No menu items!
22.3 C
Munich
Friday, June 19, 2026

ದೃಶ್ಯ ಮಾಧ್ಯಮಗಳ ಮೇಲೆ ಕುಮಾರಸ್ವಾಮಿಗೆ ಬೇಜಾರೇಕೆ….?

Must read

ಜೆಡಿಎಸ್ ರಾಜ್ಯಾಧ್ಯಕ್ಷ , ಮಾಜಿ ಮುಖ್ಯಮಂತ್ರಿ ಎಚ್.‌ಡಿ ಕುಮಾರ ಸ್ವಾಮಿ ದೃಶ್ಯ ಮಾಧ್ಯಮಗಳ ಮೇಲೆ ಬೇಸರಗೊಂಡಿದ್ದಾರೆ…!


ಎಲೆಕ್ಟ್ರಾನಿಕ್ ಮೀಡಿಯಾಗಳು ಜೆಡಿಎಸ್ ಬಗ್ಗೆ ಸುದ್ದಿಗಳನ್ನು ಪ್ರಸಾರ ಮಾಡ್ತಿಲ್ಲ ಎಂಬುದು ಎಚ್ ಡಿ ಕೆ ಅವರ ಬೇಜಾರಿಗೆ ಕಾರಣ…


ಬಾಗಲಕೋಟೆಯಲ್ಲಿ ಎಚ್ ಡಿ ಕೆ ಸಂದರ್ಶನವೇ ಬೇಡವೆಂದು ಮಾಧ್ಯಮಗಳಿಗೆ ಕೈ‌ ಮುಗಿದು, ಎಲಕ್ಟ್ರಾನಿಕ್ ಮಾಧ್ಯಮಗಳು ನಮ್ಮ ಸುದ್ದಿಯನ್ನು ವರದಿ ಮಾಡ್ತಿಲ್ಲ. ಜನರಿಗೆ ಒಳ್ಳೆಯ ಸಂದೇಶ ಕೊಡುವ ಸುದ್ದಿಗಳ ಪ್ರಸಾರವಾಗ್ತಿಲ್ಲ.‌ ನಾನು ಮಾತಾಡೋದನ್ನು ಯಾವ ಚಾನಲ್ ಗಳು ಸಹ ಪ್ರಸಾರ ಮಾಡ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ರು.


ನನ್ನ ಸುದ್ದಿಗಳನ್ನು ಕಸದ ಬುಟ್ಟಿಗೆ ಹಾಕಿ ಬಿಜೆಪಿ ಕಾಂಗ್ರೆಸ್ ಸುದ್ದಿಗಳನ್ನು ಮಾತ್ರ ಪ್ರಸಾರ ಮಾಡಲಾಗ್ತಿದೆ. ನಾನೇಕೆ ಟೈಮ್ ವೇಸ್ಟ್ ಮಾಡಿಕೊಳ್ಳಲಿ. ಜನರ ಬಳಿ ಹೋಗ್ತೀನಿ. ಅವರೇ ತೀರ್ಮಾನ ಮಾಡಲಿ. ಏನೇ ಪ್ರತಿಕ್ರಿಯೆ ಕೊಟ್ರು ಅದು ತಪ್ಪಾಗುತ್ತೆ. ಆದ್ದರಿಂದ ನನಗೆ ಬಲವಂತ ಮಾಡ್ಬೇಡಿ ಎಂದು ಕೈ ಮುಗಿದ್ರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article