ನಿಮ್ಮನ್ನು ನಿರ್ಮಾಪಕರನ್ನಾಗಿ ಮಾಡುತ್ತೇನೆ. ಜೊತೆಗೆ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದನ್ನು ನೀಡುವುದಾಗಿ ಭರವಸೆ ನೀಡಿ ನಿರ್ಮಾಪಕನೊಬ್ಬ ವೈದ್ಯರೊಬ್ಬರನ್ನು ವಂಚಿಸಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.ಗಣೇಶ್ ಎಂಬಾತ ಆರೋಪಿ. ಡಾ. ವಿಶ್ವನಾಥ್ ವಂಚನೆಗೆ ಒಳಗಾದವರು.
ಗಣೇಶ್ ವಿಶ್ವನಾಥ್ ಅವರ ಬಳಿ ಹಣ ಪಡೆದು ವಂಚಿಸಿದ್ದಾರೆ ಎನ್ನಲಾಗಿದೆ. ಜೊತೆಗೆ ಸಿನಿಮಾ ನಿರ್ಮಾಪಕರನ್ನಾಗಿ ಮಾಡುವುದಲ್ಲದೆ ಒಂದೊಳ್ಳೆ ಪಾತ್ರವನ್ನೂ ಕೊಡಿಸ್ತೀನಿ ಅಂದಿದ್ದ ಎಂಬ ಆರೋಪವಿದೆ. ಆರೋಪಿ ಗಣೇಶ್ ಆರ್ಟ್ ಪಲ್ಪ್ ಎಂಟರ್ಟೈನ್ಮೆಂಟ್ ಮುಖ್ಯಸ್ಥ.