ನಮ್ಮ ದೇಶದಲ್ಲಿ ಸಾಮಾನ್ಯ ಜನ ಯಾರೂ ರಾಜಕೀಯದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ತಾವಾಯಿತು ತಮ್ಮ ಕೆಲಸ ಆಯಿತು ಎಂದು ತಮ್ಮ ಪಾಡಿಗೆ ತಾವಿರುತ್ತಾರೆ. ಪಕ್ಷಗಳು ಜಾತಿ ಧರ್ಮಗಳ ನಡುವೆ ಕಿಚ್ಚು ಹಚ್ಚಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಇತ್ತೀಚಿನ ಬೆಳವಣಿಗೆಯಲ್ಲಿ ಧರ್ಮ ಧರ್ಮಗಳ ನಡುವೆ ಜಾತಿಗಳ ನಡುವೆ ಸಾಮರಸ್ಯ ತೀರಾ ಹದಗೆಟ್ಟಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ಹುಜಗೂರು ಗ್ರಾಮ ಇಂತಹ ರಾಜಕೀಯ ಕೆಸರೆರೆಚಾಟಕ್ಕೆ ಸಾಕ್ಷಿಯಾಗಿದೆ. ಗ್ರಾಮದಲ್ಲಿ ವಾಸಿಸುವ 130 ಕುಟುಂಗಳಲ್ಲಿ 74 ಕುಟುಂಬಗಳು ಜೆಡಿಎಸ್ ಪಕ್ಷವನ್ನು 56 ಪಕ್ಷಗಳನ್ನು ಬೆಂಬಲಿಸುತ್ತವೆ.
ಎಷ್ಟರ ಮಟ್ಟಿಗೆ ಎಂದರೆ ಕಾಂಗ್ರೆಸ್ ನವರು ಜೆಡಿಎಸ್ ನಿವಾಸಿಗಳ ಬೀದಿಯಲ್ಲಿಮ ಕಾಲಿಡುವುದಿಲ್ಲ. ಜೆಡಿಎಸ್ ನವರು ಕಾಂಗ್ರೆಸ್ ನ ಮನೆ ಮುಂದೆಯೂ ಸುಳಿಯುವುದಿಲ್ಲ. ಹಾಗೆ ಪರಸ್ಪರರು ಮಾತನಾಡುವುದೂ ಇಲ್ಲ.
ಸಾವು ಸಂಭವಿಸಿದರು ಪರಸ್ಪರರ ಮನೆಗೆ ಯಾರೂ ಹೋಗುವುದಿಲ್ಲ,. ರಾಷ್ಟ್ರೀಯ ಉತ್ಸವಗಳು, ಧಾರ್ಮಿಕ ಹಬ್ಬಗಳನ್ನು ಪ್ರತ್ಯೇಕವಾಗಿ ಆಚರಿಸುತ್ತಾರೆ. ಗ್ರಾಮದ ಆಂಜನೇಯನಿಗೆ ಜೆಡಿಎಸ್ ನವರು ಶನಿವಾರ ಪೂಜಿಸಿದರೆ ಕಾಂಗ್ರೆಸ್ ನವರು ಸೋಮವಾರ ಪೂಜಿಸುತ್ತಾರೆ. ಈ ಪಕ್ಷ ಬೇಧಭಾವ ಆಟೋ ದಲ್ಲಿ ಸಂಚರಿಸುವಾಗಲು ಕಂಡು ಬರುತ್ತದೆ. ಶಾಲೆಗೆ ಹೋಗುವ ಚಿಕ್ಕ ಮಕ್ಕಳು ಕೂಡ ಕಾಂಗ್ರೆಸ್-ಜೆಡಿಎಸ್ ಎಂದು ಮಾತನಾಡಿ ಕೊಳ್ಳುವಷ್ಟರ ಮಟ್ಟಿಗೆ ರಾಜಕೀಯ ವೈಷಮ್ಯ ಬೆಳೆದಿದೆ.