ನೀವು ಗಮನಿಸಿರಬಹುದು? ಪ್ರಧಾನಮಂತ್ರಿಗಳ ಬಾಡಿಗಾರ್ಡ್, ಕಮಾಂಡೋಗಳ ಬಳಿ ಯಾವಾಗಲೂ ಒಂದು ಕಪ್ಪು ಬ್ರೀಫ್ ಕೇಸ್ ಇರುತ್ತೆ…!
ಇದನ್ನು ನೋಡಿರುವ ನಿಮಗೆ , ಇದರಲ್ಲೇನಿರುತ್ತೆ ಎಂಬ ಪ್ರಶ್ನೆ ಮೂಡಿರಬಹುದು…? ಅದಕ್ಕೆ ಉತ್ತರ ಸಿಕ್ಕಿದೆಯೇ? ಸಿಗದೇ ಇದ್ದರೆ, ಇಲ್ಲಿದೆ ನೋಡಿ, ನಿಮಗೆ ಬೇಕಾದ ಮಾಹಿತಿ…
ಪ್ರಧಾನಮಂತ್ರಿಯವರ ಜೊತೆಯಲ್ಲಿ ಯಾವಾಗಲೂ ಓಡಾಡೋ ಎಸ್ ಪಿ ಜಿ ಕಮಾಂಡೋಗಳಲ್ಲಿ ಕೆಲವರ ಹತ್ತಿರ ಬ್ರೀಫ್ ಕೇಸ್ ಇರುತ್ತೆ. ಇದೊಂದು ಪೋರ್ಟೆಬಲ್ ಬುಲೆಟ್ ಪ್ರೂಫ್ ಶೀಲ್ಡ್ . ಅತ್ಯಂತ ಕಷ್ಟದ ಸ್ಥಿತಿಯಲ್ಲಿದು ರಕ್ಷಣೆಗೆ ಬರುತ್ತದೆ. ಇದರಲ್ಲಿನ ಬಟನ್ ಗಳನ್ನು ಪ್ರೆಸ್ ಮಾಡಿದ್ರೆ, ಇದು ಚಾಪೆಯಂತೆ ತೆರೆದುಕೊಳ್ಳುತ್ತೆ. ಇದನ್ನು ತಾತ್ಕಾಲಿಕವಾಗಿ ಕವಚದಂತೆ ಬಳಸಬಹುದು.
ಪ್ರಧಾನಂತ್ರಿಗಳತ್ತಿರ ಇರುವ ಬಾಡಿಗಾರ್ಡ್ ಗಳನ್ನು SPG (ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ ) ಕಾಮೋಂಡೋಗಳು. ಇವರನ್ನು ಸಿ ಆರ್ ಪಿ ಎಫ್, ಆರ್ ಪಿ ಎಫ್ ವಿಭಾಗದಿಂದ ಆಯ್ಕೆ ಮಾಡಿರ್ತಾರೆ.