ಅದು ಆಗುಂಬೆಯ ಹಳ್ಳಿ. ಅಲ್ಲೊಂದು ತುಂಬು ಕುಟುಂಬ..! ಆ ಕುಟುಂಬದ ಯಜಮಾನ ತೀರಿಕೊಂಡ ಮೇಲೆ ಆ ಕುಟುಂಬದ ಸಂಪೂರ್ಣ ಜವಬ್ದಾರಿ ಹಿರಿಯ ಮಗ ವೆಂಕಟೇಶರ ಹೆಗಲಿಗೆ ಬೀಳುತ್ತೆ..! ಮನೆ ಜವಬ್ದಾರಿ ಹೊರುವಾಗ ಅವರಿಗಿನ್ನೂ 25 ವರ್ಷ ಮಾತ್ರ..! ತಂದೆ ತೀರಿಕೊಳ್ಳುವ ಮೊದಲೇ, ಅಮ್ಮನೂ ತೀರಿಕೊಂಡಿದ್ದರು..! ತಂದೆ ಹಾಗೂ ತಾಯಿಯ ಆಸ್ಪತ್ರೆ ಖರ್ಚಿನಿಂದ ಸಿಕ್ಕಾಪಟ್ಟೆ ಸಾಲಕೂಡ ಮಾಡಿದ್ದರು..! ಇದರ ಜೊತೆಗೆ ಇಬ್ಬರು ಅಕ್ಕಂದಿರ ಮದ್ವೆಗೂ ಸಾಲ ಸಾಲ ಸಾಲ.. ! ಇಷ್ಟೇ ಅಲ್ಲದೆ ಇಬ್ಬರು ತಮ್ಮಂದಿರ ವಿದ್ಯಾಭ್ಯಾಸಕ್ಕೂ ಹಣ ಹೊಂದಿಸಬೇಕಾದ ಹೊಣೆಯೂ ವೆಂಕಟೇಶರ ಮೇಲಿತ್ತು..! ಇದರ ನಡುವೆಯೇ ವೆಂಕಟೇಶರಿಗೂ ಕಂಕಣ ಭಾಗ್ಯ ಕೂಡಿ ಬಂದಿದ್ದರಿಂದ ಮದುವೆಯೂ ಆದ್ರು..!
ಕೇವಲ ಎರಡೇ ಎರಡು ಎಕರೆ ಅಡಿಕೆ ತೋಟ ಇಟ್ಕೊಂಡು ಮನೆ ಸಾಲನೂ ತೀರಿಸಿಕೊಳ್ತಾ, ತಮ್ಮಂದಿರಿಗೂ ವಿದ್ಯಾಭ್ಯಾಸ ಕೊಡಿಸಿದ್ರು..! ಮೊದಲನೇ ತಮ್ಮ ಸುರೇಶ್ ಎಂಕಾಂ ಪದವಿಧರನಾದರೆ, ಎರಡನೇ ತಮ್ಮ ಸತೀಶ್ ಎಂಎಸ್ಸಿ ಪದವೀಧರ..! ಆ ಟೈಮಲ್ಲಿ ಇಷ್ಟೊಂದು ಓದಿದವರು ಆ ಊರಲ್ಲಿ ಇವರಿಬ್ಬರನ್ನು ಬಿಟ್ಟರೆ ಬೇರೆ ಯಾರೂ ಇರ್ಲಿಲ್ಲ..!
ತಮ್ಮಂದಿರ ವಿದ್ಯಾಭ್ಯಾಸ ಮುಗಿಯುವಷ್ಟರಲ್ಲಿ ವೆಂಕಟೇಶ್ರ ಮಕ್ಕಳು ಶಾಲೆಗೆ ಹೋಗ್ತಾ ಇದ್ರು..! ತಮ್ಮಂದಿರ ವಿದ್ಯಾಭ್ಯಾಸ ಮುಗಿಯಿತಲ್ಲಾ..? ಇನ್ನು ಅವರ ಕಾಲಮೇಲೆ ಅವರು ನಿಲ್ತಾರೆ ಅಂತ ಅಂದುಕೊಳ್ತಾರೆ ವೆಂಕಟೇಶ್..!
ಎಂ.ಕಾಂ ಮಾಡಿದ ಸುರೇಶ್ ಬ್ಯಾಂಕ್ ಎಕ್ಸಾಮ್ ಪಾಸ್ ಮಾಡಿ ಬ್ಯಾಂಕ್ ಉದ್ಯೋಗಿ ಆದ..! ಆದರೆ, ಎಂಎಸ್ಸಿ ಓದಿದ ಸತೀಶ್ ಹಳ್ಳಿ ಬದಿ ಎಮ್ಮೆ ಮೇಯಿಸ್ತೀನಿ ಅಂತ ಮನೆಯಲ್ಲೇ ಉಳ್ಕೊಂಡ..! ಹೇ, ಮನೆ ಕಡೆ ಇರು ಅಂತ ನಿನಗೆ ಎಂಎಸ್ಸಿ ಮಾಡಿಸಿದ್ದಾ? ಕೆಲಸಕ್ಕೆ ಹೋಗೋ ಮಾರಾಯ ಅಂದ್ರೂ ಸತೀಶ್ ಮನೆಯಲ್ಲೇ ಇದ್ದು ಬಿಟ್ಟ..! ಪಾಪ, ವೆಂಕಟೇಶ್ ಕಷ್ಟದಲ್ಲೂ ಇವನಿಗೆ ಖರ್ಚು ಮಾಡಿದ ಹಣವೆಲ್ಲಾ ನೀರಿನಲ್ಲಿ ಹೋಮ ಮಾಡಿದ ಹಾಗೆ ಆಯ್ತು..!
