ಸರಳ ಜೀವನದಲ್ಲಿ ಇನ್ಮುಂದೆ‌ ಸುದ್ದಿಯೂ ಪ್ರಸಾರವಾಗುತ್ತೆ….!

Date:

ಕನ್ನಡದ ಮೊಟ್ಟ ಮೊದಲ‌ ಇನ್ಫೋಟೈನ್ಮೆಂಟ್ ಚಾನಲ್ ಸರಳ ಜೀವನ ವಾಹಿನಿ 2 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ 3ನೇ ವಸಂತಕ್ಕೆ ಕಾಲಿಟ್ಟಿದೆ. ಈ ಸಂಭ್ರಮದ ಹೊತ್ತಿನಲ್ಲಿ ಮಾಹಿತಿ ಮತ್ತು ಮನರಂಜನೆಯ ಜೊತೆಗೆ ಇನ್ಮುಂದೆ ಸುದ್ದಿಯನ್ನು ನಿಮ್ಮ ಮುಂದೆ ತರಲು ಮುಂದಾಗಿದೆ.


ಹೌದು ಫೆಬ್ರವರಿ 19ರಂದು ಮೂರನೇ ವರ್ಷಕ್ಕೆ ಕಾಲಿಡುತ್ತಿರುವ ಸರಳ ಜೀವನ ವಾಹಿನಿಯೂ ಅಂದಿನಿಂದಲೇ 4 ವಾರ್ತಾ ಸಂಚಿಕೆಗಳನ್ನು ಪ್ರಸಾರ ಮಾಡಲಿದೆ. ಇದರೊಂದಿಗೆ ಪೂರ್ಣ ಪ್ರಮಾಣದ ಇನ್ಫೋಟೈನ್ಮೆಂಟ್ ವಾಹಿನಿಯಾಗಿ ರೂಪುಗೊಳ್ಳಲಿದೆ.
ಡಾ. ಚಂದ್ರಶೇಖರ ಗುರೂಜಿ ಹಾಗೂ ಎಂ. ಎಸ್ ರಾಘವೇಂದ್ರ ಅವರ ಸಾರಥ್ಯದಲ್ಲಿ ಜನಮನ ಗೆದ್ದಿರುವ ಸರಳ ಜೀವನದ ಈ ಯಶಸ್ವಿ ಪಯಣದ ಕ್ರೆಡಿಟ್ ಇಡೀ ತಂಡಕ್ಕೆ ಸಲ್ಲಬೇಕು.


ಕಂಟೆಂಟ್ ಟೀಂ ಅನ್ನು ಹ್ಯಾಂಡಲ್ ಮಾಡ್ತಿರೋರು ಶ್ರೀನಾಥ್. ತಮ್ಮ ತಂಡದವರಿಗೆ ಉತ್ತಮ ಮಾರ್ಗದರ್ಶನ ನೀಡಿ ಒಳ್ಳೆಯ ಕೆಲಸ‌ ತೆಗೆಸುತ್ತಿದ್ದಾರೆ.  ಹಿಸ್ಟೋರಿ ಕಾರ್ಯಕ್ರಮದ ಹೊಣೆ ಹೊತ್ತ ರಾಘವೇಂದ್ರ ಅವರ ನೇತೃತ್ವದ ತಂಡ ಕೂಡ ಸೂಪರ್…


ವಾಗೀಶ್ ನೇತೃತ್ವದ ಕ್ಯಾಮರ ಟೀಂ ವರ್ಕ್ ದೊಡ್ಡದು. ಪ್ರದೀಪ್ ಮುಂದಾಳತ್ವದ ಪ್ರೊಡಕ್ಷನ್ ಟೀಂ ಕೂಡ ಅದ್ಭುತ. ಹೀಗೆ ಸರಳ ಜೀವನದ ಜೊತೆಗೆ ಉತ್ತಮ ತಂಡವಿದೆ.

