ಚಲಿಸುತ್ತಿದ್ದ ಲಾರಿ ಕೆಳಗೆ ಬೈಕ್ ನುಗ್ಗಿ ಅದೃಷ್ಟವಶಾತ್ ಬೈಕ್ ಸವಾರರು ಸಾವಿನಿಂದ ಪಾರಾದ ಘಟನೆ ಬೇಲೂರಲ್ಲಿ ನಡೆದಿದೆ.
ಶಿರಾಢಿ ಘಾಟ್ ರಸ್ತೆ ಬಂದ್ ಆಗಿರೋ ಕಾರಣ ಧರ್ಮಸ್ಥಳ, ಮಂಗಳೂರು, ಕುಂದಾಪುರ ಕಡೆಗೆ ಹೋಗೋ ವಾಹನಗಳು ಬೇಲೂರು ಮಾರ್ಗವಾಗಿ ಚಾರ್ಮುಡಿ ಮೂಲಕ ಹೋಗುತ್ತಿವೆ. ಇದರಿಂದ ಬೇಲೂರಲ್ಲಿ ವಾಹನ ದಟ್ಟಣಿ ಹೆಚ್ಚಾಗಿದೆ.
ಬೇಲೂರಲ್ಲಿ ನಡೆಯುತ್ತಿರೋ ವೀರಶೈವ ಲಿಂಗಾಯತ ಜನ ಜಾಗೃತಿ ಸಮಾವೇಶಕ್ಕೆ ಕೊಂಡ್ಲಿ ಗ್ರಾಮದ ದೇವರಾಜ್ ತನ್ನ ಹೆಂಡ್ತಿ ಜೊತೆ ಆಗಮಿಸುತ್ತಿದ್ದರು. ಈ ವೇಳೆ ಇವರ ಬೈಕ್ ಲಾರಿ ಕೆಳಕ್ಕೆ ನುಗ್ಗಿದೆ. ಪತ್ನಿ ಕೂಡಲೇ ಪತಿ ಶರ್ಟ್ ಹಿಡಿದು ಎಳೆದಿದ್ದಾರೆ. ಇದರಿಂದ ಚಕ್ರಕ್ಕೆ ಸಿಲುಕುವುದು ತಪ್ಪಿದ್ದು, ಸಣ್ಣ ಪುಟ್ಟ ಗಾಯಗಳಾಗಿವೆಯಷ್ಟೇ. ಬೇಲೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಾಸ್ಸಾಗಿದ್ದಾರೆ.