ಅವರು ಶಿವಮೊಗ್ಗ ಜಿಲ್ಲೆಯ ಸಾಗರದ ಶಾಮರಾವ್. ಶ್ರೀಮಂತ ರೈತ ಕುಟುಂಬದಲ್ಲಿ ಹುಟ್ಟಿದವರು..! ಇವರ ಕುಟುಂಬದ್ದೇ ಅಡಿಕೆ ಮಂಡಿಯೊಂದಿತ್ತು..! ಶ್ರೀಮಂತಿಕೆಯಲ್ಲಿ ಬೆಳೆದಿದ್ದ ಶಾಮರಾವ್ ಗೆ ಶಿಕ್ಷಣದ ಕಡೆ ಎಲ್ಲಿಲ್ಲದ ಆಸಕ್ತಿ. 1957ರಲ್ಲೇ ಮೆಕಾನಿಕಲ್ ಇಂಜಿನಿಯರಿಂಗ್ ಮುಗಿಸಿ, 1959ರಲ್ಲಿ ಅದೇ ವಿಷಯದಲ್ಲಿ ಉನ್ನತ ವ್ಯಾಸಂಗವನ್ನೂ ಮುಗಿಸ್ತಾರೆ..! ಪೋಷಕರೂ ಸಹ ಇವರ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡ್ತಾರೆ..!
ಮಲೆನಾಡಿನ ಸಾಗರದಿಂದ ರಾಜ್ಯ ರಾಜಧಾನಿಗೆ ಬಂದು ಮೆಕಾನಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ ಸ್ನಾತಕೋತ್ತರ ಪದವಿಯನ್ನು ಪೂರೈಸಿದ ಶಾಮರಾವ್ ಜರ್ಮನಿಯತ್ತ ಪಯಣ ಬೆಳೆಸ್ತಾರೆ..! 1959 ರಿಂದ 62ರವರೆಗೆ ಜರ್ಮನಿಯ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡಿದ ಇವರು ಮರಳಿ ಭಾರತಕ್ಕೆ ಬರ್ತಾರೆ..!
ನಂತರ ಜಂಮ್ಷಡ್ ಪುರ, ಬೆಂಗಳೂರು ಸೇರಿದಂತೆ ದೇಶದ ಬೇರೆ ಬೇರೆ ನಗರಗಳಲ್ಲಿ ಕೆಲಸ ಮಾಡ್ತಾರೆ..! ಅಪ್ಪ ಮಾಡಿಟ್ಟ ಆಸ್ತಿಯ ಜೊತೆಗೆ ತಾನೂ ಒಂದಿಷ್ಟನ್ನು ಮಾಡ್ತಾರೆ..!
ಈ ಶಾಮರಾವ್ ಗೆ ಈಗ 82 ವರ್ಷ. ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಸ್ವಂತ ಮನೆಯೂ ಇದೆ..! ಇವರ ಒಂದೆರಡು ಮನೆ ಮತ್ತು ರೂಮ್ ಗಳನ್ನು ಬಾಡಿಗೆಗೂ ಕೊಟ್ಟಿದ್ದಾರೆ..! ಸಿಕ್ಕಾಪಟ್ಟೆ, ದುಡ್ಡೂ ಇದೆ.. !ಆದ್ರೆ ಮನಸ್ಸಿಗೆ ಮಾತ್ರ ನೆಮ್ಮದಿಯೇ ಇಲ್ಲ..!
ಕಳೆದ ವರ್ಷ ಹೆಂಡತಿ ತೀರಿಕೊಂಡ ಮೇಲೆ ಏಕಾಂಗಿ ಬದುಕು ಇವರದ್ದು..! ಹಂಗಂತ ಮಕ್ಕಳಿಲ್ಲ ಅಂತ ಅಂದುಕೊಳ್ಳ ಬೇಡಿ..! ಇವರಿಗೆ ಇಬ್ಬರು ಮಕ್ಕಳೂ ಇದ್ದಾರೆ. ಒಂದು ಹೆಣ್ಣು ಇನ್ನೊಂದು ಗಂಡು! ಮಕ್ಕಳಿದ್ದರೂ ಇವರು ಅನಾಥರು..!
ಹೌದು ಸಾರ್ ಮಗಳು ಮದುವೆ ಆಗಿ ಅಮೇರಿಕಾ ಹೋಗಿದ್ದಾಳೆ! ಮಗ ಇಂಜಿನಿಯರ್. ಆತ ಸಹ ಹೆಂಡ್ತಿ ಮಕ್ಕಳ ಜೊತೆ ಅಮೇರಿಕಾದಲ್ಲಿದ್ದಾನೆ..! ಬೆಂಗಳೂರಿನಲ್ಲಿ ಶಾಮರಾವ್ ಒಬ್ಬರೇ ಅವರೊಬ್ಬರೇ..! ವಯಸ್ಸಾಗಿದೆ, ಮಗ ಅಮೇರಿಕಾಕ್ಕಾದರೂ ಕರೆಸಿಕೊಳ್ತಾನಾ? ಇಲ್ಲ, ಆ ಮಗನಿಗೆ ಅಪ್ಪ ಅಮೇರಿಕಾಕ್ಕೆ ಹೋದರೆ ತೊಂದರೆ ಆಗುತ್ತಂತೆ..! ಅವನೂ ಭಾರತಕ್ಕೆ ಬರಲಾರನಂತೆ..!
