ವಿವಾದದ ನಡುವೆಯೂ ತೆರೆಕಂಡ ಪದ್ಮಾವತಿ ಸಿನಿಮಾದ ವಿಶೇಷ ಪ್ರದರ್ಶನಕ್ಕೆ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಕೈ ಕೈ ಹಿಡಿದು ಬಂದಿದ್ರು. ಅದೀಗ ಹಳೇ ಸುದ್ದಿ. ಈಗಿನ ಬಿಸಿ ಬಿಸಿ ಸುದ್ದಿ ಅಂದ್ರೆ ಮುತ್ತಿನ ಕಥೆ…!
ದೀಪಿಕಾ ಪಡುಕೋಣೆ ರಣವೀರ್ ಸಿಂಗ್ ಬೆಸ್ಟ್ ಕಿಸ್ಸರ್ ಎಂದು ಹೇಳಿದ್ದಾರೆ. ಈ ವೀಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.
ನೇಹಾ ದೂಪಿಯಾ ನಿರೂಪಣೆಯ `ವೋಗ್ ಬಿಎಫ್‍ಎಫ್’ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಪಾಲ್ಗೊಂಡಿದ್ದ ದೀಪಿಕಾ ಪಡುಕೋಣೆ ನೇಹಾ ಅವರ ನೇರ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ರು…! ರಣವೀರ್ ಸಿಂಗ್ ಅವರ ಮುತ್ತಿನ ಸಾಮಥ್ರ್ಯದ ಬಗ್ಗೆ ನಿಮ್ಮ ಅಭಿಪ್ರಾಯವೇನು ಅಂತ ನೇಹಾ ಕೇಳಿದ ಪ್ರಶ್ನೆಗೆ ನಗುತ್ತಾ ಉತ್ತರಿಸಿದ ದೀಪಿಕಾ ರಣವೀರ್ ಬೆಸ್ಟ್ ಕಿಸ್ಸರ್ ಎಂದು ಹೇಳಿದ್ರು.
ರಣವೀರ್ ಬೆಸ್ಟ್ ಕಿಸ್ಸರ್ ಎಂದ ದೀಪಿಕಾ…!
Date: