ಇನ್ಮುಂದೆ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಬೈಕ್ ಸವಾರರು ಹೆಲ್ಮೆಟ್ ಧರಿಸದೇ ಬಂಕ್ ಗೆ ಹೋದ್ರೆ ಪೆಟ್ರೋಲ್ ಸಿಗುವುದಿಲ್ಲ…!
ಪೆಟ್ರೋಲ್ ಹಾಕಿಸಲು ಬಂಕ್ ಗೆ ಬರೋ ಬೈಕ್ ಸವಾರರು ಹೆಲ್ಮೆಟ್ ಹಾಕಿಕೊಳ್ಳೋದು ಕಡ್ಡಾಯ ನಿಯಮ ರೂಪಿಸಲಾಗಿದೆ. ಹುಬ್ಬಳ್ಳಿ, ಧಾರವಾಡ ಪೊಲೀಸ್ ಆಯುಕ್ತ ಎಂ ಎನ್ ನಾಗರಾಜ್ ಅವರು ಹೆಲ್ಮೆಟ್ ಧರಿಸದೇ ಬರೋರಿಗೆ ಪೆಟ್ರೋಲ್ ನೀಡಬೇಡಿ ಎಂದು ಬಂಕ್ ಮಾಲೀಕರಿಗೆ ಮನವಿ ಮಾಡಿದ್ದಾರೆ.
ಜಾಗೃತಿ ಮೂಡಿಸೋ ಉದ್ದೇಶಿದಿಂದ ಈ ನಿಯಮ ಜಾರಿಗೊಳಿಸಲು ಪೆಟ್ರೋಲ್ ಬಂಕ್ ಮಾಲೀಕರು ಒಪ್ಪಿದ್ದಾರೆ. ಫೆಬ್ರವರಿ 22ರಿಂದಲೇ ಈ ನಿಯಮ ಜಾರಿಗೆ ಬರಲಿದೆ.