ಇವರೇ ಫಸ್ಟ್ ನ್ಯೂಸ್ ನ ಮೊದಲ ನಿರೂಪಕಿ …!

1
861

ಮುದ್ರಣ ಮಾಧ್ಯಮ ರಂಗಭೂಮಿ ಇದ್ದಂತೆ. ಇಲ್ಲಿ ಕೆಲಸ ಮಾಡಿದವರು ಮಾಧ್ಯಮ ಕ್ಷೇತ್ರದಲ್ಲಿ ಗಟ್ಟಿಯಾಗಿ ನೆಲೆಯೂರಬಹುದು. (ಬೇರೆಯವರಿಂದ ಸಾಧ್ಯವಿಲ್ಲ ಅಂತಲ್ಲ). ಇಂದು ದೃಶ್ಯಮಾಧ್ಯಮ ಕ್ಷೇತ್ರದಲ್ಲಿ ತಮ್ಮದೇಯಾದ ಛಾಪು ಮೂಡಿಸಿರುವ ಬಹುತೇಕ ಪತ್ರಕರ್ತರು ಮುದ್ರಣ ಮಾಧ್ಯಮ ಹಿನ್ನೆಲೆಯಿಂದ ಬಂದವರು. ಅಂದರೆ ಕ್ಯಾಮರ ಮುಂದೆ ಬರುವ ಮುಂಚೆ ಪೆನ್ನು, ಪೇಪರ್ ಹಿಡಿದವರು…!


ಹೀಗೆ ಬರವಣಿಗೆ, ಮುದ್ರಣ ಮಾಧ್ಯಮದ ಒಂದಿಷ್ಟು ಅನುಭವದ ಬುತ್ತಿಯನ್ನು ಕಟ್ಟಿಕೊಂಡು ದೃಶ್ಯ ಮಾಧ್ಯಮ ಕ್ಷೇತ್ರದಲ್ಲಿ ಮಿನುಗುತ್ತಿರೋರು ಮಲೆನಾಡ ಸಿರಿ ಶಿವಮೊಗ್ಗದ ಚೆಲುವೆ ಸ್ಮಿತ ರಂಗನಾಥ್.


ಮಾಧ್ಯಮ ಕ್ಷೇತ್ರದಲ್ಲಿ ಹೆಚ್ಚು ಕಡಿಮೆ ಒಂದು ದಶಕದ ಅನುಭವ ಇವರದ್ದು. ಇಂದು ಕನ್ನಡದ ಜನಪ್ರಿಯ ನಿರೂಪಕಿಯರ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ತಾರೆ.


ಉದ್ಯಮಿ ನಿರಂಜನ ಮೂರ್ತಿ ಮತ್ತು ಉಪನ್ಯಾಸಕಿ ಮೀನಾಕ್ಷಿ ದಂಪತಿಯ ಮಗಳು ಸ್ಮಿತ. ತೇಜಸ್ವಿ ಪ್ರೀತಿಯ ತಮ್ಮ. ರಂಗನಾಥ್ ಅವರು ಸ್ಮಿತ ಅವರ ಬಾಳಸಂಗಾತಿ. ಪ್ರತ್ಯುಷ್ ಮುದ್ದಿನ ಮಗ.


ಶಿವಮೊಗ್ಗದ ಎಸ್ ಕೆ ಎನ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಡಿವಿಎಸ್ ನಲ್ಲಿ ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣ, ಸಹ್ಯಾದ್ರಿ ಕಾಲೇಜಿನಲ್ಲಿ ಪದವಿ (ಪತ್ರಿಕೋದ್ಯಮ), ಕೆಎಸ್‍ಒಯುನಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.


