ಎಸ್‍ಎಸ್‍ಎಲ್‍ಸಿ ಫೇಲಾದ್ರೂ ಜೀವನದಲ್ಲಿ ಪಾಸ್…!

Date:

ಎಸ್‍ಎಸ್‍ಎಲ್‍ಸಿ ಫೇಲ್ ಆಗಿ ಜೀವನದ ಪರೀಕ್ಷೆಯಲ್ಲಿ ಪಾಸ್ ಆದವರಿರವರು. ಅಕಸ್ಮಾತ್ ಮೊದಲ ಅಟೆಮ್ಟ್  ನಲ್ಲಿ ಎಸ್‍ಎಸ್‍ಎಲ್‍ಸಿ ಪಾಸ್ ಆಗಿದ್ದಿದ್ರೆ ಇವತ್ತು ಶಿಕ್ಷಕರಾಗಿ ಇರ್ತಿದ್ರೇನೋ…! ಆದರೆ, ಅಂದಾದ ಸೋಲು ಇಂದು ಪತ್ರಿಕೋದ್ಯಮಕ್ಕೆ ಕರೆತಂದಿದೆ. ಇದು ಪಬ್ಲಿಕ್ ಟಿವಿಯ ನಿರೂಪಕ ಮಾದೇಶ್ ಆನೇಕಲ್ ಅವರ ಜೀವನದ ಇಂಟ್ರೆಸ್ಟಿಂಗ್ ಸ್ಟೋರಿ.


ಯಸ್, ಬೆಂಗಳೂರು ನಗರ ಜಿಲ್ಲೆಯ ತಾಲೂಕು ಕೇಂದ್ರ ಆನೇಕಲ್ ನಲ್ಲಿ ಹುಟ್ಟಿದ ಮಾದೇಶ್ ಇಂದು ಮಾದೇಶ್ ಆನೇಕಲ್ ಎಂದೇ ಫೇಮಸ್ ಆಗಿದ್ದಾರೆ. ಇವರ ತಂದೆ ತಿಮ್ಮೇಗೌಡ್ರು, ತಾಯಿ ಮಧು, ಪತ್ನಿ ಸುದ್ದಿ ಟಿವಿಯ ನಿರೂಪಕಿ ಶಾಲಿನಿ ಶೆಟ್ಟಿ. ತಮ್ಮ ಸುದ್ದಿ ಟಿವಿಯಲ್ಲಿ ವೀಡಿಯೋ ಜರ್ನಲಿಸ್ಟ್. ಹೆಸರು, ಅಂಬರೀಶ್.


ಲಾರಿ ಡ್ರೈವರ್ ಆಗಿದ್ದ ತಂದೆ ತಿಮ್ಮೆಗೌಡ್ರು ಮೂಲತಃ ಶೈಕ್ಷಣಿಕ ನಗರಿ ತುಮಕೂರಿನವರು. ತುಮಕೂರಲ್ಲಿ ಬಹುತೇಕ ಪ್ರತಿ ಮನೆಯಲ್ಲೂ ಒಬ್ಬ ಟೀಚರ್ ಇರ್ತಾರೆ. ಆದ್ದರಿಂದ ತನ್ನ ಮಗ ಮಾದೇಶನನ್ನೂ ಟೀಚರ್ ಮಾಡ್ಬೇಕು ಎನ್ನೋದು ಅಪ್ಪನ ಹಿರಿಯಾಸೆಯಾಗಿತ್ತು.
ಆನೇಕಲ್ ನ ಮೈನ್ ಪ್ರೈಮರಿ ಎಂಬ ಕನ್ನಡ ಮೀಡಿಯಂ ಸ್ಕೂಲ್ ನಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಎಎಸ್‍ಬಿ ಜೂನಿಯರ್ ಕಾಲೇಜಿನಲ್ಲಿ ಮಾದೇಶ್ ಪ್ರೌಢಶಿಕ್ಷಣ ವ್ಯಾಸಂಗ ಮಾಡ್ತಾರೆ. ಓದಿನಲ್ಲಿ ತುಂಬಾ ಆಸಕ್ತಿ ಇರುತ್ತೆ. ಆದ್ರೆ, ಗಣಿತ ಅಂದ್ರೆ ಕಬ್ಬಿಣದ ಕಡಲೆ…! ಕೊನೆಗೆ ಎಸ್‍ಎಸ್‍ಎಲ್‍ಸಿಯಲ್ಲಿ ಈ ಗಣಿತವೇ ಕೈ ಕೊಡ್ತು…! ಅರ್ಥಾತ್ ಮಾದೇಶ್ ಫೇಲ್ ಆದ್ರು.


