ಕ್ಯಾಪ್ಟನ್ ಕೂಪ್ ಎಂದೇ ಪ್ರಖ್ಯಾತರಾಗಿರುವ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಪರೂಪಕ್ಕೆ ತಾಳ್ಮೆ ಕಳೆದುಕೊಂಡಿದ್ದು, ಕನ್ನಡಿಗ ಮನೀಶ್ ಪಾಂಡೆಗೆ ಅದರ ಬಿಸಿ ತಟ್ಟಿದೆ…!
ನಿನ್ನೆ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಎರಡನೇ ಟಿ20ಪಂದ್ಯದಲ್ಲಿ ಕೊನೆಯ ಓವರ್ ಗಳಲ್ಲಿ ಧೋನಿ ರನ್ ಹೆಚ್ಚಿಸಲು ವೇಗವಾಗಿ ಓಡುತ್ತಿದ್ದರು. ಇವರ ಜೊತೆ ಆಡುತ್ತಿದ್ದ ಕನ್ನಡಿಗರ ಮನೀಶ್ ಪಾಂಡೆ ಧೋನಿ ವೇಗಕ್ಕೆ ತಕ್ಕಂತೆ ಸಹಕರಿಸುತ್ತಿರುಲಿಲ್ಲ.
ಕೊನೆಯ ಓವರ್ ಮೊದಲ ಎಸೆತದ ಬಳಿಕ ಪಾಂಡೆ ಗಮನ ಬೇರೆಕಡೆ ಹರಿಸಿದ್ದರು. ಇದನ್ನು ನೋಡಿದ ಧೋನಿ…”ಆಕಡೆ ಯಾಕೆ ನೋಡ್ತಿದ್ದಿ, ನನ್ನನ್ನು ನೋಡು” ಎಂದು ಗರಂ ಆದರು.
ಧೋನಯಿ ಅಜೇಯ 52 ರನ್ ಹಾಗೂ ಪಾಂಡೆಯ ಅಜೇಯ 79 ರನ್ ಗಳ ಸಹಾಯದಿಂದ ಭಾರತ 188 ರನ್ ಗಳಿಸಿತ್ತು. ಸವಾಲಿನ ಮೊತ್ತ ಬೆನ್ನಟ್ಟಿದ ದ. ಆಫ್ರಿಕಾ 6 ವಿಕೆಟ್ ಗಳಿಂದ ಜಯಗಳಿಸಿತು.