ಪತ್ರಿಕೋದ್ಯಮವನ್ನೇ ಆಯ್ಕೆಮಾಡಿಕೊಂಡು ಇದರಲ್ಲೇ ವೃತ್ತಿ ಬದುಕು ಕಟ್ಟಿಕೊಳ್ಳಬೇಕು ಎಂಬ ಕನಸು ಸ್ಮಿತ ಅವರದ್ದಾಗಿರಲಿಲ್ಲ. ಪಬ್ಲಿಕ್ ಅಡ್ಮಿನಿಸ್ಟ್ರೇಶನ್ (ಸಾರ್ವಜನಿಕ ಆಡಳಿತ)ಇವರ ಆಯ್ಕೆಯಾಗಿತ್ತು. ಪದವಿಯಲ್ಲಿ ಈ ವಿಷಯವನ್ನು ತೆಗೆದುಕೊಂಡಾಗ ಕಾಂಬಿನೇಷನ್ ನಲ್ಲಿ ಪತ್ರಿಕೋದ್ಯಮವೂ ಸೇರಿತ್ತು.


ಓದು ಮತ್ತು ಬರವಣಿಗೆಯ ಬಗ್ಗೆ ಆಸಕ್ತಿ ಇರೋ ಸ್ಮಿತ ಅವರು ಕಾಲೇಜು ದಿನಗಳಲ್ಲಿಯೇ ದಿನಪತ್ರಿಕೆ, ನಿಯತಕಾಲಿಕೆಗಳಿಗೆ ಬರೆಯುತ್ತಿದ್ದರು. ಸಹ್ಯಾದ್ರಿ ಕಾಲೇಜಿಂದ ಹೊರತರುವ ‘ಧ್ವನಿ’ ಪತ್ರಿಕೆಗೆ ಬರೆದಿದ್ದ ಲೇಖನವನ್ನು ಸ್ಮಿತ ಬೇರೆ ಬೇರೆ ನಿಯತಕಾಲಿಕೆಗಳು, ಪತ್ರಿಕೆಗಳಿಗೂ ಕಳುಹಿಸಿ ಕೊಟ್ಟಿದ್ದರು. ‘ದಿ ವೀಕ್’ ನಿಯತಕಾಲಿಕೆಯಲ್ಲಿ ಆ ಲೇಖನ ಪ್ರಕಟವಾಗಿತ್ತು.


ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಉಪನ್ಯಾಸಕರು ಈ ಸಿಹಿ ಸುದ್ದಿಯನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ರು. ಕಾರ್ಯಕ್ರಮದ ವರದಿ ಮಾಡಲು ಬಂದಿದ್ದ ಅಮೋಘ ಚಾನಲ್ ನವರು, ‘ಹೇಗಿದ್ರು ಪತ್ರಿಕೋದ್ಯಮ ವ್ಯಾಸಂಗ ಮಾಡ್ತಿದ್ದೀರಲ್ಲ, ಬಿಡುವಾದಾಗ ಬಂದು ಅಮೋಘದಲ್ಲಿ ಆ್ಯಂಕರಿಂಗ್ ಮಾಡಿ’ ಎಂದು ಹೇಳಿದ್ದರು.


ಪದವಿ ಶಿಕ್ಷಣ ಮೂರು ವರ್ಷಗಳ ಕಾಲ ಅಮೋಘದಲ್ಲಿ ನಿರೂಪಕಿಯಾಗಿ ಕೆಲಸ ಮಾಡ್ತಿದ್ರು ಸ್ಮಿತ. ಬಳಿಕ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಇಂಟರ್ನಿಶಿಪ್ ಮಾಡಿದ್ರು.


ಇವರ ಬರವಣಿಗೆಗೆ ಒಳ್ಳೆಯ ಗ್ರಿಪ್ ಸಿಗ್ತು. ಪತ್ರಕರ್ತರಾದ ಸಂತೋಷ್ ಕಾಚಿನಕಟ್ಟೆ, ನಾಗರಾಜ್ ನೇರಿಗೆ ಅವರಿಂದ ಉತ್ತಮ ಮಾರ್ಗದರ್ಶನ ದೊರೆಯಿತು. ಇಂಟರ್ನಿಶಿಪ್ ಮುಗಿಯುತ್ತಿದ್ದಂತೆ ಡಿಗ್ರಿಯೂ ಕಂಪ್ಲೀಟ್ ಆದಂತೆ.