ಇದರಿಂದ ತಿಮ್ಮೆಗೌಡ್ರು ಸಿಟ್ಟಾದ್ರು. ಮುಂದಿನ ಪ್ರಯತ್ನದಲ್ಲಿ ಮಾದೇಶ್ ಪಾಸ್ ಆದರೂ ನೀನಿನ್ನೂ ಓದೋದು ಬೇಕಿಲ್ಲ ಅಂದ್ರು ಅಪ್ಪ…! ಆಗ ಅನಿವಾರ್ಯವಾಗಿ ಸೀರೆ ನೇಯಿಯುವ ಕೆಲಸಕ್ಕೆ ಸೇರ್ತಾರೆ ಮಾದೇಶ್. ಕೆಲಸ ಮಾಡ್ತಾ ಮಾಡ್ತಾನೇ ಕರೆಸ್ಪಾಂಡೆನ್ಸ್ ನಲ್ಲಿ ಪಿಯುಸಿ (ಆಟ್ರ್ಸ್) ತಗೊಂಡು ಪಾಸ್ ಮಾಡ್ತಾರೆ. ನಂತರ ತಿಮ್ಮೆಗೌಡ್ರಿಗೆ ತನ್ನ ಮಗನ ಬಗ್ಗೆ ಹೆಮ್ಮೆ ಅನಿಸುತ್ತೆ, ಖಂಡಿತಾ ಏನಾದ್ರು ಮಾಡೇ ಮಾಡ್ತಾನೆ ಅಂತ ಅರಿತು ಪದವಿ ಮಾಡುವಂತೆ ಸೂಚಿಸ್ತಾರೆ…!


ಸೀರೆ ನೇಯುವ ಕೆಲಸ ಮಾಡುವಾಗ ಬೆಳಗ್ಗೆ 5 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ದಣಿವರಿಯದೆ ಕೆಲಸ ಮಾಡಿದ ದಿನಗಳು ಮಾದೇಶ್ ಅವರಿಗೆ ಜೀವನ ಅಂದ್ರೆ ಏನು ಅಂತ ಅರ್ಥೈಸಿವೆ. ಈ ದಿನಗಳಲ್ಲಿ ಪಟ್ಟ ಕಷ್ಟವನ್ನು ಎಂದಿಗೂ ಮರೆಯಲಾಗಲ್ಲ ಎನ್ನುತ್ತಾರೆ.
ಎಸ್‍ಎಫ್‍ಎಸ್ ಕಾಲೇಜಿನಲ್ಲಿ ಬಿಎ (ಪತ್ರಿಕೋದ್ಯಮ, ಮನಃಶಾಸ್ತ್ರ, ಇಂಗ್ಲಿಷ್) ಪದವಿ ಮಾಡಿದ್ರು ಮಾದೇಶ್, 1ರಿಂದ ಪಿಯುಸಿವರೆಗೂ ಕನ್ನಡ ಮಾಧ್ಯಮದಲ್ಲಿ ಓದಿದ್ದ ಮಾದೇಶ್ ಗೆ ಒಮ್ಮೆಲೆ ಇಂಗ್ಲಿಷ್ ಅರಗಿಸಿಕೊಳ್ಳೋದು ಸಹಜವಾಗಿ ಕಷ್ಟವಾಗುತ್ತೆ…! ಸೈಕಾಲಜಿ ಸಿಕ್ಕಾಪಟ್ಟೆ ಸೈಕಲ್ ಹೊಡಿಸುತ್ತೆ…! ಆದ್ರೆ, ಜರ್ನಲಿಸಂ ಇಷ್ಟವಾಗುತ್ತೆ.


ಶಾಂತರಾಜ್, ಮುರುಳಿ ಮೋಹನ್ ಕಾಟಿ, ಮಂಜು ಬಷೀರ್ ಎಂಬ ಪತ್ರಿಕೋದ್ಯಮ ಪ್ರಾದ್ಯಾಪಕರಿಂದ ಒಳ್ಳೆಯ ಮಾರ್ಗದರ್ಶನ ಸಿಗುತ್ತೆ. ತುಂಬಾ ಆ್ಯಕ್ಟೀವ್ ಪ್ರಾದ್ಯಾಕಪಕರಾದ ಇವರು ಡಾಂಕ್ಯುಮೆಂಟರಿಗಳನ್ನು ಮಾಡ್ತಿದ್ರು. ಆ ಟೈಮಲ್ಲಿ ಮಾದೇಶ್ ಅವರ ಜೊತೆ ಹೋಗಿ ಒಂದಿಷ್ಟು ಕಲಿತರು.


