ಎಂಆರ್ ಐ ಮಷಿನ್ ಗೆ ಬಲಿಯಾದ್ರು…!

Date:

ಎಂಆರ್ ಐ ಮಷಿನ್ ಗೆ ವ್ಯಕ್ತಿಯೊಬ್ಬರು ಬಲಿಯಾದ ಘಟನೆ ಮುಂಬೈನ ಬಿವೈಎಲ್ ನಾಯರ್ ಚಾರಿಟೇಬಲ್ ಆಸ್ಪತ್ರೆಯಲ್ಲಿ ನಡೆದಿದೆ.
ರಾಜೇಶ್ (32) ಎಂಬುವವರು ಎಂ ಆರ್ ಐ ಮಷಿ‌ನ್ ಗೆ ಸಿಲುಕಿ ಸಾವನ್ನಪ್ಪಿದವರು.


ರಾಜೇಶ್ ಹಿರಿಯರೊಬ್ಬರನ್ನು ಸ್ಕ್ಯಾನಿಂಗ್ ಗೆ ಕರೆದುಕೊಂಡು ಬಂದಿದ್ದರು.‌ ಹೊರಗೆ ಕುಳಿತು‌‌ ಕೊಂಡಿದ್ದಾಗ ಪಕ್ಕದ ಕೋಣೆಯಲ್ಲಿ‌ದ್ದ ಸಿಬ್ಬಂದಿ ರಾಜೇಶ್ ಅವರನ್ನು ಕರೆದು ಲೋಹದ ಸಿಲಿಂಡರ್ ಅನ್ನು ಎಂ ಆರ್ ಐ ಸ್ಕ್ಯಾ‌ನಿಂಗ್ ರೂಂ ಗೆ ತೆಗೆದುಕೊಂಡು ಹೋಗಲು ಹೇಳಿದ್ದಾರೆ.
ಆಗ ರಾಜೇಶ್ ಇದನ್ನು ತೆಗೆದುಕೊಂಡ ಹೋಗಬಹುದೇ ಅಂತ ಪ್ರಶ್ನಿಸಿದ್ದಾರೆ. ಅದಕ್ಕೆ ಸಿಬ್ಬಂದಿ ಏನು ಆಗಲ್ಲ ತಗೊಂಡು ಹೋಗಿ ಅಂದಿದ್ದಾರೆ. ಜೊತೆಗೆ ಮಷಿನ್ ಆಫ್ ಮಾಡಿರೋದಾಗಿಯೂ ತಿಳಿಸಿದ್ದಾರೆ.


ರಾಜೇಶ್ ಸಿಲಿಂಡರ್ ಅನ್ನು ಒಳಗೆ ತೆಗೆದುಕೊಂಡು ಹೋದ ಕೂಡಲೇ‌ ಮಷಿನ್ ಸಿಲಿಂಡರ್ ಸಮೇತ ರಾಜೇಶ್ ಅವರನ್ನು ತನ್ನೊಳಗೆ ಎಳೆದುಕೊಂಡಿದೆ…! ಹತ್ತೇ ಹತ್ತು ನಿಮಿಷದಲ್ಲಿ ರಾಜೇಶ್ ಪ್ರಾಣಪಕ್ಷಿ ಹಾರಿದೆ.
ಎಂ ಆರ್ ಸ್ಕ್ಯಾನಿಂಗ್ ರೂಂ ಅತ್ಯಂತ ಸೂಕ್ಷ್ಮ ಪ್ರದೇಶ. ಅಲ್ಲಿಗೆ ಯಾವುದೇ ಲೋಹಗಳನ್ನು ಕೊಂಡೊಯ್ಯ ಬಾರದು. ಅದಕ್ಕಾಗಿಯೇ ಮೈ‌ಮೇಲಿನ ಚಿನ್ನಾಭರಣಗಳನ್ನು ತೆಗೆದಿಡಲು‌ ಹೇಳೋದು. ಸಿಬ್ಬಂದಿಯ ನಿರ್ಲಕ್ಷತನದ ಪರಮಾವಧಿಯಿಂದ ವ್ಯಕ್ತಿ ಸಾವನ್ನಪ್ಪಿದ್ದಾರೆ.

Share post:

Subscribe

spot_imgspot_img

Popular

More like this
Related

ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದಾರೆ: ಡಿ.ಕೆ.ಶಿವಕುಮಾರ್

ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದಾರೆ: ಡಿ.ಕೆ.ಶಿವಕುಮಾರ್ ಬೆಂಗಳೂರು: ರಸ್ತೆ...

ಮಧುಮೇಹಿಗಳಿಗೆ ಲವಂಗದ ನೀರು ವರದಾನ

ಮಧುಮೇಹಿಗಳಿಗೆ ಲವಂಗದ ನೀರು ವರದಾನ: ಬೆಳಿಗ್ಗೆ ಈ ನೀರು ಕುಡಿಯುವುದರಿಂದ ಬ್ಲಡ್...

ಬೆಂಗಳೂರಿನಲ್ಲಿ ಘೋರ ಘಟನೆ: ಇಬ್ಬರು ಮಕ್ಕಳ ಕೊಂದು ತಾಯಿ ಆತ್ಮಹತ್ಯೆ!

ಬೆಂಗಳೂರಿನಲ್ಲಿ ಘೋರ ಘಟನೆ: ಇಬ್ಬರು ಮಕ್ಕಳ ಕೊಂದು ತಾಯಿ ಆತ್ಮಹತ್ಯೆ! ಬೆಂಗಳೂರು: ಬಾಗಲಗುಂಟೆ...

Bangalore: ಬಾರ್‌ʼನಲ್ಲಿ ಕುಡಿಯಲು ಹೋದ ವ್ಯಕ್ತಿ ನಿಗೂಢ ಸಾವು!

Bangalore: ಬಾರ್‌ʼನಲ್ಲಿ ಕುಡಿಯಲು ಹೋದ ವ್ಯಕ್ತಿ ನಿಗೂಢ ಸಾವು! ಬೆಂಗಳೂರು: ಬಾರ್‌ಗೆ ಕುಡಿಯಲು...