೆ ವಿಜಯ್ ಏಜೆನ್ಸಿಗೆ ಬಂದರು..! ಬರುವ ಮೊದಲು ಯಾವಾಗಲೂ ಹೇಳುವಂತೆ ಅನಿಲ್ಗೆ ತಾನು ಬರುತ್ತಿರೋ ವಿಷಯವನ್ನು ತಿಳಿಸಿ ಬೆಂಗಳೂರಿಗೆ ಬಂದರು..!
ಅವರ ಬರುವಿಕೆಯನ್ನೇ ಎದುರು ನೋಡುತ್ತಿದ್ದ ಕಿಡಿಗೇಡಿಗಳು ಅವರ ಕಣ್ಣಿಗೆ ಖಾರದ ಪುಡಿ ಎರಚಿ ಅವರಲ್ಲಿದ್ದ 23 ಲಕ್ಷರೂಪಾಯಿಗಳನ್ನು ಲಪಟಾಯಿಸಿದರು..! ಈ ಘಟನೆಯ ಬಳಿಕ ಏಜೆಂಟ್ ಅನಿಲ್ ಜೊತೆಗೆ ಸ್ಟೇಷನ್ ಗೆ ಹೋಗಿ ಹನೀಫ್ ಪೊಲೀಸರಿಗೆ ದೂರು ನೀಡಿದರು..! ಇಲ್ಲಿನ ಪೊಲೀಸರು ಕಳ್ಳರನ್ನು ಬೇಗ ಬೇಗನೇ ಪತ್ತೆ ಮಾಡಲಾರರು.. ನೀವು ಕೇರಳಕ್ಕೆ ಹೋಗಿ ಕಂಪ್ಲೆಂಟ್ ಕೊಡಿ ಅಂತ ಅನಿಲ್ ಹನೀಫ್ರ ತಲೆ ತಿಂದರು..!
ಅನಿಲರ ವರ್ತನೆಯನ್ನು ಗಮನಿಸಿದ ಪೊಲೀಸರಿಗೆ ಅನುಮಾನ ಬಂತು..! ಆದರೂ ಸುಮ್ಮನೇ ಇದ್ದರು..! ನಂತರ ಬಾ ಊಟಕ್ಕೆ ಹೋಗೋಣ ಅಂತ ಅನಿಲನನ್ನು ಕರ್ಕೊಂಡು ಹನೀಫ್ ಹೋಟೆಲ್ಗೆ ಹೋದ್ರು..! ಆಗ ಅವರೊಡನೆ ಪೊಲೀಸರೂ ಬಂದರು..! ಸಪ್ಲೇಯರ್ ಊಟ ತಂದು ಕೊಟ್ಟ. ಊಟ ಮಾಡೋಕೆ ಶುರುಮಾಡಿ ‘ಅರ್ಧ ಚಪಾತಿ’ ತಿಂದು ಅನಿಲ್ ಗಾಬರಿ ಗಾಬರಿಯಿಂದ ಹೊರನಡೆದ…! ಇದ್ರಿಂದ ಪೊಲೀಸರಿಗೆ ಅನುಮಾನ ಮತ್ತಷ್ಟು ಜಾಸ್ತಿ ಆಯ್ತು..! ಇವನೇಕೆ ಹೀಗೆ ಆಡ್ತಾ ಇದ್ದಾನೆ ನೋಡೋಣ ಅಂತ ಅವನ ಮೊಬೈಲ್ ವಿವರಗಳನ್ನು ಪರಿಶೀಲಿಸಿದರು..! ಆಗ ಹನೀಫ್ ದುಡ್ಡು ಕಳೆದುಕೊಳ್ಳೋ ಮೊದಲು(ದರೋಡೆ ಆಗೋ ಮೊದಲು) ಮತ್ತು ಅದಾದ ನಂತರ ಅನಿಲ್ ಅವನ ಗೆಳೆಯ ಮೋಹನ್ ಜೊತೆಯಲ್ಲಿ ನಿರಂತರ ಸಂಪರ್ಕದಲ್ಲಿರೋದು ಗೊತ್ತಾಯ್ತು..! ಈ ಸಂಗತಿ ಗೊತ್ತಾಗಿದ್ದೇ ತಡ ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಿಸಿದರು..! ಆಗ …