‘ಅಂತಿಮ ದಿನಗಳು’ ಎಂಬ ಕಾರ್ಯಕ್ರಮದ ಮೂಲಕ ಮಹಾಭಾರತದ ಕೊನೆಯ ದಿನಗಳನ್ನು, ‘ಮಹಾಪಯಣ’ದ ಮೂಲಕ ರಾಮಾಯಣವನ್ನು, ‘ಜ್ಞಾನಪದ’ ದ ಮುಖೇನ ಜಾನಪದ ಹಿರಿಮೆಯನ್ನು ತೋರಿಸುತ್ತಾ ವೀಕ್ಷಕರಿಗೆ ಹತ್ತಿರವಾಗಿದೆ ಸರಳ ಜೀವನ.‌ ನಿಮ್ಮ ಆರೋಗ್ಯ ನಿನ್ಮ ಕೈಯಯಲ್ಲಿ, ಹಿಸ್ಟೋರಿ , ಬೆಳ್ಳಿಪರದೆ , ಅಜ್ಜಿ ಹೇಳಿದ ಕಥೆ ಸರಳ ಜೀವನದ ಇತರೆ ಪ್ರಮುಖ ಕಾರ್ಯಕ್ರಮಗಳು. ‘ಪುಣ್ಯ ಕ್ಷೇತ್ರ’ ಕಾರ್ಯಕ್ರಮದ ಮೂಲಕ‌ ವೀಕ್ಷಕರಿಗೆ ಕುಳಿತಲ್ಲೇ ಪುಣ್ಯಕ್ಷೇತ್ರಗಳ ದರ್ಶನ ಮಾಡಿಸುತ್ತಿದೆ ಸರಳ ಜೀವನ ತಂಡ.
ಈಗ ಇಂತಹ ಕಾರ್ಯಕ್ರಮಗಳ ಜೊತೆಗೆ ಸುದ್ದಿಯನ್ನು ಹೊತ್ತು ಬರಲಿದೆ.

ದಿನಕ್ಕೆ 4ಬಾರಿ ವಾರ್ತಾಸಂಚಿಕೆ ಇರುತ್ತೆ.
1) ಸಮಾಚಾರ ಸೌರಭ (ಬೆಳಗ್ಗೆ 8 ಗಂಟೆಗೆ) : ರಾಜ್ಯದ ಸಮಗ್ರ ಸುದ್ದಿಯನ್ನು ನೋಡಿತ್ತಾ ಬೆಳಗ್ಗಿನ ಉಪಹಾರ ಸೇವಿಸಿ. ಸಮಾಚಾರ ಸೌರಭದಲ್ಲಿ ಬೆಳಗ್ಗಿನ ಪ್ರಮುಖ ಸುದ್ದಿಗಳು ನಿಮ್ಮ ಮುಂದೆ ಬರಲಿವೆ.

2) ಮಧ್ಯಂತರ ವರದಿ (ಮಧ್ಯಾಹ್ನ 1ಗಂಟೆಗೆ) : ಇಲ್ಲಿ ಮಧ್ಯಾಹ್ನದವರೆಗಿನ ಪ್ರಮುಖ ಸುದ್ದಿಗಳು ಬಿತ್ತರವಾಗಲಿವೆ.

3) ನಮ್ಮೂರ ಸುದ್ದಿ ( ಸಂಜೆ 7.30ಕ್ಕೆ) : ರಾಜ್ಯದ 30 ಜಿಲ್ಲೆಗಳ ಸುದ್ದಿಯನ್ನು ನಿಮ್ಮ ಮುಂದೆ ತರಲಿದೆ ನಮ್ಮೂರ ಸುದ್ದಿ. ಇದು ಗ್ರಾಮೀಣ ಸುದ್ದಿಯ ಬುತ್ತಿ.