ಡಿಗ್ರಿ ಮುಗಿದ ಮೇಲೆ ಸ್ಮಿತ ದಾಂಪತ್ಯ ಜೀವನಕ್ಕೆ ಕಾಲಿಟ್ರು. ಶಾಲಾ-ಕಾಲೇಜು ದಿನಗಳಲ್ಲಿ ಓದು ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಎರಡಲ್ಲೂ ಮುಂದಿದ್ದ ಸ್ಮಿತ ಪದವಿಯಲ್ಲಿ ಗೋಲ್ಡ್ ಮೆಡಲಿಸ್ಟ್. ಬೆಂಗಳೂರಿಗೆ ಬಂದ ಕೂಡಲೇ ಕೆಲಸ ಸಿಗುತ್ತೆ ಅಂತ ಅನ್ಕೊಂಡಿದ್ರು…! ಉಪನ್ಯಾಸಕರೆಲ್ಲಾ ‘ನಿನಗೆ ಕೆಲಸ ಸಿಗುತ್ತೆ ಬಿಡಮ್ಮ’ ಅಂತಿದ್ರಲ್ಲಾ ಅದೇ ಯೋಚನೆ ಸ್ಮಿತ ಅವರಿಗಿದ್ದುದು ಸಹಜ.


ಬೆಂಗಳೂರಿಗೆ ಬಂದ ಮೇಲೆ ಅರಿವಿಗೆ ಬಂತು ಕಾಲೇಜಲ್ಲಿ ಪಡೆಯುವ ರ್ಯಾಂಕಿಗೂ ಇಲ್ಲಿ ಉದ್ಯೋಗ ಪಡೆಯೋಕು ತುಂಬಾ ವ್ಯತ್ಯಾಸವಿದೆ ಅಂತ. ಆದರೆ, ಸ್ಮಿತ ಅಷ್ಟೊಂದು ಕಷ್ಟ ಪಡಲಿಲ್ಲ. ಅವರು ಪುಸ್ತಕದ ಹುಳುವಾಗಿ ರ್ಯಾಂಕ್ ಪಡೆದವರಲ್ಲ. ಓದು, ಬರವಣಿಗೆ ಸ್ಮಿತ ಅವರ ಜೊತೆಗಿತ್ತು.


ಬೆಂಗಳೂರ ಸೊಸೆಯಾದ ಕೆಲವೇ ದಿನಗಳಲ್ಲಿ (2008ರಲ್ಲಿ) `ಸಂಡೆ ಇಂಡಿಯನ್’ ಎಂಬ ಮ್ಯಾಗ್ಸಿನ್ ನಲ್ಲಿ ಕೆಲಸಕ್ಕೆ ಸೇರಿದ್ರು. ಇಲ್ಲಿ ಹಿರಿಯ ಪತ್ರಕರ್ತರೊಬ್ಬರು ‘ಇದು ಮುದ್ರಣಕ್ಕೆ ಯೋಗ್ಯವಲ್ಲ. ಪ್ರತ್ಯೇಕವಾದ ಫೋಲ್ಡರ್ ಮಾಡಿ’ ಸೇವ್ ಮಾಡಿಟ್ಟಿಕೋ ಎಂದಿದ್ರು. ಅವರು ಅಂದು ಹೇಳಿದ್ದನ್ನು ಸ್ಮಿತ ಗಂಭೀರವಾಗಿ ತಗೊಂಡ್ರು. ಕೇವಲ ಒಂದೇ ಒಂದು ವರ್ಷದಲ್ಲಿ ಸ್ಮಿತ ಅವರೊಳಗೆ ಅದೆಂಥಾ ಪತ್ರಕರ್ತೆ, ಬರಹಗಾರ್ತಿ, ಮಾತುಗಾರ್ತಿ ಇದ್ದಾಳೆ ಅನ್ನೋದು ಗೊತ್ತಾಗುತ್ತೆ. ಸಮಯ ಚಾನಲ್ ನಲ್ಲಿ ಕುಳಿತು ಸ್ಮಿತ ಡಿಸ್ಕಶನ್ ಮಾಡೊ ಮಟ್ಟಕ್ಕೆ ಬೆಳೆದಿದ್ದನ್ನು ಕಂಡು ಆ ಹಿರಿಯ ಪತ್ರಕರ್ತರು ಕರೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ರು.

