ಧರ್ಮಸ್ಥಾನ
ಆ ಧರ್ಮ ಈ ಧರ್ಮ
ಕೆಲವೊಂದು ಕರ್ಮ(ಕೆಲಸ)
ಜಾತಿಯೊಳಡಗಿಹ ಮರ್ಮ
ಚರ್ಮದೊಳಗಿಲ್ಲ ಜನ್ಮದಲಿ
ಅಡಗಿಕುಳಿತಿಹುದೆಲ್ಲ
ಅಂಟಿಸಿದವರ ನಂಟಿನೊಳಗೆ
ನಡುಗುತ ಒಂದೆಂಬ ಮಾತು
ಗುಡುಗಿದರೂ ಕೆಡವುವರೆಲ್ಲ
ಹೋರಾಟದ ನೋಟವಿಟ್ಟಲ್ಲಿ
ಹೆಣದ ಮಾರಾಟ ಬಲುಜೋರಾಗಿಹುದು
ಹಣಿಯಲಾರೆ ಸಾವಿನ
ಹೊಣೆಯ ಸಹಿಸಲಾರೆ
ಕೊನೆಯುಸಿರ ಎಳೆದ ಶವದಿಂದಲಿ
ಒಳರಾಜಕೀಯದ ಬಡನಾಟಕೀಯದ
ಬಿರುಗಾಳಿಯು ಮತ್ತದೇ
ಶೋಕಗೀತೆಯ ಹಾಡಿಸುತಿಹುದು
ಕಾವ್ಯದತ್ತನ ನೇರ ನುಡಿಯನು
ಕೇಳಲಾಗದ ಕೊಳಕು ಮನಸಲಿ
ಮತ್ತದೇ ಮಂದಿರ ಮಸೀದಿಗಳ
ನೆತ್ತರು ಹರಿದಿಹುದು – ಜಗವು ನಲುಗಿಹುದು
?ದತ್ತರಾಜ್ ಪಡುಕೋಣೆ?