ಮಾಜಿ ಕ್ರಿಕೆಟಿಗ ಹಾಗೂ ಪಾಕಿಸ್ತಾನ ತೆಹ್ರೀಕ್-ಇನ್ಸಾಪ್ (ಪಿಟಿಐ) ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ತಮ್ಮ 65ನೇ ವಯಸ್ಸಲ್ಲಿ ಮೂರನೇ ಮದುವೆಯಾಗಿದ್ದಾರೆ.
ಇಮ್ರಾನ್ ಮದುವೆಯಾಗಿರೋದು ತಮಗೆ ಆಧ್ಯಾತ್ಮಿಕ ಸಲಹೆಗಳನ್ನು ನೀಡುತ್ತಿದ್ದ ಬುಶರಾ ಮನೇಕಾ ಅವರನ್ನು…!
ಲಾಹೋರ್ ನಲ್ಲಿ ಬುಶರಾ ಅವರ ಸಹೋದರನ ಮನೆಯಲ್ಲಿ ಮದುವೆ ನಡೆದಿದೆ.
ಇಮ್ರಾನ್ 1995ರಲ್ಲಿ ಜೆಮಿಯಾ ಖಾನ್ ಅವರನ್ನು ವಿವಾಹವಾಗಿದ್ದರು. 2004ರಲ್ಲಿ ಜೆಮಿಯಾ ಅವರಿಗೆ ವಿಚ್ಛೇದನ ನೀಡಿದ್ದರು. 2015ರಲ್ಲಿ ನಿರೂಪಕಿ ರೆಹಮ್ ಖಾನ್ ಅವರ ಕೈ ಹಿಡಿದಿದ್ದರು. ಹತ್ತೇ ಹತ್ತು ತಿಂಗಳಲ್ಲಿ ಇವರ ಸಂಬಂಧ ಹಳಸಿತ್ತು.