ಸಂಡೆ ಇಂಡಿಯನ್ ನಲ್ಲಿರುವಾಗ ಮೊದಲು ಸುವರ್ಣ ಚಾನಲ್ ನಲ್ಲಿ ಸ್ಮಿತ ಅವರಿಗೆ ಅವಕಾಶ ಸಿಕ್ಕಿತ್ತು. ಆದರೆ, ಹೋಗಿರಲಿಲ್ಲ. ಕೆಲವು ದಿನಗಳ ನಂತರ ಸಮಯ ಚಾನಲ್ ನಿಂದ ಒಳ್ಳೆಯ ಆಫರ್ ಬಂತು. ಆ ಚಾನಲ್‍ನ ಆರಂಭದ ದಿನಗಳಿಂದಲೂ ಜೊತೆಗಿದ್ದರು.


2009-10ರಿಂದ ಸುಮಾರು 2 ವರ್ಷಗಳ ಕಾಲ ಸಮಯದಲ್ಲಿ ಕೆಲಸ ಮಾಡಿದ್ರು. ವರದಿಗಾರ್ತಿಯಾಗಿ, ನಿರೂಪಕಿಯಾಗಿಯೂ ಗುರುತಿಸಿಕೊಂಡ್ರು. ವರದಿಗಾರರು ನಿರೂಪಕರಾದಾಗ ಅವರಿಗೆ ಸುದ್ದಿಯ ಮೌಲ್ಯ, ಗ್ರೌಂಡ್ ರಿಯಾಲಿಟಿ ಚೆನ್ನಾಗಿ ಗೊತ್ತಿರುತ್ತೆ. ವರದಿಗಾರಿಕೆ ಹಿನ್ನೆಲೆಯಿಂದ ಬಂದ ನಿರೂಪಕರು ಯಾವುದೇ ಸುದ್ದಿಯನ್ನು ಕೊಲ್ಲುವುದಿಲ್ಲ. ನೀವು ಸ್ಮಿತ ಅವರ ನಿರೂಪಣೆ, ಡಿಸ್ಕಷನ್ಸ್ ಗಳನ್ನು ನೋಡಿದ್ರೆ ಅದು ಗಮನಕ್ಕೆ ಬರುತ್ತೆ. ಎಷ್ಟೇಯಾದ್ರು ಸ್ಮಿತ ಮುದ್ರಣ ಮಾಧ್ಯಮ ಹಾಗೂ ಸುದ್ದಿ ವಾಹಿನಿ ವರದಿಗಾರಿಕೆ ಅನಭವ ಪಡೆದವರಲ್ಲವೇ…? ಸಮಯದಲ್ಲಿ ಪ್ರೈಂ ನ್ಯೂಸ್ ನಡೆಸಿಕೊಡ್ತಿದ್ದುದು ಇದೇ ಸ್ಮಿತಾ ಅವರು.


2 ವರ್ಷದ ತಾಯ್ತನದ ಸಂತೋಷದಲ್ಲಿ ಕಳೆದ್ರು. 2013-14ರಲ್ಲಿ ಸುವರ್ಣ ನ್ಯೂಸ್ ಮುಖೇನ ದೃಶ್ಯ ಮಾಧ್ಯಮ ಕ್ಷೇತ್ರದ ಎರಡನೇ ಇನ್ನಿಂಗ್ಸ್ ಶುರುವಾಯ್ತು. ಇಲ್ಲಿ ‘ನ್ಯೂಸ್ @9ಪಿಎಂ’ ನಡೆಸಿಕೊಡ್ತಿದ್ರು.