ನಂತರ ಡಿಗ್ರಿಯಲ್ಲಿರುವಾಗಲೇ ಸ್ವಂತ ಡಾಕ್ಯುಮೆಂಟರಿಯೊಂದನ್ನು ಮಾಡೋ ಸಾಹಸಕ್ಕೆ ಕೈ ಹಾಕಿದ್ರು. ನೇಕಾರರ ಸಮಸ್ಯೆ ಬಗ್ಗೆ ಅರಿವಿದ್ದ ಮಾದೇಶ್ ತನ್ನ ಮೊದಲ ಸಾಕ್ಷ್ಯಚಿತ್ರಕ್ಕೆ ಆಯ್ಕೆಮಾಡಿಕೊಂಡಿದ್ದ ಇಳಕಲ್ ಸೀರೆ-ಕುಪ್ಪಸ…! ಇಳಕಲ್ ಗೆ ಹೋಗಿ ಅವುಗಳನ್ನು ನೇಯುವ ನೇಕಾರರ ಕಷ್ಟಗಳ ಬಗ್ಗೆ ಡಾಂಕ್ಯುಮೆಂಟರ್ ಮಾಡಿದ್ರು…! ಇದು ಅಮೆರಿಕಾದಲ್ಲೂ ಪ್ರದರ್ಶನಗೊಂಡು ಮೆಚ್ಚುಗೆ ಪಡೆಯಿತು. ಇದಲ್ಲದೆ ತನ್ನೂರು ಆನೆಕಲ್ ಸಮಸ್ಯೆಯ ಬಗ್ಗೆಯೂ ಡಾಂಕ್ಯುಮೆಂಟರಿ ಮೂಲಕ ದನಿಯಾದರು.


ಪದವಿ ಮುಗಿಯುತ್ತಿದ್ದಂತೆ ಕೆಲಸ ಹುಡ್ಕೊಂಡು ಬೆಂಗಳೂರು ಕಡೆ ಬಂದ್ರು. ಫ್ರೆಂಡ್ಸ್ ರೂಂನಲ್ಲಿ ಉಳ್ಕೊಂಡು ಒಂದೆರಡು ಟಿವಿ ಚಾನಲ್ ನಲ್ಲಿ ಕೆಲಸ ಹುಡುಕೋಕೆ ಶುರುಮಾಡಿದ್ರು. ಅದ್ರೇ ಕೆಲಸ ಸಿಗಲಿಲ್ಲ…!


ಈ ಬೆಂಗಳೂರು ಸಹವಾಸ ಸಾಕು ಆನೇಕಲ್ಲಿಗೆ ವಾಪಾಸ್ ಹೋಗೋಣ ಎಂದು ತಿರ್ಮಾನಿಸಿದ್ರಂತೆ. ಅದ್ರೇ ಆಗಿನ ಪ್ರೇಯಸಿ ಈಗಿನ ಹೆಂಡತಿ ಶಾಲಿನಿ ರಾಜ್ ಟಿವಿಗೆ ರೆಸ್ಯೂಮ್ ಹಾಕೋಕೆ ಬಲವಂತವಾಗಿ ಕರೆದುಕೊಂಡು ಹೋಗಿ, ರಿಪೋರ್ಟಿಂಗ್ ಮಾತ್ರ ಅಂತ ಬರೆದಿದ್ದ ಕಡೆ ಅಂಕರಿಂಗ್ ಅಂತ ಸಹ ಬರೆದ್ರು. ಎಲ್ಲಾ ಚಾನೆಲ್ ಗಳಿಗೆ ರೆಸ್ಯೂಮ್ ಕೊಟ್ಟುಬಂದತ್ತೆ ರಾಜ್ ನ್ಯೂಸ್ ಗೂ ರೆಸ್ಯೂಮ್ ಕೊಟ್ಟು ಬಂದಿದ್ರು…! ಎರಡು ಮೂರು ದಿನಗಳ ನಂತರ ರಾಜ್ ನ್ಯೂಸ್ ನಿಂದ ಮಾದೇಶ್ ಅವರಿಗೆ ಕಾಲ್ ಬರುತ್ತೆ…! ಕರೆ ಮಾಡಿದವರು, ‘ನಿಮಗೆ ಸರಿಯಾಗಿ ರೆಸ್ಯೂಮ್ ಪ್ರಿಪೇರ್ ಮಾಡೋಕೆ ಬರಲ್ವೇನ್ರಿ…? ನಾಳೆ ಬೇರೊಂದು ರೆಸ್ಯೂಮ್ ತಗೊಂಡು ಆಫೀಸ್‍ಗೆ ಬನ್ನಿ’ ಅಂತಾರೆ…! ಅವತ್ತು ಕರೆಮಾಡಿದ್ದು ಬೇರಾರು ಅಲ್ಲ ಮುಖ್ಯಸ್ಥರಾದ ಹಮೀದ್ ಪಾಳ್ಯ ಅವರೇ…! ಕರೆಮಾಡಿದ್ದು ಅವರೆಂದು ಗೊತ್ತಾಗಿದ್ದು, ಕೆಲಸಕ್ಕೆ ಸೇರುವಾಗ…! ಇವತ್ತಿಗೂ ಮಾದೇಶ್ ಮೊಬೈಲ್ ನಲ್ಲಿ ಹಮೀದ್ ಪಾಳ್ಯ ಅವರ ಕಾಂಟೆಕ್ಟ್ ನಂಬರ್ ರಾಜ್ ನ್ಯೂಸ್ ಅಂತಲೇ ಇದೆ…!


