ಕೊನೆಗೂ 300ಕ್ಕೂ ಹೆಚ್ಚು ವರ್ಷದ ಕುತೂಹಲಕ್ಕೆ ತೆರೆ ಬಿದ್ದಿದೆ. ಲೆಕ್ಕವಿಲ್ಲದಷ್ಟು ಸಂಪತ್ತನ್ನು ತನ್ನೊಡಲಲ್ಲಿಟ್ಟುಕೊಂಡು ಮುಳುಗಿದ್ದ ಸ್ಯಾನ್ ಜೋಸ್ ಹಡಗು ಸಿಕ್ಕಿದೆ ಎಂಬ ವಿಷಯವನ್ನು ಕೊಲಂಬಿಯಾದ ಅಧ್ಯಕ್ಷ ಜುವಾನ್ ಮ್ಯಾನುಯೆಲ್ ಸ್ಯಾಂಟೋಸ್ ಬಹಿರಂಗಪಡಿಸಿದಾಗ ಇಡೀ ವಿಶ್ವವೇ ಅಚ್ಚರಿಯ ಕಡಲಲ್ಲಿ ತೇಲಿತು. ಏಕೆಂದರೆ ಆ ಒಂದು ಹಡಗಿನಲ್ಲಿದ್ದ ಆಸ್ತಿ ಲೆಕ್ಕ ಹಾಕುವುದು ಅತಿ ಕಠಿಣ ಕೆಲಸ ಎಂದೇ ಭಾವಿಸಲಾಗಿತ್ತು.
ಇದು ಸಾಮಾನ್ಯ ಹುಡುಕಾಟವಲ್ಲ. ಬರೋಬ್ಬರಿ 300ಕ್ಕೂ ಹೆಚ್ಚು ವರ್ಷಗಳ ಕಾಲ ಮುಳುಗಿದ್ದ ಹಡಗೊಂದರಲ್ಲಿ ಕಡಲತಳ ಸೇರಿದ್ದ ಲಕ್ಷ ಕೋಟಿ ಮೌಲ್ಯದ ಸಂಪತ್ತಿಗಾಗಿ ನಡೆದಿದ್ದ ಹುಡುಕಾಟ. ಹಲವಾರು ದೇಶಗಳ ಹಲವಾರು ತಜ್ಞರು ಇನ್ನಿಲ್ಲದಂತೆ ಸಮುದ್ರದಲ್ಲಿ ಹುಡುಕಾಟ ನಡೆಸಿದ್ದರು. 1708ರಲ್ಲಿ ಚಿನ್ನ, ಬೆಳ್ಳಿ ಮತ್ತು ವೈಡೂರ್ಯದ ಅಪಾರ ಸಂಪತ್ತು ತುಂಬಿಕೊಂಡು ಹೊರಟಿದ್ದ ‘ಸ್ಯಾನ್ ಜೋಸ್’ ಎಂಬ ಹಡಗು, ಕೊಲಂಬಿಯಾದ ಕಾರ್ಟ್ ಜೆನಾಕ್ಕೆ ಹತ್ತಿರದ ಐಲಾಸ್ ಡೆಲ್ ರೊಸಾರಿಯೋ ಪ್ರದೇಶದಲ್ಲಿ ಮುಳುಗಿತ್ತು.
ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದ ಸ್ಪೇನ್ ದೊರೆ ಐದನೇ ಫಿಲಿಪ್ ಗೆ ಸೇರಿದ್ದ ಈ ಹಡುಗು ಅಂದಿನಿಂದ ಕಳೆದ ವಾರದ ನವೆಂಬರ್ 27ರವರೆಗೆ ಇಡೀ ಜಗತ್ತಿನ ನಿಧಿ ಶೋಧಕರ ನಿತ್ಯದ ಕನಸಾಗಿ ಕಾಡಿತ್ತು. ಏಕೆಂದರೆ ಆ ಹಡಗಿನಲ್ಲಿ ಅಪಾರ ಪ್ರಮಾಣದ ಸಂಪತ್ತು ಇತ್ತು.
ಕೊಲಂಬಿಯಾ ಹಾಗೂ ಕೆಲ ವಿದೇಶಿ ಸಂಶೋಧಕರು 1985ರಲ್ಲಿ ಟೈಟಾನಿಕ್ ನೌಕೆಯನ್ನು ಪತ್ತೆ ಹಚ್ಚಿದ್ದ ಪರಿಣಿತನನ್ನು ಸೇರಿಸಿಕೊಂಡು ಸ್ಯಾನ್ ಝೆ ಹಡಗನ್ನು ಹುಡುಕಲು ಮುಂದಾದರು. ಆಗ ಸುಮಾರು 6 ಹಡಗುಗಳ ಅವಶೇಷ ಪತ್ತೆಯಾದವು. ಅದರಲ್ಲೊಂದು ಈ ಸ್ಯಾನ್ ಝೆ ಆಗಿತ್ತು..!