2015ರಲ್ಲಿ ಕನ್ನಡದ ನಂಬರ್ 1 ಸುದ್ದಿವಾಹಿನಿ ಟಿವಿ9 ಆಹ್ವಾನಿಸಿತು. ಸ್ಮಿತ ಅವರ ಮುಂದಿನ ಜರ್ನಿ ಟಿವಿ9ನಲ್ಲಿ. ಇಲ್ಲಿವರ ಸಿಗ್ನೇಚರ್ ಪ್ರೋಗ್ರಾಂ ‘ಸುಪ್ರಭಾತ’. ಈ ಕಾರ್ಯಕ್ರಮದಿಂದ ಒಳ್ಳೆಯ ಹೆಸರು, ಜನಪ್ರಿಯತೆ ಸಿಕ್ತು.


ಈಗ ಹೊಸದಾಗಿ ಆರಂಭವಾಗಲಿರುವ ‘ಫಸ್ಟ್ ನ್ಯೂಸ್’ ಬಳಗ ಸೇರಿದ್ದಾರೆ. ಕಳೆದ ಕೆಲವು ದಿನಗಳಿಂದ ಸ್ಮಿತ ಅವರು ಟಿವಿ9ನಲ್ಲಿ ಕಾಣುತ್ತಿಲ್ಲ. ಎಷ್ಟೋ ಮಂದಿ ವೀಕ್ಷಕರು ಸ್ಮಿತ ಅವರಿಗೆ ಮೆಸೇಜ್ ಮಾಡಿ, ‘ ಸುಪ್ರಭಾತ’ದಲ್ಲಿ ನೀವೇಕೆ ಇಲ್ಲ ಎಂದು ಕೇಳುತ್ತಿದ್ದಾರೆ.
ರವಿಕುಮಾರ್ ಮತ್ತು ಮಾರುತಿ ಅವರ ಸಾರಥ್ಯದಲ್ಲಿ ಬರಲಿರೋ ‘ಫಸ್ಟ್ ನ್ಯೂಸ್’ ಬಳಗ ಸೇರಿದ ಮೊದಲ ನಿರೂಪಕಿ (ಫೀಮೇಲ್ ಆ್ಯಂಕರ್) ಇವರು.


ವಿಜಯಕರ್ನಾಟಕದಲ್ಲಿ ಇಂಟರ್ನಿಶಿಪ್ ಮಾಡುವಾಗ ಮಾರ್ಗದರ್ಶನ ನೀಡಿದ ಸಂತೋಷ್ ಕಾಚಿನಕಟ್ಟೆ, ನಾಗರಾಜ್ ನೇರಿಗೆ, ಸಮಯದ ಮೂಲಕ ದೃಶ್ಯ ಮಾಧ್ಯಮದಲ್ಲಿ ಪರಿಚಯಿಸಿಕೊಳ್ಳಲು ಸಾಧ್ಯವಾಗಿಸಿದ ಮಹೇಶ್, ಅಲ್ಲಿ ತುಂಬಾ ಪ್ರೋತ್ಸಾಹ ನೀಡಿದ ಸುರೇಶ್ ಹಾಗೂ ಟಿವಿ9ನಲ್ಲಿ ಸಾಕಷ್ಟು ಪ್ರೋತ್ಸಾಹ, ಮಾರ್ಗದರ್ಶನ ನೀಡಿ, ಈಗ ತಮ್ಮ ಫಸ್ಟ್ ನ್ಯೂಸ್ ಕುಟುಂಬಕ್ಕೆ ಸೇರಿಸಿಕೊಂಡಿರೋ ರವಿಕುಮಾರ್ ಮತ್ತು ಮಾರುತಿ ಅವರನ್ನು ಸ್ಮಿತ ಸ್ಮರಿಸಿಕೊಳ್ತಾರೆ.