ಸರಿ, ಮರುದಿನ ಇಂಟರ್ ವ್ಯೂಗೆ ಅಂತ ಮಾದೇಶ್ ರಾಜ್ ನ್ಯೂಸ್ ಗೆ ಹೋಗ್ತಾರೆ. ಪ್ರಜಾವಾಣಿ ಪೇಪರ್ ಅನ್ನು ಕೊಟ್ಟ ಹಮೀದ್ ಪಾಳ್ಯ ಅವರು ಗಂಟಲು ಬಿದ್ದುಹೋಗುವಷ್ಟು ಜೋರಾಗಿ ಓದು ಅಂತಾರೆ…! ಮಾದೇಶ್ ಇಡೀ ಪ್ರಜಾವಾಣಿ ಪತ್ರಿಕೆಯನ್ನು ಓದ್ತಾರೆ.
ಯಾವ ಕೆಲಸ ಮಾಡ್ತೀರ ಅಂತ ಹಮೀದ್ ಪಾಳ್ಯ ಕೇಳಿದಾಗ ಮಾದೇಶ್ ರಿಪೋರ್ಟಿಂಗ್ ಅಂತಾರೆ…! ಆಗ ಹಮೀದ್ ಪಾಳ್ಯ, ‘ಇಲ್ಲ, ನೀನು ನಿರೂಪಣೆ ಮಾಡು…! ಕಷ್ಟ ಆಗುತ್ತೆ ಅಂತಾದ್ರೆ ಆಮೇಲೆ ರಿಪೋರ್ಟಿಂಗ್ ಹೋಗುವಂತೆ’ ಅಂತಾರೆ…! ನಾನು ಕಪ್ಪು, ನನಗೆ ಆ್ಯಂಕರ್ ಆಗೋಕೆ ಸಾಧ್ಯವೇ ಇಲ್ಲ ಎಂದುಕೊಂಡಿದ್ದ ಮಾದೇಶ್ ಅವರಿಗೆ ಇದು ಆಶ್ಚರ್ಯವಾಗಿತ್ತು…!


ಹೀಗೆ 2013ರಲ್ಲಿ ಮಾದೇಶ್ ಆನೇಕಲ್ ಅವರ ಮೀಡಿಯಾ ಜರ್ನಿ ಶುರುವಾಗುತ್ತೆ. ಈಗ ಟಿವಿ9ನಲ್ಲಿರೋ ನಿರೂಪಕ ಮಾಲ್ತೇಶ್ ರಾಜ್ ನ್ಯೂಸ್ ಗೆ ಮಾದೇಶ್ ಗಿಂತ ಎರಡುದಿನ ಮೊದಲಷ್ಟೇ ಸೇರಿದ್ದರು…! ಅದಕ್ಕೂ ಮೊದಲು ಸ್ವಲ್ಪ ಸಮಯ ಕಸ್ತೂರಿಯಲ್ಲಿದ್ದ ಮಾಲ್ತೇಶ್ ಒಂದಿಷ್ಟು ಅದಾಗಲೇ ಅಂಕರಿಂಗ್ ಅಲ್ಲಿ‌ ಪಳಗಿದ್ರು. ಅವರ ಒಡನಾಟ ನನಗೆ ನಿರೂಪಣೆಯ ಬೇಸಿಕ್ಸ್ ಕಲಿಸಿಕೊಡ್ತು. ಜೊತೆಗೆ ರಾಜ್ ಟಿವಿಯ ಆ್ಯಂಕರ್ ಹೆಡ್ ಆಗಿದ್ದ ಶ್ವೇತಾ ಭಟ್ ತುಂಬಾ ಸಪೋರ್ಟ್ ನೀಡಿದ್ರು ಅಂತಾರೆ ಮಾದೇಶ್ ಆನೇಕಲ್.


ಒಂದು ವರ್ಷದ ನಂತರ ಮಾಲ್ತೇಶ್ ಅವರು ಒಳಗೊಂಡಂತೆ ತುಂಬಾ ಮಂದಿ ಸೀನಿಯರ್ಸ್ ರಾಜ್ ನ್ಯೂಸ್ ಗೆ ಗುಡ್ ಬೈ ಹೇಳಿ ಬೇರೆಡೆಗೆ ಹೋದ್ರು. ಆಗ ಮಾದೇಶ್ ಗೆ ಹೆಚ್ಚು ಜವಬ್ದಾರಿ ಸಿಕ್ತು…! ಕ್ರೀಡಾ ವಿಭಾಗದ ಹೊಣೆ ಹೊತ್ರು. ವಿಶ್ವಕಪ್, ಐಪಿಎಲ್ ಮೊದಲಾದ ಸಂದರ್ಭಗಳಲ್ಲಿ ಉತ್ತಮ ಅವಕಾಶಗಳು ಒದಗಿ ಬಂದ್ವು. ಇಷ್ಟದ ರಿಪೋರ್ಟಿಂಗ್ ಸಹ ಮಾಡಿದ್ರು…! ಡಿಸ್ಕಷನ್ ನಡೆಸಿಕೊಡೋ ಮಟ್ಟಕ್ಕೆ ಮಾದೇಶ್ ಬೆಳೆದು ಬಿಟ್ರು.


