44 ವರ್ಷದ ನಂತರ ಜೈಲಿನಿಂದ ಹೊರಬಂದ ವ್ಯಕ್ತಿಯ ಪ್ರತಿಕ್ರಿಯೆ..! ಸುಮ್ನೆ ಕಲ್ಪಿಸಿಕೊಳ್ಳಿ, ನಿಮ್ಮನ್ನು ಇವತ್ತು ಕತ್ತಲೆ ಕೋಣೆಯಲ್ಲಿಟ್ಟು, 2059ಕ್ಕೆ ಬಿಡುಗಡೆ ಮಾಡಿದ್ರೆ..?!

Date:

ಇವತ್ತೇ ನಿಮ್ಮನ್ನು ಕತ್ತಲೆ ಕೋಣೆಯಲ್ಲಿಡುತ್ತಾರೆ..! ನಿಮಗೆ ಆ ನಾಲ್ಕು ಗೋಡೆಯಿಂದ ಆಚೆ ಬರೋಕೆ ಆಗುವುದೇ ಇಲ್ಲ..! ಊಟ ತಿಂಡಿ ಬಗ್ಗೆ ಯೋಚನೆ ಬೇಡ.. ಆ ಕೋಣೆಗೇ ತಂದು ಕೊಡುತ್ತಾರೆ..! ಇವತ್ತು ನಿಮ್ಮನ್ನು ಆ ಕತ್ತಲೆ ಕೋಣೆಯಲ್ಲಿ ಕೂಡಾಕಿದರೆ…? ನಿಮ್ಮನ್ನು ಅಲ್ಲಿಂದ ಬಿಡುಗಡೆಗೊಳಿಸೋದು 2059ನೇ ಇಸವಿಯಲ್ಲಿ..! ಅಂದರೆ ಇವತ್ತಿನಿಂದ 44 ವರ್ಷಗಳ ಕಾಲ ನಿಮ್ಮನ್ನು ಆ ಕತ್ತಲೆ ಕೋಣೆ ಅಥವಾ ಯಾವುದಾದರೂ ಜೈಲಿನಲ್ಲಿ ಇಡುತ್ತಾರೆಂದು ಕಲ್ಪಿಸಿಕೊಳ್ಳಿ..! 44 ವರ್ಷದ ನಂತರ ನೀವು ಜೈಲಿನಿಂದ ಹೊರ ಬಂದಾಗ ನಿಮ್ಮ ಕಣ್ಣಿಗೆ ಪ್ರಪಂಚ ಹೇಗೆ ಕಾಣಬಹುದು..?! ಎಂಥೆಲ್ಲಾ ಬದಲಾವಣೆ ಆಗಬಹುದು..?!
ಇಂಥಹದ್ದೇ ಅನುಭವ ನ್ಯೂಯಾರ್ಕ್ ನ `ಓಟಿಸ್ ಜಾನ್ಸನ್’ ಎಂಬುವವರಿಗೆ ಆಗಿದೆ..! 44 ವರ್ಷದ ಹಿಂದೆ ಸಬ್ ಇನ್ಸ್ ಪೆಕ್ಟರ್ ಒಬ್ಬರನ್ನು ಕೊಲೆಮಾಡಲು ಯತ್ನಿಸಿ ಜೈಲು ಸೇರಿದ್ದ ಇವರು 44 ವರ್ಷದ ನಂತರ ಇತ್ತೀಚೆಗಷ್ಟೇ ಹೊರ ಪ್ರಪಂಚಕ್ಕೆ ಕಾಲಿಟ್ಟಿದ್ದಾರೆ..!
ಇಷ್ಟೊಂದು ವರ್ಷ ನಾಲ್ಕು ಗೋಡೆಯ ನಡುವೆಯೇ ಇದ್ದ ಜಾನ್ಸನ್ 44 ವರ್ಷದ ಬದಲಾವಣೆಗಳಿಗೆ ಹೊಂದಿಕೊಳ್ಳಲು ತುಂಬಾನೇ ಕಷ್ಟಪಡುತ್ತಿದ್ದಾರೆ..!
“ನಾನು ಅನೇಕರನ್ನು ನೋಡಿದೆ, ಬಹುತೇಕ ಜನರು ಅವರಷ್ಟಕ್ಕೆ ಅವರೇ ಮಾತನಾಡುತ್ತಿದ್ದಾರೆ..! ನಾನು ಅವರ ಹತ್ತಿರ ಹೋಗಿ ನೋಡಿದಾಗ ಅವರು ಕಿವಿಯಲ್ಲಿ ಯಾವುದೋ ವಸ್ತುವನ್ನು ಇಟ್ಟು ಕೊಂಡಿದ್ದರು” ಎಂದು 69 ವರ್ಷದ ಜಾನ್ಸನ್ 44 ವರ್ಷದಲ್ಲಾದ ಬದಲಾವಣೆಯನ್ನು ಅಚ್ಚರಿಯಿಂದ ಹೇಳುತ್ತಾರೆ..!
ಅವತ್ತು ಅವರ ಕೋಪ 44 ವರ್ಷಗಳ ಕಾಲ ಜೈಲಿನಲ್ಲಿರುವಂತೆ ಮಾಡ್ತು..! ಅದೇಕಾರಣಕ್ಕೆ ಅವರು 44 ವರ್ಷದ ಹಿಂದೆಯೇ ಉಳಿದು ಬಿಟ್ಟಿದ್ದಾರೆ..!
ಕೋಪ ನಮ್ಮ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಸ್ಥಗಿತಗೊಳಿಸಿ ಬಿಡುತ್ತೆ..! ಎಲ್ಲ ಬೆಳವಣಿಗೆಗಳಿಗೂ ಕಾರಣವೊಂದು ಇದ್ದೇ ಇರುತ್ತೆ..! ಈಗ ಆಗಿದ್ದು ಆಯ್ತು ತಾನು ಹಿಂದಿನ ಬಗ್ಗೆ ಯೋಚನೆ ಮಾಡೋದನ್ನು ಬಿಟ್ಟು ಭವಿಷ್ಯದ ಬಗ್ಗೆ ಗಮನ ಹರಿಸುತ್ತೇನೆ..! ತಾನು ಹಿಂದೆ ಹೋಗಲಾರೆ.. ಮುಂದೆ ಬಂದೇ ಬರುವೆ..! ತಾನು ಸಮಾಜದಲ್ಲಿ ಬದುಕುವ ಪರಿ ಬಗ್ಗೆ ಯೋಚಿಸುತ್ತೇನೆಂದು ಸ್ವತಃ ಅವರೇ ಹೇಳುತ್ತಿದ್ದಾರೆ..! 44 ವರ್ಷದ ಬಳಿಕ ಜೈಲಿನಿಂದ ಹೊರಬಂದು ಹೊರ ಜಗತ್ತನ್ನು ನೋಡ್ತಾ ಇರೋ ಇವರ ಅಭಿಪ್ರಾಯವನ್ನು ಇವರ ಮಾತಲ್ಲೇ ಕೇಳಿ..! ಇಲ್ಲಿ ಅವರೇ ಮಾತಾಡೋ ವೀಡಿಯೋ..