ಆ್ಯಂಕರ್ ಗಳಂತೆ ಟಿವಿ ಚಾನಲ್ ಗಳಲ್ಲಿ ತೆರೆಮರೆಯಲ್ಲಿ ಕೆಲಸ ಮಾಡುವವರನ್ನು ಸಹ ಗುರುತಿಸೋ ದಿನಗಳು ಬರಬೇಕು. ಆಗಾಗ ಅವರು ಕೂಡ ಪರದೆ ಮೇಲೆ ಬಂದ್ರೆ ಚೆನ್ನಾಗಿರುತ್ತೆ. ಅವರುಗಳಿಂದಲೇ ಆ್ಯಂಕರ್ ಗಳು ಸ್ಟಾರ್ ಗಳಾಗೋಕೆ ಸಾಧ್ಯ ಎನ್ನುತ್ತಾರೆ ಸ್ಮಿತ.


‘ನಿಜ ಹೇಳ್ತೀನಿ ತುಂಬಾ ಕಷ್ಟಪಟ್ಟು ಮೀಡಿಯಾಕ್ಕೆ ಬಂದಿಲ್ಲ. ಸಿಕ್ಕ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳೋಕೆ ಪ್ರಯತ್ನ ಪಡ್ತೀನಿ. ಸಂಸಾರ ಮತ್ತು ವೃತ್ತಿ ಬದುಕು ಎರಡನ್ನೂ ಸರಿದೂಗಿಸಿಕೊಂಡು ಹೋಗೋದು ಮಹಿಳೆಯರಿಗೆ ದೊಡ್ಡ ಸವಾಲು. ಇದನ್ನು ನಿಭಾಯಿಸಿಕೊಂಡು ಹೋಗುತ್ತಿರೋ ಬಗ್ಗೆ ಹೆಮ್ಮೆ ಇದೆ’ ಎನ್ನೋದು ಸ್ಮಿತ ಮನದಾಳದ ನುಡಿಗಳು.


ಅದೇನೇ ಇರಲಿ ‘ಫಸ್ಟ್ ನ್ಯೂಸ್’ನ ಫಸ್ಟ್ ಫೀಮೇಲ್ ಆ್ಯಂಕರ್ ಸ್ಮಿತ ಅವರ ಯಶಸ್ಸಿನ ಪಯಣ ಹೀಗೆ ಸುಖಕರವಾಗಿ ಸಾಗಲಿ. ದೊಡ್ಡ ಯಶಸ್ಸು, ಕೀರ್ತಿ ಸ್ಮಿತ ಅವರದ್ದಾಗಲಿ ಎನ್ನುತ್ತಾ…

-ಶಶಿಧರ್ ಎಸ್ ದೋಣಿಹಕ್ಲು

ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.