ಇಬ್ಬರು ತಮ್ಮಂದಿರಿಗೂ ಮದುವೆಯನ್ನು ಮಾಡಿದ್ರು ವೆಂಕಟೇಶ್. ಬ್ಯಾಂಕ್ ಉದ್ಯೋಗಿ ಸುರೇಶ್ ತನ್ನ ಹೆಂಡತಿ ಜೊತೆ ಶಿವಮೊಗ್ಗಲ್ಲೇ ನೆಲೆ ಕಂಡುಕೊಳ್ತಾರೆ..! ವೆಂಕಟೇಶ್ ಪಿತ್ರಾರ್ಜಿತವಾಗಿ ಬಂದಿರುವ ಎರಡು ಎಕರೆ ಅಡಿಕೆ ತೋಟದಲ್ಲಿ ಸಾಲವನ್ನೂ ತೀರಿಸ್ಕೊಂಡು, ತನ್ನ ಎರಡು ಮಕ್ಕಳನ್ನು ಓದ್ಸಬೇಕು..! ಜೊತೆಗೆ ಸತೀಶನ ಸಂಸಾರವನ್ನೂ ನಿಭಾಯಿಸಬೇಕು..! ಈ ಪಿತ್ರಾರ್ಜಿತ ಆಸ್ತಿಯನ್ನೇ ನಂಬಿಕೊಂಡು ಕೂರೋಕೆ ಆಗಲ್ಲ ಅಂತ ಲೋನ್ ಮಾಡಿ ಹೊರನಾಡು ಹತ್ತಿರ ಜಮೀನೂ ತಗೊಂಡು ನೀನು ನೋಡ್ಕೋ ಅಂತ ಸತೀಶನಿಗೆ ಅಲ್ಲಿ ಮನೆ ಮಾಡಿ ಕೊಡ್ತಾರೆ ವೆಂಕಟೇಶ್..! ಸತೀಶ್ ಲೋನ್ ತೀರಿಸಿಕೊಂಡು ಆರಾಮಾಗಿ ಇರ್ಬಹುದಿತ್ತು. ಆದರೆ ಅವನೆಷ್ಟು ಸೋಮಾರಿನೋ ಅದಕ್ಕಿಂತ ಹೆಚ್ಚು ಮೈಗಳ್ಳಿ ಅವನ ಹೆಂಡ್ತಿ..! ಕಷ್ಟ ಪಡೋದಿಲ್ಲ, ಬರೀ ಮೋಜಿ! ಹೊರನಾಡಿನಲ್ಲಿ ಎರಡು ವರ್ಷನೂ ಇರ್ಲಿಲ್ಲ..! ಆ ಮನೆ ಮತ್ತೆ ಜಮೀನನ್ನೂ ನುಂಗಿ ನೀರು ಕುಡಿದು ಬಿಡ್ತಾರೆ..! ಲೋನ್ ಮಾತ್ರ ತೀರಿರಲ್ಲ..!