Video :

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಇಡೀ ಜೀವನವನ್ನೇ ತಮ್ಮಂದಿರಿಗಾಗಿ ಮುಡಿಪಾಗಿಟ್ಟ ಅಣ್ಣ..!

ಕರ್ನಾಟಕದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕೋ ಲೋಕಾಯುಕ್ತವೇ ನಿರ್ನಾಮವಾಗುತ್ತಾ..? ಜನರೇ ನಿಮ್ಮ ಧ್ವನಿಯೆತ್ತಿ.! ಇಲ್ಲವಾದ್ರೆ ನಾಳೆ ನಮಗೇ ಕಷ್ಟ..!

ಎಲ್ಲರಿಗೂ ಸಂವಿಧಾನ ದಿನದ ಶುಭಾಷಯಗಳು..! ಭಾರತ ಪ್ರಧಾನ ಮಂತ್ರಿಗಳಿಂದ ಘೋಷಣೆ..!

ರಾಹುಲ್ ಗಾಂಧಿ ಇಂದು ಮೇಕ್ ಇನ್ ಇಂಡಿಯಾ ವರ್ಕ್ ಆಗ್ತಿಯಾ ಅಂತ ಕೇಳಿದ್ರು..! ಬೆಂಗಳೂರು ಹುಡುಗೀರು ಏನಂದ್ರು ಗೊತ್ತಾ..?!

ಅಭಿಷೇಕ್ ಗೆ ಗೂಗಲ್ ನೀಡುತ್ತೆ 20000000 ರೂಪಾಯಿಗಳ ಸಂಬಳ..! ಐಐಟಿ ವಿದ್ಯಾರ್ಥಿಗೆ ಕೋಟಿ ಕೋಟಿ ಸಂಬಳದ ಆಫರ್ ..!

ಫೇಸ್ ಬುಕ್ ಜನಪ್ರಿಯತೆಯಲ್ಲಿ ಮೊದಲನೇ ಸ್ಥಾನದಲ್ಲಿ ಯಾರಿದ್ದಾರೆ ಗೊತ್ತಾ..?! ಈ ಪಟ್ಟಿಯನ್ನು ನೋಡಿದ್ರೆ, ನಿಮಗೆ ಖಂಡಿತಾ ಆಶ್ಚರ್ಯವಾಗುತ್ತೆ..!

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...