3 ವರ್ಷಗಳ ಕಾಲ ರಾಜ್ ನ್ಯೂಸ್ ನಲ್ಲೇ ಇದ್ರು ಮಾದೇಶ್. ಒಮ್ಮೆ ಹಮೀದ್ ಪಾಳ್ಯ ಅವರು ಮಾದೇಶ್ ಅವರನ್ನು ಕರೆದು ‘ನೀನು ನನಗೆ ಹೇಳಿ ಹೋಗೋಕೆ ಕಷ್ಟ ಆಗುತ್ತೆ ಅಂತ ಬೇರೆಕಡೆ ಸಿಗುವ ಒಳ್ಳೆಯ ಅವಕಾಶವನ್ನು ಕಳೆದುಕೊಳ್ಳಬೇಡ. ಒಳ್ಳೆಯ ಆಫರ್ ಸಿಕ್ಕರೆ ಹೋಗಿ ನಿನ್ನ ಭವಿಷ್ಯ ಕಟ್ಟಿಕೋ’ ಎಂದು ಹೇಳಿದ್ರು…!


ಬಳಿಕ ಅಂದು ಪಬ್ಲಿಕ್ ಟಿವಿಯಲ್ಲಿದ್ದ ರಾಧ ಹಿರೇಗೌಡರ್ ಅವರ ಮುಖೇನ ಮುಖ್ಯಸ್ಥರಾದ ಎಚ್. ಆರ್ ರಂಗನಾಥ್ ಅವರ ಭೇಟಿಯಾಯ್ತು. ಎಚ್ ಆರ್ ರಂಗನಾಥ್ ಪಬ್ಲಿಕ್ ಟಿವಿಯಲ್ಲಿ ಕೆಲಸ ಮಾಡುವ ಅವಕಾಶ ನೀಡಿದ್ರು. 2015ರ ನವೆಂಬರ್ ನಿಂದ ಇಲ್ಲಿಯವರೆಗೂ ಪಬ್ಲಿಕ್ ಬಳಗದಲ್ಲಿದ್ದಾರೆ ಮಾದೇಶ್. ನಿರೂಪಣೆಯ ಜೊತೆ ಜೊತೆಗೆ ಅಗತ್ಯವಿದ್ದಾಗ ರಿಪೋರ್ಟಿಂಗ್ ಕೂಡ ಮಾಡ್ತಾರೆ.
ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರು ವಿಧಿವಶರಾದ ದಿನ ಬೆಳಗ್ಗೆ ನೇ ಆಫೀಸ್ ಗೆ ಬಂದಿದ್ರು ಮಾದೇಶ್. ರಾತ್ರಿ 11 ಗಂಟೆ ಸುಮಾರಿಗೆ ಜಯಲಲಿತಾ ಅವರ ನಿಧನ ಸುದ್ದಿ ಪಕ್ಕಾ ಆಯ್ತು. ಅಲ್ಲಿಂದ ಮರುದಿನ ಬೆಳಗ್ಗೆ 6 ಗಂಟೆಯವರೆಗೂ ಸತತವಾಗಿ ನ್ಯೂಸ್ ಆ್ಯಂಕರಿಂಗ್ ಮಾಡಿದ್ರು…! ರಾಧ ಹಿರೇಗೌಡರ್ ಅವರು 1 ಗಂಟೆಗೆ ಮಾದೇಶ್ ಅವರನ್ನು ಜಾಯಿನ್ ಆಗಿದ್ರು. ಅಂದು ರಾಧಾ ಹಿರೇಗೌಡರ್ ಅವರೊಂದಿಗೆ ನ್ಯೂಸ್ ಪ್ರಸೆಂಟ್ ಮಾಡಿದ್ದು ನೆನಪುಳಿಯುವಂತದ್ದು, ಎಲ್ಲಾ ಹಂತದಲ್ಲೂ ನನಗೆ ತುಂಬಾ ಸಪೋರ್ಟಿವ್ ಆಗಿದ್ರು ಎಂದು ಮಾದೇಶ್ ನೆನಪಿಸಿಕೊಂಡ್ರು. ಹಾಗೇ ಹಿರಿಯ ನಿರೂಪಕ ಅರವಿಂದ್ ಸೇತುರಾವ್ ಹಲವು ಸಂಧರ್ಭದಲ್ಲಿ ಮಾರ್ಗದರ್ಶನ ನೀಡಿದ್ದಾರಂತೆ.