ಡಾಲ್ಫಿನ್ ಚಿತ್ರಗಳಿದ್ದ ಫಿರಂಗಿಗಳನ್ನು ನೋಡುತ್ತಿದ್ದಂತೆ, ಇಡೀ ಜಗತ್ತು ಹುಡುಕುತ್ತಿದ್ದ ಪ್ರಖ್ಯಾತ ಹಡಗು ಸ್ಯಾನ್ ಜೋಸ್ ಇದೇ ಎಂಬುದು ಸ್ಪಷ್ಟವಾಯಿತು. ಶತಮಾನದ ಸಂಶೋಧನೆ ಎಂದು ಕರೆಸಿಕೊಂಡಿರುವ ಸ್ಯಾನ್ ಜೋಸ್ ಪತ್ತೆಯನ್ನು ಕೊಲಂಬಿಯಾದ ಅಧ್ಯಕ್ಷ ಜುಆನ್ ಮ್ಯಾನ್ಯುಯಲ್ ಸ್ಯಾಂಟೊಸ್ ಖುದ್ದಾಗಿ ಪ್ರಕಟಿಸಿದರು. ಏನಿಲ್ಲವೆಂದರೂ, 1,716 ಲಕ್ಷ ಕೋಟಿ ಮೌಲ್ಯದಷ್ಟು ಸಂಪತ್ತು ಈ ಹಡಗಿನಲ್ಲಿ ಇರಬಹುದೆಂದು ಅಂದಾಜಿಸಲಾಗಿದೆ. ಆದರೆ, ಇದರಲ್ಲಿರುವ ಚಿನ್ನ, ಬೆಳ್ಳಿ, ವೈಢೂರ್ಯಗಳ ಪ್ರಾಚೀನ ಮೌಲ್ಯವನ್ನು ಬೆಲೆ ಕಟ್ಟುವುದು ಸದ್ಯಕ್ಕಂತೂ ಸಾಧ್ಯವಿಲ್ಲವಂತೆ.
- ರಾಜಶೇಖರ ಜೆ
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
ನಿಜವಾದ ಭಾರತೀಯರು ಇಲ್ಲಿದ್ದಾರೆ ನೋಡಿ..! ದೇಶಕ್ಕಾಗಿ ಪ್ರಾಣದ ಹಂಗು ತೊರೆದ ವೀರರಿವರು..!
`ಟೀ’ ಮಾರುತ್ತಿರುವ ಪದವೀಧರ ಸೋದರರ ಕಥೆ..!
ಪ್ರವಾಹದ ಮಧ್ಯೆಯೂ ರಾಜಕೀಯ ಬೇಕಿತ್ತಾ..? ಆಹಾರ ಪೊಟ್ಟಣಗಳ ಮೇಲೆ ಅಮ್ಮ ಸ್ಟಿಕ್ಕರ್ಸ್..!
ರಾಹುಲ್ ದ್ರಾವಿಡ್ ಒಳ್ಳೆಯ ಕ್ರಿಕೆಟಿಗ ಮಾತ್ರವಲ್ಲ. ಅವರೊಬ್ಬ ಆದರ್ಶ ವ್ಯಕ್ತಿ..!
`ಗ್ರಾಮೀಣ ಜನರಿಗಾಗಿ’ ಕೆಲಸ ಬಿಟ್ಟುಬಂದ ಇಂಜಿನಿಯರ್ಸ್..!
`ಕೊಹಿನೂರು ವಜ್ರ’ ಪಾಕಿಸ್ತಾನದ್ದಂತೆ..! `ಕೊಹಿನೂರು ವಜ್ರ’ದ ಮೇಲೂ ಬಿತ್ತು ಪಾಕ್ ಕಣ್ಣು..!
ಇವರು ನಮ್ಮ ಬೆಂಗಳೂರಿನ ತ್ಯಾಜ್ಯೋಧ್ಯಮಿ..! ಕಸ ಆಯುವಾತನಿಗೆ ವಿಶ್ವಸಂಸ್ಥೆಯಿಂದ ಕರೆ..!