ತಾಯಿಯೇ ತನ್ನ 16ವರ್ಷದ ಮಗಳನ್ನು 40 ವರ್ಷದ ವಿವಾಹಿತನಿಗೆ ಕೊಟ್ಟು ಮದುವೆ ಮಾಡಿರೋ ಘಟನೆ ಮೈಸೂರು ಜಿಲ್ಲೆಯ ಎಚ್.ಡಿ ಕೋಟೆ ತಾಲೂಕಿನ ಕೆ.ಬೆಳತ್ತೂರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ವಾರದ ಹಿಂದೆ ಈ ಘಟನೆ ನಡೆದಿದೆ. ನಾಗರಾಜ ಶೆಟ್ಟಿ ಎಂಬ ವಿವಾಹಿತ ಅಪ್ರಾಪ್ತೆಯನ್ನು ಮದುವೆಯಾದವ.
ಈತನಿಗೆ ಈಗಾಗಲೇ ಒಂದು ಮದುವೆಯಾಗಿದ್ದು, ಮೊದಲ ಪತ್ನಿ ಇರಿವಾಗಲೇ ಇನ್ನೊಂದು ಮದುವೆ ಆಗಿದ್ದಾನೆ. ಬಾಲಕಿಯ ತಾಯಿ ತನ್ನ ಪತಿಗೆ ತಿಳಿಸಿದ ಮಗಳಿಗೆ ಮದುವೆ ಮಾಡಿದ್ದಾಳೆ…!
ಬಳಿಕ ಬಾಲಕಿ ತಂದೆ ಮಕ್ಕಳ ಮತ್ತು ಮಹಿಳಾ ಸಾಂತ್ವಾನ ಕೇಂದ್ರಕ್ಕೆ ದೂರು ನೀಡಿದ್ದಾರೆ. ಬಾಲಕಿಯನ್ನು ತಾಲೂಕು ಮಹಿಳಾ ಸಾಂತ್ವಾನ ಕೇಂದ್ರದ ವಶಕ್ಕೆ ನೀಡಲಾಗಿದೆ. ಎಚ್ ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.