ರೈಸ್ ಫುಲ್ಲಿಂಗ್ ನಲ್ಲಿ ಹಣವನ್ನೆಲ್ಲಾ ಕಳ್ಕೊಂಡು ಸಿಕ್ಕಾಪಟ್ಟೆ ಸಮಸ್ಯೆಗೆ ಸಿಲುಕಿದ್ದ ಅನಿಲ್ಗೆ, ಹನೀಫ್ ತಾವು ಬೆಂಗಳೂರಿಗೆ ಬರೋದು ತಿಳಿದ ತಕ್ಷಣ ಸ್ನೇಹತರನ್ನು ಕರೆದು ದರೋಡೆ ಮಾಡೋಕೆ ಪಕ್ಕಾ ಪ್ಲಾನ್ ಮಾಡಿಬಿಟ್ಟ..! ಬೆಳಿಗ್ಗೆ ಹನೀಫ್ ಬಂದೊಡನೆ ಅವರೊಡನೆ ಅನಿಲ್ ಕೂಡ ವಿಜಯ್ ಏಜೆನ್ಸಿ ಬಳಿ ಹೋದ..! ಅಷ್ಟೊತ್ತಿಗೆ ಏಜೆನ್ಸಿ ಬಾಗಿಲು ತೆರೆದಿರಲಿಲ್ಲ..! ಅದಕ್ಕಾಗಿ ಅವರು ಕಾರಲ್ಲೇ ಕುಳಿತರು..! ಆಗ ಅನಿಲ್ ನ ಪ್ಲಾನ್ ನಂತೆಯೇ ಆತನ ಸ್ನೇಹಿತರು ಹನೀಫ್ ಮತ್ತು ಅವನ ಮುಖಕ್ಕೂ ಖಾರದ ಪುಡಿ ಎರಚಿ ಹಣ ದೋಚಿದ್ದರು..! ಅನ್ನೋ ಅಂಶ ಬೆಳಕಿಗೆ ಬಂದಿದೆ..!
ಅರ್ಧ ಚಪಾತಿ ತಿಂದಿದ್ದೇ ಇಷ್ಟು ಬೇಗ ಸಿಕ್ಕಾಕಿ ಕೊಳ್ಳಲು ಕಾರಣವಾಯ್ತು..! ಕಳ್ಳರು ಯಾವತ್ತಾದ್ರೂ ಸಿಕ್ಕಿ ಬಿದ್ದೇ ಬೀಳುತ್ತಾರೆ..! ಆದರೆ ಅರ್ಧ ಚಪಾತಿ ತಿಂದು ಸಿಕ್ಕಿ ಬಿದ್ದ ದೊಡ್ಡ ದರೋಡೆಕೋರ ಈತ ಮಾತ್ರ..!
- ಶಶಿಧರ ಡಿ ಎಸ್ ದೋಣಿಹಕ್ಲು
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
ಅಭಿಷೇಕ್ ಗೆ ಗೂಗಲ್ ನೀಡುತ್ತೆ 20000000 ರೂಪಾಯಿಗಳ ಸಂಬಳ..! ಐಐಟಿ ವಿದ್ಯಾರ್ಥಿಗೆ ಕೋಟಿ ಕೋಟಿ ಸಂಬಳದ ಆಫರ್ ..!
ಅವಳಲ್ಲದೆ ಅವನನ್ನು ಬೇರೆ ಯಾರೂ ಮದುವೆ ಆಗ್ತಿರಲಿಲ್ಲ..! ಈ ಸ್ಟೋರಿ ಓದಿದ ಮೇಲೆ ಹೇಳ್ತೀರಾ, ಅವಳು ನಿಜಕ್ಕೂ ಗ್ರೇಟ್..!
ಅಮೀರ್ ಖಾನ್ ಹೇಳಿದ್ದು ಎಷ್ಟು ಸರಿ…? ಕಿರಿಕ್ ಕೀರ್ತಿ ಮಾತನಾಡಿದ್ದಾರೆ ಕೇಳಿ… ನಿಮಗೇನನ್ಸುತ್ತೋ ಹೇಳಿ..!