ಇನ್ನು ಮಾದೇಶ್ ಅವರನ್ನು ಕೆಲವರು ನೀನು ಎಡಪಂಥೀಯ, ಬಲಪಂಥೀಯ ಅಂತ ಬ್ರಾಂಡ್ ಮಾಡ್ತಾರೆ. ಆದರೆ, ಇವರ ನಿಲುವು ಮನುಜ ಮತ ವಿಶ್ವಪಥದ ಕಡೆಗೆ ಇರುತ್ತದೆಯೇ ವಿನಃ ಯಾವ ಪಂಥದ ಪರ ಇರಲ್ಲ…! ಮಾದೇಶ್ ಅವರೇ ಸ್ವತಃ ಇದನ್ನು ಹೇಳಿಕೊಳ್ತಾರೆ. ಸಂವಾದ ಬದುಕು‌ ಕಮ್ಯೂನಿಟಿ ಕಾಲೇಜಿನ ಒಡನಾಟ ನನ್ನ ಮೇಲೆ ತುಂಬಾನೇ ಪ್ರಭಾವ ಬೀರಿದೆ. ಇನ್ನು ಸ್ನೇಹಿತ ಚೌಡಪ್ಪ , ಮಂಜು ಇವರ ಒಡನಾಟದಿಂದ ಕಲಿಕೆಗೆ ಸಹಕಾರಿಯಾಯ್ತು.
ಮಾದೇಶ್ ಮೊದಲು ಮಾದೇಶ್ ತಿಮ್ಮೇಗೌಡ್ರು ಅಂತ ಅಪ್ಪನ ಹೆಸರಿನೊಂದಿಗೆ ತನ್ನ ಹೆಸರು ಸೇರಿಸಿಕೊಂಡಿದ್ರು. ಜಾತಿ, ಧರ್ಮದ ಎಲ್ಲೆ ಮೀರಿ ಬದುಕ ಬೇಕು ಎನ್ನುವ ನೀನೇ ಗೌಡ/ಗೌಡ್ರು ಅಂತ ನಿನ್ನ ಹೆಸರಿನ ಜೊತೆ ಸೇರಿಸಿಕೊಂಡಿದ್ದಿಯಲ್ಲಾ ಅಂತ ಅಂದು ಪ್ರೇಯಸಿ, ಇಂದು ಪತ್ನಿ ಆಗಿರೋ ಶಾಲಿನಿ ವಾಟ್ಸಪ್ ಗ್ರೂಪ್ ನಲ್ಲಿ ಕಾಲೆಳೆದ ಮೇಲೆ ಮಾದೇಶ್ ಅವರು ಮಾದೇಶ್ ಆನೇಕಲ್ ಆದ್ರು…!


ಮಾದೇಶ್ ಅವರ ಬೈಕ್ ನ ಹಿಂಬದಿ ತಂದೆ ‘ಗೌಡ’ ಅಂತ ಸ್ಟಿಕ್ಕರ್ ಅಂಟಿಸಿದ್ದರು. ಅದನ್ನು ಗಮನಿಸಿ ಶಾಲಿನಿ ಅವರು ತಮಾಷೆಯಾಗಿ ಪ್ರಶ್ನಿಸಲು ಶುರುಮಾಡಿದ್ಮೇಲೆ ಅದನ್ನೂ ತೆಗೆಸಿದ್ರು ಮಾದೇಶ್…!
ಒಮ್ಮೆ ಯಾಕೋ ಈ ಮೀಡಿಯಾ ಸಹವಾಸವೇ ಬೇಡ ಅಂತ ಮಾದೇಶ್ ಡಿಸೈಡ್ ಮಾಡಿದ್ರಂತೆ. ಆದ್ರೆ, ಶಾಲಿನಿ ಅವರು ಅಂದು ಮಾದೇಶ್ ಅವರ ಮನಪರಿವರ್ತನೆ ಮಾಡಿದ್ರು…! ಅವರಿಂದಾಗಿ ಮಾದೇಶ್ ಇಂದು ಮೀಡಿಯಾದಲ್ಲಿ ಮುಂದುವರೆದಿದ್ದಾರೆ.