ಅವನನ್ನು ಕೇಳಿದ್ರೆ ಆರು ವರ್ಷದ ನಂತರ ಬರ್ತೀನಿ ಅಂತಾನೆ, ಅಲ್ಲಿತನಕ ನಾನು ಬದುಕಿರ ಬೇಕಲ್ಲಾ”?ಅಂತ ತುಂಬಾ ನೋವಿನಿಂದ ಶಾಮ್ ರಾವ್ ಹೇಳಿಕೊಳ್ತಾರೆ..! ಮೊನ್ನೆ ಮೊನ್ನೆ ಜೋರ್ ಜ್ವರ ಬಂದಿತ್ತಂತೆ, ಕಾಲು ಜಾರಿಯೂ ಬಿದ್ದಿದ್ದಾರಂತೆ! ಮಕ್ಕಳಿದ್ದರೂ ನಸರ್್ ಇವರ ಸೇವೆ ಮಾಡ್ತಾ ಇದ್ದಾರೆ..! ಇವರ ಮಗ ಅದೆಂದು ಬರುವನೋ ಗೊತ್ತಿಲ್ಲ! ದುಡ್ಡಿದ್ದರೂ ಇವರಿಗೆ ನೆಮ್ಮದಿ ಇಲ್ಲ..!
ಅವತ್ತು, ಆ ಕಾಲದಲ್ಲಿ ಮಲೆನಾಡಿನ ಮೂಲೆಯಿಂದ ಬೆಂಗಳೂರಿಗೆ ಬಂದು ಶಾಮರಾವ್ ಇಂಜಿನಿಯರಿಂಗ್ ಪದವಿ ಪೂರೈಸದೇ ಇದ್ದಿದ್ದರೆ ಇವತ್ತು ಅವರ ಮಗ ಅಮೇರಿಕಾದಲ್ಲಿ ಇರುತ್ತಿದ್ದನೇ? ಅಮೇರಿಕಾದಲ್ಲಿ ಇರೋ ಕತೆಯೂ ನಮಗೆ ಬೇಡ, ಬೇಕಾದಷ್ಟು ಹಣ ಇದೆ! ಆದ್ರೆ ಪ್ರೀತಿಯೇ ಇಲ್ಲ ಅಂದ್ರೆ? ವಯಸ್ಸಾದ ಅಪ್ಪನನ್ನು ಒಬ್ಬಂಟಿ ಮಾಡಿ ಎಷ್ಟೇ ದುಡಿದರೆ ಏನು ಪ್ರಯೋಜನ? “ತಾ ಒಂದು ಬಗೆದರೆ ದೈವ ಇನ್ನೊಂದು ಬಗೆಯಿತಂತೆ” ಅನ್ತಾರೆ ನಮ್ಮ ಹಿರಿಯರು! ಮುಂದೊಂದು ದಿನ ಶಾಮರಾವರ ಮಗನಿಗೆ ಅವನ ಮಗ ಹೀಗೇ ಮಾಡಿದರೆ? ಹೇಗಾಗ ಬೇಡ ವೃದ್ಧ ಜೀವಕ್ಕೆ! ಇದು ಶಾಮರಾವರೊಬ್ಬರ ಕತೆಯಲ್ಲಾ ಎಷ್ಟೋ ಅಪ್ಪ ಅಮ್ಮಂದಿರ ಕತೆಯೂ ಹೌದು! (ಶಾಮ್ರಾವ್ ಅನ್ನೋದು ನಿಜವಾದ ಹೆಸರಲ್ಲ, ಅವರ ಇಷ್ಟದಂತೆ ಹೆಸರನ್ನು ಬದಲಾಯಿಸಲಾಗಿದೆ)
- ಶಶಿಧರ ಡಿ ಎಸ್ ದೋಣಿಹಕ್ಲು
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
ಎಲ್ಲರಿಗೂ ಸಂವಿಧಾನ ದಿನದ ಶುಭಾಷಯಗಳು..! ಭಾರತ ಪ್ರಧಾನ ಮಂತ್ರಿಗಳಿಂದ ಘೋಷಣೆ..!
ರಾಹುಲ್ ಗಾಂಧಿ ಇಂದು ಮೇಕ್ ಇನ್ ಇಂಡಿಯಾ ವರ್ಕ್ ಆಗ್ತಿಯಾ ಅಂತ ಕೇಳಿದ್ರು..! ಬೆಂಗಳೂರು ಹುಡುಗೀರು ಏನಂದ್ರು ಗೊತ್ತಾ..?!
ಅಭಿಷೇಕ್ ಗೆ ಗೂಗಲ್ ನೀಡುತ್ತೆ 20000000 ರೂಪಾಯಿಗಳ ಸಂಬಳ..! ಐಐಟಿ ವಿದ್ಯಾರ್ಥಿಗೆ ಕೋಟಿ ಕೋಟಿ ಸಂಬಳದ ಆಫರ್ ..!
ಅವಳಲ್ಲದೆ ಅವನನ್ನು ಬೇರೆ ಯಾರೂ ಮದುವೆ ಆಗ್ತಿರಲಿಲ್ಲ..! ಈ ಸ್ಟೋರಿ ಓದಿದ ಮೇಲೆ ಹೇಳ್ತೀರಾ, ಅವಳು ನಿಜಕ್ಕೂ ಗ್ರೇಟ್..!
ಅಮೀರ್ ಖಾನ್ ಹೇಳಿದ್ದು ಎಷ್ಟು ಸರಿ…? ಕಿರಿಕ್ ಕೀರ್ತಿ ಮಾತನಾಡಿದ್ದಾರೆ ಕೇಳಿ… ನಿಮಗೇನನ್ಸುತ್ತೋ ಹೇಳಿ..!