1) 10 ನವೆಂಬರ್ 2017 : ಈಶ್ವರ್ ದೈತೋಟ

2)11 ನವೆಂಬರ್ 2017 : ಭಾವನ

3)12  ನವೆಂಬರ್ 2017 : ಜಯಶ್ರೀ ಶೇಖರ್

4)13 ನವೆಂಬರ್ 2017 : ಶೇಷಕೃಷ್ಣ

5)14 ನವೆಂಬರ್ 2017 : ಶ್ರೀಧರ್ ಶರ್ಮಾ

6)15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ

7)16 ನವೆಂಬರ್ 2017 : ಅರವಿಂದ ಸೇತುರಾವ್

8)17 ನವೆಂಬರ್ 2017 : ಲಿಖಿತಶ್ರೀ

9)18 ನವೆಂಬರ್ 2017 : ರಾಘವೇಂದ್ರ ಗಂಗಾವತಿ

10)19 ನವೆಂಬರ್ 2017 : ಅಪರ್ಣಾ

11)20 ನವೆಂಬರ್ 2017 :  ಅಮರ್ ಪ್ರಸಾದ್

12)21 ನವೆಂಬರ್ 2017 :   ಸೌಮ್ಯ ಮಳಲಿ

13)22 ನವೆಂಬರ್ 2017 :  ಅರುಣ್ ಬಡಿಗೇರ್

14)23ನವೆಂಬರ್ 2017 :  ರಾಘವ ಸೂರ್ಯ

15)24ನವೆಂಬರ್ 2017 :  ಶ್ರೀಲಕ್ಷ್ಮಿ

16)25ನವೆಂಬರ್ 2017 :  ಶಿಲ್ಪ ಕಿರಣ್

17)26ನವೆಂಬರ್ 2017 :  ಸಮೀವುಲ್ಲಾ

18)27ನವೆಂಬರ್ 2017 :  ರಮಾಕಾಂತ್ ಆರ್ಯನ್

19)28ನವೆಂಬರ್ 2017 :  ಮಾಲ್ತೇಶ್

20)29/30ನವೆಂಬರ್ 2017 :  ಶ್ವೇತಾ ಆಚಾರ್ಯ  [ನಿನ್ನೆ (29ರಂದು ) ತಾಂತ್ರಿಕ ಸಮಸ್ಯೆಯಿಂದ ‘ಈ ದಿನದ ನಿರೂಪಕರು’- ನಿರೂಪಕರ ಪರಿಚಯ ಲೇಖನ ಪ್ರಕಟಿಸಿರಲಿಲ್ಲ. ಆದ್ದರಿಂದ ಇಂದು ಪ್ರಕಟಿಸಿದ್ದೀವಿ.  ಈ ದಿನದ (30 ನವೆಂಬರ್) ಲೇಖನ ಸಂಜೆ ಪ್ರಕಟಿಸಲಾಗುವುದು.) ]

21)30ನವೆಂಬರ್ 2017 :  ಸುರೇಶ್ ಬಾಬು 

22)01 ಡಿಸೆಂಬರ್ 2017 :  ಮಧು ಕೃಷ್ಣ (ಡಿಸೆಂಬರ್ ೨ ರಂದು ಬೆಳಗ್ಗೆ ಪ್ರಕಟ)

23)02 ಡಿಸೆಂಬರ್ 2017 : ಶಶಿಧರ್ ಭಟ್

24)03 ಡಿಸೆಂಬರ್ 2017 : ಚನ್ನವೀರ ಸಗರನಾಳ್

25)04 ಡಿಸೆಂಬರ್ 2017 : ಗೌರೀಶ್ ಅಕ್ಕಿ

26)05 ಡಿಸೆಂಬರ್ 2017 : ಶ್ರುತಿ ಜೈನ್

27)06ಡಿಸೆಂಬರ್ 2017 : ಅವಿನಾಶ್ ಯುವನ್  

28)07ಡಿಸೆಂಬರ್ 2017 : ಶಿಲ್ಪ ಕೆ.ಎನ್

29)08ಡಿಸೆಂಬರ್ 2017 : ಶಮೀರಾ ಬೆಳುವಾಯಿ

30)09ಡಿಸೆಂಬರ್ 2017 : ಸಂದೀಪ್ ಕುಮಾರ್

31)10ಡಿಸೆಂಬರ್ 2017 : ಪ್ರತಿಮಾ ಭಟ್

32)11ಡಿಸೆಂಬರ್ 2017 :  ಹರೀಶ್ ಪುತ್ರನ್

33)12ಡಿಸೆಂಬರ್ 2017 : ನಿಶಾ ಶೆಟ್ಟಿ

34)13ಡಿಸೆಂಬರ್ 2017 : ಪೂರ್ಣಿಮ ಎನ್.ಡಿ

35)14ಡಿಸೆಂಬರ್ 2017 :  ಹಬೀಬ್ ದಂಡಿ

36)15ಡಿಸೆಂಬರ್ 2017 : ಪ್ರಕಾಶ್ ಕುಮಾರ್ ಸಿ.ಎನ್

37)16ಡಿಸೆಂಬರ್ 2017 :  ಜ್ಯೋತಿ ಇರ್ವತ್ತೂರು

38)17ಡಿಸೆಂಬರ್ 2017 :  ಶಿಲ್ಪ ಐಯ್ಯರ್ 

39)18ಡಿಸೆಂಬರ್ 2017 :  ನಾಝಿಯಾ ಕೌಸರ್

40) 19ಡಿಸೆಂಬರ್ 2017 :  ಶ್ರುತಿಗೌಡ

41) 20ಡಿಸೆಂಬರ್ 2017 :  ಎಂ.ಆರ್ ಶಿವಪ್ರಸಾದ್

42) 21ಡಿಸೆಂಬರ್ 2017 :  ವೆಂಕಟೇಶ್ ಉಳ್ತೂರು (ವೆಂಕಟೇಶ್ ಅಡಿಗ)

