ರೈತ ನಾಯಕ, ಮೇಲುಕೋಟೆ ಶಾಸಕ ಪುಟ್ಟಣ್ಣಯ್ಯ ಅವರ ನಿಧನದಿಂದ ಮನನೊಂದು ಅವರ ಅಭಿಮಾನಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕ್ಯಾತನಹಳ್ಳಿಯ ನಿವಾಸಿಯಾದ 25 ವರ್ಷದ ಚಂದು ಮೃತ.
ಪುಟ್ಟಣಯ್ಯ ಅವರ ಅಕಾಲಿಕ ಮರಣದಿಂದ ನೊಂದ ಯುವಕ ಆತ್ಮಹತ್ಯೆಗೆ ಶರಣಾಗಿದ್ದು, ‘ ನಾನು ಒಬ್ಬ ಕೆ.ಎಸ್ ಪುಟ್ಟಣ್ಣಯ್ಯನವರ ಅಭಿಮಾನಿ. ನನ್ನ ಸಾವಿಗೆ ನಾನೇ ಕಾರಣ ಕ್ಷಮಿಸಿ ಎಂದು ಡೆತ್ ನೋಟ್ ಬರೆದಿಟ್ಟು ಪುಟ್ಟಣ್ಣಯ್ಯ ಅಭಿಮಾನಿ ಬಳಗದ ಟಿ ಶರ್ಟ್ ಧರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.