4) ಸಮಗ್ರ ಸಮಾಚಾರ (ರಾತ್ರಿ 10ಗಂಟೆಗೆ) : ಇಲ್ಲಿ ದಿನದ ಸಮಗ್ರ ಸುದ್ದಿ ಇರುತ್ತೆ. ದೇಶ ಹಾಗೂ ರಾಜ್ಯದ ರಾಜಕೀಯ ಮತ್ತಿತರ ಬೆಳವಣಿಗೆಯ ಕಂಪ್ಲೀಟ್ ಡೀಟೈಲ್ಸ್ ಇಲ್ಲಿ ಸಿಗುತ್ತೆ.

ಹೀಗೆ ಈ ವಾರ್ತಾ ಸಂಚಿಕೆಗಳಲ್ಲದೆ ಫೆಬ್ರವರಿ 19ರಿಂದ ರಾತ್ರಿ 9 ಗಂಟೆಗೆ ‘ಅಮರ ಪ್ರೇಮಕಥೆಗಳು’ ಎಂಬ ವಿಶೇಷ ಕಾರ್ಯಕ್ರಮವೂ ಪ್ರಸಾರವಾಗಲಿದೆ. ಇದು ಪ್ರೇಮಕಥೆಗಳ ಕಾರ್ಯಕ್ರಮವಾಗಿದ್ದು, ಇತಿಹಾಸ ಮತ್ತು ಪುರಾಣ ಕಥೆಗಳನ್ನು ಆಧರಿಸಿರುವ ಕಾರ್ಯಕ್ರಮ. ‌
ಸದಾ ಹೊಸತನಕ್ಕೆ‌ ಮಿಡಿಯುವ‌ ಸರಳ ಜೀವನದ ಇಡೀ ತಂಡಕ್ಕೆ ಶುಭವಾಗಲಿ. ಜನರಿಗೆ ಇನ್ನಷ್ಟು,‌ಮತ್ತಷ್ಟು ಹತ್ತಿರವಾಗಲಿ.

Share post:

Subscribe

spot_imgspot_img

Popular

More like this
Related

ಗುತ್ತಿಗೆದಾರರ ಬಾಕಿ- ಸಂಬಂಧಪಟ್ಟ ಸಚಿವರಿಂದ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ

ಗುತ್ತಿಗೆದಾರರ ಬಾಕಿ- ಸಂಬಂಧಪಟ್ಟ ಸಚಿವರಿಂದ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು: ಯಾವುದೇ ಸಂಘಸಂಸ್ಥೆಗಳ...

ಬಿ ಖಾತಾ ಇದ್ದವರಿಗೆ ಹಾಗೂ ಇಲ್ಲದವರಿಗೂ ಎ ಖಾತಾ ವಿತರಣೆ: ಡಿಸಿಎಂ ಡಿ.ಕೆ. ಶಿವಕುಮಾರ್

ಬಿ ಖಾತಾ ಇದ್ದವರಿಗೆ ಹಾಗೂ ಇಲ್ಲದವರಿಗೂ ಎ ಖಾತಾ ವಿತರಣೆ: ಡಿಸಿಎಂ...

ಗ್ರಾಹಕರಿಗೆ ಖುಷಿಯ ಸುದ್ದಿ: ದೀಪಾವಳಿಗೆ ಮುನ್ನ ಚಿನ್ನದ ಬೆಲೆಯಲ್ಲಿ ಇಳಿಕೆ!

ಗ್ರಾಹಕರಿಗೆ ಖುಷಿಯ ಸುದ್ದಿ: ದೀಪಾವಳಿಗೆ ಮುನ್ನ ಚಿನ್ನದ ಬೆಲೆಯಲ್ಲಿ ಇಳಿಕೆ! ಚಿನ್ನದ ಬೆಲೆಯಲ್ಲಿ...

ರಾಜ್ಯದಲ್ಲಿ ಭಾರಿ ಮಳೆಯ ಮುನ್ಸೂಚನೆ: 20ಕ್ಕೂ ಹೆಚ್ಚು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

ರಾಜ್ಯದಲ್ಲಿ ಭಾರಿ ಮಳೆಯ ಮುನ್ಸೂಚನೆ: 20ಕ್ಕೂ ಹೆಚ್ಚು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್...