ರಾಹುಲ್ ಗಾಂಧಿ ಒಬ್ಬ ಬಚ್ಚಾ …ಸಿದ್ಧರಾಮಯ್ಯ ಗೂಂಡಾ ರಾಜ್ಯದ ಮುಖ್ಯಂತ್ರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಗುಡುಗಿದ್ದಾರೆ.
ಉಡುಪಿಯಲ್ಲಿ ನಡೆದ ಸಾಮಾಜಿಕ ಜಾಲತಾಣಿಗರ ಸಮಾವೇಶದಲ್ಲಿ ಮಾತಾಡಿದ ಅವರು ರಾಹುಲ್ ಗಾಂಧಿ ಒಬ್ಬ ಬಚ್ಚಾ. ಆತನನ್ನು ಹಿಡ್ಕೊಂಡು ಮಠ , ದೇವಸ್ಥಾನ ಹೋಗ್ತೀರ..? ನೀವು ಏನು ಮಾಡಿದ್ರೂ ಗೆಲ್ಲಲ್ಲ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ರಾಹುಲ್ ಗಾಂಧಿ ಇಲ್ಲೇ ಕ್ಯಾಂಪ್ ಮಾಡಲಿ , ಏನೇ ಮಾಡಿದ್ರೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಕನಸು.
ನಾವು ಈ ಬಾರಿ 150 ಸೀಟ್ ಗೆಲ್ಲುತ್ತೇವೆ. ಹಿಂದೂ ವಿರೋಧಿ ಸರ್ಕಾರಕ್ಕೆ ಜನ ಪಾಠಕಲಿಸುತ್ತಾರೆ. ಇಂದು ರಾಜ್ಯದಲ್ಲಿ ಗೂಂಡಾ ಸರ್ಕಾರ ಅಧಿಕಾರದಲ್ಲಿದೆ. ಸಿಎಂ ಸಿದ್ದರಾಮಯ್ಯ ಅವರ ಪಕ್ಷದಲ್ಲಿ ಓಡಾಡುತ್ತಿರೋದು ಗೂಂಡಾಗಳು, ರೌಡಿಗಳು ಎಂದು ಕಿಡಿಕಾರಿದರು.
ಅದೇರೀತಿ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಯುವಕ ವಿದ್ವತ್ ಮೇಲೆ ನಡೆಸಿದ ಹಲ್ಲೆ ಮತ್ತು ಮಾಧ್ಯಮದವರ ಮೇಲೆ ನಡೆಸಿದ ಹಲ್ಲೆ ವಿರುದ್ಧವು ಬಿಎಸ್ ವೈ ಕೆಂಡಮಂಡಲರಾದರು.