43) 22ಡಿಸೆಂಬರ್ 2017 :  ಶರ್ಮಿತಾ ಶೆಟ್ಟಿ

44) 23ಡಿಸೆಂಬರ್ 2017 :  ಕಾವ್ಯ

45) 24ಡಿಸೆಂಬರ್ 2017 :  ಹರ್ಷವರ್ಧನ್ ಬ್ಯಾಡನೂರು

46) 25ಡಿಸೆಂಬರ್ 2017 : ಸುಧನ್ವ ಖರೆ

47) 26ಡಿಸೆಂಬರ್ 2017 : ಸೌಜನ್ಯ ಕೀರ್ತಿ

48) 27ಡಿಸೆಂಬರ್ 2017 :ವಾಣಿ ಕೌಶಿಕ್

49) 28ಡಿಸೆಂಬರ್ 2017 : ಸುಗುಣ

50) 29ಡಿಸೆಂಬರ್ 2017 : ಜಯಪ್ರಕಾಶ್ ಶೆಟ್ಟಿ

ಡಿಸೆಂಬರ್ ೩೦ ಮತ್ತು ೩೧ ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ.

51) 01ಜನವರಿ 2018 :ಐಶ್ವರ್ಯ ಎ.ಎನ್

52) 02ಜನವರಿ 2018 :ಶ್ರೀಧರ್ ಆರ್

53) 03ಜನವರಿ 2018 : ದಿವ್ಯಶ್ರೀ

54) 04ಜನವರಿ 2018 : ಮಂಜುಳ ಮೂರ್ತಿ

55) 05ಜನವರಿ 2018 : ಅಭಿಷೇಕ್ ರಾಮಪ್ಪ

56) 06ಜನವರಿ 2018 : ರೋಹಿಣಿ ಅಡಿಗ

57) 07ಜನವರಿ 2018 :ಮಾದೇಶ್ ಆನೇಕಲ್

58) 08ಜನವರಿ 2018 :ಶ್ರುತಿ ಕಿತ್ತೂರು

59) 09ಜನವರಿ 2018 : ಕೆ.ಸಿ ಶಿವರಾಂ

ಜನವರಿ 10 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ

60)  11ಜನವರಿ 2018 : ಮಾರುತೇಶ್

61)  12ಜನವರಿ 2018 :ನೀತಿ ಶ್ರೀನಿವಾಸ್

62) 13ಜನವರಿ 2018 :ರಕ್ಷಾ ವಿ

ಜನವರಿ 15 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ

63) 15ಜನವರಿ 2018  :  ಸುಮ ಸಾಲಿಯಾನ್

64) 16ಜನವರಿ 2018  : ಶಕುಂತಲ

ಜನವರಿ 17,18 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ

65) 19 ಜನವರಿ 2018  : ವಸಂತ್ ಕುಮಾರ್ ಗಂಗೊಳ್ಳಿ

ಜನವರಿ 20 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ

66)  21 ಜನವರಿ 2018  : ಮುದ್ದು ಮೀನ

67)  22 ಜನವರಿ 2018  : ಪ್ರಜ್ವಲ ಹೊರನಾಡು

ಜನವರಿ 23, 24 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ

68)  25 ಜನವರಿ 2018  : ಮಂಜುನಾಥ್ ದಾವಣಗೆರೆ

ಜನವರಿ 26 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ

69) 27 ಜನವರಿ 2018  :  ರಕ್ಷತ್ ಶೆಟ್ಟಿ 

70) 28 ಜನವರಿ 2018  : ಶಿವಶಂಕರ್  

ಜನವರಿ 27 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ

71) 28 ಜನವರಿ 2018  : ಸ್ಮಿತ ರಂಗನಾಥ್

1 COMMENT

LEAVE A REPLY

Please enter your comment!
Please enter your name here