ಫೇಸ್ ಬುಕ್ ನಲ್ಲಿ ಮಹಿಳೆಯರನ್ನು ಪರಿಚಯಿಸಿಕೊಂಡು ಮದುವೆ ಆಗುವುದಾಗಿ ನಂಬಿಸಿ ಅವರಿಂದ ಚಿನ್ನಾಭರಣ , ಹಣ ದೋಚುತ್ತಿದ್ದ ದುಷ್ಕರ್ಮಿಯೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ರಂಗಸ್ವಾಮಿ ಎಂಬಾತ ಬಂಧಿತ. ಈತನನ್ನು ರಾಚಕೊಂಡ ಪೊಲೀಸರು ಹೈದರಾಬಾದ್ ನಲ್ಲಿ ಬಂಧಿಸಿದ್ದಾರೆ.
ಅನಂತಪುರ ಮೂಲದವನಾದ ಈ ಆರೋಪಿ ಹೈದರಾಬಾದ್ ನಲ್ಲಿ ವಾಸವಿದ್ದ. ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದ್ದ ಈತ ಫೇಸ್ ಬುಕ್ ನಲ್ಲಿ ಮಹಿಳೆಯರನ್ನು ಪರಿಚಯಿಸಿಕೊಂಡು ಅವರನ್ನು ನೇರವಾಗಿ ಭೇಟಿ ಮಾಡಿ ಪ್ರೀತಿಸುವ ನಾಟಕ ಮಾಡಿ, ಹಣ ಮತ್ತು ಚಿನ್ನಾಭರಣ ದೋಚಿ ಪರಾರಿ ಆಗ್ತಿದ್ದ…! ಹೀಗೆ 20 ಮಂದಿ ಮಹಿಳೆಯರನ್ನು ವಂಚಿಸಿದ್ದ ಎನ್ನಲಾಗುತ್ತಿದೆ.
ಜೊತೆಗೆ ಲೈಂಗಿಕ ಕಿರುಕುಳ ನೀಡ್ತಿದ್ದ, ಅತ್ಯಾಚಾರಕ್ಕೆ ಯತ್ನಿಸಿದ್ದ ಎಂಬ ಆರೋಪ ಕೂಡ ಇದೆ. ಈತನ ಮೇಲೆ ಈ ಹಿಂದೆಯೂ ಕೊಲೆಯತ್ನ, ಕಳ್ಳತನ ಸೇರಿದಂತೆ ನಾನಾ ಪ್ರಕರಣಗಳು ದಾಖಲಾಗಿದ್ದವು.