ಹೆಸರಾಂತ ನಟಿ ಶ್ರುತಿ ಹರಿಹರನ್ ಸ್ಪೋಟಕ ಸತ್ಯವೊಂದನ್ನು ಹೊರಹಾಕಿದ್ದಾರೆ. ಬಾಲಿವುಡ್ , ಹಾಲಿವುಡ್ ನಲ್ಲಿ ಮಾತ್ರವಲ್ಲ ಸ್ಯಾಂಡಲ್ ವುಡ್ ನಲ್ಲೂ ನಟಿಯರಿಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂಬ ಭಯಾನಕ ವಿಷಯವನ್ನು ಶ್ರುತಿ ಬಯಲಿಗೆಳೆದಿದ್ದಾರೆ.
ನಿರ್ಮಾಪಕರ ಕಾಮಪೂರಣವನ್ನು ಹೇಳಿರುವ ನಟಿ , ಈ ಹಿಂದೆ ತಮಗೆ 5ಮಂದಿ ನಿರ್ಮಾಪಕರು ಮಂಚಕ್ಕೆ ಕರೆದಿದ್ದರು ಎಂದು ಶ್ರುತಿ ತಿಳಿಸಿದ್ದಾರೆ.
ಹೈದರಾಬಾದ್ ನಲ್ಲಿ ನಡೆದ ಇಂಡಿಯಾ ಟುಡೇ ವಾಹಿನಿಯ ಕಾನ್ ಕ್ಲೇವ್ ಸೌಥ್ 2018ಕಾರ್ಯಕ್ರಮದಲ್ಲಿ ಮಾತಾಡಿದ ಶ್ರುತಿ, ಖ್ಯಾತ ತಮಿಳು ನಿರ್ಮಾಪಕರೊಬ್ಬರು ಲೈಂಗಿಕ ಕಿರುಕುಳ ನೀಡಿದ್ದನ್ನು ಹೇಳಿದ್ದಾರೆ. ತನ್ನ 18ನೇ ವಯಸ್ಸಲ್ಲಿ ಎದುರಿಸಿದ ಕಿರುಕುಳದ ಮಾಹಿತಿ ಬಹಿರಂಗ ಪಡಿಸಿದ್ದಾರೆ.
ತಾನು ನೃತ್ಯಗಾರ್ತಿ ಆಗಿದ್ದ ಆ ದಿನಗಳಲ್ಲಿ ಸಿನಿಮಾಕ್ಕೆ ಪ್ರಯತ್ನಿಸುತ್ತಿರುವಾಗ. ಕನ್ನಡದ ನಿರ್ಮಾಪಕರೊಬ್ಬರು ಮಂಚಕ್ಕೆ ಕರೆದಿದ್ದರು ಎಂದು ಶ್ರುತಿ ಹೇಳಿದ್ದಾರೆ.
ಅದಾದ ಮೇಲೆ ನನ್ನ ಕನ್ನಡ ಸಿನಿಮಾವೊಂದನ್ನು ತಮಿಳಲ್ಲಿ ರಿಮೇಕ್ ಮಾಡಲಿದ್ದ ತಮಿಳುನಿರ್ಮಾಪಕರೊಬ್ಬರು ಕರೆ ಮಾಡಿ ಕನ್ನಡದಲ್ಲಿ ನೀವು ಮಾಡಿದ ಪಾತ್ರವನ್ನು ತಮಿಳಲ್ಲೂ ನೀವೇ ಮಾಡಿ, ಆದರೆ ನಾವು 5 ಜನ ನಿರ್ಮಾಪಕರಿದ್ದೇವೆ ಅಡ್ಜೆಸ್ಟ್ ಮಾಡಿಕೋ ಅಂದಿದ್ದ…! ನಾನು ಚಪ್ಪಲಿ ತಗೋತಿನಿ ಎಂದಿದ್ದೆ ಎಂದು ಶ್ರುತಿ ತಿಳಿಸಿದ್ದಾರೆ.