ನರೇಶ್ ಕುಮಾರ್ ನಿರ್ದೇಶನದ, ಕೆ.ಎ ಸುರೇಶ್ ನಿರ್ಮಾಣದ ಚಿತ್ರ ‘ರಾಜು ಕನ್ನಡ ಮೀಡಿಯಂ ‘ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಗುರುನಂದನ್,ಅವಂತಿಕಾ ಶೆಟ್ಟಿ , ಆಶಿಕಾ ರಂಗನಾಥ್ ಅಭಿನಯದ ಈ ಸಿನಿಮಾಕ್ಕೆ ಹಿಂದಿ ಚಿತ್ರರಂಗ ಕೂಡ ಮನಸೋತಿದೆ.
ಚಿತ್ರದ ಕಥೆಯನ್ನು ಇಷ್ಟಪಟ್ಟಿರೋ ಆಮೀರ್ ಖಾನ್ ಮುಂದಾಳತ್ವದ ನಿರ್ಮಾಣ ಸಂಸ್ಥೆ ಈ ಕೂಡಲೇ ರಿಮೇಕ್ ಹಕ್ಕು ಬೇಕೆಂದು ಕೇಳಿಕೊಂಡಿದೆ.
ಆಮೀರ್ ಖಾನ್ ಅವರ ನಿರ್ಮಾಣ ಸಂಸ್ಥೆ ರಾಜು ಕನ್ನಡ ಮೀಡಿಯಂ ರಿಮೇಕ್ ಹಕ್ಕು ಪಡೆಯಲು ಮುಂದಾಗಿದೆ. ಆಮೀರ್ ಪ್ರೊಡಕ್ಷನ್ ಹೌಸ್ ಟ್ರೇಲರ್ ನೋಡಿಯೇ ಇಂಪ್ರೆಸ್ ಆಗಿತ್ತು. ಸುದೀಪ್ ಪಾತ್ರವಂತೂ ಈ ಸಂಸ್ಥೆಗೆ ತುಂವಾ ಹಿಡಿಸಿದೆ.
ಬಾಲಿವುಡ್ ಗೆ ಕನ್ನಡದ ರಾಜು ರೀಮೇಕ್ ಆದಲ್ಲಿ ಆಮೀರ್ ಖಾನ್ ಅವರೇ ರಾಜು ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಆಮೀರ್ ನಿರ್ಮಾಣ ಸಂಸ್ಥೆ ರಿಮೇಕ್ ಹಕ್ಕು ಕೇಳಿದ್ದಕ್ಕೆ ನಿರ್ಮಾಪಕ ಕೆ.ಎ ಸುರೇಶ್ ಸಂತಸ ವ್ಯಕ್ತಪಡಿಸಿದ್ದಾರೆ.