No menu items!
26.3 C
Munich
Thursday, June 18, 2026

ಟೀ ಮಾರುವ ಕನ್ನಡಿಗನ ಮೇಲೆ ತಮಿಳರ ದೌರ್ಜನ್ಯ…!

Must read

ನಮ್ಮ ಬೆಂಗಳೂರಿನಲ್ಲಿ ತಮಿಳರ ವರ್ತನೆ ಮಿತಿ ಮೀರ್ತಿದೆ. ಟೀ ಮಾರುವ ಹುಡುಗನನ್ನು ಅಡ್ಡಗಟ್ಟಿ ಮೊಬೈಲ್ ಮತ್ತು ಹಣವನ್ನು ಕಿತ್ತುಕೊಂಡ ಘಟನೆ ನಡೆದಿದೆ.


ಕತ್ರಿಗುಪ್ಪೆಯ ನಿವಾಸಿ ಧನಂಜಯ್ (20) ಎಂಬ ಯುವಕ ಪ್ರತಿದಿನ ಮನೆಯಲ್ಲಿ ಟೀ ಮಾಡಿಕೊಂಡು ರಸ್ತೆಯಲ್ಲಿ ಮಾರುತ್ತಾ ಅಷ್ಟೋ ಇಷ್ಟೋ ಹಣ ಸಂಪಾದಿಸುತ್ತಾ ಕುಟುಂಬಕ್ಕೆ ನೆರವಾಗಿದ್ದಾನೆ.


ತ್ಯಾಗರಾಜನಗರ, ಚಾಮರಾಜಪೇಟೆ, ಮೆಜೆಸ್ಟಿಕ್, ಮಲ್ಲೇಶ್ವರಂ, ಮಂತ್ರಿಮಾಲ್ ಮೊದಲಾದ ಪ್ರಮುಖ ಪ್ರದೇಶಗಳಲ್ಲಿ ಟೀ ಮಾರುತ್ತಾನೆ. ಎಂದಿನಂತೆ ಇಂದು (20-01-2018) ಟೀ ಮಾರುತ್ತಿದ್ದ.


ಮಧ್ಯಾಹ್ನ 12 ಗಂಟೆ ಸುಮಾರಿಗೆ ಮಲ್ಲೇಶ್ವರಂನಲ್ಲಿ ನಿತ್ಯದಂತೆ ಕಚೇರಿಗಳಿಗೆ ಟೀ ಕೊಟ್ಟು. ತ್ಯಾಗರಾಜ ನಗರಕ್ಕೆ ವಾಪಸ್ಸಾಗುವಾಗ ಓಕಳಿ ಪುರಂ ನಲ್ಲಿ 3 ಮಂದಿ ಅಪರಿಚಿತ ಯುವಕರು ಬಂದು, ಸ್ವಲ್ಪ ದೂರದಲ್ಲೇ ಗಾರೆ ಕೆಲಸ ನಡೆಯುತ್ತಿದ್ದು, ಅಲ್ಲಿಗೆ 10 ಟೀ ಬೇಕಿದೆ ಎಂದಿದ್ದಾರೆ. ಕೇವಲ 1-2 ಟೀಗಳಿಗಾಗಿದ್ದರೆ ಧನಂಜಯ್ ಹೋಗುತ್ತಿರಲಿಲ್ಲ. ಆದರೆ, 10 ಟೀ ಮಾರಾಟವಾಗುತ್ತದೆ, ಒಂದ್ 60 ರೂಪಾಯಿ ಸಿಗುತ್ತಲ್ಲಾ ಎಂಬ ಆಸೆಯಿಂದ ಆ ಹುಡುಗರನ್ನು ನಂಬಿ ಅವರು ಕರೆದಲ್ಲಿಗೆ ಹೋಗುತ್ತಾನೆ.


ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋದ ಆ ತಮಿಳು ಯುವಕರು ಚಾಕು ತೋರಿಸಿ ಟೀ ಫ್ಲಾಸ್ಕ್ ಇಟ್ಕೊಂಡಿದ್ದ ಎರಡು ಚೀಲಗಳನ್ನು ಕಸಿದು ಅದರಲ್ಲಿ ಹಣವನ್ನು ಹಾಗೂ ಜೇಬಿನಲ್ಲಿದ್ದ ಮೊಬೈಲ್ ಅನ್ನು ಕಿತ್ತುಕೊಂಡು ಹೋಗಲು ಹೇಳಿದ್ದಾರೆ.
ಅಪ್ಪ ಕೊಡಿಸಿದ ಮೊಬೈಲ್, ದಯವಿಟ್ಟು ಕೊಡಿ ಎಂದು ಕಾಲಿಗೆ ಬಿದ್ದರೂ ಕೇಳದೆ ಚಾಕುವಿನಿಂದ ಬೆದರಿಸಿ ಓಡಿಸಿದ್ದಾರೆ.
ಧನಂಜಯ್ ಕೂಡಲೇ ಆಟೋದವರನ್ನು ಕರೆದುಕೊಂಡು ಬಂದಿದ್ದಾನೆ. ಅಷ್ಟರಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ.
ಈ ಬಗ್ಗೆ ಧನಂಜಯ್ ಅಗ್ರಹಾರ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article