ವೆಂಕಟೇಶ್ ಅಂದ್ರೆ ಆ ಬ್ಯಾಂಕ್ ಲೋನ್ ಅನ್ನೂ ಅವ್ರೇ ತೀರಿಸಬೇಕಾಯಿತು..! ಇದೇ ಟೈಮ್ ನಲ್ಲಿಯೇ ಸುರೇಶ ಕೂಡ ಬ್ಯಾಂಕ್ ನಲ್ಲಿ ಹಣ ಲಪಟಾಯಿಸಿ, ಕೆಲಸ ಕಳ್ಕೊಂಡು ಫ್ಯಾಮಿಲೀ ಸಮೇತ ಗಂಟು ಮೋಟೆ ಕಟ್ಕೊಂಡು ಮನೆಗೆ ಬರ್ತಾನೆ..! ಇಷ್ಟೆಲ್ಲಾ ಆದ್ ಮೇಲೆ ವೆಂಕಟೇಶ್ ಜೊತೆನೇ ಮೈಬಗ್ಗಿಸಿ ದುಡಿದು ಸಾಲ ತೀರಿಸಲು ಅವನೊಡನೆ ಕೈ ಜೋಡಿಸಿದ್ರೆ ಒಳ್ಳೆಯದಾಗ್ತಾ ಇತ್ತೇನೋ..?! ಆದ್ರೆ ಸುರೇಶ್, ಸತೀಶ್, ಇಬ್ರೂ ಅಣ್ಣಾ ನಮಗೆ ಆಸ್ತಿಯಲ್ಲಿ ಪಾಲು ಬೇಕು ಅಂತಾರೆ..! ಪಿತ್ರಾರ್ಜಿತವಾಗಿ ಬಂದ ಎರಡು ಎಕರೆ ಅಡಿಕೆ ತೋಟ ಮೂರು ಭಾಗ ಮಾಡ್ಲೇ ಬೇಕಾಗುತ್ತೆ! ವೆಂಕಟೇಶ್ ಅವರಿಬ್ಬರ ಪಾಲಿನ ತೋಟವನ್ನು ಅವರವರ ಹೆಸರಿಗೆ ಮಾಡಿಕೊಟ್ರು! ಆದ್ರೆ ಎಲ್ಲಾ ಸಾಲ ಇವ್ರ ಮೇಲೆಯೇ ಇದೆ..! ಇರುವುದು ಮೂರು ಮತ್ತೊಂದು ಅಡಿಕೆ ಮರ..! ವೆಂಕಟೇಶ್ ಈಗ ಸಾಲ ತೀರಿಸುತ್ತಾರೋ? ವಯಸ್ಸಿಗೆ ಬಂದ ಮಗಳ ಮದ್ವೆ ಮಾಡ್ತಾರ? ಮಗನನ್ನು ಓದ್ಸ್ತಾರ..? ಒಂದೂ ಗೊತ್ತಿಲ್ಲ..! ತಮಗಾಗಿ ಜೀವನ ತೇಯ್ದ ಅಣ್ಣಾ ಕಷ್ಟದಲ್ಲಿ ಬಂಧಿ ಆಗಿದ್ದಾನೆಂಬ ಕನಿಕರವೂ ಇಲ್ಲದ ಆ ಇಬ್ಬರು ತಮ್ಮಂದಿರು ಇಂದು ಅಣ್ಣನ ಕಷ್ಟಕ್ಕಾಗುವ ಮಾತು ಬಿಟ್ಟಾಕಿ, ಅಣ್ಣನ ಮನೆಗೇ ಹೋಗ್ತಾ ಇಲ್ಲ..! ಮಾತು ಕೂಡ ಆಡ್ತಾ ಇಲ್ಲ..! ತ್ಯಾಗಮಯಿ ಅಣ್ಣಾ ಕಷ್ಟದಲ್ಲೇ ಬದುಕು ಸವೆಸ್ತಾ ಇದ್ದಾರೆ..! ಅವರಿಗೆ ಮಗನೇ ಆಧಾರ..!
- ಶಶಿಧರ ಡಿ ಎಸ್ ದೋಣಿಹಕ್ಲು
Like us on Facebook The New India Times
POPULAR STORIES :
ಒಂದು ವರ್ಷ ಸೈಲೆಂಟಾಗಲಿದೆ ಚಿನ್ನಸ್ವಾಮಿ ಕ್ರಿಕೆಟ್ ಮೈದಾನ…!
ಸಿಸಿ ಟಿವಿಯಲ್ಲಿ ಸೆರೆಯಾದ ನಟ ರಿತೇಶ್ ದೇಶ್ ಮುಖ್ ಕಳ್ಳತನ..!
ವೆಸ್ಟ್ ಇಂಡೀಸ್ ಆಟಗಾರರಿಗೆ `ಸೆಕ್ಸ್’ ಅಂದ್ರೆ ಅಷ್ಟಿಷ್ಟಾನಾ..? ಕ್ರಿಸ್ ಗೇಲ್ ಬ್ಯಾಟು.. ಪತ್ರಕರ್ತೆಯ ಎರಡು ಕೈ..!!
ಪ್ರತಿ 10 ನಿಮಿಷಕ್ಕೆ ಶುರುವಾಗುತ್ತೆ ಹೊಸ ಜೀವನ..!! ಇದು ರೀಲ್ ಅಲ್ಲ ರಿಯಲ್ ಗಜನಿಯ ಕಥೆ..!!!
ಅಭಿಷೇಕ್ ಗೆ ಗೂಗಲ್ ನೀಡುತ್ತೆ 20000000 ರೂಪಾಯಿಗಳ ಸಂಬಳ..! ಐಐಟಿ ವಿದ್ಯಾರ್ಥಿಗೆ ಕೋಟಿ ಕೋಟಿ ಸಂಬಳದ ಆಫರ್ ..!
ಅವಳಲ್ಲದೆ ಅವನನ್ನು ಬೇರೆ ಯಾರೂ ಮದುವೆ ಆಗ್ತಿರಲಿಲ್ಲ..! ಈ ಸ್ಟೋರಿ ಓದಿದ ಮೇಲೆ ಹೇಳ್ತೀರಾ, ಅವಳು ನಿಜಕ್ಕೂ ಗ್ರೇಟ್..!
ಹಣ ಇದ್ರೆ ಮಾತ್ರ ಜನ..! ಅಂದು ಅನ್ನದಾನ ಮಾಡಿದ್ದ ಕುಟಂಬ ಇವತ್ತು..?!