ಕ್ರಿಕೆಟ್ ಸಾಮ್ರಾಟ್ ವಿರಾಟ್ ಕೊಯ್ಲಿಯನ್ನು ಮದುವೆಯಾದ ಬಳಿಕ ನಟಿ ಅನುಷ್ಕಾ ಶರ್ಮಾ ಸಾಮಾನ್ಯ ಮಹಿಳೆಯಾಗಿದ್ದಾರೆ…!
ಹೌದು, ಅನುಷ್ಕಾ ಮದುವೆ,ಹನಿಮೂನ್ ಅಂತ ಸಿನಿಮಾದಿಂದ ಸ್ವಲ್ಪ ಸಮಯ ದೂರ ಉಳಿದಿದ್ರು. ಈಗ ಮತ್ತೆ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ.’ಸೂಯಿ ಧಾಗ’ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಅನುಷ್ಕಾ ಈ ಸಿನಿಮಾದಲ್ಲಿ ಸಾಮಾನ್ಯ ಮಹಿಳೆಯಾಗಿ ಕಾಣಿಸಿಕೊಳ್ಳುತ್ತಿದ್ದು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ‘ಸಾಮಾನ್ಯ ಮಹಿಳೆ’ ಅನುಷ್ಕಾ ಅವರ ಫೋಟೋ ವೈರಲ್ ಆಗಿದೆ.
ಹಾಗೆಯೇ ಅನುಷ್ಕಾ ಟ್ವಿಟರ್ ನಲ್ಲಿ ಕಸೂತಿ ಮಾಡುತ್ತಿರುವ ಫೋಟೋ ಹಾಕಿದ್ದಾರೆ.
ಸೂಯಿಧಾಗ ಚಿತ್ರದಲ್ಲಿ ಅನುಷ್ಕಾ ಜೊತೆ ವರುಣ್ ಧವನ್ ನಟಿಸುತ್ತಿದ್ದಾರೆ. ಅವರು ತಮ್ಮ ಟ್ವಿಟರ್ ನಲ್ಲಿ ಬಟ್ಟೆ ಹೊಲಿಯುವ ಫೋಟೋ ಅಪ್ ಲೋಡ್ ಮಾಡಿದ್ದಾರೆ. ಚಿತ್ರ ಅಕ್ಟೋಬರ್ 2 ರಂದು ತೆರೆಕಾಣಬಹುದು.