ಮಾದೇಶ್ ಪುಸ್ತಕ ಪ್ರೇಮಿ. ಸುಮಾರು 400-500 ಪುಸ್ತಕಗಳ ಸಂಗ್ರಹವಿದೆ. ಕುವೆಂಪು, ಪೂರ್ಣಚಂದ್ರ ತೇಜಸ್ವಿ ಅವರ ಬರಹಗಳು ಅಂದ್ರೆ ಇಷ್ಟ. ರವಿಬೆಳಗೆರೆ, ಪಿ.ಲಕೇಶ್, ಗೌರಿ ಲಂಕೇಶ್ ಅವರ ಪುಸ್ತಕಗಳನ್ನು ಸಹ ತನ್ನ ಮನೆ ಗ್ರಂಥಾಲಯದಲ್ಲಿಟ್ಟಿದ್ದಾರೆ.
ಮಾದೇಶ್ ಅವರಿಗೆ ಓದುವ ಆಸಕ್ತಿ ತಂದೆಯಿಂದ ಬಂದ ಬಳುವಳಿ ಅಂದ್ರು ತಪ್ಪಾಗಲ್ಲ. ತಂದೆ ಹೆಚ್ಚಿನ ವಿದ್ಯಾಭ್ಯಾಸ ಮಾಡ್ದೇ ಇದ್ರು. ಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಂಡಿದ್ದವರು. ಲಂಕೇಶ್ ಪತ್ರಿಕೆ ಹಾಯ್ ಬೆಂಗಳೂರು ಪತ್ರಿಕೆ ಯನ್ನಂತೂ ತಪ್ಪಿಸುತ್ತಿರಲಿಲ್ಲ.


ಕುವೆಂಪು ಅವರ ಕುಪ್ಪಳ್ಳಿ ಇವರಿಗೆ ಇಷ್ಟದ ತಾಣ. ಆಗಾಗ ಅಲ್ಲಿಗೆ ಹೋಗ್ತಿರ್ತಾರೆ. ಇವರಂತೆ ಪತ್ನಿ ಶಾಲಿನಿ ಅವರಿಗೆ ಬೈಕ್ ಸವಾರಿ ಇಷ್ಟ. ಹೋಗಬೇಕೆಂದು ಅನಿಸಾದಗ ಇಬ್ಬರು ಬುಲೇಟೇರಿ ತೋಚಿದ ಕಡೆ ಹೊರಡುತ್ತಾರೆ…! ರಾತ್ರಿ 1 ಗಂಟೆಗೆ ಮನೆಬಿಟ್ಟಿದ್ದೂ ಉಂಟು…!

-ಶಶಿಧರ್ ಎಸ್ ದೋಣಿಹಕ್ಲು

ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.

1) 10 ನವೆಂಬರ್ 2017 : ಈಶ್ವರ್ ದೈತೋಟ

2)11 ನವೆಂಬರ್ 2017 : ಭಾವನ

3)12  ನವೆಂಬರ್ 2017 : ಜಯಶ್ರೀ ಶೇಖರ್

4)13 ನವೆಂಬರ್ 2017 : ಶೇಷಕೃಷ್ಣ

5)14 ನವೆಂಬರ್ 2017 : ಶ್ರೀಧರ್ ಶರ್ಮಾ

6)15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ

7)16 ನವೆಂಬರ್ 2017 : ಅರವಿಂದ ಸೇತುರಾವ್

8)17 ನವೆಂಬರ್ 2017 : ಲಿಖಿತಶ್ರೀ

9)18 ನವೆಂಬರ್ 2017 : ರಾಘವೇಂದ್ರ ಗಂಗಾವತಿ

10)19 ನವೆಂಬರ್ 2017 : ಅಪರ್ಣಾ

11)20 ನವೆಂಬರ್ 2017 :  ಅಮರ್ ಪ್ರಸಾದ್

12)21 ನವೆಂಬರ್ 2017 :   ಸೌಮ್ಯ ಮಳಲಿ

13)22 ನವೆಂಬರ್ 2017 :  ಅರುಣ್ ಬಡಿಗೇರ್

14)23ನವೆಂಬರ್ 2017 :  ರಾಘವ ಸೂರ್ಯ

15)24ನವೆಂಬರ್ 2017 :  ಶ್ರೀಲಕ್ಷ್ಮಿ

16)25ನವೆಂಬರ್ 2017 :  ಶಿಲ್ಪ ಕಿರಣ್

17)26ನವೆಂಬರ್ 2017 :  ಸಮೀವುಲ್ಲಾ

18)27ನವೆಂಬರ್ 2017 :  ರಮಾಕಾಂತ್ ಆರ್ಯನ್

19)28ನವೆಂಬರ್ 2017 :  ಮಾಲ್ತೇಶ್

20)29/30ನವೆಂಬರ್ 2017 :  ಶ್ವೇತಾ ಆಚಾರ್ಯ  [ನಿನ್ನೆ (29ರಂದು ) ತಾಂತ್ರಿಕ ಸಮಸ್ಯೆಯಿಂದ ‘ಈ ದಿನದ ನಿರೂಪಕರು’- ನಿರೂಪಕರ ಪರಿಚಯ ಲೇಖನ ಪ್ರಕಟಿಸಿರಲಿಲ್ಲ. ಆದ್ದರಿಂದ ಇಂದು ಪ್ರಕಟಿಸಿದ್ದೀವಿ.  ಈ ದಿನದ (30 ನವೆಂಬರ್) ಲೇಖನ ಸಂಜೆ ಪ್ರಕಟಿಸಲಾಗುವುದು.) ]

