ಹರೆಯದ ಹೊಳೆಯಲ್ಲಿ
ಹಳೆಯದೆಲ್ಲಾ ಕಳೆಯದು
ಬೆಳೆಯದೆಲ್ಲಾ ಬೆಳೆಯದು
ಕೊಳೆಯ ಮಳೆಯ ಮನಕೆ ಸುರಿಸಿ
ಮೆರೆಯುತಿರುವ ಮರುಳರ
ವಯಸ್ಸಿನ ಅರಳುಮರಳಿದು
ಉರುಳು ಕೊರಳ ಸುತ್ತಿ
ನರಳುವ ಹೊತ್ತಿಗಾಗಲೇ
ಮರೆವು ಪಡುವಣದ ಬಾಗಿಲ
ಸರಿಸಿ ಓಡುತಿಹುದು
ಕಾವ್ಯದತ್ತನ ಮೂಡಣದ
ಹೊಸಬೆಳಕು ನವಹುರುಪಿನಿಂದಲಿ
ಬಿಸಿರಕ್ತಕೆ ನೋವಿನೂಟವ ಬಡಿಸಿ
ಜಗದ ಹೋರಾಟವ
ಕಣ್ಣೆದುರಿಗೆ ತಂದಿಟ್ಟು ಮರೆಯಾದಾಗ
ಮುಂದಿಹುದೆಲ್ಲಾ ಜಯದ ಹಾದಿಯೇ.
?ದತ್ತರಾಜ್ ಪಡುಕೋಣೆ?