21)30ನವೆಂಬರ್ 2017 :  ಸುರೇಶ್ ಬಾಬು 

22)01 ಡಿಸೆಂಬರ್ 2017 :  ಮಧು ಕೃಷ್ಣ (ಡಿಸೆಂಬರ್ ೨ ರಂದು ಬೆಳಗ್ಗೆ ಪ್ರಕಟ)

23)02 ಡಿಸೆಂಬರ್ 2017 : ಶಶಿಧರ್ ಭಟ್

24)03 ಡಿಸೆಂಬರ್ 2017 : ಚನ್ನವೀರ ಸಗರನಾಳ್

25)04 ಡಿಸೆಂಬರ್ 2017 : ಗೌರೀಶ್ ಅಕ್ಕಿ

26)05 ಡಿಸೆಂಬರ್ 2017 : ಶ್ರುತಿ ಜೈನ್

27)06ಡಿಸೆಂಬರ್ 2017 : ಅವಿನಾಶ್ ಯುವನ್  

28)07ಡಿಸೆಂಬರ್ 2017 : ಶಿಲ್ಪ ಕೆ.ಎನ್

29)08ಡಿಸೆಂಬರ್ 2017 : ಶಮೀರಾ ಬೆಳುವಾಯಿ

30)09ಡಿಸೆಂಬರ್ 2017 : ಸಂದೀಪ್ ಕುಮಾರ್

31)10ಡಿಸೆಂಬರ್ 2017 : ಪ್ರತಿಮಾ ಭಟ್

32)11ಡಿಸೆಂಬರ್ 2017 :  ಹರೀಶ್ ಪುತ್ರನ್

33)12ಡಿಸೆಂಬರ್ 2017 : ನಿಶಾ ಶೆಟ್ಟಿ

34)13ಡಿಸೆಂಬರ್ 2017 : ಪೂರ್ಣಿಮ ಎನ್.ಡಿ

35)14ಡಿಸೆಂಬರ್ 2017 :  ಹಬೀಬ್ ದಂಡಿ

36)15ಡಿಸೆಂಬರ್ 2017 : ಪ್ರಕಾಶ್ ಕುಮಾರ್ ಸಿ.ಎನ್

37)16ಡಿಸೆಂಬರ್ 2017 :  ಜ್ಯೋತಿ ಇರ್ವತ್ತೂರು

38)17ಡಿಸೆಂಬರ್ 2017 :  ಶಿಲ್ಪ ಐಯ್ಯರ್ 

39)18ಡಿಸೆಂಬರ್ 2017 :  ನಾಝಿಯಾ ಕೌಸರ್

40) 19ಡಿಸೆಂಬರ್ 2017 :  ಶ್ರುತಿಗೌಡ

41) 20ಡಿಸೆಂಬರ್ 2017 :  ಎಂ.ಆರ್ ಶಿವಪ್ರಸಾದ್

42) 21ಡಿಸೆಂಬರ್ 2017 :  ವೆಂಕಟೇಶ್ ಉಳ್ತೂರು (ವೆಂಕಟೇಶ್ ಅಡಿಗ)

43) 22ಡಿಸೆಂಬರ್ 2017 :  ಶರ್ಮಿತಾ ಶೆಟ್ಟಿ

44) 23ಡಿಸೆಂಬರ್ 2017 :  ಕಾವ್ಯ

45) 24ಡಿಸೆಂಬರ್ 2017 :  ಹರ್ಷವರ್ಧನ್ ಬ್ಯಾಡನೂರು

46) 25ಡಿಸೆಂಬರ್ 2017 : ಸುಧನ್ವ ಖರೆ

47) 26ಡಿಸೆಂಬರ್ 2017 : ಸೌಜನ್ಯ ಕೀರ್ತಿ

48) 27ಡಿಸೆಂಬರ್ 2017 :ವಾಣಿ ಕೌಶಿಕ್

49) 28ಡಿಸೆಂಬರ್ 2017 : ಸುಗುಣ

50) 29ಡಿಸೆಂಬರ್ 2017 : ಜಯಪ್ರಕಾಶ್ ಶೆಟ್ಟಿ

ಡಿಸೆಂಬರ್ ೩೦ ಮತ್ತು ೩೧ ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ.

51) 01ಜನವರಿ 2018 :ಐಶ್ವರ್ಯ ಎ.ಎನ್

52) 02ಜನವರಿ 2018 :ಶ್ರೀಧರ್ ಆರ್

53) 03ಜನವರಿ 2018 : ದಿವ್ಯಶ್ರೀ

54) 04ಜನವರಿ 2018 : ಮಂಜುಳ ಮೂರ್ತಿ

55) 05ಜನವರಿ 2018 : ಅಭಿಷೇಕ್ ರಾಮಪ್ಪ

56) 06ಜನವರಿ 2018 : ರೋಹಿಣಿ ಅಡಿಗ

57) 07ಜನವರಿ 2018 :ಮಾದೇಶ್ ಆನೇಕಲ್

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...